Search
  • Follow NativePlanet
Share
ಮುಖಪುಟ » ಸ್ಥಳಗಳು» ಕೊಡೈಕೆನಲ್

ಕೊಡೈಕೆನಲ್- ಕಾಡಿನ ತುದಿಯಲ್ಲಿರುವ ಸೌಂದರ್ಯದ ಖನಿ.

36

ಕೊಡೈಕೆನಲ್ ಎಂಬುದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪಳನಿ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಒಂದು ನಯನ ಮನೋಹರವಾದ ಗಿರಿಧಾಮವಾಗಿದೆ. ಈ ಪಟ್ಟಣವು ತನ್ನ ಜನಪ್ರಿಯತೆ ಮತ್ತು ಸೌಂದರ್ಯದಿಂದಾಗಿ ’ ಗಿರಿಧಾಮಗಳ ಯುವರಾಣಿ’ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ತಮಿಳು ನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಪಟ್ಟಣವು ಸಮುದ್ರ ಮಟ್ಟದಿಂದ 2133 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.

ಕೊಡೈಕೆನಲ್ ಪಟ್ಟಣವು ಪರಪ್ಪರ್ ಮತ್ತು ಗುಂಡರ್ ಎಂಬ ಕಣಿವೆಗಳ ನಡುವೆ ನೆಲೆಗೊಂಡಿದೆ. ಕೊಡೈಕೆನಲ್‍ನ ಉತ್ತರಕ್ಕೆ ಇರುವ ಇಳಿಜಾರಿನಲ್ಲಿ ವಿಲ್‍ಪಟ್ಟಿ ಮತ್ತು ಪಲ್ಲಂಗಿ ಎಂಬ ಹಳ್ಳಿಗಳು ನೆಲೆಗೊಂಡಿವೆ. ಪೂರ್ವಕ್ಕೆ ಈ ಬೆಟ್ಟವು ಪಳನಿ ಬೆಟ್ಟಗಳ ಕಡೆ ವಾಲಿದೆ. ದಕ್ಷಿಣಕ್ಕೆ ಕುಂಬುಮ್ ಕಣಿವೆಯಿದ್ದರೆ, ಪಶ್ಚಿಮಕ್ಕೆ ಮಂಜಂಪಟ್ಟಿ ಕಣಿವೆ ಮತ್ತು ಅಣ್ಣಾಮಲೈ ಬೆಟ್ಟಗಳು ಇವೆ.

ಕೊಡೈಕೆನಲ್ ಎಂಬ ಪದಕ್ಕೆ ತಮಿಳಿನಲ್ಲಿ ಕಾಡಿನ ಉಡುಗೊರೆ ಎಂಬರ್ಥವಿದೆ. ಆದರೂ ಸಹ ಈ ಪದಕ್ಕೆ ನಾಲ್ಕು ಬಗೆಯ ಅರ್ಥಗಳಿವೆ ಎಂದು ಪರಿಗಣಿಸುತ್ತಾರೆ. ಮೊದಲನೆಯದಾಗಿ ಕೊಡೈ ಎಂದರೆ " ಕಾಡಿನ ಅಂತ್ಯಭಾಗ", ಎರಡನೆಯದು "ಲತೆಗಳ ಕಾಡು", ಮೂರನೆಯದು "ಬೇಸಿಗೆಯ ಕಾಡು" ಮತ್ತು ನಾಲ್ಕನೆಯದಾಗಿ "ಕಾಡಿನ ಉಡುಗೊರೆ" ಎಂದು ಅರ್ಥೈಸಲಾಗುತ್ತದೆ.

ಕೊಡೈಕೆನಲ್ ಸುತ್ತ - ಮುತ್ತ ಇರುವ ಪ್ರವಾಸಿ ಕೇಂದ್ರಗಳು

ಕೊಡೈಕೆನಲ್ ಎಂಬುದು ಒಂದು ಪ್ರಸಿದ್ಧ ರಜಾದಿನಗಳನ್ನು ಕಳೆಯುವ ಮೋಜಿನ ತಾಣವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ, ಬಂಡೆಗಳು ಮತ್ತು ಜಲಪಾತಗಳ ನಡುವೆ ಮಧುಚಂದ್ರಕ್ಕಾಗಿ ಮತ್ತು ಪ್ರಕೃತಿ ಮಡಿಲಲ್ಲಿ ವಿಶ್ರಾಂತಿ ಪಡೆಯುವ ಸಲುವಾಗಿ ಜನರು ಆಗಮಿಸುತ್ತಿರುತ್ತಾರೆ.

ಕೊಡೈಕೆನಲ್ ಸುತ್ತ ಮುತ್ತ ಹಲವಾರು ಪ್ರವಾಸಿ ಆಕರ್ಷಣೆಗಳು ಇವೆ. ಅವುಗಳಲ್ಲಿ ಕೋಕರ್ಸ್ ವಾಕ್, ಬಿಯರ್ ಶೋಲಾ ಪಾರ್ಕ್, ಕೊಡೈಕೆನಲ್ ಕೆರೆ,ಗ್ರೀನ್ ವ್ಯಾಲಿ ವ್ಯೂ, ಶೆಂಬಗನೂರ್ ಪ್ರಾಕೃತಿಕ ವಸ್ತು ಸಂಗ್ರಹಾಲಯ, ಕೊಡೈಕೆನಲ್ ವೈಙ್ಞಾನಿಕ ವೀಕ್ಷಣಾಲಯ, ಪಿಲ್ಲರ್ ರಾಕ್ಸ್, ಗುಣ ಕೇವ್ಸ್, ಸಿಲ್ವರ್ ಕ್ಯಾಸ್ಕೇಡ್, ಡಾಲ್ಫಿನ್ಸ್ ನೋಸ್, ಕುರಿಂಜಿ ಆಂಡವರ್ ದೇವಾಲಯ ಮತ್ತು ಬೆರಿಜಮ್ ಕೆರೆಗಳು ಪ್ರಮುಖವಾದುದಾಗಿವೆ. ಇದರ ಜೊತೆಗೆ ಇಲ್ಲಿ ಕೆಲವೊಂದು ಚರ್ಚುಗಳು ಸಹ ಇದ್ದು, ಅಲ್ಲಿಗು ಸಹ ಭೇಟಿ ಕೊಡಬಹುದಾಗಿವೆ.

ಕೊಡೈಕೆನಲ್ ಪಿಯರ್ ಮತ್ತು ಒಣ ದ್ರಾಕ್ಷಿಗಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇದರ ಜೊತೆಗೆ ಈ ಸ್ಥಳವು ಚಾಕೋಲೆಟ್ ಪ್ರಿಯರ ಸ್ವರ್ಗವೆಂದು ಹೇಳಬಹುದು. ಇಲ್ಲಿ ಹಲವಾರು ಅಂಗಡಿಗಳಲ್ಲಿ ಮನೆಯಲ್ಲಿ ತಯಾರಿಸಿದ ಚಾಕೋಲೆಟ್‍ಗಳನ್ನು ಮಾರುತ್ತಾರೆ. ಕೊಡೈಕೆನಲ್‍ನಲ್ಲಿ ನೀಲಗಿರಿ ಎಣ್ಣೆಯನ್ನು ತಯಾರಿಸಲಾಗುತ್ತದೆ. 12 ವರ್ಷಗಳಿಗೆ  ಒಮ್ಮೆ ಮಾತ್ರ ಅರಳುವ ಕುರಿಂಜಿ ಪುಷ್ಪಗಳು ಕೊಡೈಕೆನಲ್‍ನಲ್ಲಿ ಕಂಡು ಬರುತ್ತವೆ. ಇದಲ್ಲದೆ ಕೊಡೈಕೆನಲ್ ಸಾಹಸ ಪ್ರಿಯರಿಗೆ ಚಾರಣ, ದೋಣಿ ಯಾನ, ಕುದುರೆ ಸವಾರಿ ಮತ್ತು ಸೈಕ್ಲಿಂಗ್‍ಲ್‍ನಂತಹ ಚಟುವಟಿಕೆಗಳಿಗೆ ಅವಕಾಶವನ್ನು ನೀಡುತ್ತದೆ.

ಕೊಡೈಕೆನಲ್‍ನ ಇತಿಹಾಸದತ್ತ ಒಂದು ನೋಟ

ಕೊಡೈಕೆನಲ್‍ನ ಮೊದಲ ಮೂಲ ನಿವಾಸಿಗಳು ಪಲೈಯರ್ ಬುಡಕಟ್ಟು ಸಮುದಾಯದವರು. ಈ ಸ್ಥಳದ ಕುರಿತು ಕ್ರಿಸ್ತ ಶಕದ ಆರಂಭ ಕಾಲದಲ್ಲಿ ರಚಿತವಾದ ಸಂಗಂ ಸಾಹಿತ್ಯದಲ್ಲಿ ಉಲ್ಲೇಖಗಳಿವೆ. ಲೆಫ್ಟಿನೆಂಟ್ ಬಿ.ಎಸ್ ವಾರ್ಡ್ ನೇತೃತ್ವದಲ್ಲಿ 1821ರಲ್ಲಿ ಇಲ್ಲಿಗೆ ಬ್ರಿಟೀಷರು ಕಾಲಿರಿಸಿದರು. 20 ನೇ ಶತಮಾನದಲ್ಲಿ ಇಲ್ಲಿಗೆ ಸ್ಥಳೀಯ ಜನರು ವಲಸೆ ಬಂದು ತಮ್ಮ ತಮ್ಮ ನೆಲೆಗಳನ್ನು ಸ್ಥಾಪಿಸಿಕೊಂಡು ವಾಸ ಮಾಡಲು ಶುರು ಮಾಡಿದರು.

ಕೊಡೈಕೆನಲ್‍ಗೆ ತಲುಪುವುದು ಹೇಗೆ

ಮದುರೈ ವಿಮಾನ ನಿಲ್ದಾಣವು ಕೊಡೈಕೆನಲ್‍ಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಈ ಗಿರಿಧಾಮದಿಂದ 120 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ನಿಲ್ದಾಣವು ಕೊಯಮತ್ತೂರ್ ಮತ್ತು ಚೆನ್ನೈ ವಿಮಾನ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಕೊಡೈಕೆನಲ್‍ಗೆ ದೇಶದ ಇತರ ಭಾಗಗಳಿಂದ ಮತ್ತು ವಿಶ್ವದ ಇತರ ನಗರಗಳಿಂದ ಸಂಪರ್ಕವನ್ನು ಕಲ್ಪಿಸುತ್ತದೆ.

ಕೋಡೈ ರೋಡ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಇದು ಕೊಡೈಕೆನಲ್‍ನಿಂದ 3 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಆದಾಗಿಯು ಕೊಯಮತ್ತೂರ್ ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಇನ್ನಿತರ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ತಮಿಳು ನಾಡು ಮತ್ತು ಕೇರಳದ ನಗರಗಳಿಂದ ಕೊಡೈಕನಲ್‍ಗೆ ಪ್ರತಿನಿತ್ಯ ಬಸ್ಸುಗಳು ಹೋಗಿ ಬರುತ್ತಿರುತ್ತವೆ. ಬೆಂಗಳೂರಿನಿಂದ ಸಹ ಕೊಡೈಕೆನಲ್‍ಗೆ ಬಸ್ ಸೌಕರ್ಯವಿದೆ.

ಕೊಡೈಕೆನಲ್ ಹವಾಮಾನ

ಕೊಡೈಕೆನಲ್‍ನಲ್ಲಿ ವರ್ಷಪೂರ್ತಿ ಉತ್ತಮವಾದ ಹವಾಮಾನವಿರುತ್ತದೆ. ಕೊಡೈಕೆನಲ್‍ಗೆ ಭೇಟಿಕೊಡಬೇಕಾದರೆ ಏಪ್ರಿಲ್‍ನಿಂದ ಜೂನ್ ಹಾಗು ಸೆಪ್ಟೆಂಬರ್ ನಿಂದ ಅಕ್ಟೋಬರ್ ನಡುವಿನ ಅವಧಿಯಲ್ಲಿ ಭೇಟಿಕೊಡುವುದು ಉತ್ತಮ. ಇದಲ್ಲದೆ ಇಲ್ಲಿಗೆ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸಹ ಭೇಟಿ ಕೊಡಬಹುದು. ಆಗ ಇಲ್ಲಿ ಮಳೆಯಿಂದಾಗಿ ಸುತ್ತ ಮುತ್ತಲ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತ ಇರುತ್ತದೆ. ಚಳಿಗಾಲದಲ್ಲಿ ಸಹ ಈ ಗಿರಿಧಾಮಕ್ಕೆ ಭೇಟಿಕೊಡಬಹುದು.

ಕೊಡೈಕೆನಲ್ ಪ್ರಸಿದ್ಧವಾಗಿದೆ

ಕೊಡೈಕೆನಲ್ ಹವಾಮಾನ

ಉತ್ತಮ ಸಮಯ ಕೊಡೈಕೆನಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೊಡೈಕೆನಲ್

  • ರಸ್ತೆಯ ಮೂಲಕ
    ಮಧುರೈ,ಕೊಯಮತ್ತೂರ್, ಬೆಂಗಳೂರು, ತಿರುಚ್ಚಿ ಮತ್ತು ಚೆನ್ನೈ ನಗರಗಳಿಂದ ಕೊಡೈಕೆನಲ್‍ಗೆ ಪ್ರತಿನಿತ್ಯ ಬಸ್ಸುಗಳು ಹೋಗಿ ಬರುತ್ತಿರುತ್ತವೆ. ಈ ಗಿರಿಧಾಮಕ್ಕೆ ಹೋಗಿ ಬರಲು ಬಸ್ಸುಗಳು ಅತ್ಯಂತ ಮಿತವ್ಯಯದ ಮತ್ತು ಸುರಕ್ಷಿತವಾದ ಸಾರಿಗೆ ವಿಧವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೋಡೈ ರೋಡ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಇದು ಕೊಡೈಕೆನಲ್‍ನಿಂದ 80 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಆದಾಗಿಯು ಕೊಯಮತ್ತೂರ್ ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಇನ್ನಿತರ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮದುರೈ ವಿಮಾನ ನಿಲ್ದಾಣವು ಕೊಡೈಕೆನಲ್‍ಗೆ ಸಮೀಪದ ವಿಮಾನ ನಿಲ್ದಾಣವಾಗಿದ್ದು, ಈ ಗಿರಿಧಾಮದಿಂದ 120 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ನಿಲ್ದಾಣವು ಕೊಯಮತ್ತೂರ್ ಮತ್ತು ಚೆನ್ನೈ ವಿಮಾನ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಕೊಡೈಕೆನಲ್‍ಗೆ ದೇಶದ ಇತರ ಭಾಗಗಳಿಂದ ಮತ್ತು ವಿಶ್ವದ ಇತರ ನಗರಗಳಿಂದ ಸಂಪರ್ಕವನ್ನು ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri