Search
  • Follow NativePlanet
Share
» »ಬೇಸಿಗೆಯನ್ನು ಸ್ವಾಗತಿಸುತ್ತಾ ಮಾರ್ಚ್ ತಿಂಗಳಿನಲ್ಲಿ ಈ 15 ಪ್ರಮುಖ ತಾಣಗಳಿಗೆ ಭೇಟಿ ಕೊಡಿ

ಬೇಸಿಗೆಯನ್ನು ಸ್ವಾಗತಿಸುತ್ತಾ ಮಾರ್ಚ್ ತಿಂಗಳಿನಲ್ಲಿ ಈ 15 ಪ್ರಮುಖ ತಾಣಗಳಿಗೆ ಭೇಟಿ ಕೊಡಿ

ಮಾರ್ಚ್ ತಿಂಗಳು ಬಂತೆಂದರೆ ಸಾಕು ಬೇಸಿಗೆ ಕಾಲ ಶುರುವಾಯಿತೆಂದೇ ಅರ್ಥ! ಭಾರತದಲ್ಲಿ ಬೇಸಿಗೆ ಕಾಲವು ಪರಿಸರದಲ್ಲಿ ಅನೇಕ ನೈಸರ್ಗಿಕ ಕೊಡುಗೆಗಳನ್ನು ಕೊಡುತ್ತಾ ಬೇಸಿಗೆಯನ್ನು ಸ್ವಾಗತಿಸುವ ಋತುವೆನ್ನಬಹುದಾಗಿದೆ. ಭಾರತದ ದಕ್ಷಿಣ ಭಾಗದಲ್ಲಿ ಬೇಸಿಗೆ ಬಂತೆಂದರೆ ಸಾಕು ಸೂರ್ಯನ ಬಿಸಿಲನ್ನು ತಪ್ಪಿಸಿಕೊಳ್ಳ ಬಯಸುತ್ತಿರುವ ಕಡಲುಗಳು ಒಂದು ಕಡೆಯಾದರೆ ಇನ್ನೊಂದೆಡೆ ಉತ್ತರ ಭಾರತದಲ್ಲಿ ಹಿಮಕರಗಿ ನದಿಗಳಾಗಿ ಹರಿಯುವ ಸಮಯ. ಇಷ್ಟೇ ಅಲ್ಲದೆ ಭಾರತದಾದ್ಯಂತದ ಹಲವಾರು ನಗರಗಳಲ್ಲಿ ಅನೇಕ ಉತ್ಸವಗಳು ಜಾತ್ರೆಗಳು ಮುಂತಾದ ಚಟುವಟಿಕೆಗಳು ನಡೆಯುತ್ತದೆ.

ಭಾರತದಲ್ಲಿಯ ಅನುಕೂಲಕರವಾದ ಮತ್ತು ಅದ್ಬುತವಾದ ನೈಸರ್ಗಿಕ ಜಗತ್ತನ್ನು ಪರಿಚಯ ಮಾಡಿಕೊಳ್ಳಲು ಈ ಬೇಸಿಗೆಯು ಅತ್ತ್ಯುತ್ತಮವಾದ ಸಮಯವಾಗಿದೆ. ಈ ಸಮಯದಲ್ಲಿ ಉತ್ಸಾಹವು ಬೇರೆ ಸಮಯಗಳಿಗಿಂತ ಹೆಚ್ಚಾಗಿ ಇರುತ್ತದೆ.ಇವೆಲ್ಲವುಗಳ ಜೊತೆಗೆ ಭಾರತದ ವಿವಿಧ ಮೂಲೆಗಳಲ್ಲಿ ಆಚರಿಸಲಾಗುವ ಕೆಲವು ರೋಮಾಂಚಕ ಹಬ್ಬಗಳು ಮತ್ತು ಕಾರ್ಯಕ್ರಮಗಳಿಗೆ(ಹೋಳಿ ಮತ್ತು ಗೋವಾ ಕಾರ್ನೀವಲ್)ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.ಸರಳವಾಗಿ ಹೇಳುವುದಾದರೆ: ಭಾರತದಲ್ಲಿ ಎಲ್ಲಾ ವರ್ಗದ ಜನರಿಗೆ ಅವರವರ ಆಯ್ಕೆಗಳಿಗೆ ಅನುಗುಣವಾಗಿ ಅನೇಕ ಸಂಖ್ಯೆಯ ತಾಣಗಳಿವೆ! ಉತ್ತಮ ಸ್ಥಳಗಳ ಆಯ್ಕೆಗಳಿಗಾಗಿ ಹಾಗೂ ಭಾರತದಲ್ಲಿ ಮಾರ್ಚ್ 2020 ರಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳನ್ನು ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ.

1.ಔಲಿ

1.ಔಲಿ

ರಜೆಯ ತಾಣ ಮತ್ತು ಪ್ರಣಯಕ್ಕೆ ಸೂಕ್ತವಾದ ತಾಣವಾದ ಔಲಿಯು ಮಾರ್ಚ್ ತಿಂಗಳುಗಳಲ್ಲಿ ಸ್ವಲ್ಪ ತಂಪಾಗಿರುತ್ತದೆ. ಆದುದರಿಂದ ಇದು ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಉತ್ತಮ ಸ್ಥಳವಾಗಿದೆ. ಹಿಮದಿಂದ ಆವೃತವಾದ ಪರ್ವತಗಳ ನೋಟ ಮತ್ತು ವಿಸ್ತಾರವಾಗಿ ಹರಡಿರುವ ಹಸಿರುಮಯ ಭೂಪ್ರದೇಶಗಳು ಇವೆಲ್ಲ ಸೇರಿ ವರ್ಷದ ಈ ಸಮಯದಲ್ಲಿ ಈ ಪ್ರದೇಶವನ್ನು ಸುಂದರವಾಗಿ ಮತ್ತು ಮೋಡಿ ಮಾಡುವಂತೆ ಮಾಡುತ್ತದೆ. ಸ್ಕಿಯಿಂಗ್ ಹಾದಿಗಳನ್ನೊಳಗೊಂಡ ಭೂ ಪ್ರದೇಶದ ಉದ್ದಕ್ಕೂ ಇದ್ದು ಪಾದಯಾತ್ರೆ ಮತ್ತು ಚಾರಣ ಮಾಡುವ ಸಾಹಸಪ್ರಿಯರನ್ನು ಈ ರೋಮಾಂಚಕ ಸ್ಥಳವು ಮಾರ್ಚ್ ತಿಂಗಳಲ್ಲಿ ಆಹ್ವಾನಿಸುತ್ತದೆ. ಔಲಿಯಲ್ಲಿ ಹಲವಾರು ಇನ್ನಿತರ ಪ್ರವಾಸಿ ತಾಣಗಳಿದ್ದು 2020 ಮಾರ್ಚ್ ತಿಂಗಳಿನಲ್ಲಿ ನಿಮ್ಮ ಸಂಗಾತಿಯೊಂದಿಗೆ ಭೇಟಿ ಕೊಡಲು ಸೂಕ್ತವಾದ ಸ್ಥಳವಾಗಿದೆ.

2. ಪುದುಚೇರಿ

2. ಪುದುಚೇರಿ

1954 ರವರೆಗೆ ಫ಼್ರೆಂಚ್ ವಸಾಹತು ಶಾಹಿಯ ಅಡಿಯಲ್ಲಿದ್ದ ಪುದುಚೇರಿಯು ಕಡಲ ತೀರವನ್ನು ತನ್ನಲ್ಲಿ ಹೊಂದಿದ್ದು ಇದು ಬೆಚ್ಚಗಿನ ಮತ್ತು ಬಿಸಿಲಿನ ವಾತಾವರಣವನ್ನು ಇಲ್ಲಿಗೆ ಭೇಟಿ ಕೊಡುವವರಿಗೆ ನೀಡುತ್ತದೆ. ಒಂದು ಬದಿಯಲ್ಲಿ ಅತ್ಯುತ್ತಮವಾದ ಕಡಲತೀರ ಮತ್ತು ಬಿಳಿ ಆಶ್ರಮ ಮತ್ತು ನೆರಳಿನ ಬೆಟ್ಟಗಳ ನೆರಳು ಹೊಂದಿರುವ ಪುದುಚೇರಿ ಮಾಡಲು ಹಲವಾರು ಚಟುವಟಿಕೆಗಳನ್ನು ಒದಗಿಸುತ್ತದೆ. ಇದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಹ್ವಾನಿಸುವ ಮತ್ತು ಆತಿಥ್ಯ ನೀಡುವ ಸ್ಥಳಗಳಲ್ಲಿ ಒಂದಾಗಿದೆ.

3. ಶ್ರೀನಗರ

3. ಶ್ರೀನಗರ

ಶ್ರೀನಗರವು ಮಾರ್ಚ್ ತಿಂಗಳಿನಲ್ಲಿ ಭೇಟಿ ಕೊಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಶ್ರೀನಗರ ಅತ್ಯಾಧುನಿಕತೆ ಮತ್ತು ಸೊಬಗನ್ನು ಹೊಂದಿರುವ ಭೂಮಿಯಾಗಿದೆ. ಶ್ರೀನಗರವು ಸುಂದರ ಪರ್ವತ ಶ್ರೇಣಿಗಳು, ಹೈಕಿಂಗ್ ಮಾಡುವ ಸ್ಥಳಗಳು, ನದಿಗಳು, ಪರಂಪರೆಯ ತಾಣಗಳು ಮತ್ತು ಮಸೀದಿಗಳು ಇವೆಲ್ಲವನ್ನು ಒಟ್ಟಿಗೆ ತನ್ನಲ್ಲಿ ಹೊಂದಿರುವ ಸುಂದರ ಚಿತ್ರಣವಾಗಿದೆ. ಪ್ರತಿ ಮೂಲೆಗಳಿಂದ ಮೋಡಿಮಾಡುವ ಈ ಸುಂದರವಾದ ನಗರವು ಈ ರೀತಿಯ ಕಾಲ್ಪನಿಕ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಇದು ನೈಸರ್ಗಿಕ ಸ್ವರ್ಗವೆನ್ನುವುದರ ಜೊತೆಗೆ ಶ್ರೀನಗರವು, ಅದನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರಿಸಲಾದ ಪಾಕವಿಧಾನಗಳ ಪದ್ದತಿಯ ಆಹಾರ ವೈವಿಧ್ಯತೆಗಳನ್ನು ಸಹ ನೀಡುತ್ತದೆ. ಇಲ್ಲಿಯ ಅವಶೇಷಗಳು ಮತ್ತು ಪವಿತ್ರ ಸ್ಥಳಗಳಲ್ಲಿ ಹಿಂದೂ ಮತ್ತು ಮುಸಲ್ಮಾನರ ಪ್ರಭಾವದ ಸಂಯೋಜನೆಯು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಇದು ಇನ್ನಷ್ಟು ಆಸಕ್ತಿದಾಯಕವಾಗಿದೆ.

4. ಅಲೆಪ್ಪೀ

4. ಅಲೆಪ್ಪೀ

ಕಾಲುವೆಗಳು ಮತ್ತು ಹೌಸ್‌ಬೋಟ್‌ಗಳ ಪಟ್ಟಣ, ಅಲೆಪ್ಪಿ. ಇದು ಸಸ್ಯವರ್ಗ ಮತ್ತು ಹೂವುಗಳ ಬೃಹತ್ ಭೂದೃಶ್ಯವಾಗಿದ್ದು .ಮೂಲೆ ಮೂಲೆಗಳಲ್ಲಿಯೂ ಹೂಬಿಡುವ ಸುಂದರ ಹಾಗೂ ರೋಮಾಂಚಕ ದೃಶ್ಯಗಳನ್ನು ಒಳಗೊಂಡ ಭೂಪ್ರದೇಶವಾಗಿದೆ. ಮಾರ್ಚ್ ತಿಂಗಳು ಅಲೆಪ್ಪಿಯು ಅತ್ಯಂತ ಸುಂದರ ಹಾಗೂ ವರ್ಣಮಯವಾಗಿ ಕಾಣುವಂತಹ ಸಮಯ. ಈ ಸಮಯವು ನಿಮ್ಮ ಅಭಿರುಚಿಗೆ ತಕ್ಕಂತೆ ಇನ್ಸ್ಟಾ ಗ್ರಾಂ ನಲ್ಲಿ ಫೀಡ್ ಮಾಡಲು ಸೂಕ್ತ ಸಮಯವೆಂದರೆ ತಪ್ಪಾಗಲಾರದು. ಅಲೆಪ್ಪಿಯು ಕೇರಳದ ಪ್ರಣಯದ ರಾಜಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವುದು ಮಾತ್ರವಲ್ಲದೆ ಇದು ಅದಕ್ಕಿಂತಲೂ ಹೆಚ್ಚಿನದನ್ನು ಪ್ರವಾಸಿಗರಿಗೆ ನೀಡುತ್ತದೆ . ಈ ಸ್ಥಳವು ಮಾರ್ಚ್ ತಿಂಗಳಿನಲ್ಲಿ ಭೇಟಿ ನೀಡಬಹುದಾದ ಅತ್ಯಂತ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ.

5. ಉದಯಪುರ

5. ಉದಯಪುರ

ಭಾರತದ ಪ್ರಾಚೀನ ನಗರವೆನಿಸಿರುವ ಉದಯಪುರವು ತನ್ನದೆ ಆದ ಸೌಂದರ್ಯತೆಯನ್ನು ಹೊಂಡಿದೆ ಇದು ತನ್ನಲ್ಲಿ ಹಲವಾರು ಪ್ರವಾಸಿ ತಾಣಗಳು, ಮತ್ತು ಅನೇಕ ಇಲ್ಲಿ ಮಾಡಬಹುದಾದಂತಹ ಅನೇಕ ವಿಷಯಗಳನ್ನು ತನ್ನಲ್ಲಿ ಹೊಂದಿರುವುದರಿಂದ ಮಾರ್ಚ್ ತಿಂಗಳಿನಲ್ಲಿ ಭೇಟಿ ಕೊಡಲು ಯೋಗ್ಯವಾದ ಸ್ಥಳಗಳಲ್ಲಿ ಒಂದೆನಿಸಿದೆ. ಹೋಳಿಗೆ ದಿನಗಣನೆ ಶುರುವಾಗುತ್ತಿದ್ದಂತೆ ಈ ನಗರಕ್ಕೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಆದುದರಿಂದ ನೀವು ಭೇಟಿ ಕೊಡುವ ಮೊದಲು ಮುಂಗಡವಾಗಿ ಬುಕ್ಕಿಂಗ್ ಮಾಡುವುದು ಹೆಚ್ಚು ಸೂಕ್ತವಾದುದಾಗಿದೆ. ಇಲ್ಲಿ ಹೋಳಿಯ ಸಮಯದಲ್ಲಿ ನಡೆಯುವ ಹೋಲಿಕಾ ದಹನ್ ನಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆನಂದಿಸಬಹುದಾಗಿದೆ. ಮಾರ್ಚ್ ತಿಂಗಳಿನಲ್ಲಿ ಆಹ್ಲಾದಕರವಾಗಿರುವ ಹವಾಮಾನವನ್ನು ಹೊಂದಿರುವ ಸರೋವರಗಳ ನಗರವೆನಿಸಿರುವ ಈ ನಗರವು ತನ್ನ ಸಂದರ್ಶಕರಿಗೆ ಕಾಲ್ನಡಿಗೆಯಲ್ಲಿ ಅನ್ವೇಷಿಸುವಂತಹ ಅನೇಕ ವಿಷಯಗಳನ್ನು ಒದಗಿಸುತ್ತದೆ ಮಾತ್ರವಲ್ಲದೆ ನಗರದ ಪ್ರತಿಯೊಂದು ಮೂಲೆ ಮೂಲೆಯನ್ನೂ ಅನ್ವೇಷಣೆ ಮಾಡಲು ಈ ಸಮಯವು ಸೂಕ್ತವಾದುದಾಗಿದೆ.

6. ಕಾಂಚೀಪುರಂ

6. ಕಾಂಚೀಪುರಂ

ಅತ್ಯುತ್ತಮ ಹಿಂದೂ ದೇವಾಲಯಗಳಿಗೆ ನೆಲೆಯಾಗಿರುವ ಕಾಂಚೀಪುರಂ ಭಾರತದಲ್ಲಿ ಮಾರ್ಚ್‌ನಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ಏಕೆಂದರೆ ಈ ಸ್ಥಳವು ಭಾರತದ ನಿಜವಾದ ಬೀದಿಗಳನ್ನು ಪ್ರದರ್ಶಿಸುತ್ತದೆ. ಅಲ್ಲದೆ, ವ್ಯಾಪಕ ಸಂಖ್ಯೆಯ ಕೋಬಲ್ ಸಾಲುಗಳನ್ನು ಒಳಗೊಂಡಿದೆ ಅಲ್ಲದೆ ಕಾಂಚೀಪುರಂ ತನ್ನ ಕಲೆ, ಆಹಾರ, ಕೆಲವು ಕುಟುಂಬಗಳು ನಡೆಸುವ ಕಾರ್ಯಾಗಾರಗಳು, ಶತಮಾನಗಳಷ್ಟು ಹಳೆಯ ವಾಸ್ತುಶಿಲ್ಪವನ್ನು ಹೊಂದಿರುವ ಕಟ್ಟಡಗಳು ಮತ್ತು ಅತ್ಯಂತ ಅದ್ಭುತವಾದ ಧಾರ್ಮಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ದೇವಾಲಯಗಳಿಂದ ಹಿಡಿದು ಅಧಿಕೃತ ಸ್ಥಳೀಯ ಪಾಕಪದ್ಧತಿಯವರೆಗೆ, ಈ ಪಟ್ಟಣವು ಸುವರ್ಣ ದಿನಗಳ ಸಮಯವನ್ನು ನೆನಪಿಸುತ್ತದೆ.

7.ಶಿಮ್ಲಾ

7.ಶಿಮ್ಲಾ

ನಿಮ್ಮ ಸಂಗಾತಿಯೊಂದಿಗೆ ಪ್ರಣಯಭರಿತ ಪ್ರವಾಸ ಮಾಡಬೇಕೆಂದಿದ್ದಲ್ಲಿ, ಶಿಮ್ಲಾವು ನಿಮಗೆ ಒಂದು ಉತ್ತಮವಾದ ಆಯ್ಕೆಯಾಗಿದೆ. ಶಿಮ್ಲಾದಲ್ಲಿ ಮಾರ್ಚ್ ತಿಂಗಳು ಕಡಿಮೆ ಹಿಮಪಾತದೊಂದಿಗೆ ಹಿತಕರವಾದ ಹವಾಮಾನವನ್ನು ನೀಡುತ್ತದೆ! ಏಪ್ರೀಲ್ ತಿಂಗಳು ಈ ಸ್ಥಳವು ಜನಭರಿತವಾಗಿರುತ್ತದೆ ಏಕೆಂದರೆ ಈ ಸ್ಥಳವು ಭಾರತದಲ್ಲಿಯ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಮತ್ತು ಅನ್ವೇಷಣೆಗೊಳಲ್ಪಡುವ ಭಾರತದ ಪ್ರವಾಸಿ ತಾಣಗಳಲ್ಲೊಂದಾಗಿದೆ. 2020 ರ ಮಾರ್ಚ್‌ನಲ್ಲಿ ಭಾರತದಲ್ಲಿ ಪ್ರಯಾಣಿಸಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

8. ಗೋಕರ್ಣ

8. ಗೋಕರ್ಣ

ನಗರ ಜೀವನದ ಸದ್ದು ಗದ್ದಲದ ಜೀವನದಿಂದ ದೂರವಾಗಿ ಕಡಲತಿರದಲ್ಲಿ ಕುಳಿತುಕೊಳ್ಳುವ ಅನುಭವ ಹೇಗಿರಬಹುದು ? ಭಾರತದಲ್ಲಿ ಮಾರ್ಚ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳಲ್ಲಿ,ಒಂದೆನಿಸಿರುವ ಗೋಕರ್ಣದಲ್ಲಿ ಜನಸಂದಣಿಯು ಕಡಿಮೆ ಇರುವ ಸಮಯದಲ್ಲಿ ಭೇಟಿ ನೀಡುವುದು ಉತ್ತಮವಾಗಿರುವುದರಿಂದ ಇದಕ್ಕೆ ಪೂರಕವಾಗಿ ಮಾರ್ಚ್ ತಿಂಗಳು ಭೇಟಿ ಕೊಡಲು ಸೂಕ್ತವಾದುದಾಗಿದೆ.ಈ ಪ್ರದೇಶದ ಒಂದು ಭಾಗವು ಬೀಚ್ ಷಾಕ್ಸ್ ಮತ್ತು ವಿಶ್ವದ ಉತ್ತಮ ದರ್ಜೆಯ ಕೆಫೆಗಳು ಕಂಡರೆ ಇನ್ನೊಂದು ಹಾಗೂ ಈ ಸ್ಥಳದ ನಿಜವಾದ ಭಾಗವು ದಕ್ಷಿಣ ಭಾಗದಲ್ಲಿದೆ. ವಾಣಿಜ್ಯೀಕರಣಕ್ಕೆ ಒಳಗಾಗದೆ, ಇರುವ ಗೋಕರ್ಣದ ಈ ಭಾಗವು ಆಕರ್ಷಕ ಹಳ್ಳಿಗಳ ಮೂಲಕ ಪ್ರಶಾಂತ ಪರ್ವತಗಳ ಹಾದಿಗಳನ್ನು ಹೊಂದಿದ್ದು ,ಇದು ಎಲ್ಲರನ್ನು ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ!

9. ಮುನ್ನಾರ್

9. ಮುನ್ನಾರ್

ಸೂರ್ಯನ ಸೌಮ್ಯವಾದ ಮತ್ತು ಹಿತವಾದ ಕಿರಣಗಳ ಬೆಳಕನ್ನು ಪಡೆಯುವ ಮುನ್ನಾರ್ ಮಾರ್ಚ್ ತಿಂಗಳಿನಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದರ ಚಹಾ ಮತ್ತು ಮಸಾಲೆ ತೋಟಗಳು ಮತ್ತು ಸೊಂಪಾದ ಮತ್ತು ಸುಂದರವಾದ ಪರ್ವತಗಳು ಭಾರತದಾದ್ಯಂತದ ಪ್ರವಾಸಿಗರನ್ನು ಈ ತಾಣವು ಸ್ವಾಗತಿಸುತ್ತದೆ. ಸುಂದರವಾದ, ಸ್ವಚ್ಚ ಹಾಗೂ ಹಸಿರು ಪರಿಸರವನ್ನು ಹೊಂದಿರುವ ಈ ಹಳ್ಳಿಯು ಸೂರ್ಯನ ಬೆಳಕಿನಲ್ಲಿ ಹೊಳೆಯುವಂತೆ ಕಾಣುತ್ತದೆ. ಇವೆಲ್ಲ ಸೇರಿ ಈ ಸ್ಥಳವನ್ನು ಭಾರತದಲ್ಲಿಯ ಮಾರ್ಚ್ ತಿಂಗಳಿನಲ್ಲಿ ಭೇಟಿ ಕೊಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಒಂದೆನಿಸಿದೆ. ಈ ಹಳ್ಳಿಗಾಡಿನ ಭೂದೃಶ್ಯಗಳನ್ನು ಅನ್ವೇಷಿಸಲು ಮಾರ್ಚ್ ತಿಂಗಳು ಅತ್ಯುತ್ತಮ ಸಮಯವಾಗಿದೆ.

10. ಗ್ಯಾಂಗ್ಟಾಕ್

10. ಗ್ಯಾಂಗ್ಟಾಕ್

ಕೆಲವು ದಿನಗಳನ್ನು ತಂಪಾದ ಸ್ಥಳಗಳಲ್ಲಿ ಕಳೆಯಲು ಬಯಸಿದರೆ ಗ್ಯಾಂಗ್ಟಾಕ್ ನ ಕಲುಷರಹಿತ ಭೂಪ್ರದೇಶದಲ್ಲಿ ಅನ್ವೇಷಣೆ ಮಾಡಬಹುದಾದಂತಹುದು ಬಹಳಷ್ಟಿದೆ. ಆದುದರಿಂದ ಈ ಸ್ಥಳವು ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಭೇಟಿ ಕೊಡಬಹುದಾದ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ಸುಂದರವಾದ ಭೂದೃಶ್ಯಗಳನ್ನು ತನ್ನಲ್ಲಿ ಹೊಂದಿರುವ ಗ್ಯಾಂಗ್ಟಾಕ್ ಹೆಚ್ಚು ಜನರನ್ನು ತನ್ನಲ್ಲಿಗೆ ಬರಮಾಡಿಕೊಳ್ಳುತ್ತದೆ ಏಕೆಂದರೆ ಈ ಸಮಯವು ಚಳಿಗಾಲ ಮುಗಿಯುತ್ತಾ ಬೇಸಿಗೆ ಕಾಲಕ್ಕೆ ತಿರುಗುವ ಸಮಯವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿ ಅನೇಕ ರೀತಿಯರೋಮಾಂಚಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳು. ನಡೆಯುವ ಸಮಯವಾಗಿರುತ್ತದೆ. ಅಲ್ಲದೆ, ಪರ್ವತಾರೋಹಣ ಮತ್ತು ಪ್ಯಾರಾಗ್ಲೈಡಿಂಗ್‌ನಂತಹ ಸಾಹಸ ಕ್ರೀಡೆಗಳಲ್ಲಿ ನೀವು ಆಸಕ್ತಿ ಹೊಂದಿದ್ದರೆ, ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇದು ಉತ್ತಮ ಸಮಯ.

11. ವರ್ಕಲಾ

11. ವರ್ಕಲಾ

ವರ್ಕಲಾ ತನ್ನ ಕಡಲತೀರಗಳಿಗೆ, ಸಂಸ್ಕೃತಿ , ಆಹಾರ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ದಂಪತಿಗಳಿಗೆ ಮಧುಚಂದ್ರಕ್ಕೆ ಉತ್ತಮ ದರ್ಜೆಯ ತಾಣವೆಂದು ಗುರುತಿಸಲ್ಪಟ್ಟಿದೆ. ಇದೂ ಸಹ ಮಾರ್ಚ್ ತಿಂಗಳಿನಲ್ಲಿ ಭೇಟಿ ಕೊಡಬಹುದಾದ ಭಾರತದ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ವರ್ಕಲಾ ಎಂದಿನಿಂದಲೂ ಹಸಿರಾಗಿರುವ ಸಸ್ಯವರ್ಗಗಳಿಗೆ ನೆಲೆಯಾಗಿದೆ; ಉತ್ತಮ ಗುಣಮಟ್ಟದ ಆಹಾರ, ಎಂದಿಗೂ ನಿದ್ರಿಸದ ಕಡಲತೀರಗಳು, ಮತ್ತು ಸಾಕಷ್ಟು ಸೆಳೆಯುವಂತಹ ವಿಷಯಗಳನ್ನು ಒಳಗೊಂಡಿರುವ ವರ್ಕಲಾ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ಕೊಡಲೇ ಬೇಕೆನ್ನುವಂತಹ ಸ್ಥಳವಾಗಿದೆ. ಇಲ್ಲಿಯ ಪ್ರಶಾಂತವಾದ ಸೆಳೆತ ಮತ್ತು ಶುದ್ದವಾದ ವಾತಾವರಣವು ಈಗಾಗಲೇ ಕಲ್ಮಶರಹಿತ ಅನುಭವ ನೀಡುವ ಸ್ಥಳಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದರೆ ತಪ್ಪಾಗಲಾರದು.

12. ಲಕ್ಷದ್ವೀಪ

12. ಲಕ್ಷದ್ವೀಪ

ಮಾರ್ಚ್ 2020 ರಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ಸ್ಥಳಗಳಲ್ಲಿ ಲಕ್ಷದ್ವೀಪವೂ ಒಂದು. ವಿಶ್ರಾಂತಿ ಮತ್ತು ಪುನಶ್ಚೇತನಗೊಳ್ಳಲ ಹಾಗೂ ವಿಹಾರವನ್ನು ಬಯಸುವವರಿಗೆ ಮನವಿ ಮಾಡುವ ಏಕೈಕ ಸ್ಥಳವೆಂದರೆ ಅದು ಲಕ್ಷದ್ವೀಪ. ಈ ಸ್ಥಳದಲ್ಲಿ ಏಕಾಂತತೆಯನ್ನು ಪಡೆಯುವುದು ತುಂಬಾ ಸುಲಭ.ಈ ದ್ವೀಪವು ಹಳೆಯ ಮಾದರಿಯಲ್ಲಿಯೇ ಇದ್ದು ವ್ಯಾಪರೀಕರಣಕ್ಕೆ ಹೆಚ್ಚು ಒಳಪಟ್ಟಿಲ್ಲ ಇನ್ನೂ ದೊಡ್ಡ ರೆಸಾರ್ಟ್ ಳಿಂದ ಸ್ಪರ್ಶಿಸಲ್ಪಟ್ಟಿಲ್ಲ, ಆದ್ದರಿಂದ ನಿಜವಾದ ಪ್ರಶಾಂತ ಅನುಭವವನ್ನು ಪಡೆಯುವುದು ಸಾಧ್ಯವಾಗಿದೆ. ಹಳೆಯ ಕಾಲವನ್ನು ನೆನಪಿಸುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಇನ್ನೂ ಇವೆ. ಇವುಗಳಿಂದಾಗಿ ಈ ಸ್ಥಳವು ಮೋಜಿನ ಹಾಗೂ ಆಫ್ಬೀಟ್ ತಾಣವೆನಿಸಿದೆ.

13. ಹಂಪಿ

13. ಹಂಪಿ

ಮಾರ್ಚ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಪ್ರವಾಸಿ ಸ್ಥಳಗಳ ಬಗ್ಗೆ ಯೋಚಿಸುವಾಗ, ಹಂಪಿ ನಿಮ್ಮ ಪಟ್ಟಿಯಲ್ಲಿ ಅರ್ಹವಾದ ತಾಣವಾಗಿದೆ ಎಂದು ತಿಳಿಯಿರಿ. ಹಂಪಿಯು ಒಂದು ಅಪರೂಪದ ನಗರವಾಗಿದೆ. ಇಲ್ಲಿ ಆಳವಾಗಿ ಬೇರೂರಿರುವ ಇತಿಹಾಸ, ಸ್ಥಳೀಯ ಕರಕುಶಲ ವಸ್ತುಗಳು, ವಿವಿಧ ಸಂಸ್ಕೃತಿಗಳ ಪ್ರಭಾವಗಳು, ಬಾಯಲ್ಲಿ ನೀರೂರಿಸುವ ಪಾಕಪದ್ದತಿಗಳು, ಕೌತುಕ ಹುಟ್ಟಿಸುವ ಗುಹೆಗಳು, ಮತ್ತು ಕಲ್ಲಿನ ಪರ್ವತ ಶಿಖರಗಳು ಇತ್ಯಾದಿಗಳನ್ನು ತನ್ನಲ್ಲಿ ಹೊಂದಿರುವ ಹಂಪಿಯು ಪ್ರವಾಸಿಗರ ಸ್ವರ್ಗವೆಂದು ಹೇಳಬಹುದಾಗಿದೆ.

14. ಗೋವಾ

14. ಗೋವಾ

ಪ್ರಕೃತಿ ಪ್ರೇಮಿಗಳು ಮತ್ತು ಸಾಹಸಪ್ರಿಯರು ಇಬ್ಬರನ್ನೂ ಸಂತೋಷಪಡಿಸುವ ಈ ನಗರದಲ್ಲಿ ವಸಂತಕಾಲವನ್ನು ಕಳೆಯುವುದೆಂದರೆ ಅದು ಆನಂದದ ವಿಷಯವೇ ಸರಿ. ಬೇಸಿಗೆಯಲ್ಲಿ ಗೋವಾದಲ್ಲಿ ಮಾಡಬಹುದಾದ ಚಟುವಟಿಕೆಗಳು ಹಲವಾರು. ಇಲ್ಲಿಯ ಅನೇಕ ರೋಲಿಂಗ್ ಬೆಟ್ಟಗಳು, ಗೋಲ್ಡನ್ ಬೀಚ್ ಮತ್ತು ವಿಸ್ತಾರವಾದ ನೀಲಿ ಸಮುದ್ರದ ಹಿನ್ನೆಲೆಯು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರೊಡನೆ ವಿಶ್ರಾಂತಿ ಮತ್ತು ಬಾಂಧವ್ಯವನ್ನು ಹೊಂದಲು ನಿಮಗೆ ಸೂಕ್ತವಾದ ವಾತಾವರಣವನ್ನು ನೀಡುತ್ತದೆ. ಇದಲ್ಲದೆ, ಕಡಲತೀರವೂ ನಿಮಗೆ ಸಾಕಷ್ಟು ಚಟುವಟಿಕೆಗಳನ್ನು ಒದಗಿಸಿಕೊಡುತ್ತದೆ ಅವುಗಳಲ್ಲಿ ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಮತ್ತು ಕಯಾಕಿಂಗ್ ಅನ್ನು ಒಳಗೊಂಡಿರುವ ನೀರಿನೊಳಗೆ ಸಾಕಷ್ಟು ಅಡ್ರಿನಾಲಿನ್ ರಶಿಂಗ್ ಸಾಹಸ ಕ್ರೀಡೆಗಳೂ ಸೇರಿವೆ. ಆದುದರಿಂದ ಬೇಸಿಗೆ ರಜೆ ಕಳೆಯಲು ಮಾರ್ಚ್ ತಿಂಗಳಿನಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಗೋವಾ ಕೂಡಾ ಒಂದೆನಿಸಿದೆ.

15. ಸ್ಪಿತಿ ಕಣಿವೆ

15. ಸ್ಪಿತಿ ಕಣಿವೆ

ಸ್ಪಿತಿ ಕಣಿವೆಯು ತನ್ನಲ್ಲಿಯ ಪರ್ವತ ಕಣಿವೆಗಳು, ಶೀತ ಮರುಭೂಮಿ, ಮತ್ತು ತಾಬು ಮಠಗಳಿಗೆ ಹೆಸರುವಾಸಿಯಾಗಿದೆ. ನೀವು ಮಾರ್ಚ್ ತಿಂಗಳಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲು ಯೋಚಿಸುತ್ತಿರುವಿರಾದಲ್ಲಿ,ಈ ಸಮಯದಲ್ಲಿ ಹಿಮಪಾತವು ಕಡಿಮೆಯಾಗುವುದರಿಂದ, ನೀವು ಈ ಪ್ರದೇಶದ ಸೊಗಸಾದ ಸೌಂದರ್ಯತೆಯನ್ನು ಕಾಣಬಹುದಾಗಿದೆ.ಬೇಸಿಗೆ ಸಮಯವು ದೃಶ್ಯವೀಕ್ಷಣೆ ಮತ್ತು ಇತರ ಆಸಕ್ತಿದಾಯಕ ವಿಹಾರಗಳಿಗೆ ಈ ಸ್ಥಳವು ಸೂಕ್ತವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X