Search
  • Follow NativePlanet
Share
» »ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯುತ್ತಮ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು

ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯುತ್ತಮ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು

ಹಿಮಾಲಯದಿಂದ ಕರಾವಳಿವರೆಗೆ, ದಕ್ಷಿಣದ ಬಯಲು ಪ್ರದೇಶಗಳಿಂದ ಹಿಡಿದು ಉತ್ತರದ ಪರ್ವತಗಳವರೆಗೆ ಭಾರತದಲ್ಲಿ ಅನ್ವೇಷಣೆ ಮಾಡಬಹುದಾದಂತಹ ಹಲವಾರು ಸ್ಥಳಗಳಿದ್ದು ಇವು ನಿಜವಾಗಿಯೂ ಅನ್ವೇಷಣೆಗೆ ಯೋಗ್ಯವಾದುದಾಗಿದೆ ಅದರ ಜೊತೆಗೆ ಭಾರತವು ಅಸಂಖ್ಯಾತ ಸಂಖ್ಯೆಯ ಸುಂದರ ಸಣ್ಣ ಸಣ್ಣ ನಗರಗಳು ಮತ್ತು ಹಳ್ಳಿಗಳಿಗೂ ನೆಲೆಯಾಗಿದೆ.

ಇಂದು ನಾವು ಭಾರತದಲ್ಲಿ ಭೇಟಿಗೆ ಯೋಗ್ಯವಾದಂತಯ ಸಣ್ಣ ಪಟ್ಟಣಗಳು ಅಥವಾ ಹಳ್ಳಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಇವುಗಳು ನಿಜವಾಗಿಯೂ ಬೆರಗುಗೊಳಿಸುವಂತಹುದಾಗಿದ್ದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್ನುವಂತಹ ಗುಣಗಳುಳ್ಳ ಈ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು.

ಭಾರತದಲ್ಲಿನ ನಮ್ಮ ಮೆಚ್ಚಿನ ಸಣ್ಣ ಪಟ್ಟಣಗಳ ಪಟ್ಟಿಯನ್ನು ನಾವು ಸಂಗ್ರಹಿಸಿದ್ದೇವೆ, ನೀವು ದೊಡ್ಡ ನಗರಗಳು ಮತ್ತು ಹಲವಾರು ಪ್ರವಾಸಿಗರ ಗುಂಪಿನಿಂದ ವಿಭಿನ್ನವಾದದ್ದನ್ನು ಹುಡುಕುತ್ತಿದ್ದರೆ ಇವುಗಳು ನಿಮ್ಮ ಆಯ್ಕೆಗೆ ಯೋಗ್ಯವಾಗಿದೆ.

ಇಲ್ಲಿವೆ ಭಾರತದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಪಟ್ಟಿ

ದಿಸ್ಕಿತ್ ಪಟ್ಟಣ, ಲಡಾಖ್

ದಿಸ್ಕಿತ್ ಪಟ್ಟಣ, ಲಡಾಖ್

ಲಡಾಖ್ ನ ಲೇಹ್ ಜಿಲ್ಲೆಯಲ್ಲಿ ದಿಸ್ಕಿತ್ ಒಂದು ಸಣ್ಣ ಹಳ್ಳಿಯಾಗಿದೆ. ಇದು ಭಾರತದ ಅತ್ಯಂತ ಸುಂದರ ಸಣ್ಣ ಪಟ್ಟಣಗಳಲ್ಲೊಂದಾಗಿದೆ. ಈ ಪಟ್ಟಣವು ಸುಂದರ ವಾಸ್ತುಶಿಲ್ಪ ಅತ್ತು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ದಿಸ್ಕಿತ್ ಪಟ್ಟಣವು ಇಲ್ಲಿರುವ ಹೆಸರುವಾಸಿಯಾದ ದಿಸ್ಕಿತ್ ಮಠದ ನೆಲೆಯಾಗಿದೆ. ಈ ಮಠವನ್ನು ದಿಸ್ಕಿತ್ ಗೊಂಪಾ ಎಂದೂ ಕರೆಯಲಾಗುತ್ತಿದ್ದು, ಇದು 14ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ರಸಿದ್ದ ಮಠದಲ್ಲಿ 32 ಮೀಟರ್(106-ಅಡಿ) ಎತ್ತರದ ಮೈತ್ರೇಯ ಬುದ್ದನ ಪ್ರತಿಮೆ ಇದೆ. ಇದನ್ನು ಹೆಚ್ ಹೆಚ್. ದಲಾಯಿ ಲಾಮಾ ಅವರಿಂದ ಉದ್ಘಾಟಿಸಲಾಯಿತು. ಈ ಅದ್ಭುತ ಮಠವು ನುಬ್ರಾ ಕಣಿವೆಯ ಅತ್ಯಂತ ಹಳೆಯ ಮತ್ತು ದೊಡ್ಡ ಮಠವೆಂದು ಪರಿಗಣಿಸಲಾಗಿದೆ.

ಲಾಂಡೋರ್, ಉತ್ತರಾಖಂಡ್

ಲಾಂಡೋರ್, ಉತ್ತರಾಖಂಡ್

ಲಾಂಡೋರ್ ಉತ್ತರಾಖಂಡ್ ನ್ ಗರ್ವಾಲ್ ಪ್ರದೇಶದ ಒಂದು ಸಣ್ಣ ಪಟ್ಟಣವಾಗಿದ್ದು ಇದು ಒಂದು ಸಮಯದಲ್ಲಿ ಅಂದರೆ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಹೆಸರುವಾಸಿಯಾದ ಪ್ರವಾಸಿ ತಾಣವಾಗಿತ್ತು. ಲಾಂಡೋರ್ ಸುತ್ತಮುತ್ತಲೂ ನೈಸರ್ಗಿಕ ಸೌಂದರ್ಯತೆಯಿಂದ ಆಶೀರ್ವದಿಸಲ್ಪಟ್ಟಿರುವ ಪಟ್ಟಣವಾಗಿದ್ದು, ಅದರ ವಸಾಹತುಶಾಹಿ-ಶೈಲಿಯ ವಾಸ್ತುಶಿಲ್ಪ ಮತ್ತು ಎತ್ತರದ ಸ್ಥಳಗಳು ಬಹಳ ಜನಪ್ರಿಯವಾಗಿದೆ, ಇದು ತನ್ನ ಪ್ರವಾಸಿಗರಿಗೆ ಹಿಮದಿಂದ ಆವೃತವಾದ ಪರ್ವತಗಳ ಮೋಡಿಮಾಡುವ ನೋಟಗಳನ್ನು ಒದಗಿಸುತ್ತದೆ. ಪ್ರಕೃತಿ ಮತ್ತು ಪ್ರಶಾಂತ ಮೌನದಲ್ಲಿ ವಿರಾಮವನ್ನು ಪಡೆಯ ಬಯಸಿದರೆ, ಲಾಂಡೂರ್ ನಿಮಗಾಗಿ ಕೈ ಬೀಸಿ ಕರೆಯುತ್ತದೆ.

ಜಿರೋ, ಅರುಣಾಚಲ ಪ್ರದೇಶ

ಜಿರೋ, ಅರುಣಾಚಲ ಪ್ರದೇಶ

ಜ಼ಿರೋ ಒಂದು ಸಣ್ಣ ಹಳ್ಳಿಯಾಗಿದ್ದು ಈ ಹಳ್ಳಿಯ ಸೌಂದರ್ಯತೆಯು ಮಂತ್ರಮುಗ್ದಗೊಳಿಸುವಂತಹುದು. ಈ ಸ್ಥಳದಲ್ಲಿ ವಾಸಿಸುವ ಜನರು ಬಹಳ ಸುಂದರ ಮತ್ತು ಆಕರ್ಷಕ ಸಂಸ್ಕೃತಿ ಉಳ್ಳವರೂ ಆಗಿರುತ್ತಾರೆ. ತಮ್ಮ ಪೂರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದಂತಹ ಬುಡಕಟ್ಟು ಸಂಪ್ರದಾಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಸ್ಥಳದಿಂದ ಕಾಣುವ ರುದ್ರ ರಮಣೀಯ ನೋಟವು ನಿಮ್ಮನ್ನು ಬೆರಗುಗೊಳಿಸದೇ ಇರಲಾರದು. ಪ್ರಶಾಂತವಾದ ಹಾಗೂ ನಿರ್ಮಲವಾದ ವಾತಾವರಣವನ್ನು ಹೊಂದಿರುವ ಈ ಹಳ್ಳಿಯಲ್ಲಿದ್ದರೆ ಯಾವುದೋ ಕನಸಿನ ಲೋಕದಲ್ಲಿರುವ ಅನುಭವವನ್ನು ಕೊಡುತ್ತದೆ.ಮರಗಳು ಮತ್ತು ಸಸ್ಯಗಳ ಹಚ್ಚ ಹಸಿರಿನ ಎಲೆಗಳು, ಸುಂದರವಾದ ಪರ್ವತಗಳು ಮತ್ತು ನದಿಗಳು ಎಲ್ಲವನ್ನೂ ಹೊಂದಿರುವ ಈ ಸುಂದರ ಸ್ಥಳವು ಭೇಟಿ ಮಾಡಲು ಯೋಗ್ಯವಾಗಿದೆ.

ಮಾವ್ಲಿನ್ನಾಂಗ್, ಮೇಘಾಲಯ

ಮಾವ್ಲಿನ್ನಾಂಗ್, ಮೇಘಾಲಯ

ಏಷ್ಯಾದ ಅತ್ಯಂತ ಸ್ವಚ್ಚ ನಗರವೆಂಬ ಖ್ಯಾತಿಯನ್ನು ಪಡೆದಿರುವ ಮಾವ್ಲಿನ್ನಾಂಗ್ ಹಳ್ಳಿಯಲ್ಲಿ ವೃದ್ದರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪರಿಸರವನ್ನು ಅತ್ಯಂತ ಸ್ವಚ್ಚವಾಗಿರಿಸಲು ಜವಬ್ದಾರಿಯನ್ನು ಹೊರುತ್ತಾರೆ. ಈ ಹಳ್ಳಿಯು ಮೇಘಾಲಯ ರಾಜ್ಯದಲ್ಲಿ ನೆಲೆಸಿದ್ದು, ಹಲವಾರು ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳೊಂದಿಗೆ ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇಂದು, ಮಾವ್ಲಿನ್ನಾಂಗ್ ತನ್ನ ವಿಶಿಷ್ಟ ಸಂಸ್ಕೃತಿ, ಪರಂಪರೆಯ ತಾಣಗಳು ಮತ್ತು ನೈಸರ್ಗಿಕ ಸೌಂದರ್ಯದಿಂದಾಗಿ ಭಾರತದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದ್ದು, ಇದು ಭಾರತ ಮತ್ತು ವಿದೇಶಗಳಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮಾಂಡವಾ, ರಾಜಸ್ಥಾನ

ಮಾಂಡವಾ, ರಾಜಸ್ಥಾನ

ನಗರದ ಸದ್ದುಗದ್ದಲ ಹಾಗೂ ದಿನನಿತ್ಯದ ಚಟುವಟಿಕೆಗಳಿಂದ ಎಲ್ಲಾದರೂ ದೂರ ಹೋಗಬೇಕೆಂದು ಬಯಸುವಿರಾದಲ್ಲಿ, ಭಾರತದ ರಾಜಸ್ಥಾನದ ಜುಂಜುನು ಜಿಲ್ಲೆಯ ಸುಂದರ ಪಟ್ಟಣವಾದ ಮಾಂಡವಾ ನಿಮಗಾಗಿ ಸೂಕ್ತವಾದ ಸ್ಥಳವಾಗಿದೆ. ಇದು ತನ್ನ ನೈಸರ್ಗಿಕ ಸೌಂದರ್ಯತೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದ ಹೆಸರುವಾಸಿಯಾಗಿದೆ ಮಾತ್ರವಲ್ಲದೆ ಈ ಪಟ್ಟಣವು ಸುಂದರವಾದ ಭೂದೃಶ್ಯಗಳು, ದೃಶ್ಯಾವಳಿಗಳು, ಮತ್ತು ಮನಮೋಹಕ ದೇವಾಲಯಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಾಂಡವಾದ ಸೌಂದರ್ಯತೆಯು ಇಲ್ಲಿಯ ಸುಂದರವಾದ ವಾಸ್ತುಶಿಲ್ಪಗಳು ಮತ್ತು ಸುಂದರವಾದ ಸುಸಜ್ಜಿತವಾಗಿ ಸಂರಕ್ಷಿಸಲ್ಪಟ್ಟಿರುವ ಮಾಂಡವಾದ ಕೋಟೆ ಮತ್ತು ಸ್ಮಾರಕಳಲ್ಲಿ ಅಡಗಿದೆ.

ಮಾಥೆರಾನ್, ಮಹಾರಾಷ್ಟ್ರ

ಮಾಥೆರಾನ್, ಮಹಾರಾಷ್ಟ್ರ

ಮಾಥೆರಾನ್ ಮಹಾರಾಷ್ಟ್ರದ ಒಂದು ಪ್ರಸಿದ್ದ ಗಿರಿಧಾಮವಾಗಿದೆ ಮತ್ತು ಮುಂಬೈ ಮತ್ತು ಪೂಣೆಯ ಜನರ ವಾರಾಂತ್ಯದಲ್ಲಿ ಭೇಟಿ ಕೊಡುವ ತಾಣವಾಗಿದೆ. ಈ ಅಪರೂಪದ ಹಳ್ಳಿಯು ಅತ್ಯಂತ ಆಸಕ್ತಿದಾಯಕ ಇತಿಹಾಸವನ್ನು ಹೊಂದಿರುವುದರ ಜೊತೆಗೆ ಹೇರಳವಾದ ನೈಸರ್ಗಿಕ ಸೌಂದರ್ಯತೆಯನ್ನೂ ಹೊಂದಿದೆ. ನಗರದ ಸದ್ದುಗದ್ದಲಗಳಿಂದ ದೂರವಾಗಿ ಪ್ರಕೃತಿಯು ತನ್ನ ದಿವ್ಯಸ್ವರೂಪದಲ್ಲಿರುವುದನ್ನು ಕಾಣಬೇಕೆಂದು ಬಯಸುವ ಎಲ್ಲರಿಗೂ ಇದು ಒಂದು ಆದರ್ಶಕರವಾದ ತಾಣವಾಗಿರುವುದು ಈ ಸ್ಥಳದ ವಿಶೇಷತೆಯಾಗಿದೆ. ಈ ಹಳ್ಳಿಯಲ್ಲಿರುವ ಆಟಿಕೆ ರೈಲಿನಲ್ಲಿ ಸಣ್ಣದಾಗಿ ಸವಾರಿ ಮಾಡಲು ಮರೆಯದಿರಿ!

 ವಾಲ್ಪರೈ, ತಮಿಳುನಾಡು

ವಾಲ್ಪರೈ, ತಮಿಳುನಾಡು

ತಮಿಳುನಾಡಿನ ವಾಲ್ಪರೈ ಯಲ್ಲಿನ ಸೌಂದರ್ಯತೆಯು ಒಂದು ಅದ್ಬುತ ಅನುಭವವನ್ನು ನೀಡುವಂತಹುದು ಆಗಿದ್ದು ಇದನ್ನು ಪ್ರತಿಯೊಬ್ಬರೂ ಆನಂದಿಸಬಹುದಾದಂತಹುದಾಗಿದೆ. ಪರ್ವತಗಳು, ಕಣಿವೆಗಲು ಮತ್ತು ಕಾಡುಗಳು ಇಲ್ಲಿರುವಂತಹ ಮಂತ್ರಮುಗ್ದರನ್ನಾಗಿಸುವಂತಹ ದೃಶ್ಯಗಳು. ವಾಲ್ಪರೈ ಗಿರಿಧಾಮವು ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಇಂತಹ ಎಲ್ಲೆಲ್ಲೂ ಪ್ರಕೃತಿಯಿಂದ ಆವೃತವಾಗಿರುವ ಸ್ಥಳವು ಚಹಾ ತೋಟಗಳು, ಜಲಪಾತಗಳು, ಅಣೆಕಟ್ಟುಗಳು, ದಟ್ಟವಾದ ಕಾಡುಗಳು ಅಲ್ಲದೆ ಎತ್ತರವಾದ ಪರ್ವತಗಳು ಇತ್ಯಾದಿಗಳನ್ನು ತನ್ನಲ್ಲಿ ಹೊಂದಿದೆ.

ಇಡುಕ್ಕಿ, ಕೇರಳ

ಇಡುಕ್ಕಿ, ಕೇರಳ

ದಟ್ಟವಾದ ಸಸ್ಯಗಳು ಮತ್ತು ಎಲ್ಲೆಲ್ಲೂ ಹಸಿರಿನಿಂದ ಸಂಪೂರ್ಣವಾಗಿ ಇಡುಕ್ಕಿಯು ಆಶೀರ್ವದಿಸಲ್ಪಟ್ಟಿದೆ. ಇದೊಂದು ಬೆರಗುಗೊಳಿಸುವ ಸ್ಥಳವಾಗಿದ್ದು, ದಟ್ಟವಾದ ಹಸಿರಿನಿಂದ ಕೂಡಿದ ಗಿರಿಗಳು ಮತ್ತು ಪರ್ವತಗಳು, ನದಿಗಳು, ಸರೋವರಗಳು, ಮತ್ತು ಜಲಪಾತಗಳಿಂದ ಆವೃತವಾಗಿದೆ. ಇಲ್ಲಿಯ ಗಿರಿಗಳು ಚಹ ತೋಟಗಳಿಂದ ಮತ್ತು ತೆಂಗಿನ ತೋಪುಗಳಿಂದ ಆವರಿಸಲ್ಪಟ್ಟಿದ್ದರೆ, ಇಲ್ಲಿಯ ಕಣಿವೆಗಳು ಜಲಪಾತಗಳು ಮತ್ತು ತೊರೆಗಳಿಂದ ಆವೃತವಾಗಿವೆ. ಈ ಸ್ಥಳವು ತನ್ನಲ್ಲಿಯ ದೃಶ್ಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಅತ್ಯಂತ ಆಕರ್ಷಕ ದೃಶ್ಯಾವಳಿಗಳನ್ನು ಒದಗಿಸಿಕೊಡುತ್ತದೆ. ಈ ಸುಂದರವಾದ ಸ್ಥಳದಲ್ಲಿ ನಿಮ್ಮ ವಾಸ್ತವ್ಯದ ಉದ್ದಕ್ಕೂ ನೀವು ಅತ್ಯಂತ ಉತ್ಸಾಹಭರಿತ ಪ್ರಯಾಣದಲ್ಲಿ ನಿಮ್ಮನ್ನು ಕಂಡುಕೊಳ್ಳುತ್ತೀರಿ. ಚೀಯಪ್ಪಾರ ಜಲಪಾತಗಳು ಮತ್ತು ಇಡುಕ್ಕಿ ವನ್ಯಜೀವಿ ಅಭಯಾರಣ್ಯಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X