Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಹವಾಮಾನ

ಶ್ರೀರಂಗಪಟ್ಟಣ ಹವಾಮಾನ

ಶ್ರೀರಂಗಪಟ್ಟಣಕ್ಕೆ ಭೇಟಿಕೊಡಲು ಸೆಪ್ಟಂಬರ್ ನಿಂದ ಮಾರ್ಚ್ ವರೆಗಿನ ಕಾಲವು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ಆಗ ಇಲ್ಲಿನ ಹವಾಮಾನವು ಅತ್ಯಂತ ಹಿತಕರವಾಗಿ ,ಆಹ್ಲಾದಕರವಾಗಿದ್ದು ಪ್ರವಾಸಿಗರು ಆರಾಮವಾಗಿ ವಿಹಾರ ಮಾಡಬಹುದು.

ಬೇಸಿಗೆಗಾಲ

(ಏಪ್ರೀಲ್ ನಿಂದ ಜೂನ್) : ಶ್ರೀರಂಗಪಟ್ಟಣವು ಬೇಸಿಗೆಯಲ್ಲಿ ಅತ್ಯಂತ ಅಹಿತಕರ ಹವಾಮಾನವನ್ನು ಹೊಂದಿರುತ್ತದೆ. ಆಗ ಇಲ್ಲಿನ ದಿನದ ಉಷ್ಣಾಂಶವು ಗರಿಷ್ಠ 37°ಸೆಲ್ಶಿಯಸ್  ಇದ್ದು, ರಾತ್ರಿಯಲ್ಲಿ ಇದು 20°ಸೆಲ್ಶಿಯಸ್ ನಷ್ಟು ಕುಸಿಯುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್) : ಶ್ರೀರಂಗಪಟ್ಟಣವು ಮಳೆಗಾಲದಲ್ಲಿ ಕಡಿಮೆ ಪ್ರಮಾಣದ ಮಳೆಯನ್ನು ಕಾಣುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ) : ಶ್ರೀರಂಗಪಟ್ಟಣವು ಚಳಿಗಾಲದಲ್ಲಿ ಅತ್ಯಂತ ಹಿತಕರವಾದ ಮತ್ತು ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 30°ಸೆಲ್ಶಿಯಸ್ ಇರುತ್ತದೆ. ಅಲ್ಲದೆ ರಾತ್ರಿಯಲ್ಲಿ ಕನಿಷ್ಠ ಉಷ್ಣಾಂಶವು 15°ಸೆಲ್ಶಿಯಸ್ ನಷ್ಟು ದಾಖಲಾಗುತ್ತದೆ.