Search
  • Follow NativePlanet
Share
» »ರಾಣಿ ಲಕ್ಷ್ಮೀಬಾಯಿಯ ಊರಿಗೆ ಹೋಗಿ ಬರೋಣ್ವಾ?

ರಾಣಿ ಲಕ್ಷ್ಮೀಬಾಯಿಯ ಊರಿಗೆ ಹೋಗಿ ಬರೋಣ್ವಾ?

By Manjula Balaraj Tantry

ಝಾನ್ಸಿ ಭೋಪಾಲ್ ನಗರಗಳಲ್ಲಿರುವ ಕೆಲವು ಐತಿಹಾಸಿಕ ನಗರಗಳಲ್ಲೊಂದಾಗಿದ್ದು ಇಲ್ಲಿಗೆ ಭೇಟಿಯು ನಿಮ್ಮ ವಾರಾಂತ್ಯದ ರಜಾದಿನಗಳನ್ನು ಖಚಿತವಾಗಿಯೂ ಸ್ಮರಣೀಯಗೊಳಿಸುವುದರಲ್ಲಿ ಸಂಶಯವೇ ಇಲ್ಲ. ನೀವು ಭಾರತದ ಶ್ರೀಮಂತ ಇತಿಹಾಸವನ್ನು ಇಷ್ಟಪಡುವವರಾಗಿದ್ದಲ್ಲಿ, ಮತ್ತು ಬ್ರಿಟಿಷರ ಯುಗದ ಇತಿಹಾಸದ ಪದರವನ್ನು ಮತ್ತು ಆ ಕಾಲದಲ್ಲಿ ಇಲ್ಲಿನ ಗಡಿಯೊಳಗಿನ ಆಗುಹೋಗುಗಳ ಬಗ್ಗೆ ತಿಳಿಯಬೇಕೆಂದಿದ್ದಲ್ಲಿ ಝಾನ್ಸಿ ಒಂದು ಸೂಕ್ತವಾದ ಸ್ಥಳವಾಗಿದೆ.

1. ಝಾನ್ಸಿಗೆ ಭೇಟಿ ಕೊಡಲು ಸೂಕ್ತ ಸಮಯ

1. ಝಾನ್ಸಿಗೆ ಭೇಟಿ ಕೊಡಲು ಸೂಕ್ತ ಸಮಯ

Dennis Jarvis

ತೀವ್ರವಾದ ತಾಪಮಾನವಿರುವುದರಿಂದ ಝಾನ್ಸಿಯು ಬೇಸಿಗೆಯ ಕಾಲದಲ್ಲಿ ತಾಪಮಾನವು ತೀವ್ರವಾಗಿರುತ್ತದೆ ಆದುದರಿಂದ ಈ ಸಮಯದಲ್ಲಿ ಇದು ಸ್ಥಳೀಯ ಪ್ರವಾಸಿಗರಿಂದ ಕನಿಷ್ಠ-ಭೇಟಿ ನೀಡಿದ ಐತಿಹಾಸಿಕ ನಗರವಾಗಿ ಉಳಿದಿದೆ. ಆದರೂ ವರ್ಷವಿಡೀ ಇತಿಹಾಸ ಪ್ರಿಯರು ಮತ್ತು ವಿದೇಶೀ ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. ನೀವು ಝಾನ್ಸಿಯ ಸೌಂದರ್ಯವನ್ನು ತಂಪಾದ ಮತ್ತು ಆಹ್ಲಾದಕರವಾದ ಹವಾಗುಣದ ನಡುವೆ ಅನ್ವೇಷಣೆ ಮಾಡಬೇಕೆಂದು ಬಯಸಿದಲ್ಲಿ, ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೆ ಇಲ್ಲಿಗೆ ಭೇಟಿ ಕೊಡಲು ಸೂಕ್ತವಾದ ಸಮಯವಾಗಿರುತ್ತದೆ.

2. ಎರಾನ್

2. ಎರಾನ್

ArnoldBetten

ಝಾನ್ಸಿಗೆ ಹೋಗುವ ನಿಮ್ಮ ಪ್ರಯಾಣದ ದಾರಿಯಲ್ಲಿ ನೀವು ಎರಾನ್ ನಲ್ಲಿ ಒಂದು ವಿರಾಮವನ್ನು ಪಡೆಯಬಹುದು ಮತ್ತು ಇದರ ಪ್ರಾಚೀನ ಸೌಂದರ್ಯತೆಯನ್ನು ಅನುಭವಿಸಬಹುದಾಗಿದೆ. ಎರಾನ್ ಭೋಪಾಲ್ ನಿಂದ ಸುಮಾರು 150 ಕಿ.ಮೀ ಅಂತರದಲ್ಲಿದೆ ಮತ್ತು ಝಾನ್ಸಿಯಿಂದ ಸುಮಾರು 200 ಕಿಮೀ ದೂರದಲ್ಲಿದೆ. ಝಾನ್ಸಿಗೆ ನಿಮ್ಮ ಐತಿಹಾಸಿಕ ಪ್ರವಾಸದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಇದೊಂದು ಸೂಕ್ತವಾದ ಸ್ಥಳವಾಗಿದೆ.

ಎರಾನ್ ಒಂದು ಪುರಾತತ್ವದ ತಾಣವಾಗಿದ್ದು, ಸಾಮಾನ್ಯ ಯುಗದ ಆಗಮನದ ವರೆಗೂ ಇದು ಅಸ್ತಿತ್ವದಲ್ಲಿತ್ತೆಂದು ನಂಬಲಾಗುತ್ತದೆ. ಇಲ್ಲಿ 5ನೇ ಮತ್ತು 6ನೇ ಶತಮಾನದ ಗುಪ್ತ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅನೇಕ ಕಟ್ಟಡಗಳನ್ನುಕಾಣಬಹುದಾಗಿದೆ. ಬೀನಾ ನದಿಯ ದಡದಲ್ಲಿ ನೆಲೆಸಿರುವ ಎರಾನ್ ಇತಿಹಾಸ ಪ್ರಿಯರು ಮತ್ತು ಪ್ರಾಚೀನ ಭಾರತದ ವೈಭವೋಪೇತ ಇತಿಹಾಸಗಳನ್ನು ಶೋಧಿಸ ಬಯಸುವವರಿಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಮುರಿದ ಸ್ಥಂಭಗಳಿಂದ ಹಿಡಿದು ಹಂದಿಯ ಪ್ರತಿಮೆಗಳವರೆಗೆ ಮತ್ತು ಹಿಂದೂ ದೇವಾಲಯಗಳಿಂದ ಹಿಡಿದು ಕೆಲವು ಶಾಸನಗಳ ವರೆಗೆ ಅನ್ವೇಷಿಸಬಹುದಾದಂತಹ ಅನೇಕ ವಿಷಯಗಳನ್ನು ಒಳಗೊಂಡಿದೆ.

3. ಅಂತಿಮ ಗಮ್ಯಸ್ಥಾನ

3. ಅಂತಿಮ ಗಮ್ಯಸ್ಥಾನ

Bornav27may

ಝಾನ್ಸಿಯ ಗಡಿಯೊಳಗೆ ಒಮ್ಮೆ ನೀವು ಪ್ರವೇಶಿಸಿದಲ್ಲಿ, ಅನೇಕ ಐತಿಹಾಸಿಕ ತಾಣಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಇವುಗಳು ಭಾರತದಲ್ಲಿಯ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿನ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತವೆ. ಇದು ಅನೇಕ ರಾಜ ಮನೆತನದವರು ಆಳಿದಂತಹ ರಾಜ್ಯವಾದುದರಿಂದ ಇದು ಝಾನ್ಸಿಯ ವೈಭವ ಮತ್ತು ಅಲ್ಲಿಯ ಆಡಳಿತಗಾರರ ಭವ್ಯತೆಯನ್ನು ಪ್ರತಿಬಿಂಬಿಸುವುದನ್ನು ನೀವು ಕಾಣಬಹುದಾಗಿದೆ.

ಬ್ರಿಟಿಷರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೂ ಝಾನ್ಸಿ ಅತ್ಯಂತ ಪ್ರಮುಖವಾತ ಪಾತ್ರವನ್ನು ವಹಿಸಿತ್ತು ಮತ್ತು1857 ರ ಬಂಡಾಯವು ನಡೆಯುತ್ತಿದ್ದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಅಲ್ಲದೆ ರಾಣಿ ಲಕ್ಷ್ಮೀಭಾಯಿ ಯನ್ನು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಆಕೆ ಮಾಡಿದ ತ್ಯಾಗವನ್ನು ಯಾರು ತಾನೇ ಮರೆಯಲು ಸಾಧ್ಯ? ಸರಿ ಹಾಗಿದ್ದಲ್ಲಿ, ನೀವು ಪ್ರಾಚೀನ ಕಥೆಗಳ ಬಗ್ಗೆ ಆಸಕ್ತಿ ಉಳ್ಳವರಾಗಿದ್ದಲ್ಲಿ, ನೀವು ಈ ಋತುವಿನಲ್ಲಿ ಝಾನ್ಸಿಯನ್ನು ಭೇಟಿ ಮಾಡಲೇಬೇಕು. ನೀವು ಈ ಐತಿಹಾಸಿಕ ನಗರದಲ್ಲಿರುವಾಗ ಕೆಳಗಿನ ಸ್ಥಳಗಳಿಗೆ ಭೇಟಿ ನೀಡಲೇಬೇಕು.

4. ಝಾನ್ಸಿ ಕೋಟೆ

4. ಝಾನ್ಸಿ ಕೋಟೆ

Wikijib

ಝಾನ್ಸಿ ಕೋಟೆಯು ಹೆಚ್ಚಾಗಿ ಭೇಟಿ ಕೊಡಲ್ಪಡುವ ಮತ್ತು ಝಾನ್ಸಿಯಲ್ಲಿಯ ಒಂದು ಮಹತ್ವದ ತಾಣವಾಗಿದೆ. ಇದನ್ನು ಯಾವುದೇ ಪ್ರಯಾಣಿಗರು ಅಥವಾ ಪ್ರವಾಸಿಗರು ಭೇಟಿ ಕೊಡದೇ ಇರಲು ಸಾಧ್ಯವೇ ಇಲ್ಲ. ಬೆಟ್ಟದ ಮೇಲೆ ನೆಲೆಸಿರುವ ಈ ಭವ್ಯವಾದ ಕೋಟೆಯು ಬ್ರಿಟಿಷರು ರಾಣಿ ಲಕ್ಷ್ಮಿ ಭಾಯಿಯನ್ನು ಸೋಲಿಸಿ ಈ ಕೋಟೆಯನ್ನು ವಶಪಡಿಸಿಕೊಳ್ಳುವವರೆಗೆ ಚಂದೇಲಾ ಸಾಮ್ರಾಜ್ಯದ ರಾಜರ ಅಧಿಕೃತ ನಿವಾಸವಾಗಿತ್ತು

ಝಾನ್ಸಿ ಕೋಟೆಯು ಉತ್ತರಭಾರತದ ಅತ್ಯಂತ ಪ್ರಭಲವಾದ ಕೋಟೆಯಾಗಿದೆ ಮತ್ತು ಇದರ ವಿಸ್ತಾರವಾಗಿರುವ ಮತ್ತು ಕಠಿಣವಾದ ಗೋಡೆಗಳ ಉಪಸ್ಥಿತಿಯು ಇದರ ಪ್ರಾಬಲ್ಯತೆಯನ್ನು ಸಾಬೀತುಪಡಿಸುತ್ತದೆ. ಆದುದರಿಂದ ಈ ಋತುವಿನಲ್ಲಿ ಈ ವೈಭವೋಪೇತ ಪ್ರಾಚೀನ ಸೌಂದರ್ಯತೆಯ ಕಡೆಗೆ ಒಂದು ನೋಟ ಹರಿಸಿದರೆ ಹೇಗಿರಬಹುದು?

5. ಸರಕಾರೀ ವಸ್ತುಸಂಗ್ರಹಾಲಯ

5. ಸರಕಾರೀ ವಸ್ತುಸಂಗ್ರಹಾಲಯ

ಝಾನ್ಸಿಯ ಸರಕಾರಿ ವಸ್ತು ಸಂಗ್ರಹಾಲಯದಲ್ಲಿರುವ ಭವ್ಯವಾದದ ಶಸ್ತ್ರಾಸ್ತ್ರಗಳ ಸಂಗ್ರಹಣೆಗಳು, ಪ್ರತಿಮೆಗಳು, ಉಡುಪುಗಳು, ಚಿತ್ರಕಲೆಗಳು, ಮತ್ತು ಇದರ ಗೋಡೆಗಳನ್ನು ಅಲಂಕರಿಸಿರುವ ರಾಣಿ ಲಕ್ಶ್ಮೀಭಾಯಿಯವರಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ನೋಡದೇ ನೀವು ವಾಪಸ್ಸಾದಲ್ಲಿ ನಿಮ್ಮ ಝಾನ್ಸಿಯ ಪ್ರವಾಸವು ಅಪೂರ್ಣವೇ ಸರಿ. ಗುಪ್ತರ ಸಾಮ್ರ್ಯಾಜ್ಯಕ್ಕೆ ಸಂಭಂಧಿಸಿದ ಕೆಲವು ಪುರಾತನ ವಸ್ತುಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಈಗಿರುವ ಸರಕಾರಿ ವಸ್ತು ಸಂಗ್ರಹಾಲಯವು ಮೊದಲು ರಾಣಿ ವಾಸಸ್ಥಾನವಾಗಿದ್ದು ಇದು ರಾಣಿ ಲಕ್ಶ್ಮೀಭಾಯಿಯವರ ವೈಭವೋಪೇತ ಅರಮನೆಯಾಗಿತ್ತು.

6. ಇನ್ನಿತರ ಆಸಕ್ತಿದಾಯಕ ಸ್ಥಳಗಳು

6. ಇನ್ನಿತರ ಆಸಕ್ತಿದಾಯಕ ಸ್ಥಳಗಳು

Prasann kanade

ಈ ಎಲ್ಲಾ ಸುಂದರವಾದ ಭವ್ಯವಾದ ಮತ್ತು ವೈಭವೋಪೇತ ಸ್ಥಳಗಳ ಜೊತೆಗೆ ನೀವು ಇಲ್ಲಿ ಕೆಲವು ಪ್ರವಾಸೀ ಆಕರ್ಷಣೆಗಳಿಗೂ ಭೇಟಿ ಕೊಡಬಹುದಾಗಿದೆ. ಅವುಗಳಲ್ಲಿ ಗಂಗಾಧರ್ ರಾವ್ ಅವರ ಘೋರಿ ಯೂ ಒಂದು , ಇವರು ಝಾನ್ಸಿಯ ರಾಜರಾಗಿದ್ದರು. ರಾಣಿ ಲಕ್ಶ್ಮೀಭಾಯಿಯವರ ಪತಿಯಾಗಿದ್ದರು. ಇದಲ್ಲದೆ ಇಲ್ಲಿ ಇಸ್ಕಾನ್ ದೇವಾಲಯ, ಲಕ್ಶ್ಮೀಭಾಯಿ ಉದ್ಯಾನವನ ಲಕ್ಷ್ಮೀ ದೇವಾಲಯ, ಗಿಡಮೂಲಿಕೆಗಳ ತೋಟ, ಶ್ರೀಗಣೇಶ ಮಂದಿರ ಮತ್ತು ನಾರಾಯಣ್ ಭಾಗ್ ಮುಂತಾದವುಗಳನ್ನೂ ಭೇಟಿ ಕೊಡಬಹುದಾಗಿದೆ.

7. ಭೋಪಾಲ್ ನಿಂದ ಝಾನ್ಸಿಗೆ ಹೋಗುವ ಬಗೆ

7. ಭೋಪಾಲ್ ನಿಂದ ಝಾನ್ಸಿಗೆ ಹೋಗುವ ಬಗೆ

ವಾಯು ಮಾರ್ಗ: ಝಾನ್ಸಿಗೆ ನೇರವಾಗಿ ವಿಮಾನದ ಸೌಲಭ್ಯಗಳಿರುವುದಿಲ್ಲವಾದುದರಿಂದ ವಿಮಾನದಲ್ಲಿ ಪ್ರಯಾಣ ಮಾಡಬೇಕಾದಲ್ಲಿ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಈ ವಿಮಾನ ನಿಲ್ದಾಣದಿಂದ ಝಾನ್ಸಿಯು 97 ಕಿ.ಮೀ ಅಂತರದಲ್ಲಿದೆ. ಇಲ್ಲಿಂದ ನೀವು ಟ್ಯಾಕ್ಸಿ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು ಅಥವಾ ಝಾನ್ಸಿಗೆ ಬಸ್ ಹಿಡಿಯಬಹುದು.

ರೈಲ್ವೆ ಮೂಲಕ: ಹತ್ತಿರದ ನಗರಗಳು ಮತ್ತು ಪಟ್ಟಣಗಳೊಂದಿಗೆ ರೈಲು ಮಾರ್ಗವಾಗಿ ಝಾನ್ಸಿ ಸಂಪರ್ಕವನ್ನು ಹೊಂದಿದೆ. ಇದರಿಂದಾಗಿ ನೀವು ಭೋಪಾಲ್ ರೈಲು ನಿಲ್ದಾಣದಿಂದ ಝಾನ್ಸಿ ಜಂಕ್ಷನಿಗೆ ನೇರ ರೈಲುಗಳನ್ನು ಪಡೆಯಬಹುದು.

ರಸ್ತೆ ಮೂಲಕ: ಝಾನ್ಸಿ ನಗರವು ಭೋಪಾಲ್ ನಿಂದ 320 ಕಿ.ಮೀ ದೂರದಲ್ಲಿದೆ ಮತ್ತು ಆದ್ದರಿಂದ ಸುಲಭವಾಗಿ ರಸ್ತೆ ಮೂಲಕ ತಲುಪಬಹುದು.

ಮಾರ್ಗ 1: ಭೋಪಾಲ್ - ಎರಾನ್ - ಝಾನ್ಸಿ ಮಾರ್ಗ 2: ಭೋಪಾಲ್ - ಚಾಂದೇರಿ - ಝಾನ್ಸಿ ಮಾರ್ಗವಾಗಿ

ಮಾರ್ಗ 1 ರಲ್ಲಿ ಪ್ರಯಾಣಿಸಿದಲ್ಲಿ ಗಮ್ಯಸ್ಥಾನವನ್ನು ತಲುಪಲು ಅರ್ಧಗಂಟೆ ಕಡಿಮೆ ತೆಗೆದುಕೊಳ್ಳುತ್ತದೆ ಅಂದರೆ ಆರು ಗಂಟೆಗಳ ಒಳಗಾಗಿ ನೀವು ತಲುಪಬಹುದು ಆದುದರಿಂದ ನೀವು ಮಾರ್ಗ 1 ರಲ್ಲಿ ನಿಮ್ಮ ಗಮ್ಯಸ್ಥಾನವಾದ ಝಾನ್ಸಿಯನ್ನು ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X