Search
  • Follow NativePlanet
Share
» »ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

By Vijay

ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ತಾಡಿಪತ್ರಿ ಅಥವಾ ತಾಡಪತ್ರಿ ಎಂಬ ಪಟ್ಟಣವು ತನ್ನಲ್ಲಿರುವ ಎರಡು ವಿಶೇಷ ದೇವಾಲಯಗಳಿಗಾಗಿ ಪ್ರಸಿದ್ಧವಾಗಿದೆ. ಆ ಎರಡೂ ದೇವಾಲಯಗಳು ಪ್ರದೇಶದ ಪ್ರಮುಖ ದೇವಾಲಯಗಳಾಗಿದ್ದು ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಸ್ಥಾನಗಳಾಗಿವೆ.

ನಿಮಗಿಷ್ಟವಾಗಬಹುದಾದ : ಭಾರತದ ಕೆಲವು ಪ್ರಮುಖ ಶಿವನ ದೇವಾಲಯಗಳು

ಶ್ರೀ ಕೋನ ರಂಗನಾಥ ಸ್ವಾಮಿಯ ದೇವಾಲಯವು ತಾಡಿಪತ್ರಿ ಪಟ್ಟಣದಿಂದ ಸುಮಾರು ಐದು ಕಿ.ಮೀ ದುರದಲ್ಲಿದೆ. ಈ ದೇವಾಲಯವನ್ನು ಹದಿನಾಲ್ಕನೇಯ ಶತಮಾನದ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯ ಆಳುತ್ತಿದ್ದ ಬುಕ್ಕರಾಯನ ಮುಖ್ಯ ಅಧಿಕಾರಿಯಾದ ಎರ್‍ರಮರಾಜು ಎಂಬಾತನಿಂದ ಗುಡ್ಡದ ತುದಿಯೊಂದರ ಮೇಲೆ ನಿರ್ಮಿಸಲಾಗಿದೆ.

ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ಚಿತ್ರಕೃಪೆ: Dr Murali Mohan Gurram

ಈ ದೇವಾಲಯವಿರುವ ತಾಣವು ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದು ವಿಜಯವಾಡಾ, ಹೈದರಾಬಾದ್, ಕರ್ನೂಲ್, ವಿಶಾಖಾಪಟ್ಟ ಮುಂತಾದ ಪ್ರಮುಖ ನಗರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು/ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಈ ದೇವಾಲಯದ ಸನಿಹ ಎರಡು ಬಂಡೆಗಳ ಮಧ್ಯೆ ನಿರ್ಮಲವಾಗಿ ಧುಮುಕುವ ಜಲಪಾತವೊಂದನ್ನೂ ಸಹ ಕಾಣಬಹುದು.

ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ಚಿತ್ರಕೃಪೆ: Murali Mohan Gurram

ಇನ್ನೂ ತಾಡಿಪತ್ರಿಯಲ್ಲಿರುವ ಮತ್ತೊಂದು ದೇವಾಲಯವೆಂದರೆ ಬುಗ್ಗಾ ರಾಮಲಿಂಗೇಶ್ವರ ಸ್ವಾಮಿಯ ದೇವಸ್ಥಾನ. ಸ್ಥಳ ಪುರಾಣದಂತೆ, ಇಲ್ಲಿರುವ ಶಿವಲಿಂಗವನ್ನು ತ್ರೇತಾ ಯುಗದಲ್ಲಿ ಸ್ವತಃ ರಾಮನೆ ಹೆಣ್ಣು ರಕ್ಕಸಿಯಾದ ತಾಟಕಿಯ ಸಂಹಾರದ ಪಾಪ ನಿವಾರಣೆಗಾಗಿ ಪ್ರತಿಷ್ಠಾಪಿಸಿದ ಶಿವಲಿಂಗವಾಗಿದೆ. ಈ ದೇವಸ್ಥಾನವು ವಿಜಯನಗರ ವಾಸ್ತುಶಿಲ್ಪದಿಂದ ಕೂಡಿದ್ದು ತನ್ನ ಕಲಾತ್ಮಕತೆಗೆ ಅಪಾರ ಖ್ಯಾತಿಗಳಿಸಿದೆ.

ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ಚಿತ್ರಕೃಪೆ: Sashank.bhogu

ಹಿಂದೆ ಇಲ್ಲಿನ ಅರಸನಾದ ರಾಮಲಿಂಗ ನಾಯ್ಡುವಿನ ಕನಸಿನಲ್ಲಿ ಒಮ್ಮೆ ದೇವರು ಪ್ರತ್ಯಕ್ಷನಾಗಿ ರಾಮನಿಂದ ಪ್ರತಿಷ್ಠಾಪಿಸಲಾದ ಈ ಶಿವಲಿಂಗಕ್ಕೆ ದೇವಾಲಯ ಕಟ್ಟಿಸಲು ಆದೇಶಿಸಿದ. ಅದರಂತೆ ಈ ದೇವಾಲಯದ ನಿರ್ಮಾಣವಾಯಿತೆನ್ನಲಾಗಿದೆ. ಇದೂ ಸಹ ಕಾಶಿ ವಿಶ್ವನಾಥನಂತೆ ಪೆನ್ನಾ ನದಿ (ಕಾಶಿಯಲ್ಲಿ ಗಂಗಾ) ತಟದಲ್ಲಿ ನೆಲೆಸಿರುವ ಧಾರ್ಮಿಕ ತಾಣವಾಗಿದೆ.

ನಿಮಗಿಷ್ಟವಾಗಬಹುದಾದ : ಪರಶುರಾಮರೆ ಸ್ಥಾಪಿಸಿದ ಅದ್ವಿತೀಯ ಶಿವಾಲಯಗಳು

ಇನ್ನೊಂದು ನಂಬಿಕೆಯಂತೆ ಈ ದೇವಾಲಯವನ್ನು ಹಿಂದೆ ಪರಶುರಾಮರು ದೀರ್ಘ ಸಮಯದವರೆಗೆ ತಪಗೈದ ಕರಾವಕ್ಕಾದ ಸ್ಥಳದಲ್ಲಿಯೆ ನಿರ್ಮಿಸಲಾಗಿದೆ ಎಮ್ದು ಹೇಳಲಾಗುತ್ತದೆ. ಅಲ್ಲದೆ ವೈಶಿಷ್ಟ್ಯವೆಂದರೆ ಇಲ್ಲಿನ ಶಿವಲಿಂಗ ಅಂಚುಗಳಿಂದ ನಿರಂತರವಾಗಿ ನೀರು ಬರುತ್ತಲೆ ಇರುತ್ತದೆ. ಇದು ಹೇಗೆ ಎಂಬುದರ ಕುರಿತು ಇನ್ನೂ ವರೆಗೆ ತಿಳಿಯಲಾಗಿಲ್ಲವಂತೆ.

ತಾಡಿಪತ್ರಿಯ ಬುಗ್ಗಾ ರಾಮೇಶ್ವರ ಹಾಗೂ ರಂಗನಾಥ

ಚಿತ್ರಕೃಪೆ: Sashankbhogu

ಇನ್ನೂ ತಾಡಿಪತ್ರಿಯು ಅನಂತಪುರ ಪಟ್ಟಣದಿಂದ 55 ಕಿ.ಮಿ ದೂರವಿದ್ದು ಆಂಧ್ರ ಸರ್ಕಾರಿ ಬಸ್ಸುಗಳು ನೇರವಾಗಿ ಅನಂತಪುರದಿಂದ ತಾಡಿಪತ್ರಿವರೆಗೆ ಲಭ್ಯವಿದೆ. ತಾಡಿಪತ್ರಿಯು ತಿರುಪತಿಯಿಂದ ಸುಮಾರು 245 ಕಿ.ಮೀ ದೂರವಿದ್ದು ನಿಯಮಿತ ಸಮಯಗಳಲ್ಲಿ ತಿರುಪತಿಯಿಂದ ನೇರವಾಗಿ ತಾಡಿಪತ್ರಿಯವರೆಗೆ ರೈಲುಗಳೂ ಸಹ ಲಭ್ಯವಿದೆ. ಬೆಂಗಳೂರಿನಿಂದ ಅನಂತಪುರವು 215 ಕಿ.ಮೀ ದೂರವಿದ್ದು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X