Search
  • Follow NativePlanet
Share
» »ಲೆನ್ಸುಗಳಲ್ಲಿ ಬಂಧಿಸಲ್ಪಟ್ಟ ಮಳೆಯ ಕಳೆ

ಲೆನ್ಸುಗಳಲ್ಲಿ ಬಂಧಿಸಲ್ಪಟ್ಟ ಮಳೆಯ ಕಳೆ

By Vijay

ಮಳೆ ಎಂದರೆ ಹಾಗೆಯೆ...ಪ್ರಕೃತಿಯ ಕಳೆದುಹೋದ ಸೊಬಗಿನ ಕಳೆಯನ್ನು ಮತ್ತೆ ಫಳ ಫಳನೆ ಹೊಳೆವಂತೆ ಮಾಡುವ ತಾಳವೆ ಮಳೆ. ಮಳೆಯು ಬಹು ಜನರಿಗೆ ಕಿರಿ ಕಿರಿ ಅನಿಸಿದರೂ ಸಹ, ಒಂದು ರೀತಿಯ ಆನಂದ ಕೊಡುವುದು ಅಷ್ಟೆ ಸತ್ಯ. ಯೋಚಿಸಿ ಬಿಸಿಲಿನಿಂದ ಚಡ ಪಡಿಸಿ ಮಳೆಗಾಲದ ಆರಂಭದಲ್ಲಿ ವಸುಂಧರೆಯ ಅಪ್ಪುಗೆ ಬಯಸಿ ಬಾನಾಡಿಯಿಂದ ಧುಮುಕುವ ಮೊಟ್ಟ ಮೊದಲ ಹನಿಯು, ಮನಕೆ ತಂಪು ನೀಡದೆ ಇರಲಾರದು.

ಗೊಐಬಿಬೊದ ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 6000 ರುಪಾಯಿಯವರೆಗೂ ಕಡಿತ ಪಡೆಯಿರಿ

ಬೇಸಿಗೆಯ ಬಿಸಿಲಿನಿಂದ ಕಾಯ್ದ ಬಾಣಲೆಯಂತಾಗಿದ್ದ ಭುವಿಯ ಬಿಸಿಯನ್ನು ಹಸಿಯಾಗಿ ಮಾಡುವ ಮಳೆಯು ಪರಿಸರ ಸಮತೋಲನಕ್ಕೂ ಸಹ ಅತ್ಯಗತ್ಯ. ಕೃಷಿ ಪ್ರಧಾನವಾದ ಭಾರತದಲ್ಲಿ ಮಳೆಯ ನಂಬಿ ಬೆಳೆ ಬೆಳೆವ ಅನ್ನದಾತರಿಗೆ ಮಳೆ ಬಹುಮುಖ್ಯ. ಅಲ್ಲದೆ ಮಳೆಗಾಲದಲ್ಲಿ ಸುತ್ತಾಡುವುದೂ ಸಹ ಅಷ್ಟೆ ರೋಮಾಂಚನಕಾರಿ.

ವಿಶೇಷ ಲೇಖನ : ಮಳೆಗಾಲದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ

ಮಳೆಯ ಆನಂದವನ್ನು ಪ್ರಕೃತಿಯೊಂದಿಗೆ ಸವಿಯಬಯಸುವ ಪ್ರವಾಸಿಗರು ಭಾರತದಲ್ಲೇನು ಕಮ್ಮಿ ಇಲ್ಲ. ಇಂತಹ ಪ್ರವಾಸಿಗರು ಭಾರತದ ವೈವಿಧ್ಯಮಯ ಸ್ಥಳಗಳಲ್ಲಿ ಮಳೆಯ ಸೊಬಗಿನಿಂದ ಕೂಡಿದ ಪ್ರಕೃತಿಯ ವೈಭವವನ್ನು ತಮ್ಮ ಲೆನ್ಸುಗಳಲ್ಲಿ ಸೆರೆ ಹಿಡಿದಿದ್ದು ಅಂತಹ ಕೆಲವು ಸುಂದರ, ವಿವಿಧ ಸ್ಥಳ, ಪ್ರದೇಶಗಳು ಮಳೆಗಾಲದಲ್ಲಿ ಪಡೆವ ಕಳೆಯನ್ನು ತೋರಿಸುವ ಹಾಗೂ ಪ್ರವಾಸ ಹೊರಡುವಂತೆ ಪ್ರೇರೇಪಿಸುವ ಚಿಕ್ಕ ಪ್ರಯತ್ನ ಈ ಲೇಖನದ್ದು.

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕೇರಳದ ಕಲ್ಪೆಟ್ಟಾದಲ್ಲಿರುವ ವೈತ್ರಿ ಎಂಬ ಸುಂದರ ಪ್ರವಾಸಿ ಆಕರ್ಷಣೆಯ ಮಳೆಗಾಲದಲ್ಲಿ ಕಂಗೊಳಿಸುವ ರೀತಿ.

ಚಿತ್ರಕೃಪೆ: Vinoth Chandar

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಮಧ್ಯ ಪ್ರದೇಶ ರಾಜ್ಯದ ಹೊಲ ಗದ್ದೆಗಳಲ್ಲಿ ಮಳೆಯ ಕಲರವ. ಪ್ರವಾಸಿಗರಿಗೆ ರೋಮಾಂಚನ, ರೈತರಿಗೆ ಸಂತಸ ತರುವ ನೋಟ.

ಚಿತ್ರಕೃಪೆ: Rajarshi MITRA

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕಾಯಲಾಗದು ಇನ್ನು, ಮೊದಲ ಮಳೆ ಹನಿಯ ನಿರೀಕ್ಷೆಯಲ್ಲಿ....ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮುಲಶಿ ಬಳಿಯಿರುವ ತೆಮ್ಘರ್ ಜಲಾಶಯ.

ಚಿತ್ರಕೃಪೆ: Yogendra Joshi

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕಪ್ಪು ಬಿಳುಪುಗಳ ಚಿತ್ತಾರದಿ ಕಂಗೊಳಿಸುವ, ಮೈಮನ ಪುಳಕಿತಗೊಳಿಸುವ ಕೊಲ್ಕತ್ತಾದ ರಬೀಂದ್ರ ಸರೋವರ ಮಳೆ ಬರುತಿರುವಾಗ...

ಚಿತ್ರಕೃಪೆ: Abhijit Kar Gupta

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕೊಲ್ಕತ್ತಾಅಂದರೆ ಫುಟ್ ಬಾಲ್. ಫುಟ್ ಬಾಲ್ ಅಂದರೆ ಕೊಲ್ಕತ್ತಾ ಅನುವಷ್ಟು ಈ ಕ್ರೀಡೆ ಪಶ್ಚಿಮ ಬಂಗಾಳದಲ್ಲಿ ಜನಪ್ರೀಯವಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಕ್ರೀಡೆಯು ಮತ್ತಷ್ಟು ರಂಗೇರುತ್ತದೆ. ದಕ್ಷಿಣದಲ್ಲಿ ಕೇರಳವೂ ಸಹ ಫುಟ್ ಬಾಲ್ ಕ್ರೀಡೆಗೆ ಹೆಸರುವಾಸಿ.

ಚಿತ್ರಕೃಪೆ: Dipanker Dutta

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಎಲ್ಲಿಗೆ ಪಯಣ? ಮಹಾರಾಷ್ಟ್ರದ ಮಹಾಬಲೇಶ್ವರದೆಡೆ....

ಚಿತ್ರಕೃಪೆ: Yogendra Joshi

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ತಮಿಳುನಾಡಿನ ಪ್ರಖ್ಯಾತ ಗಿರಿಧಾಮ ಊಟಿಯ ಕೆರೆಯು ಮಳೆಯೊಂದಿಗೆ ಆಟ ಆಡುವಾಗ.

ಚಿತ್ರಕೃಪೆ: Swaminathan

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕಿಂಗ್ ಕೋಬ್ರಾ ಎಂಬ ಭಯಂಕರ ವಿಷಕಾರಿ ಹಾಗೂ ಇತರೆ ಹಾವುಗಳನ್ನೆ ಪ್ರಧಾನವಾಗಿ ತಿಂದು ಬದುಕುವ ದೊಡ್ಡ ಹಾವುಗಳ ಅದ್ಭುತ ನೆಲೆಯಾದ ಹಾಗೂ ಕರ್ನಾಟಕದ ಸೊಮೇಶ್ವರದಲ್ಲಿನ ಮಳೆ ಪ್ರದೇಶದ ಕಳೆಯನ್ನೆ ಹೆಚ್ಚಿಸಿದೆ.

ಚಿತ್ರಕೃಪೆ: Karunakar Rayker

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಮಹಾರಾಷ್ಟ್ರದ ನಾನೆಘಾಟ್ ಮಳೆಯಲ್ಲಿ ನೆನೆದಾಗ.

ಚಿತ್ರಕೃಪೆ: rohit gowaikar

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶದಲ್ಲಿರುವ ಒಂದು ರಸ್ತೆ ಮಳೆಗಾಲದ ಸಂದರ್ಭದಲ್ಲಿ.

ಚಿತ್ರಕೃಪೆ: Dhinal Chheda

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಹುಸ್ಸಪ್ಪಾ....ಸಾಕಾಯ್ತು ಈ ಮಳೆ....ಆಗುಂಬೆಯೆಂಬ ಮಳಗಾಡಿನ ಪ್ರದೇಶದಲ್ಲಿ.

ಚಿತ್ರಕೃಪೆ: Karunakar Rayker

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ರಾಜಸ್ಥಾನ ರಾಜ್ಯದ ಉದೈಪುರದಲ್ಲಿರುವ ಪಿಚೋಲಾ ಕೆರೆಯ ಮೇಲೆ ಒರಗುತ್ತಿರುವ ಮಳೆಯ ಹನಿಗಳು.

ಚಿತ್ರಕೃಪೆ: McKay Savage

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕರ್ನಾಟಕದ ಮಳೆಗಾಲದ ವೈಭವ ತೋರುವ ಹೀಗೊಂದು ಯಾದೃಚ್ಛಿಕವಾದಂತಹ ಚಿತ್ರ.

ಚಿತ್ರಕೃಪೆ: Ananth BS

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಮಳೆಯಲ್ಲಿ ನಡೆ..ಎಲ್ಲಿಗೆ? ಕೊಡಚಾದ್ರಿಗೆ. ಮಳೆಯಲ್ಲಿ ರೋಮಾಂಚನಗೊಳಿಸುವ ಕೊಡಚಾದ್ರಿ ಟ್ರೆಕ್.

ಚಿತ್ರಕೃಪೆ: Thejaswi

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಭರ್ಜರಿ ಮಳೆಯ ನಿರೀಕ್ಷೆಯಲಿ...ಕರ್ನಾಟಕದ ಕಬಿನಿ ಹಿನ್ನೀರು ಪ್ರವಾಸಿ ತಾಣ.

ಚಿತ್ರಕೃಪೆ: Manoj Vasanth

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಗುಜರಾತ್ ರಾಜ್ಯದ ಸೂರತ್ ಪಟ್ಟಣಕ್ಕೆ ಹತ್ತಿರದಲ್ಲಿರುವ ವಿಲ್ಸನ್ ಹಿಲ್ ಎಂಬ ಸೊಗಸಾದ ಗಿರಿಧಾಮ ವರುಣನ ಕೃಪೆಯಲ್ಲಿ....

ಚಿತ್ರಕೃಪೆ: nevil zaveri

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಪುಣೆ ಬಳಿಯಿರುವ ನೀಲಕಂಠೇಶ್ವರ ಬೆಟ್ಟದ ತುದಿಯಲ್ಲಿರುವ ನೀಲಕಂಠೇಶ್ವರನ ದೇವಸ್ಥಾನದಿಂದ ಕಂಡುಬರುವ ಅದ್ಭುತ ಮಳೆಗಾಲದ ದೃಶ್ಯ.

ಚಿತ್ರಕೃಪೆ: shankar s.

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಇನ್ನೇನು ಮಳೆ ಶುರು...ಬನ್ನಿರಿ ದಂಡೆಗೆ...ಅಂಡಮಾನ್ ನಿಕೋಬಾರ್ ದ್ವೀಪದ ಜಾಲಿ ಬಾಯ್ ನಡುಗಡ್ಡೆ...

ಚಿತ್ರಕೃಪೆ: Ankur P

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಲೋನಾವಲಾ ಗಿರಿಧಾಮದಲ್ಲಿ ಮಳೆಗಾಲದ ಜಾದೂ...

ಚಿತ್ರಕೃಪೆ: Sarath Kuchi

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಜಮ್ಮು ಕಾಶ್ಮೀರ ರಾಜ್ಯದ, ಕಾಶ್ಮೀರದ ಶ್ರೀನಗರಕ್ಕೆ ಹತ್ತಿರವಿರುವ ದೂದ್ ಪತ್ತರಿ ಕಣಿವೆಯಲ್ಲಿ ಮಳೆಗಾಲದ ಸಂದರ್ಭ.

ಚಿತ್ರಕೃಪೆ: Ankur P

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ದೆಹಲಿಯ ಸುಪ್ರಸಿದ್ಧ ಆಕರ್ಷಣೆ ಹಾಗೂ ಗುರುತರವಾದ ಹೆಗ್ಗುರುತು ಇಂಡಿಯಾ ಗೇಟ್ ಮಳೆಗಾಲದ ಮೋಡ ಕವಿದ ವಾತಾವರಣದಲ್ಲಿ...

ಚಿತ್ರಕೃಪೆ: Florian Recklebe

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಚುಮು ಚುಮು ನೀರಿನ ಹನಿಗಳು...ಕಿಲ ಕಿಲ ನಗುತಿರುವ ಧ್ವನಿಗಳು...ಕೊಡೈಕೆನಲ್ ನ ಕೆರೆಯಲ್ಲಿ ದೋಣಿ ವಿಹಾರ.

ಚಿತ್ರಕೃಪೆ: netlancer2006

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಊಟಿಯ ಸೇಂಟ್ ಹೆಲೆನಾ ಶಾಲೆಯ ಆವರಣದಲ್ಲಿ ಮಳೆ ನೀರಿನ ಹನಿಗಳೊಂದಿಗೆ ಕ್ರೀಡೆಯಾಡಿ ದಣಿದ ನಂತರ ಮಧು ಮಗಳಂತೆ ನಾಚಿ ಕೆನ್ನೆಗಳು ಕೆಂಪಾಗಿ ಕಾಯುತಿರುವ ಹೂ ಕನ್ಯೆಗಳು.

ಚಿತ್ರಕೃಪೆ: Swaminathan

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗರಕೆರೆ...ಮಳೆಗಾಲದೊಂದು ಸಂದರ್ಭದಲ್ಲಿ.

ಚಿತ್ರಕೃಪೆ: Vikram Vetrivel

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಹಿಮಾಚಲ ಪ್ರದೇಶ ರಾಜ್ಯದಲ್ಲಿ ಬಯಾಸ್ ಮತ್ತಿ ಪಾರ್ವತಿ ನದಿಗಳು ಸಂಗಮ ಹೊಂದುವ ಪಾರ್ವತಿ ಕಣಿವೆಯು ಮಳೆಗಾಲದಲ್ಲಿ ತನ್ನದೆ ಆದ ವಿಶಿಷ್ಟ ಸೌಂದರ್ಯವನ್ನು ಪಡೆಯುತ್ತದೆ.

ಚಿತ್ರಕೃಪೆ: Dainis Matisons

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕೇರಳದ ಇಡುಕ್ಕಿ ಜಿಲ್ಲೆಯ ತೆಕ್ಕಡಿಯಲ್ಲಿರುವ ತೆಕ್ಕಡಿ/ಪೆರಿಯಾರ್ ಕೆರೆಯ ಮೇಲೆ ವರುಣ ಆರ್ಭಟ.

ಚಿತ್ರಕೃಪೆ: James Southorn

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕೇರಳದ ವಯನಾಡ್ ನಲ್ಲಿರುವ ಬಾಣಾಸುರ ಬೆಟ್ಟದ ಮೇಲಿಂದ ಕಾಣುವ ಬಾಣಾಸುರ ಜಲಾಶಯ ಮಳೆ ನೀರಿನ ಕಪಿ ಮುಷ್ಟಿಯಲ್ಲಿ...

ಚಿತ್ರಕೃಪೆ: Arun Katiyar

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಪ್ರಖ್ಯಾತ ಪ್ರವಾಸಿ ಆಕರ್ಷಣೆ ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ಅದ್ಭುತ ನೋಟ.

ಚಿತ್ರಕೃಪೆ: Hari Prasad Nadig

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಮಳೆಗಾಲದ ಮಂದಹಾಸದಲಿ ಮಾದಕ ಗೋವಾದೊಂದು ಕಡಲ ತೀರ.

ಚಿತ್ರಕೃಪೆ: wales_gibbons

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಸೆಳೆಯುವಂತೆ ಮಾಡುವ ಮಳೆಯ ಕಳೆ:

ಮಹಾರಾಷ್ಟ್ರದ ಪುಣೆಯಿಂದ ಕೇವಲ 20 ಕಿ.ಮೀ ಗಳಷ್ಟು ದೂರದಲ್ಲಿ ಮೂತಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ಖಡಕ್ವಾಸ್ಲಾ ಆಣೆಕಟ್ಟು. ಮಳೆಗಾಲದ ಒಂದು ಸಂದರ್ಭದಲ್ಲಿ ಆಣೆಕಟ್ಟಿನ ಎಲ್ಲ ಕ್ರಸ್ಟ್ ಗೇಟುಗಳನ್ನು ತೆರೆದಾಗ ನದಿಯ ನೀರಿನ ರೌದ್ರ ನರ್ತನ ಎಂತಹವರು ಕೂಡ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

ಚಿತ್ರಕೃಪೆ: chinmay22

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X