Search
  • Follow NativePlanet
Share
» »2020ರಲ್ಲಿ ರಾಜಸ್ಥಾನದಲ್ಲಿ ಭೇಟಿ ಕೊಡಬಹುದಾದಂತಹ 10 ಅತ್ಯುತ್ತಮವಾದ ತಾಣಗಳು

2020ರಲ್ಲಿ ರಾಜಸ್ಥಾನದಲ್ಲಿ ಭೇಟಿ ಕೊಡಬಹುದಾದಂತಹ 10 ಅತ್ಯುತ್ತಮವಾದ ತಾಣಗಳು

ಭಾರತದ ವಾಯುವ್ಯ ಭಾಗದಲ್ಲಿ ನೆಲೆಸಿರುವ ರಾಜಸ್ಥಾನವು ಭಾರತದ ಅತಿ ದೊಡ್ಡ ರಾಜ್ಯವಾಗಿದೆ. ಇಲ್ಲಿ ಭವ್ಯವಾದ ಕೋಟೆಗಳು, ಸ್ಥಳಗಳು, ವರ್ಣರಂಜಿತ ನಗರಗಳು, ಶ್ರೀಮಂತ ಪರಂಪರೆಯ ತಾಣಗಳು ಮತ್ತು ಹೋಟೆಲ್ ಗಳು, ವೈವಿಧ್ಯಮಯವಾದ ವನ್ಯಜೀವಿಗಳು, ಪ್ರಶಾಂತವಾದ ಕೊಳಗಳು ಮತ್ತು ಆಕರ್ಷಕ ಇತಿಹಾಸಗಳು ಮತ್ತು ಹೆಮ್ಮೆಯ ಸಾಂಸ್ಕೃತಿಕ ಸಂಪತ್ತನ್ನು, ರಾಜಸ್ಥಾನ್ ರಾಜವಂಶಸ್ಥರ ಭೂಮಿ ಇತ್ಯಾದಿಗಳನ್ನು ತನ್ನಲ್ಲಿ ಹೊಂದಿದ್ದು ಈ ರಾಜ್ಯವು ಇವೆಲ್ಲದರ ಮಿಶ್ರಣವಾಗಿದೆ. ಥಾರ್ ಮರುಭೂಮಿಯ ಅನಿಯಮಿತ ಮತ್ತು ಶುಷ್ಕ ದಿಬ್ಬಗಳಿಗೆ ಹೆಸರುವಾಸಿಯಾದ ರಾಜಸ್ಥಾನವು ಭೇಟಿಕೊಡಲೇ ಬೇಕಾದ ರಾಜ್ಯವಾಗಿದೆ.

ನಕ್ಷತ್ರಗಳ ಕೆಳಗಿರುವ ಮರಳಿನ ದಿಬ್ಬಗಳಲ್ಲಿ ಒಂದು ರಾತ್ರಿ ಕಳೆಯಲು ನೀವು ಇಷ್ಟಪಡುತ್ತೀರಾದಲ್ಲಿ ಇಲ್ಲಿ ಅದಕ್ಕೆ ಅವಕಾಶವಿದೆ ಅಲ್ಲದೆ ಇಲ್ಲಿ ಬೃಹತ್ ಕೋಟೆಗಳ ನಡುವೆ ಅಡ್ಡಾಡುವುದು, ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಖರೀದಿಸುವುದು ಅಥವಾ ರಾಜನಿಗೆ ರುಚಿಕರವಾದ ಥಾಲಿಯ ಊಟವನ್ನು ಸವಿಯುವುದು ಇತ್ಯಾದಿಗಳನ್ನು ತನ್ನಲ್ಲಿ ಹೊಂದಿರುವ ರಾಜಸ್ಥಾನದಲ್ಲಿ ನೋಡಲು ಮತ್ತು ಮಾಡಲು ತುಂಬಾ ಇದೆ.

ರಾಜಸ್ಥಾನಕ್ಕೆ ಭೇಟಿ ನೀಡಲು ಉತ್ತಮವಾದ ಸಮಯ

ಚಳಿಗಾಲವು ರಾಜಸ್ಥಾನದಲ್ಲಿ ಭೇಟಿ ಕೊಡಲು ಉತ್ತಮವಾದ ಸ್ಥಳವಾಗಿದೆ. ಅಂದರೆ ನವೆಂಬರ್ ತಿಂಗಳುಗಳಿಂದ ಮಾರ್ಚ್ ತಿಂಗಳಿನವರೆಗೆ. ಈ ಸಮಯದಲ್ಲಿ ಇಲ್ಲಿ ಆಹ್ಲಾದಕರ ಹವಾಮಾನವಿರುವುದರಿಂದ ಈ ಸಮಯದಲ್ಲಿ ರಾಜ್ಯದಾದ್ಯಂತ ಉತ್ತಮವಾದ ವಾತಾವರಣವನ್ನು ಸೃಷ್ಟಿಸುತ್ತದೆ. 2020 ರಲ್ಲಿ ಇಲ್ಲಿ ಭೇಟಿ ಕೊಡುವವರಿಗಾಗಿ ಇಲ್ಲಿಯ ಪ್ರಸಿದ್ದ ಹತ್ತು ಸ್ಥಳಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.


1.ಜೈಪುರ್

1.ಜೈಪುರ್

ಪಿಂಕ್ ಸಿಟಿ ಎಂದೇ ಪ್ರಸಿದ್ದಿಯನ್ನು ಪಡೆದ ಜೈಪುರ್ ತನ್ನದೇ ಆದ ಸಂಸ್ಕೃತಿ ಮತ್ತು ವರ್ಣರಂಜಿತ ಶೈಲಿಗಳಿಗೆ ಹೆಸರುವಾಸಿಯಾಗಿದೆ. ನೀವು ಜೈಪುರ್ ಗೆ ವರ್ಷದ ಯಾವುದೇ ಸಮಯದಲ್ಲಿಯೂ ಭೇಟಿ ಕೊಡಬಹುದಾಗಿದ್ದು ಈ ಪಿಂಕ್ ಸಿಟಿಯು ನಿಮ್ಮನ್ನು ತನ್ನ ವಿಶಾಲವಾದ ತೋಳುಗಳಿಂದ ಆದರದ ಸ್ವಾಗತ ಮಾಡುತ್ತದೆ. ಜೈಪುರದ ಐತಿಹಾಸಿಕ ಕೋಟೆಗಳು ಮತ್ತು ಹೆಸರಾಂತ ಸ್ಥಳಗಳಿಂದಾಗಿ ಇದರ ಸೌಂದರ್ಯತೆಯ ಕಂಪು ಎಲ್ಲಾ ಕಡೆಯೂ ಪಸರಿಸಿದೆ. ಐಷಾರಾಮಿ ಮತ್ತು ಸುಸಜ್ಜಿತ ಸೌಕರ್ಯಕ್ಕಾಗಿ ಹಂಬಲಿಸುವ ಪ್ರವಾಸಿಗರು ಈ ರಾಜ್ಯದ ಶ್ರೀಮಂತ ನಗರದಲ್ಲಿ ಕಾಣಬಹುದಾಗಿದೆ. .

2. ಜೋಧಾಪುರ

2. ಜೋಧಾಪುರ

ಜೋಧಾಪುರದ ಪಾರಂಪರಿಕ ಹೋಟೇಲುಗಳಲ್ಲಿ ವಸತಿ ಸೌಕರ್ಯ ಮಾಡುವುದರ ಮೂಲಕ ಅಲ್ಲಿಯ ಪ್ರವಾಸವನ್ನು ಆನಂದಿಸಬಹುದು. ಇಲ್ಲಿನ ಹೆಚ್ಚಿನ ಸ್ಥಳಗಳು ಶ್ರೀಮಂತ ಮನೆತನದಿಂದ ನಿರ್ಮಿತವಾದುದಾಗಿದ್ದು ಇವು ಅವರ ಜೀವನ ಶ್ರೀಮಂತ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇವುಗಳು ಪ್ರವಾಸಿಗರು ಮತ್ತು ಪ್ರಯಾಣಿಗರಿಗೆ ವಸತಿ ಸೌಕರ್ಯ ನೀಡಲು ಮುಕ್ತವಾಗಿ ದೊರಕುವುದರಿಂದ ಇಲ್ಲಿಯ ವೈಭವವನ್ನು ಉತ್ತಮ ರೀತಿಯಲ್ಲಿ ಅನುಭವಿಸಬಹುದಾಗಿದೆ. ಅದರ ಆತಿಥ್ಯದ ಹೊರತಾಗಿ, ನೀಲಿ ನಗರದ ವಿಶಾಲ ಭೂದೃಶ್ಯಗಳಲ್ಲಿ ಹರಡಿರುವ ಹತ್ತಾರು ನೀಲಿ ಬಣ್ಣದ ಕಟ್ಟಡಗಳು ಮತ್ತು ಹಳೆಯ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಕೋಟೆಗಳಿಗೆ ವೀಕ್ಷಿಸುವ ಸಲುವಾಗಿ ಕ್ಯಾಬ್ ಬಾಡಿಗೆಗೆ ಪಡೆದು ನಗರದಾದ್ಯಂತ ಪ್ರಯಾಣಿಸಬಹುದಾಗಿದೆ.

 3. ಪುಷ್ಕರ್

3. ಪುಷ್ಕರ್

410 ಸಣ್ಣ ದೇವಾಲಯಗಳು ಮತ್ತು ಸುಮಾರು 50 ಘಾಟ್‌ಗಳನ್ನು ಹೊಂದಿರುವ ಪುಷ್ಕರ್ ಹಿಂದೂಗಳ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.ಇದರ ಹೊರತಾಗಿಯೂ ಪುಷ್ಕರ್ ಒಂದು ಹಳ್ಳಿಗಾಡಿನ ಸುಂದರ ತಾಣವಾಗಿದ್ದು ಪ್ರವಾಸದ ಹವ್ಯಾಸವಿರುವ ಎಲ್ಲರನ್ನೂ ಆಕರ್ಷಿಸುತ್ತದೆ ಇದು ಛಾಯಾಗ್ರಹಣದ ಹವ್ಯಾಸವಿರುವವರಿಗೆ ಉತ್ತಮವಾದ ಸ್ಥಳವೆನಿಸಿದೆ. ಮೇಲೆ ಹೇಳಿದಂತೆ ಪುಷ್ಕರ್ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ ಪುಷ್ಕರ್ ಬ್ರಹ್ಮ ಸರೋವರ, ಬ್ರಹ್ಮ ದೇವಾಲಯ, ಮತ್ತು ಸಾವಿತ್ರಿ ದೇವಾಲಯಗಳು ಸೇರಿವೆ.

4.ಜೈಸಲ್ಮೇರ್

4.ಜೈಸಲ್ಮೇರ್

ಜೈಸಲ್ಮೇರ್‌ನಲ್ಲಿ ಒಂಟೆ ಸವಾರಿ ಅಥವಾ ಜೀಪ್ ನಲ್ಲಿ ಸಫಾರಿ ಮಾಡುವಾಗ ಮರುಭೂಮಿಯಲ್ಲಿನ ಆಹ್ಲಾದಕರ ಗಾಳಿಯು ಶಿಳ್ಳೆ ಹೊಡೆದಂತೆ ಕೇಳುತ್ತದೆ. ಜೈಸಲ್ಮೇರ್ ಒಂದು ಅಸಾಧಾರಣ ಮರಳುಗಲ್ಲ್ಲುಗಳ ನಗರವಾಗಿದ್ದು, ಇದು ಥಾರ್ ಮರುಭೂಮಿಯ ದಿಬ್ಬಗಳಿಂದ ಆವೃತವಾಗಿದೆ ಮತ್ತು ಇಲ್ಲಿ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಪ್ರಯಾಣಿಸಿದಲ್ಲಿ ಹೆಚ್ಚು ಮೊಜು,ಪ್ರೀತಿಯ ಮತ್ತು ಆನಂದದಾಯಕ ಅನುಭವವನ್ನು ಪಡೆಯಬಹುದಾಗಿದೆ. ಜೈಸಲ್ಮೇರ್ ಹೆಚ್ಚು ಕಡಿಮೆ ಒಂದು ಚಿಂತನೆಯ ಸ್ಥಳವಾಗಿದ್ದು , ಇಲ್ಲಿನ ಹಲವಾರು ಕೋಟೆಗಳನ್ನು ವೀಕ್ಷಿಸುತ್ತಾ ಹಗಲು ಮತ್ತು ಸಂಜೆಗಳನ್ನು ಕಳೆಯುವ ಅನುಭವವು ಅದು ಒಂದು ಕೋಟಿ ಕೊಟ್ಟರೂ ಸಾಲದು ಎನ್ನುವಂತಿದೆ.

5. ಉದಯ್ ಪುರ್

5. ಉದಯ್ ಪುರ್

ಹಲವಾರು ಸರೋವರಗಳು ಮತ್ತು ರಾಜಮನೆತನಗಳಿಂದ ತನ್ನಲ್ಲಿ ಹೊಂದಿರುವ ಉದಯ್ ಪುರವು ಭಾರತದ ಅತ್ಯಂತ ಅತಿರಂಜಿತ ನಗರವೆಂದು ಹೆಸರುವಾಸಿಯಾಗಿದೆ. ಜೈಸಲ್ಮೇರ್ ನಲ್ಲಿ ಭೇಟಿ ಕೊಡಲು ಉತ್ತಮ ಸ್ಥಳವೆಂದರೆ ಅದು ಪಿಚೋಲಾ ಸರೊವರ! ಈ ಸರೋವರದ ಮಧ್ಯಭಾಗದಲ್ಲಿ ಸುಂದರವಾದ ಎರಡು ಶತಮಾನಗಳ ಹಿಂದೆ ನಿರ್ಮಿಸಲಾಗಿದ್ದ ತಾಜ್ ಸರೋವರ ಅರಮನೆ ಇದೆ. ಈ ಸ್ಥಳವು ನಗರದ ಪ್ರಮುಖ ಆಕರ್ಷಣೆಯಾಗಿದೆ. ಜನರು ಸ್ನಾನ ಮಾಡಲು, ಬಟ್ಟೆ ಒಗೆಯಲು ಅಥವಾ ಇನ್ನಿತರ ಆಕರ್ಷಣೆಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಮಾಡಲು ಇಲ್ಲಿ ಕೆಲವು ಘಾಟ್ ಗಳಿವೆ. ತಮ್ಮ ಇನ್ ಸ್ಟಾಕ್ಕೆ ಯೋಗ್ಯವಾದ ಚಿತ್ರಗಳನ್ನು ಇಲ್ಲಿ ಪಡೆಯುವ ಅವಕಾಶವಿದೆ.

6. ಬಿಕನೇರ್

6. ಬಿಕನೇರ್

ಬಿಕನೇರ್ ಒಂದು ವಿಲಕ್ಷಣವಾದ ಮರುಭೂಮಿ ಪಟ್ಟಣವಾಗಿದ್ದು ನಗರದಿಂದ ದೂರವಿದೆ ಹಾಗೂ ಕಡಿಮೆ ಪ್ರಚಾರದಲ್ಲಿರುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಾಣಿಜ್ಯೀಕರಣಕ್ಕೆ ಇನ್ನೂ ಒಳಗಾಗದ ಬಿಕನೇರ್ ತನ್ನ ನೈಸರ್ಗಿಕ ಸೌಂದರ್ಯತೆಯನ್ನು ಇನ್ನೂ ಹಾಗೆಯೇ ಉಳಿಸಿಕೊಂಡಿದೆ. ಈ ಸ್ಥಳವು ಕರ್ಣೀ ಮಾತಾ ದೇವಾಲಯ ಮತ್ತು ಇಲಿಗಲ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಇ ನಗರದಲ್ಲಿ ಭೇಟಿ ನೀಡಬಹುದಾದಂತಹ ಇನ್ನೂ ಅನೇಕ ಸ್ಥಳಗಳಿವೆ. ಅವುಗಳಲ್ಲಿ ಮನಮೋಹಕ ಜುನಾಘ್ಹರ್ ಕೋಟೆ, ಲಾಲ್ ಘ್ಹರ್ ಅರಮನೆ ಅಥವಾ ಶಿವ್ ಬರಿ ದೇವಾಲಯಗಳೂ ಸೇರಿವೆ. ಈ ಸ್ಥಳವು ಒಂಟೆಯಲ್ಲಿ ಪ್ರವಾಸವನ್ನು ಮಾಡಲು ಅತ್ಯುತ್ತಮ ಸ್ಥಳವಾಗಿದೆ.

7. ಆಲ್ವರ್

7. ಆಲ್ವರ್

ಅರಾವಳಿ ಪರ್ವತ ಶ್ರೇಣಿಗಳ ಮಧ್ಯೆ ಇರುವ ಅಲ್ವಾರ್ ರಾಜಸ್ಥಾನದಲ್ಲಿಯ ಅತ್ಯಂತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲದೆ ಈ ಸ್ಥಳವು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ರಜಪೂತರ ರಾಜ, ಮಹಾರಾಜ ಅಲಘರಾಜ್ 1049 ರಲ್ಲಿ ನಿರ್ಮಿಸಿದ ಈ ಅಲ್ವಾರ್ ಬಹಳ ಕಾಲದಿಂದ ರಜಪೂತ ರಾಜ್ಯವಾಗಿದೆ. ಇದು 16 ನೇ ಶತಮಾನದ ಆರಂಭದಲ್ಲಿ ಮೊಘಲರ ಆಳ್ವಿಕೆಗೆ ಸಿಲುಕಿದ್ದರಿಂದ, ಅಲ್ವಾರ್ ನ ಕೆಲವು ಪ್ರದೇಶಗಳಲ್ಲಿ ಮೊಘಲರ ಪ್ರಭಾವವನ್ನು ಪ್ರದರ್ಶಿಸುತ್ತದೆ. ಅಲ್ವಾರ್‌ನ ಕೆಲವು ಪ್ರಮುಖ ಆಕರ್ಷಣೆಗಳಲ್ಲಿ, ಭವ್ಯವಾದ ರಾಜಮನೆತನಗಳ ಅರಮನೆಗಳು, ಬಹುಕಾಂತೀಯ ಸರೋವರಗಳು, ಎತ್ತರದ ಕೋಟೆಗಳು ಮತ್ತು ದೇವಾಲಯಗಳು ಸೇರಿವೆ.

8. ಮೌಂಟ್ ಆಬು

8. ಮೌಂಟ್ ಆಬು

ರಾಜಸ್ಥಾನವು ಶುಷ್ಕ ಮರುಭೂಮಿಯನ್ನು ತನ್ನಲ್ಲಿ ಹೊಂದಿದ್ದರೂ ಕೂಡಾ ಆಶ್ಚರ್ಯವೆಂಬಂತೆ ಇಲ್ಲಿ ಒಂದು ಗಿರಿಧಾಮವನ್ನೂ ಕಾಣಬಹುದಾಗಿದೆ. ಸಮುದ್ರ ಮಟ್ಟದಿಂದ ಸುಮಾರು ಮತ್ತು 1722 ಮೀಟರ್ ಎತ್ತರದಲ್ಲಿದಲ್ಲಿರುವ ಮೌಂಟ್ ಅಬು, ರಾಜ್ಯದ ಈ ಏಕೈಕ ಗಿರಿಧಾಮವಾಗಿದ್ದು, ಅರಾವಳಿ ಪರ್ವತ ಶ್ರೇಣಿಯ ಸೊಂಪಾದ ಪರಿಸರ ಸ್ನೇಹಿ ಬೆಟ್ಟಗಳಿಂದ ಆವೃತವಾಗಿದೆ. ಈ ಗಿರಿಧಾಮವು ರಾಜಸ್ಥಾನ ಮತ್ತು ಗುಜರಾತ್‌ನ ಗಡಿಯಲ್ಲಿರುವ ಅರಾವಳ್ಳಿ ಶ್ರೇಣಿಯಲ್ಲಿದೆ. ಅದರ ಸ್ಥಳ ಮತ್ತು ಸ್ಥಳದ ಗಮನಾರ್ಹ ಪ್ರವಾಸಿ ಆಕರ್ಷಣೆಯ ಮಾತ್ರವಲ್ಲದೆ ಮೌಂಟ್ ಅಬುವಿನಲ್ಲಿ ವಿಶಾಲವಾದ ಪ್ರಶಾಂತ ಸರೋವರಗಳು, ಹಸಿರು ಕಾಡುಗಳು ಮತ್ತು ಝರಿಗಳು ಮುಂತಾದ ಮಂತ್ರಮುಗ್ದಗೊಳಿಸುವಂತಹ ನೋಟಗಳನ್ನು ಇಲ್ಲಿಗೆ ಭೇಟಿ ಕೊಡುವವರಿಗೆ ವರ್ಷವಿಡೀ ನೀಡುತ್ತದೆ.

9. ಪಾಲಿ

9. ಪಾಲಿ

ಕೈಗಾರಿಕಾ ನಗರವೆಂದೆ ಪ್ರಸಿದ್ದಿಯಾಗಿರುವ ಪಾಲಿ 18 ಮತ್ತು 19 ನೇ ಶತಮಾನಗಳಲ್ಲಿ ರಾಜಸ್ಥಾನದಲ್ಲಿ ವ್ಯಾಪಾರಿ ಚಟುವಟಿಕೆಗಳ ಕೇಂದ್ರವಾಗಿ ವ್ಯಾಪಾರದ ಅಲೆಗಳನ್ನೇ ಸೃಷ್ಟಿ ಮಾಡಿದ ಸ್ಥಳವಾಗಿತ್ತು. ಬಂಡಿ ನದಿಯ ದಂಡೆಯಲ್ಲಿರುವ ಪಾಲಿ ರಾಜಸ್ಥಾನದ ಮಾರ್ವಾರ್ ಪ್ಯಾಂತ್ಯದ ಪ್ರಸಿದ್ದ ಪಟ್ಟಣವಾಗಿದೆ ಇದರ ಪ್ರಸಿದ್ದಿಯ ಜೊತೆಗೆ ಈ ಪಟ್ಟಣವು ವಿಭಿನ್ನವಾದ ಹಲವಾರು ಬಾವೋರಿಸ್ ಗಳನ್ನು ತನ್ನಲ್ಲಿ ಹೊಂದಿದೆ. ಈ ಬಾವಿಗಳ ವಿಭಿನ್ನ ಸಂಕೀರ್ಣ ಮತ್ತು ಕಲಾತ್ಮಕತೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸುತ್ತವೆ. ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆಯ ಬಗ್ಗೆ ತಿಳಿದುಕೊಳ್ಳಲು ವಿಶ್ವದಾದ್ಯಂತದ ಇತಿಹಾಸ ಪ್ರಿಯರು ಇಲ್ಲಿಗೆ ಭೇಟಿ ಕೊಡುತ್ತಲೇ ಇರುತ್ತಾರೆ.

10. ನಾಗೌರ್

10. ನಾಗೌರ್

ನಾಗೌರ್ ಒಂದು ಐತಿಹಾಸಿಕ ಪಟ್ಟಣವಾಗಿದ್ದು ಇದು ಪ್ರವಾಸಿಗರ ಅತ್ಯಂತ ಜನಪ್ರಿಯ ಸ್ಥಳವಾದ ರಾಜಸ್ಥಾನ, ಬಿಕನೆರ್ ಮತ್ತು ಜೋಧಪುರದ ಮಧ್ಯೆ ನೆಲೆಸಿದೆ. ಎಕರೆಗಟ್ಟಲೆ ಭೂಮಿಯಲ್ಲಿ ಹರಡಿರುವ ವಿಶಾಲವಾದ ತೆರೆದ ಮೈದಾನದಲ್ಲಿ ಹರಡಿರುವ ಕೆಂಪು ಮೆಣಸಿನಕಾಯಿಗಳನ್ನು ಒಣಗಿಸುವ ದೃಶ್ಯವು ನಾಗೌರ್ ನಲ್ಲಿ ಸಾಮಾನ್ಯವಾದುದಾಗಿದೆ. ಪ್ರಬಲ ಮೊಘಲ್ ಸಾಮ್ರಾಜ್ಯವನ್ನು ಪ್ರಶ್ನಿಸಿದ ಪರಾಕ್ರಮಿ ರಾವ್ ಅಮರ್ ಸಿಂಗ್ ರಾಥೋಡ್ ಅವರಿದ್ದ ಭೂಮಿಯೂ ಇದಾಗಿದೆ. ಈ ಬೃಹತ್ ಹಳೆಯ ಕೋಟೆಯು ಈ ರಾಜ್ಯದ ಪರಾಕ್ರಮಿ ನಾಯಕರ ಧೈರ್ಯದ ಗಮನಾರ್ಹ ಕಥೆಗಳನ್ನು ಹೊಂದಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X