Search
  • Follow NativePlanet
Share
» »ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು

ದಸರಕ್ಕಾಗಿ ಮೈಸೂರಿಗೆ ಹೋಗುವಿರಾ? ಹಾಗಿದ್ದಲ್ಲಿ ಮೈಸೂರು ಹತ್ತಿರವಿರುವ ಈ ಸ್ಥಳಗಳಿಗೂ ಪ್ರವಾಸ ಮಾಡಬಹುದು

ಮೈಸೂರಿನಿಂದ ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು?

ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ ಮತ್ತು ಮೈಸೂರಿನಲ್ಲಿ ದಸರಾ ಆಚರಣೆಗೆ ಯಾವುದೇ ಮಿತಿಯಿಲ್ಲ. ವರ್ಣರಂಜಿತ ಪ್ರದರ್ಶನಗಳು ಮತ್ತು ವೈಭವೋಪೇತ ಮೆರವಣಿಗೆಗಳೊಂದಿಗೆ, ದಸರಾವನ್ನು ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಮೈಸೂರು ಮತ್ತು ಸುತ್ತಮುತ್ತಲಿನ ವಿಹಾರಗಳು ಸ್ಥಳದ ಕರಕುಶಲ, ಪಾಕಪದ್ಧತಿ, ಕಲೆಗಳು ಮತ್ತು ಸಂಪ್ರದಾಯಗಳೊಂದಿಗೆ ಮತ್ತಷ್ಟು ಪರಿಚಿತವಾಗುತ್ತವೆ. "ಸ್ಯಾಂಡಲ್‌ವುಡ್ ಸಿಟಿ"(ಗಂಧದ ನಗರ), "ಐವರಿ ಸಿಟಿ"(ದಂತದ ನಗರ) ಅಥವಾ "ಸಿಟಿ ಆಫ್ ಪ್ಯಾಲೇಸ್" (ಅರಮನೆಗಳ ನಗರ) ಎಂದೂ ಕರೆಯಲ್ಪಡುವ ಮೈಸೂರು ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳು ಅನ್ವೇಷಿಸಲು ಇನ್ನೂ ಹೆಚ್ಚಿನದನ್ನು ಹೊಂದಿವೆ

ದಸರಾ ಹಬ್ಬವನ್ನು ಆನಂದಿಸುತ್ತಾ ನಿಮ್ಮನ್ನು ನೀವು ಈ ವೈಭವೋಪೇತ ಹಬ್ಬದಲ್ಲಿ ಮರೆಯುವಂತಿರುತ್ತದೆ. ಈ ಹಬ್ಬದ ಸಮಯದಲ್ಲಿ ಮೈಸೂರಿನಲ್ಲಿ ಏನೆಲ್ಲಾ ಮಾಡಬಹುದು? ನವರಾತ್ರಿ ಸಮಯವು ಹೆಚ್ಚು ಸಾಹಸಮಯ ಮತ್ತು ಕೇವಲ ದಸರಾ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸುವುದಲ್ಲದೆ ಮಾಡಬಹುದಾದಂತಹ ಹಲವಾರು ಚಟಿವಟಿಕೆಗಳಿವೆ. ಈ ಸಮಯದಲ್ಲಿ ನೀವು ಒಂದು ದಿನದ ಪ್ರವಾಸ ಮಾಡುತ್ತಾ ಮೈಸೂರಿನ ಸುತ್ತಮುತ್ತಲಿನ ಮಸಾಲೆಭರಿತ ಸ್ಥಳಗಳಿಗೂ ಪ್ರಯಾಣ ಮಾಡುತ್ತಾ ದಸರ ಹಬ್ಬವನ್ನು ಇನ್ನಷ್ಟು ಆಸಕ್ತಿದಾಯಕ ಮಾಡಬಹುದಾಗಿದೆ.

bandipur

ಮೈಸೂರು ಮತ್ತು ಅದರ ಸುತ್ತಮುತ್ತಲಿರುವ ಕೆಲವು ಅತ್ಯದ್ಬುತ ಸ್ಥಳಗಳಿಗೆ ದಸರಾ ಸಮಯದಲ್ಲಿ ಭೇಟಿ ಕೊಡಲು ಆಯೋಜಿಸಬಹುದಾಗಿದೆ. ಇವುಗಳು ಕೆಲವೇ ಕೆಲವು ನಿಮಿಷದ ಪ್ರಯಾಣದಿಂದ ಹಿಡಿದು ಕೆಲವು ಕಿಲೋಮೀಟರ್ ಗಳ ಪ್ರಯಾಣವನ್ನೂ ಒಳಗೊಂಡಿದುದಾಗಿದೆ. ಮೈಸೂರು ನಿಸ್ಸಂದೇಹವಾಗಿಯೂ ದಸರ ಸಮಯದಲ್ಲಿ ಪ್ರಯಾಣಕ್ಕೆ ಯೋಗ್ಯವಾದಂತಹ ಸ್ಥಳವಾಗಿದೆ.

ಬಂಡೀಪುರ ವನ್ಯಜೀವಿತಾಣ

ಮೈಸೂರಿನಿಂದ 77 ಕಿ.ಮೀ ಅಂತರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಸಾಹಸ ಪ್ರೇಮಿಗಳಿಗೆ ಅತ್ಯಂತ ಉತ್ತಮವಾದ ಸ್ಥಳವೆನಿಸಿದೆ. ವನ್ಯಜೀವಿ ತಾಣಕ್ಕೆ ತಲುಪಲು ಸುಮಾರು ಒಂದೂವರೆ ಗಂಟೆಗಳ ಕಾಲ ಮೈಸೂರಿನಿಂದ ಪ್ರಯಾಣಿಸಬೇಕಾಗುತ್ತದೆ. ಈ ದಟ್ಟವಾದ ಕಾಡುಗಳು ವನ್ಯಜೀವಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ಅತ್ಯಂತ ಮೆಚ್ಚಿನ ಸ್ಥಳವೆನಿಸಿದೆ. ವಿವಿಧ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತವೆ. ಮತ್ತು ಬಂಡೀಪುರದಲ್ಲಿ ಉಳಿಯಲು ಕೂಡಾ ಇಚ್ಚಿಸುವವರಿಗಾಗಿ ಬಂಡೀಪುರ ಸಫಾರಿ ಲಾಡ್ಜ್ ಗಳು ಇರುತ್ತವೆ ಅಲ್ಲದೆ ಇಲ್ಲಿ ರಾತ್ರಿ ಸಫಾರಿ ಮಾಡುತ್ತಾ ನಿಗೂಢ ರಾತ್ರಿಯಲ್ಲಿ ಸಂಚಾರ ಮಾಡಲಿಚ್ಚಿಸುವವರಿಗಾಗಿ ಇನ್ನಿತರ ರೆಸಾರ್ಟ್ ಗಳೂ ಸಫಾರಿಗಾಗಿ ವ್ಯವಸ್ಥೆಗಳನ್ನು ಮಾಡುತ್ತವೆ.

brhills

ಪ್ರಕೃತಿ ಸೌಂದರ್ಯತೆಗಾಗಿ, ಬಿ. ಆರ್ ಬೆಟ್ಟಗಳು

ಬಿಆರ್ ಹಿಲ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಿಳಿಗಿರಿ ರಂಗನ ಬೆಟ್ಟಗಳು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮದಲ್ಲಿದೆ. ಇದು ಮೈಸೂರಿನಿಂದ ಸುಮಾರು 94 ಕಿ,ಮೀ ದೂರದಲ್ಲಿದ್ದು ಮೈಸೂರಿನಿಂದ ಇಲ್ಲಿಗೆ ತಲುಪಲು ಸುಮಾರು 2 ತಾಸುಗಳು ಬೇಕಾಗುವುದು. ಈ ಸ್ಥಳವು ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ. ಬಿ ಆರ್ ಟಿ ವನ್ಯಜೀವಿ ಅಭಯಾರಣ್ಯದ ಹೊರತಾಗಿಯೂ ಇದು ತಮಿಳುನಾಡಿನಲ್ಲಿ ನೆಲೆಸಿರುವ ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯದ ಗಡಿಯೂ ಆಗಿದೆ. ಕಾವೇರಿ ಮತ್ತು ಕಪಿಲಾ ನದಿಗಳಲ್ಲಿ ಟ್ರೆಕ್ಕಿಂಗ್ ಮತ್ತು ರಾಫ್ಟಿಂಗ್ ಸಾಹಸಪ್ರಿಯರಿಗೆ ಇಷ್ಟವಾಗುವಂತಹ ಕೆಲವು ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬಹುದಾಗಿದೆ.

melukote

ಕೈಮಗ್ಗಕ್ಕೆ ಹೆಸರುವಾಸಿಯಾದ ಮೇಲುಕೋಟೆ

ಮೈಸೂರಿನಿಂದ 53 ಕಿ.ಮೀ ದೂರದಲ್ಲಿ ಮೇಲುಕೋಟೆಯು ನೆಲೆಸಿದ್ದು ಇಲ್ಲಿಗೆ ಮೈಸೂರಿನಿಂದ ತಲುಪಸು ಒಂದೂವರೆ ಗಂಟೆಗಳ ಕಾಲ ಬೇಕಾಗುವುದು. ಈ ಸ್ಥಳವು ಕಲ್ಲಿನ ರಚನೆಯ ಬೆಟ್ಟದ ಮೇಲೆ ನೆಲೆಸಿದ್ದು, ಮೇಲುಕೋಟೆಯಲ್ಲಿ ಕರ್ನಾಟಕದ ಅತ್ಯಂತ ಪೂಜ್ಯನೀಯ ದೇವಾಲಯಗಳಲ್ಲೊಂದೆನಿಸಿದ ಚೆಲುವನಾರಾಯಣ ಸ್ವಾಮಿ ದೇವಾಲಯವಿದೆ. ಈ ದೇವಾಲಯವು ರಾಮ ದೇವರಿಗೆ ಅರ್ಪಿತವಾದುದಾಗಿದ್ದು ಇದು ಇಲ್ಲಿಯ ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ಮೇಲುಕೋಟೆಯು ಕಲಾತ್ಮಕವಾದ ಕೈಮಗ್ಗದ ಬಟ್ಟೆಗಳಿಗಾಗಿಯೂ ಪ್ರಸಿದ್ದವಾಗಿದೆ. ನೀವೇನಾದರೂ ಪುಸ್ತಕದ ಹುಳುವಾಗಿದ್ದಲ್ಲಿ ನಿಮಗಾಗಿ ಇಲ್ಲಿರುವ ಹಳೆಯ ಕಾಲದ ಗ್ರಂಥಾಲಯವೂ ಇದೆ ಈ ಗ್ರಂಥಾಲಯವು ಅಸಂಖ್ಯಾತ ಪುಸ್ತಕಗಳು ಮತ್ತು ಸಂಸ್ಕೃತ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಸ್ತಪ್ರತಿಗಳನ್ನೂ ಹೊಂದಿದೆ.

nanjangudbridge

ನಂಜನಗೂಡು ಸೇತುವೆ

ಕಪಿಲಾ ನದಿಯ ಹತ್ತಿರವಿರುವ ದೇವಾಲಯ ಪಟ್ಟಣವೆನಿಸಿರುವ ನಂಜನಗೂಡು ಮೈಸೂರು ನಗರದ ಹೃದಯಭಾಗದಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಶ್ರೀಕಂಠೇಶ್ವರ ದೇವಾಲಯ, ನಂಜುಂಡೇಶ್ವರ ದೇವಾಲಯ, ಶ್ರೀರಾಘವೇಂದ್ರ ಸ್ವಾಮಿಮಠ ಇತ್ಯಾದಿಗಳು ನೀವು ಮೈಸೂರಿನ ದಸರಾ ಪ್ರವಾಸದಲ್ಲಿರುವಾಗ ಈ ಪವಿತ್ರ ಸ್ಥಳವು ಭೇಟಿಕೊಡಲೇ ಬೇಕು ಎನ್ನುವಂತಹುದು. ದಕ್ಷಿಣ ಕಾಶಿ ಎಂದೂ ಕರೆಯಲ್ಪಡುವ ನಂಜನಗೂಡಿನಲ್ಲಿ ರಸ್ತೆ ಮತ್ತು ರೈಲುಮಾರ್ಗದ ಮೂಲಕ ಹಾದುಹೋಗುವ ಅತ್ಯಂತ ಹಳೆಯ ಸೇತುವೆ ಇದೆ. ಇದು ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಮತ್ತು ಈಗ ಅದನ್ನು ಪಾರಂಪರಿಕ ಸ್ಮಾರಕವೆಂದು ಘೋಷಿಸಲಾಗಿದೆ.

ಯಾತ್ರಾಸ್ಥಳ ಶ್ರವಣಬೆಳಗೊಳ

ಮೈಸೂರಿನಿಂದ ಸುಮಾರು ಎರಡು ಗಂಟೆಗಳ ಕಾಲ 83 ಕಿ.ಮೀ ದೂರದಲ್ಲಿ ನೆಲೆಗೊಂಡಿದ್ದರೂ, ದಸರಾ ಸಮಯದಲ್ಲಿ 'ಗಂಧದ ನಗರಿ'ಗೆ ನಿಮ್ಮ ಪ್ರವಾಸದ ಸಮಯದಲ್ಲಿ ಶ್ರವಣಬೆಳಗೊಳವನ್ನು ಒಂದು ದಿನದ ವಿಹಾರಕ್ಕಾಗಿ ಸೇರಿಸಬಹುದಾಗಿದೆ. ಜೈನ ಧರ್ಮಕ್ಕೆ ಹೆಸರುವಾಸಿಯಾದ ಗೊಮ್ಮಟೇಶ್ವರನ ಪ್ರತಿಮೆಯಲ್ಲದೆ, 600-1830 ರ ಹಿಂದಿನ 800 ವಿವಿಧ ರೀತಿಯ ಶಾಸನಗಳು ಸಹ ಇಲ್ಲಿ ಕಂಡುಬರುತ್ತವೆ.

shivanasamudra-1664358317.jpg -Properties

ಜಲಪಾತಗಳಿಗಾಗಿ ಶಿವನಸಮುದ್ರಕ್ಕೆ ಭೇಟಿಕೊಡಿ

ಶಿವನಸಮುದ್ರವು ಧುಮ್ಮಿಕ್ಕುವ ಜಲಪಾತಗಳಿಗೆ ಮಾತ್ರ ಪ್ರಸಿದ್ಧವಾಗಿರುವುದಲ್ಲದೆ. ಇದು ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರಗಳಲ್ಲಿ ಒಂದಾಗಿದೆ. ಮೈಸೂರು 77 ಕಿ.ಮೀ ದೂರದಲ್ಲಿರುವ ಈ ಸ್ಥಳವನ್ನು ತಲುಪಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳಬಹುದು. ಕಾವೇರಿ ನದಿಯ ಮೇಲಿರುವ ಶಿವನಸಮುದ್ರವು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ಒಳಗೊಂಡಿದ್ದು, ಜಲಪಾತದ ತಳಭಾಗದಿಂದಲೂ ಮಂತ್ರಮುಗ್ಧಗೊಳಿಸುವ ನೋಟವನ್ನು ಹೊಂದಿದೆ. ಇದು ವಿವಿಧ ಮಾರಣಾಂತಿಕ ಅಪಘಾತಗಳಿಗಾಗಿಯೂ ಕಳಂಕಿತವಾಗಿರುವುದರಿಂದ ಇಲ್ಲಿ ಜಾಗರೂಕರಾಗಿರಬೇಕು.

talakadu

ದೇವಾಲಯಗಳಿಗಾಗಿ ತಲಕಾಡು

ಇತಿಹಾಸದ ಒಂದು ಹಂತದಲ್ಲಿ 30 ದೇವಾಲಯಗಳಿಗೆ ಹೆಸರುವಾಸಿಯಾದ ತಲಕಾಡು ಈಗ ಕರ್ನಾಟಕದ ಸುಂದರ ಸ್ಥಳಗಳಲ್ಲಿ ಒಂದಾಗಿದೆ. ಇದು ಮೈಸೂರಿನಿಂದ 49 ಕಿ.ಮೀ ದೂರದಲ್ಲಿದ್ದು, ಈ ಸ್ಥಳವನ್ನು ತಲುಪಲು ಸುಮಾರು ಒಂದು ಗಂಟೆ ತೆಗೆದುಕೊಳ್ಳಬಹುದು. ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ, ವೈದ್ಯನಾಥೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು ತಲಕಾಡಿನ ಕೆಲವು ಪವಿತ್ರ ಸ್ಥಳಗಳಾಗಿವೆ. ವಿವಿಧ ಪುರಾಣಗಳು ಮತ್ತು ದಂತಕಥೆಗಳು ಈ ಸ್ಥಳದ ಕಥೆಗಳನ್ನು ಹೇಳುತ್ತವೆ. ಪ್ರಸ್ತುತ ಇದು ತೋಟಗಾರಿಕೆ ಮತ್ತು ವೈನ್ ತಯಾರಿಕೆಗೆ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ.

somnathpura

ವಾಸ್ತುಶಿಲ್ಪ ವೈಭವದ ನೆಲೆ ಸೋಮನಾಥಪುರ

ಮೈಸೂರಿನಿಂದ ಒಂದು ಗಂಟೆಯ ಪ್ರಯಾಣದಲ್ಲಿ, ನೀವು "ಅರಮನೆಗಳ ನಗರ" ದಿಂದ 35 ಕಿ.ಮೀ ದೂರದಲ್ಲಿರುವ ಸೋಮನಾಥಪುರಕ್ಕೆ ನಿಮ್ಮ ಪ್ರವಾಸವನ್ನು ಆಯೋಜಿಸಬಹುದು. ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲಾದ ಚೆನ್ನಕೇಶವ ದೇವಾಲಯವು ಸೋಮನಾಥಪುರದ ಪ್ರಮುಖ ಆಕರ್ಷಣೆಯಾಗಿದೆ. ನೀವು ದಸರಾಕ್ಕಾಗಿ ಮೈಸೂರಿಗೆ ಬರುವಾಗ, ಸೋಮನಾಥಪುರಕ್ಕೆ ಒಂದು ಸಣ್ಣ ಪ್ರವಾಸವನ್ನು ಹೂಡಿ ಈ ದೇವಾಲಯವು ಹೊಯ್ಸಳ ಸಾಮ್ರಾಜ್ಯ ಮತ್ತು ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಮುಖ ಆಡಳಿತಗಾರರಾಗಿದ್ದ ವಿವಿಧ ರಾಜರ ಬಗ್ಗೆ ನಿಮಗೆ ಒಂದು ಕಲ್ಪನೆಯನ್ನು ನೀಡುತ್ತದೆ ಆದ್ದರಿಂದ ಈ ಐತಿಹಾಸಿಕ ಪ್ರವಾಸವನ್ನು ಮಾಡುವುದನ್ನು ತಪ್ಪಿಸಿಕೊಳ್ಳಬೇಡಿ.

sriranagapatna

ಇತಿಹಾಸ ಮಹತ್ವವನ್ನೊಳಗೊಂಡ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣವು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದ್ದು, ಮೈಸೂರಿನಿಂದ ಪ್ರಯಾಣಿಸಬಹುದಾದ ಹತ್ತಿರದ ಸ್ಥಳವಾಗಿದೆ. ಇದು ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟಿದೆ ಇದರಿಂದಾಗಿ ನದಿ ದ್ವೀಪವನ್ನು ರೂಪಿಸುತ್ತದೆ. ರಂಗನಾಥಸ್ವಾಮಿ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ವಾಸ್ತುಶಿಲ್ಪದ ಮಿಶ್ರಣವನ್ನು ಪ್ರತಿಬಿಂಬಿಸುವ ಶ್ರೀರಂಗಪಟ್ಟಣದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಜುಮ್ಮಾ ಮಸೀದಿ, ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯಗಳು ಶ್ರೀರಂಗಪಟ್ಟಣದ ವೈವಿಧ್ಯಮಯ ಆಕರ್ಷಣೆಗಳನ್ನು ಒಳಗೊಂಡಿವೆ.

ಜೀವವೈವಿಧ್ಯಕ್ಕಾಗಿ ರಂಗನತಿಟ್ಟು

ಕರ್ನಾಟಕದ ಪಕ್ಷಿ ಕಾಶಿ ಎಂದೂ ಕರೆಯಲ್ಪಡುವ ರಂಗನತಿಟ್ಟು ಪಕ್ಷಿಧಾಮವು ಈ ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ. ಇದು ಮೈಸೂರಿನಿಂದ 18 ಕಿ.ಮೀ ದೂರದಲ್ಲಿದೆ ಮತ್ತು ಅಲ್ಲಿಗೆ ತಲುಪಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಸುಮಾರು 40 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಇದು ಆರು ದ್ವೀಪಗಳನ್ನು ಒಳಗೊಂಡಿದ್ದು, ಮಳೆಗಾಲದಲ್ಲಿ ಆಗಾಗ್ಗೆ ಪ್ರವಾಹಕ್ಕೆ ಈಡಾಗುತ್ತವೆ. ವೈವಿಧ್ಯಮಯ ಸಸ್ಯಗಳನ್ನು ಹೊರತುಪಡಿಸಿ, ಈ ಅಭಯಾರಣ್ಯವು 170 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇಲ್ಲಿ ವಾಸಿಸುವ ಮಗ್ಗರ್ ಮೊಸಳೆ ಸಸ್ತನಿಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X