• Follow NativePlanet
Share
» »ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

Posted By:

ಚಂದ್ರಗಿರಿಯಲ್ಲಿ 1640 ರಲ್ಲಿ ನಿರ್ಮಾಣ ಮಾಡಲ್ಪಟ್ಟ ಕೋಟೆ ಇದೆ. ಶ್ರೀ ಕೃಷ್ಣದೇವರಾಯ ಆಸ್ಥಾನದಲ್ಲಿದ್ದ ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳ ಕೂಡ ಚಂದ್ರಗಿರಿಯೇ. ಅರ್ಥಚಂದ್ರಾಕಾರವಾಗಿರುವ ಬೆಟ್ಟದ ಪಾದದ ಭಾಗದಲ್ಲಿ ಕೋಟೆಯನ್ನು ನಿರ್ಮಾಣ ಮಾಡಿದ್ದರಿಂದ ಇದನ್ನು ಚಂದ್ರಗಿರಿದುರ್ಗ ಎಂದು ಕರೆಯುತ್ತಿದ್ದರು. ಹೀಗೆ ನಿರ್ಮಾಣ ಮಾಡಿದ್ದರಿಂದ ಕೋಟೆ ರಕ್ಷಣೆಯ ಉದ್ದೇಶದಿಂದ ಹಾಗು ಎಷ್ಟೇ ದೂರದಲ್ಲಿದ್ದರು ಕೂಡ ಶತ್ರು ಸೈನ್ಯವನ್ನು ಸುಲಭವಾಗಿ ಗಮನಿಸಬಹುದಿತ್ತು. ಕೋಟೆಯ ಸುತ್ತ ಸುಮಾರು ಕಿ.ಮೀನಷ್ಟು ಧೃಡವಾದ ಗೋಡೆ ಇತ್ತು. ಆ ಗೋಡೆಯನ್ನು ನಿರ್ಮಾಣ ಮಾಡುವ ಸಲುವಾಗಿ ಉಪಯೋಗಿಸಿದ ಕಲ್ಲಿನ ಪರಿಣಾಮವು ಅತ್ಯಂತ ದೊಡ್ಡದು. ಅವುಗಳನ್ನು ಆನೆಗಳ ಸಹಾಯದಿಂದ ನಿರ್ಮಾಣ ಮಾಡಿದರು ಎಂದು ತಿಳಿದುಬರುತ್ತದೆ. ಆ ಗೋಡೆಯನ್ನು ಅನುಸರಿಸುತ್ತಾ ಹೋದರೆ ದೊಡ್ಡದಾದ ಕಂದಕವಿದೆ.

1.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

1.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ವಿಯಜನಗರ ರಾಜರ ಚರಿತ್ರೆಯಲ್ಲಿ ಚಂದ್ರಗಿರಿ ಒಂದು ಪ್ರಮುಖವಾದ ಸ್ಥಾನವನ್ನು ಹೊಂದಿತ್ತು. ಶ್ರೀ ಕೃಷ್ಣದೇವರಾಯರು ತಿರುಮಲವನ್ನು ದರ್ಶಿಸಿದ್ದಾಗಲ್ಲೆಲ್ಲಾ ಇಲ್ಲಿಯೇ ತಂಗುತ್ತಿದ್ದರಂತೆ. ಅಚುತ್ಯ ದೇವರಾಯರಿಗೆ ಇಲ್ಲಿಯೇ ಗೃಹಬಂಧನದಲ್ಲಿ ಇಟ್ಟಿದ್ದರಂತೆ.

2.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

2.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಕ್ರಿ.ಶ 1585 ರಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗಿ ವಿಜಯನಗರ ರಾಜ್ಯವನ್ನು ಡಕ್ಕನ್ ಪ್ರದೇಶ ಮುಸ್ಲಿಂ ರಾಜರನ್ನು ಪೂರ್ತಿಯಾಗಿ ನೆಲಮಟ್ಟ ಮಾಡಿದ ನಂತರ ವಿಜಯನಗರದ ರಾಜರು ತಮ್ಮ ರಾಜ್ಯವನ್ನು ಕೆಲವು ಕಾಲಕ್ಕೆಂದು ಪೆನಗೊಂಡಕ್ಕೆ ಮಾರ್ಪಟು ಮಾಡಿದರು.

3.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

3.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಪೆನುಗೊಂಡದ ನಂತರ ಇನ್ನು ಕೆಲವು ಕಾಲದವರೆಗೆ ಚಂದ್ರಗಿರಿಗೆ ಮಾರ್ಪಟಾಯಿತು. ಚಂದ್ರಗಿರಿಯನ್ನು ಆಳ್ವಿಕೆ ಮಾಡಿದ ಕೊನೆಯ ವಿಜಯನಗರ ರಾಜನಾದ ಪೆದ್ದವೆಂಕಟರಾಯ ತನ್ನ ಸಾಮಂತನಾದ ಚೆನ್ನಪ್ಪನಾಯಕನು ಆಗಸ್ಟ್ 22, 1639 ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಗೆ ಸೇರಿದ ಟ್ರಾನ್ಸ್‍ಸ್ ಚೆನ್ನಪಟ್ಟಣದಲ್ಲಿ ಕೋಟೆಯನ್ನು ಕಟ್ಟುವ ಸಲುವಾಗಿ ಅನುಮತಿಯನ್ನು ನೀಡಲಾಯಿತು.

4.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

4.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಈ ಕೋಟೆಯಲ್ಲಿಯೇ ಆ ಕಾಲದ ಎಲ್ಲಾ ವಸ್ತುಗಳನ್ನು ಈ ಮ್ಯೂಸಿಯಂನಲ್ಲಿ ನಾವು ನೋಡಬಹುದು. ಬೆಟ್ಟದ ಮೇಲ್ಭಾಗದಲ್ಲಿ ಒಂದು ಸೈನಿಕ ಸ್ಥಾವರವನ್ನು ನಿರ್ಮಾಣ ಮಾಡಿದ್ದಾರೆ. ಅವರ ಅವಶ್ಯಕತೆಗೆ ಅನುಗುಣವಾಗಿ ಮೇಲ್ಭಾಗದಲ್ಲಿ 2 ನೀರಿನ ಕೊಳವನ್ನು ನಿರ್ಮಾಣ ಮಾಡಿ ಕೆಳಗೆ ಇದ್ದ ನೀರಿನ ಕೊಳದಿಂದ ನೀರನ್ನು ಮೇಲೆ ತೆಗೆದುಕೊಳ್ಳುತ್ತಿದ್ದರು ಎಂಬ ಮಾಹಿತಿಯು ಕೋಟೆಯಲ್ಲಿ ಮ್ಯೂಸಿಯಂನ ಮಾಹಿತಿಯಿಂದ ತಿಳಿಯುತ್ತದೆ.

5.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

5.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಇಂದಿಗೂ ಬೆಟ್ಟದ ಮೇಲೆ ಕೊಳಕ್ಕೆ ನೀರನ್ನು ಹೇಗೆ ವ್ಯವಸ್ಥೆ ಮಾಡುತ್ತಿದ್ದರು ಎಂಬುದು ರಹಸ್ಯವಾಗಿಯೇ ಉಳಿದಿದೆ. ಆ ಕಾಲದಲ್ಲಿ ನೀರನ್ನು ಮೇಲೆ ಕಳುಹಿಸಲು ಬಳಸುತ್ತಿದ್ದ ಸಾಧನಗಳು ಹಳಾಗಿವೆ. ಆದರೆ ಮೇಲಿನ ಕೊಳದಲ್ಲಿ ಮತ್ತು ಕೆಳಗಿನ ಕೊಳದಲ್ಲಿ ನೀರು ಅತ್ಯಂತ ಶುದ್ಧವಾಗಿ ಕಾಣುತ್ತದೆ. ರಾಣಿಮಹಲ್ 2 ಅಂತಸ್ತಿನಿಂದ ಹಾಗು ರಾಜ ಮಹಲ್ 3 ಅಂತಸ್ತಿನಲ್ಲಿದೆ.

7.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

7.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಈ ಬಾವಿಯಿಂದ ಸ್ವಲ್ಪ ದೂರದಲ್ಲಿಯೇ ಮರಣಶಿಕ್ಷೆಗೆ ಗುರಿಯಾದ ವ್ಯಕ್ತಿಗಳಿಗೆ ನೇಣು ಹಾಕಲು 6 ಸ್ತಂಭಗಳನ್ನು ಹೊಂದಿರುವ ಚಿಕ್ಕದಾದ ಮಂಟಪ ಕೂಡ ಇಲ್ಲಿದೆ. ರಾಜಮಹಲ್‍ನಲ್ಲಿ ಮೊದಲ ಅಂತಸ್ತನ್ನು ಮ್ಯೂಸಿಯಂ ಆಗಿ ಮಾರ್ಪಟು ಮಾಡಿದ್ದಾರೆ. ಮುಸ್ಲಿಂ ರಾಜರು ನಾಶ ಮಾಡಿ ಉಳಿದ ಶಿಲ್ಪಗಳನ್ನು ಚಂದ್ರಗಿರಿ ವೈಭವವನ್ನು ಎತ್ತಿತೋರಿಸುವ ಶಾಸನಗಳು ಇಲ್ಲಿ ಕಾಣಬಹುದಾಗಿದೆ. ಇನ್ನು 2 ನೇ ಅಂತಸ್ತಿನಲ್ಲಿ ಸಿಂಹಾಸನಗಳಿಂದ ಕೂಡಿದ ದರ್ಬಾರು ಅಥವಾ ಸಭೆಯ ದೃಶ್ಯಗಳನ್ನು ಕಾಣಬಹುದು.

8.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

8.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಮೂರನೇ ಅಂತಸ್ತಿನಲ್ಲಿ ಅಂದಿನ ಕೋಟೆಯ ವಿನ್ಯಾಸ, ಜೀವನ ವಿಧಾನದಂತಹ ಪ್ರದರ್ಶನಗಳನ್ನು ಇಟ್ಟಿದ್ದಾರೆ. ಮೇಲಿನ ಅಂತಸ್ತಿನಲ್ಲಿ ರಾಜ ಪ್ರಮುಖರ ಕೊಠಡಿಗಳು ಕೂಡ ಇವೆ. ಇಲ್ಲಿ ದೇವಾಲಯಗಳನ್ನು ಬಿಟ್ಟರೆ ಕೆಲವು ಚೆನ್ನಾಗಿರುವ ರಾಣಿಮಹಲ್ ಮತ್ತು ರಾಜಮಹಲ್, ಇವುಗಳ ಹಿಂದೆ ಇರುವ ಕೊಳ ಮೊದಲಾದವುಗಳನ್ನು ನವೀಕರಣ ಮಾಡಿ, ಹೂವಿನ ತೋಟವನ್ನು ನಿರ್ಮಾಣ ಮಾಡಿ ಪ್ರವಾಸಿಗರಿಗೆ ಆಹ್ಲಾದಕರವಾಗಿ ಇರುವ ಹಾಗೆ ಮಾರ್ಪಟು ಮಾಡಿದ್ದಾರೆ.

9.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

9.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ಇನ್ನು ರಾಜಮಹಲ್‍ನ ಹಿಂದೆ ಗಿಡಗಳನ್ನು ಬೆಳಸಿ ಪ್ರವಾಸಿಗರಿಗೆ ಆಹ್ಲಾದಕರವಾಗಿ ಇರುವ ರೀತಿಯಲ್ಲಿ ಮಾಡಿದ್ದಾರೆ. ಇನ್ನು ರಾಜಮಹಲ್‍ನ ಹಿಂದೆ ಖಾಲಿ ಪ್ರದೇಶದಲ್ಲಿ ದೊಡ್ಡ ಓಪನ್ ಥಿಯೇಟರ್ ಆಗಿ ಮಾಡಿ ದೃಶ್ಯಕಾಂತಿ ಶಬ್ಧ ಎಂದರೆ ಸೌಂಡ್ ಲೈಟಿಂಗ್ ಷೋ ಪ್ರದರ್ಶನ ಮಾಡುತ್ತಿದ್ದಾರೆ, ಈ ಪ್ರದರ್ಶನಕ್ಕೆ ಒಬ್ಬರಿಗೆ 45 ರೂ ಪ್ರವೇಶದ ಶುಲ್ಕವನ್ನು ನೀಡಬೇಕಾಗುತ್ತದೆ.

10.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

10.ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?

PC:YOUTUBE

ವಿಭಜನೆಯಾಗುವುದಕ್ಕೂ ಮುಂಚೆ ಆಂಧ್ರ ರಾಜ್ಯಕ್ಕೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸುಮಾರು 55 ಕೋಟಿ ರೂಪಾಯಿ ಮೊತ್ತದ ಈ ಪ್ರಾಜೆಕ್ಟ್ ಅನ್ನು ಏರ್ಪಟು ಮಾಡಿದರು. ಈ ಪ್ರದರ್ಶನದ ಮೂಲಕ ಪೆನುಗೊಂಡ, ಚಂದ್ರಗಿರಿ ಸಂಸ್ಥಾನಗಳು ಹೇಗೆ ನಾಶವಾದವು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತಿಳಿದುಕೊಳ್ಳಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ