Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಂಗಲ್ » ಹವಾಮಾನ

ವಾರಂಗಲ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ಈ ಮೊದಲೇ ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭೇಟಿಗೆ ಅತೀ ಸೂಕ್ತವಾದ ಸಮಯವಾಗಿದೆ. ಪ್ರವಾಸಕ್ಕೆ ಸೂಕ್ತವಲ್ಲದ ಮಳೆ ಮತ್ತು ಸುಡುವ ಬೇಸಗೆ ಎರಡನ್ನೂ ತಪ್ಪಿಸಬಹುದಾದ ಕಾರಣ ಈ ಅವಧಿಯನ್ನು ಆಯ್ಕೆ ಮಾಡಬಹುದಾಗಿದೆ. ಈದ್-ಉಲ್-ಫಿತ್ರ್, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳನ್ನೂ ಈ ಅವಧಿಯಲ್ಲೇ ಆಚರಿಸಲಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ.

ಬೇಸಿಗೆಗಾಲ

ಸಾಮಾನ್ಯವಾಗಿ ವಾರಂಗಲ್ ನಲ್ಲಿ ಬೇಸಿಗೆ ಬಹಳ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ತಾಪಮಾನ ಸುಮಾರು 20 ಡಿಗ್ರಿಯಿಂದ  40 ಡಿಗ್ರಿ  ಸೆಲ್ಸಿಯಸ್ ವರೆಗೆ ಇರುತ್ತದೆ. ಹಾಗಾಗಿ ಈ ಸಮಯವು ಪ್ರವಾಸಕ್ಕೆ ಸೂಕ್ತವಾದ ಸಮಯವಲ್ಲ. ಅದರಲ್ಲೂ ಬಿಸಿಲಿನಲ್ಲಿ ಓಡಾಡಲು ಕಷ್ಟವಾಗುವವರಿಗೆ ಇದೂ ಖಂಡಿತ ಸೂಕ್ತವಲ್ಲ. ಬೇಸಿಗೆಗೆ ಹೊಂದುವ ಟಿ ಶರ್ಟ್ ಮತ್ತು ಶಾರ್ಟ್ಸ್ ಗಳು ಈ ಸಮಯದಲ್ಲಿ ಇದ್ದರೆ ಒಳಿತು.

ಮಳೆಗಾಲ

ಮುಂಗಾರು ಮಾರುತಗಳ ಅವಧಿ ಎಂದರೆ ಜೂನ್ ನಿಂದ ಸೆಪ್ಟೆಂಬರ್. ಈ ಸಮಯದಲ್ಲಿ ಇಲ್ಲಿ ಭಾರೀ ಮಳೆಯಾಗುತ್ತದೆ. ಇದರ ಜೊತೆಗೆ ಜೋರಾದ ಗಾಳಿಯೂ ಬೀಸುತ್ತದೆ. ಈ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗರ ಜೊತೆ ಕೊಡೆ, ರೈನ್ ಕೋಟ್ ಮತ್ತು ದಪ್ಪನೆಯ ಬಟ್ಟೆ ಅಥವಾ ಉಣ್ಣೆಯ ಬಟ್ಟೆ ಇದ್ದರೆ ಒಳಿತು. ರಾತ್ರೆಯ ವೇಳೆ ತಾಪಮಾನ ಒಮ್ಮೆಲೆ ಬಹಳ ಕೆಳಗೆ ಬರುವ ಸಾಧ್ಯತೆಗಳು ಇವೆ.

ಚಳಿಗಾಲ

ಚಳಿಗಾಲದ ಹೆಚ್ಚಿನ ಅವಧಿಯಲ್ಲಿ ತಾಪಮಾನ 13 ಡಿಗ್ರಿಯಿಂದ 32 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ. ಇದರ ಜೊತೆಗ್ ಹನಿ ಹನಿ ಮಳೆ ಬಿಳುವ ಸಾಧ್ಯತೆ ಕೂಡ ಇಲ್ಲದಿಲ್ಲ. ಆದರೂ ಈ ಅವಧಿ ಇಲ್ಲಿ ಭೇಟಿ ನೀಡಲು ಅತೀ ಉತ್ತಮವಾದ ಅವಧಿಯಾಗಿದೆ. ಹೆಚ್ಚು ಹೆಚ್ಚು ಸ್ಥಳಗಳನ್ನು ನೋಡ ಬಯಸುವವರು ಈ ಅವಧಿಯನ್ನು ಬಳಸಬಹುದಾಗಿದೆ.