Search
  • Follow NativePlanet
Share
» »2020ರಲ್ಲಿ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಬೇಕೆಂದಿರುವಿರಾ? ಇಲ್ಲಿವೆ ನೋಡಿ ಅತ್ಯುತ್ತಮ ತಾಣಗಳು

2020ರಲ್ಲಿ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಬೇಕೆಂದಿರುವಿರಾ? ಇಲ್ಲಿವೆ ನೋಡಿ ಅತ್ಯುತ್ತಮ ತಾಣಗಳು

ನಿಮ್ಮ ಎಲ್ಲಾ ಕೆಲಸದ ಗಡುವನ್ನು ಬಿಟ್ಟು ಹಾಗೂ ದಿನದ ಒತ್ತಡದ ಜೀವನದಿಂದ ದೂರ ಹೋಗಿ ಸಂಜೆ ಹೊತ್ತಿನಲ್ಲಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು ಬಯಸುವಿರಾ? ಹಾಗಿದ್ದಲ್ಲಿ ಈ ನಿಮ್ಮೆಲ್ಲಾ ಬಯಕೆಗಳನ್ನು ಪೂರೈಸಬೇಕಾದರೆ ತಮಿಳುನಾಡಿಗೆ ಪ್ರವಾಸವನ್ನು ಆಯೋಜಿಸುವುದು ಉತ್ತಮವಾದ ಆಯ್ಕೆ.

ತನ್ನ ವೈವಿಧ್ಯಮಯವಾದ ಭೂದೃಶ್ಯಗಳು, ಮನಮೋಹಕ ಕಡಲತೀರಗಳು, ನಯನ ಮನೋಹರ ದೃಶ್ಯಗಳು ಇವೆಲ್ಲವನ್ನೂ ತಮಿಳುನಾಡು ನಿಮಗೆ ಒದಗಿಸುತ್ತದೆ. ಆದುದರಿಂದ ಪ್ರವಾಸಿಗರನ್ನು ಆಕರ್ಷಿಸುವಂತಹ ಎಲ್ಲಾ ಸಂಗತಿಗಳನ್ನು ಒಳಗೊಂಡಿರುವ ತಮಿಳುನಾಡಿನ ಕಡೆಗೆ ನಿಮ್ಮ ಪ್ರಯಾಣ ಬೆಳೆಸಲು ತಡ ಮಾಡಬೇಡಿ!

ಚಳಿಗಾಲವು ತಮಿಳುನಾಡಿಗೆ ಭೇಟಿ ಕೊಡಲು ಸೂಕ್ತವಾದ ಸಮಯವಾಗಿದೆ, ಅಂದರೆ ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳುಗಳ ವರೆಗೆ. ಈ ಸಮಯದಲ್ಲಿ ಇಲ್ಲಿ ಆಹ್ಲಾದಕರವಾದ ಹವಾಮಾನವಿರುತ್ತದೆ ಚಳಿಗಾಲದಲ್ಲಿ ತಮಿಳುನಾಡಿನಲ್ಲಿ ಅನುಕೂಲಕರ ಹವಾಮಾನವಿರುವುದರಿಂದ ಈ ರಾಜ್ಯದಲ್ಲಿ ಪ್ರವಾಸ ಮಾಡಲು ಅನುಕೂಲಕರವಾಗಿರುತ್ತದೆ.

2020 ರಲ್ಲಿ ತಮಿಳುನಾಡಿಗೆ ಪ್ರವಾಸ ಹೋಗಲು ಇಚ್ಚಿಸುವವರಿಗೆ ಅನುಕೂಲವಾಗುವಂತೆ ಇಲ್ಲಿಯ ಅತ್ಯುತ್ತಮವಾದ ಹತ್ತು ಸ್ಥಳಗಳ ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ.

1. ಕನ್ಯಾಕುಮಾರಿ

1. ಕನ್ಯಾಕುಮಾರಿ

ವಿಶ್ರಾಂತಿ ಮತ್ತು ಏಕಾಂತತೆಯನ್ನು ಬಯಸುವವರಿಗೆ ಕನ್ಯಾಕುಮಾರಿಯು ಅತ್ಯಂತ ಉತ್ತಮವಾದ ಸ್ಥಳವಾಗಿದೆ. ಪ್ರಕೃತಿಯ ಪರಿಪೂರ್ಣತೆಯನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಈ ಸ್ಥಳವು ವರ್ಷದುದ್ದಕ್ಕೂ ಅತ್ಯುತ್ತಮವಾಗಿಯೇ ಇರುತ್ತದೆ.

ಹಳ್ಳಿಗಾಡಿನ ಸೊಗಡನ್ನು ಒಳಗೊಂಡ ಈ ಪ್ರಶಾಂತವಾದ ಸ್ಥಳವು ತನ್ನ ಭವ್ಯ ಸೌಂದರ್ಯತೆಯನ್ನು ಮೆರೆಯುತ್ತದೆ. ಈ ನೆಮ್ಮದಿಯನ್ನು ಒದಗಿಸುವ ಪ್ರದೇಶದ ಸುತ್ತಮುತ್ತ ,ಒಂದೊಮ್ಮೆ ಇಲ್ಲಿ ಮನೆ ಮಾಡಿದ್ದ ಬ್ರಿಟಿಷ್, ಡ್ಯಾನಿಶ್, ಜರ್ಮನ್ ಮತ್ತು ಫ್ರೆಂಚ್ ವಸಾಹತುಗಳ ಮಿಶ್ರಣವನ್ನು ನೋಡಬಹುದು,

2. ಕೂನೂರ್

2. ಕೂನೂರ್

ತಮಿಳುನಾಡಿನ ಕೂನೂರು ಕ್ರಮೇಣ ಅತ್ಯಂತ ಜನಪ್ರಿಯ ಗಿರಿಧಾಮವಾಗಿ ಹೊರಹೊಮ್ಮುತ್ತಿದೆ. ಇದು 1930 ಮೀಟರ್ ಎತ್ತರದಲ್ಲಿರುವ ಕೂನೂರ್ ನೀಲಗಿರಿ ಬೆಟ್ಟದ ಎರಡನೇ ಅತಿದೊಡ್ಡ ಗಿರಿಧಾಮವಾಗಿದೆ. ಈ ಗಿರಿಧಾಮವು ಊಟಿಯಿಂದ ಕೇವಲ 19 ಕಿ.ಮೀ ದೂರದಲ್ಲಿದೆ.

ಈ ಗಿರಿಧಾಮವು ನೀಲಗಿರಿ ಬೆಟ್ಟಗಳು ಮತ್ತು ಕ್ಯಾಥರೀನ್ ಜಲಪಾತದ ವಿಹಂಗಮ ದೃಶ್ಯವನ್ನು ತನ್ನಲ್ಲಿ ಹೊಂದಿದೆ. ತಮಿಳುನಾಡಿನಲ್ಲಿರುವ ಈ ಸ್ಥಳವು ಇಲ್ಲಿಗೆ ಭೇಟಿ ನೀಡುವವರನ್ನು ಕನಸಿನ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವೇ ಇಲ್ಲ. - ಕೂನೂರು ಸೃಜನಶೀಲ ಪ್ರವೃತ್ತಿಯನ್ನು ಹೊಂದಿರುವವರ ಕಲ್ಪನೆಗೆ ತಕ್ಕಂತೆ ಇದೆ.

3. ಯೆರ್ಕಾಡ್

3. ಯೆರ್ಕಾಡ್

ಯೇರ್ಕಾಡ್ ನ ಭವ್ಯವಾದ ದೃಶ್ಯಗಳಿಂದ ಮಂತ್ರಮುಗ್ದರಾಗದಿರಲು ಅಸಾಧ್ಯ. ಹಸಿರುಮಯವಾದ ಸರೋವರ, ಉರುಳುವ ಬೆಟ್ಟಗಳು ಮತ್ತು ನೈಸರ್ಗಿಕವಾದ ಪರಿಸರವನ್ನು ಒಳಗೊಂಡ ಪೂರ್ವ ಘಟ್ಟಗಳ ಮಧ್ಯೆ ನೆಲೆಸಿರುವ ಈ ಸುಂದರವಾದ ಗ್ರಾಮಾಂತರ ಪ್ರದೇಶ ಮತ್ತು ಗಿರಿಧಾಮವು ಅದರ ಸೊಂಪಾದ ಕಾಡುಗಳು ಮತ್ತು ಅದರ ಇಳಿಜಾರು ಪ್ರದೇಶಗಳಲ್ಲಿಯ ಕಾಫಿ ತೋಟಗಳು ಇವೆಲ್ಲವುಗಳಿಂದ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಯೆರ್ಕಾಡ್ ನಿಜವಾಗಿಯೂ ತಮಿಳುನಾಡಿಗೆ ಭೇಟಿ ಕೊಡುವ ಸಮಯದಲ್ಲಿ ನೋಡಲೇ ಬೇಕಾದ ಸುಂದರವಾದ ಸ್ಥಳವಾಗಿದೆ.

4.ಯೆಲಾಗಿರಿ

4.ಯೆಲಾಗಿರಿ

ಸಮುದ್ರ ಮಟ್ಟದಿಂದ 4,626 ಅಡಿ ಎತ್ತರದಲ್ಲಿರುವ ಯಲಗಿರಿ ಹೆಚ್ಚು ಭೇಟಿ ನೀಡುವ ಚಾರಣ ತಾಣಗಳಲ್ಲಿ ಒಂದಾಗಿದೆ. ಈ ಸುಂದರ ಗಿರಿಧಾಮವು ವೆಲ್ಲೂರು ಜಿಲ್ಲೆಯಲ್ಲಿದೆ ಮತ್ತು ಇದು ರೋಲಿಂಗ್ ಬೆಟ್ಟಗಳು ಮತ್ತು ಗುಲಾಬಿ ತೋಟಗಳು ಮತ್ತು ಇನ್ನಿತರ ತೋಟಗಳಿಂದ ಕೂಡಿದೆ.

ನಾಲ್ಕು ಬೆಟ್ಟಗಳ ಮಧ್ಯೆ ನೆಲೆಸಿರುವ ಯೆಲಗಿರಿ ಪ್ರದೇಶವು 14 ಕುಗ್ರಾಮಗಳನ್ನು ತನ್ನಲ್ಲಿ ಹೊಂದಿರುವುದರಿಂದ ಬೆಟ್ಟಗಳ ಸುಂದರವಾದ ದೃಶ್ಯಗಳನ್ನು, ಮನಮೋಹಕ ನೋಟಗಳನ್ನು ಮತ್ತು ನಯನ ಮನೋಹರ ಪರಿಸರವನ್ನು ಖಂಡಿತವಾಗಿಯೂ ನಿರೀಕ್ಷಿಸಬಹುದಾಗಿದೆ.

ತಮಿಳುನಾಡಿನಲ್ಲಿ ಟ್ರೆಕ್ಕಿಂಗ್ ಗೆ ಇದು ಸೂಕ್ತವಾದ ತಾಣವಾದುದರಿಂದ ಇಲ್ಲಿಗೆ ಸಾಹಸಮಯ ಪ್ರವಾಸವನ್ನೂ ಕೈಗೊಳ್ಳುವವರಿದ್ದಾರೆ. ಅವುಗಳಲ್ಲಿ ಜಾವಾಡಿ ಮತ್ತು ಪಾಲಮತಿ ಬೆಟ್ಟಗಳಿಗೆ ಸ್ವಾಮಿ ಮಲೈ ಬೆಟ್ಟವು ದಟ್ಟವಾದ ಕಾಡುಗಳ ಮೂಲಕ ಹಾದು ಹೋಗಬೇಕಾದುದರಿಂದ ಇಲ್ಲಿಗೆ ಹೋಗುವುದೇ ಅತ್ಯಂತ ಸಾಹಸಮಯವಾದುದಾಗಿದೆ.

5. ಮಹಾಬಲಿಪುರಂ

5. ಮಹಾಬಲಿಪುರಂ

ತಮಿಳುನಾಡು ದೇವಾಲಯಗಳ ನಾಡು ಎಂದೇ ಪ್ರಸಿದ್ದಿಯನ್ನು ಹೊಂದಿದೆ ಇದಕ್ಕೆ ಪೂರಕ ಎಂಬಂತೆ ಇಲ್ಲಿಯ ಹಲವಾರು ಸ್ಮಾರಕಗಳು, ಮತ್ತು ಪರಂಪರೆಯ ತಾಣಗಳು ಇಲ್ಲಿಯ ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರುತ್ತವೆ. ಅಂತಹುದೇ ಸ್ಥಳಗಳಲ್ಲಿ ಒಂದಾಗಿರುವ ನಮ್ಮ ಪಟ್ಟಿಯಲ್ಲಿನ ಮುಂದಿನ ಹೆಸರೇ ಮಹಾಬಲಿಪುರಂ.

ಹಳೆಯ ಕಾಲದ ಅವಶೇಷಗಳು ಹಾಗೂ ದೇವಾಲಯಗಳಿಗೆ ಈ ಸ್ಥಳವು ಹೆಸರುವಾಸಿಯಾಗಿದೆ. ಪ್ರಾಚೀನ ನಗರವಾದ ಮಹಾಬಲಿಪುರಂನ ಅವಶೇಷಗಳಲ್ಲಿ ಪುರಾತನ ನಗರ ಜೀವನದ ಬಗ್ಗೆ ತಿಳಿಯಬಹುದಾಗಿದೆ. ಅಲ್ಲದೆ ಇಲ್ಲಿಯ ಹಲವಾರು ದೇವಾಲಯಗಳು ಮತ್ತು ಗೋರಿಗಳು, ಪ್ರತಿಮೆಗಳು ಮತ್ತು ಸ್ತೂಪಗಳು ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಪುರಾತತ್ತ್ವ ಶಾಸ್ತ್ರದಂತಹ ಪ್ರಾಚೀನ ರಚನೆಗಳು ; ಅದರ ಶ್ರೀಮಂತ ಇತಿಹಾಸ ಅಚ್ಚರಿಗೊಳಿಸದೇ ಇರದು. ಆದುದರಿಂದ ನಿಮ್ಮ ದಿನವನ್ನು ಇಲ್ಲಿ ಆರಾಮವಾಗಿ ಕಳೆಯಬಹುದಾಗಿದೆ.

6. ಚೆನ್ನೈ

6. ಚೆನ್ನೈ

ನಮ್ಮ ಪಟ್ಟಿಯಲ್ಲಿರುವ ಮುಂದಿನ ಹೆಸರು ಅದೇ ಚೆನ್ನೈ ಹೌದು ತಮಿಳುನಾಡಿನಲ್ಲಿ ಹಲವಾರು ಗಿರಿಧಾಮಗಳಿಗೆ ನೀವು ಭೇಟಿ ನೀಡಿದರೂ ಕೂಡಾ ತಮಿಳುನಾಡಿನ ರಾಜಧಾನಿ ಚೆನ್ನೈಗೆ ಭೇಟಿ ಕೊಡದ ಹೊರತು ನಿಮ್ಮ ಪ್ರವಾಸವು ಅಪೂರ್ಣವೇ ಸರಿ.

ಚೆನ್ನೈ ಎಲ್ಲಾ ವಿಷಯಗಳಿಂದಲೂ ಸುಂದರವಾಗಿದ್ದು ಇದನ್ನು ಬಣ್ಣಿಸಲು ಪದಗಳೇ ಸಾಲುವುದಿಲ್ಲ. ಒಂದು ದಿನ ಪೂರ್ತಿಗೆ ಬಾಡಿಗೆ ವಾಹನ ಪಡೆದು ನಗರವನ್ನು ಸುತ್ತಾಡಬಹುದಾಗಿದೆ. ಅದಕ್ಕಿಂತ ಮೊದಲು ಎಲ್ಲೆಲ್ಲಿಗೆ ಹೋಗಬೇಕೆಂದು ಪಟ್ಟಿ ಮಾಡಿಕೊಂಡಲ್ಲಿ ಖಂಡಿತವಾಗಿಯೂ ಒಂದು ದಿನದಲ್ಲಿ ಎಲ್ಲಾ ಸ್ಥಳಗಳನ್ನು ಭೇಟಿ ಮಾಡಬಹುದಾಗಿದೆ.

7. ತಂಜಾವೂರ್

7. ತಂಜಾವೂರ್

ತಮಿಳುನಾಡಿನ ಅತ್ಯಂತ ಉತ್ತಮವಾದ ದೇವಾಲಯಗಳು ತಂಜಾವೂರ್ ನಲ್ಲಿವೆ. ಆದುದರಿಂದ ಇದನ್ನು ದೇವಾಲಯಗಳ ನಗರವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಅತಿ ಹೆಚ್ಚು ಭೇಟಿ ನೀಡುವ ದೇವಾಲಯ ಬೃಹದೇಶ್ವರಿ ದೇವಸ್ಥಾನ. ಈ ಪವಿತ್ರ ಸ್ಥಳಗಳಲ್ಲದೆ, ತಂಜಾವೂರಿನಲ್ಲಿ ಆರ್ಟ್ ಗ್ಯಾಲರಿ, ಶಿವ ಗಂಗಾ ಉದ್ಯಾನ, ಅರಮನೆ ಮತ್ತು ಸರಸ್ವತಿ ಮಹಲ್ ಗ್ರಂಥಾಲಯ ಮತ್ತು ಸಂಗೀತ ಮಹಲ್ ಮುಂತಾದ ಇತರ ಪ್ರವಾಸಿ ಆಕರ್ಷಣೆಗಳಿವೆ.

8.ಧನುಷ್ಕೊಡಿ

8.ಧನುಷ್ಕೊಡಿ

ಈ ಕಡಲತೀರದ ಪಟ್ಟಣವು ಛಾಯಾಗ್ರಹಣ ಮತ್ತು ದೃಶ್ಯ ವೀಕ್ಷಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರಿಗೆ ಅತ್ಯುತ್ತಮವಾದ ತಾಣವೆಂದು ಪರಿಗಣಿಸಲಾಗಿದೆ. ಎಲ್ಲಾ ಛಾಯಾಗ್ರಾಹಕರು ತಮ್ಮ ಕೆಲಸದ ಬಗ್ಗೆ ಉತ್ಸುಕರಾಗಿರುತ್ತಾರೆ. ಛಾಯಾಗ್ರಹಣದಲ್ಲಿ ಪ್ರಕೃತಿಯ ಪರಿಪೂರ್ಣತೆ ಯನ್ನು ಪಡೆಯಲು ಈ ಸ್ಥಳವು ಹೆಸರುವಾಸಿಯಾಗಿದೆ.

ಇಂತಹ ಉಲ್ಲಾಸಭರಿತ ಭವ್ಯ ವಾತಾವರಣ ಮತ್ತು ಸೂರ್ಯಾಸ್ತದ ವೇಳೆಯಲ್ಲಿ ಸೂರ್ಯನನ್ನು ಹಿಂಬಾಲಿಸುವಂತೆ ಕಾಣುವ ಪಕ್ಷಿಗಳು ಮುಂತಾದ ಸೌಂದರ್ಯತೆಯನ್ನು ನೀವು ಅನುಭವಿಸಬೇಕಾದಲ್ಲಿ ಧನುಷ್ಕೋಡಿಗೆ ಒಮ್ಮೆ ಭೇಟಿ ಕೊಡಿ.

9. ಊಟಿ

9. ಊಟಿ

ಒಂದೊಮ್ಮೆ ಇಂಪೀರಿಯಲ್ ಬ್ರಿಟಿಷರ ಅಧಿಕಾರಿಗಳಿಗೆ ಆಶ್ರಯ ತಾಣವಾಗಿದ್ದ ಈ ಪ್ರಶಾಂತವಾದ ಗಿರಿಧಾಮವು ತನ್ನ ವಸಾಹತು ಶಾಹಿ ಛಾಪನ್ನು ಇನ್ನೂ ಉಳಿಸಿಕೊಂಡಿದೆ. ಇದು ತಮಿಳುನಾಡಿನ ಅತ್ಯಂತ ಅದ್ಬುತವಾದ ಸ್ಥಳಗಳಲ್ಲಿ ಒಂದಾಗಿದೆ, ಏಕೆಂದರೆ, ಇಲ್ಲಿ ಅತ್ಯುತ್ತಮವಾದ ಆಟಿಕೆ ರೈಲು ಸವಾರಿಯು ನಿಮ್ಮನ್ನು ಸುಂದರ ದೃಶ್ಯವನ್ನು ನೋಡಲು ಕರೆದೊಯ್ಯುತ್ತದೆ. ಇಲ್ಲಿಯ ಚಹಾ ತೋಟಗಳು, ಸೊಂಪಾದ ಪರ್ವತಗಳು, ಕಿರು ಜಲಪಾತಗಳು ಇವೆಲ್ಲವನ್ನು ಈ ರೈಲು ಸವಾರಿಯಲ್ಲಿ ಮೆಟ್ಟು ಪಲಾಯಂ ನಿಂದ ಊಟಿಗೆ ಹೋಗುವಾಗ ನೋಡಬಹುದಾಗಿದೆ.

10. ಕೊಡೈಕನಾಲ್

10. ಕೊಡೈಕನಾಲ್

ನಮ್ಮ ಪಟ್ಟಿಯ ಮುಂದಿನ ತಾಣವೆಂದರೆ ಅದು ಕೊಡೈಕನಾಲ್. ಜೀವವೈವಿಧ್ಯತೆಯ ತಾಣವಾದ ಕೊಡೈಕನಾಲ್ ಅನ್ನು ಇತರ ಯಾವುದೇ ಪ್ರವಾಸಿ ತಾಣಗಳಿಗೆ ಹೊಂದಿಸುವುದು ಕಷ್ಟ. ತಮಿಳುನಾಡಿನ ಅತ್ಯಂತ ಮೋಡಿ ಮಾಡುವ ಸ್ಥಳಗಳಲ್ಲಿ ಇದು ಪ್ರಮುಖವಾದುದಾಗಿದೆ. ಇಲ್ಲಿ ನೀವು ಶಿಖರದ ಮೇಲ್ಭಾಗಕ್ಕೆ ಹೋದರೆ, ಸುತ್ತಮುತ್ತಲಿನ ಕೆಲವು ಅದ್ಭುತ ನೋಟಗಳನ್ನು ನೋಡಬಹುದಾಗಿದೆ. ರಾತ್ರಿಯಲ್ಲಿ ಇಳಿಜಾರುಗಳನ್ನು ಏರಲು ಶಿಫಾರಸು ಮಾಡಲಾಗಿದೆ ಆದ್ದರಿಂದ ನೀವು ನಯನ ಮನೋಹರ ಪರಿಸರವನ್ನು ಹಗಲು ಹೊತ್ತಿನಲ್ಲಿ ವೀಕ್ಷಿಸಬಹುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X