
ತಿರುಪತಿ ಎಂದ ತಕ್ಷಣ ನಮಗೆ ಲಡ್ಡು, ವೆಂಕಟೇಶ್ವರ ಸ್ವಾಮಿ, ಏಳು ಬೆಟ್ಟ ಗುರುತಿಗೆ ಬರುತ್ತದೆ ಅಲ್ಲವೆ? ಆ ಏಳು ಬೆಟ್ಟಗಳನ್ನು ಹಾಗು ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿಕೊಂಡರೆ ಆಧ್ಯಾತ್ಮಿಕ ಹಾಗು ಧಾರ್ಮಿಕ ಪ್ರವಾಸ ಮುಗಿಯುತ್ತದೆ. ಆದರೆ ಆ ಏಳು ಬೆಟ್ಟದ ಸುತ್ತ ಅಂದರೆ ತಿರುಪತಿಯ ಸಮೀಪದಲಲಿ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುವಂತಹ ಸುಂದರವಾದ ಪರ್ವತಗಳಿವೆ. ಅವುಗಳು ಟ್ರೆಕ್ಕಿಂಗ್‍ಗಳಿಗೆ, ಪಿಕ್ನಿಕ್‍ಗಳಿಗೆ ಅತ್ಯುತ್ತಮವಾದ ತಾಣವೇ ಅಲ್ಲದೇ ಹೆಸರುವಾಸಿಯಾದ ಪ್ರವಾಸಿ ತಾಣ ಎಂದೇ ಹೇಳಬಹುದು.
ಅಂತಹ ಸುಂದರವಾದ ಪರ್ವತಗಳ ಬಗ್ಗೆ ನೇಟಿವ್ ಪ್ಲಾನೆಟ್‍ನ ಮೂಲಕ ಸಂಕ್ಷೀಪ್ತವಾಗಿ ತಿಳಿದುಕೊಳ್ಳೊಣ.

1.ನಗರಿ ಹಿಲ್ಸ್
PC:YOUTUBE
ಚಿತ್ತೂರು ಜಿಲ್ಲೆಯಲ್ಲಿಯೇ ಇರುವ ಈ ನಗರಿ ಹಿಲ್ಸ್ ಸ್ಥಳೀಯರಿಗೆ ಅತ್ಯುತ್ತಮವಾದ ಪಿಕ್ನಿಕ್ ಸ್ಪಾಟ್‍ಗಳಲ್ಲಿ ಒಂದು. ಇದನ್ನು ನಗರಿ ಮೂರಕೊಂಡ ಎಂದು ಕೂಡ ಕರೆಯುತ್ತಾರೆ. ಫೋಟೊಗ್ರಫಿ ಎಂದರೆ ಇಷ್ಟ ಪಡುವವರು ಈ ನಗರಿ ಹಿಲ್ಸ್ ಸ್ವರ್ಗಧಾಮವಾಗಿರುತ್ತದೆ. ಕುಶಸ್ಥಲಿ ನದಿ ತೀರದಲ್ಲಿರುವ ಈ ನಗರಿ ಹಿಲ್ಸ್ ಮಳೆಗಾಲದ ಸಮಯದಲ್ಲಿ ನವ ವಧುವಿನಂತೆ ಪ್ರವಾಸಿಗರಿಗೆ ದರ್ಶನ ನೀಡುತ್ತಾಳೆ.

2.ತಿರುಪತಿಯಿಂದ 65 ಕಿ.ಮೀ
PC:YOUTUBE
ಇಲ್ಲಿನ ಪರ್ವತ, ಕಣಿವೆಯ ಸೌಂದರ್ಯಗಳು, ಜಲಪಾತವನ್ನು ಕಾಣುತ್ತಾ ತಮ್ಮ ಸುಂದರವಾದ ಸಮಯವನ್ನು ಕಳೆಯಬಹುದು. ತಮ್ಮ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಮಾಡಲು ಕೂಡ ಅತ್ಯಂತ ಅನುಕೂಲಕರವಾದ ಪ್ರದೇಶ ಇದಾಗಿದೆ. ತಿರುಪತಿಯಿಂದ ಕೇವಲ 65 ಕಿ.ಮೀ ದೂರದಲ್ಲಿ ಅನೇಕ ಪ್ರವಾಸಿ ಪ್ರದೇಶಗಳಿವೆ. ಕೈಲಾಸಕೋನ, ನಗರಿ ನೋಸ್. ಇಲ್ಲಿನ ವಸತಿ ಸೌಕರ್ಯಕ್ಕಾಗಿ ಹೋಟೆಲ್ಸ್‍ಗಳ ಸೌಲಭ್ಯವು ಕೂಡ ಇದೆ.

3.ಹಾರ್ಲ್ಸಿ ಹಿಲ್ಸ್
PC:YOUTUBE
ತಿರುಪತಿಗೆ ಸಮೀಪದಲ್ಲಿಯೇ ಅಲ್ಲದೇ ಆಂಧ್ರ ಪ್ರದೇಶದಲ್ಲಿನ ಪ್ರಮುಖ ಗಿರಿಧಾಮಗಳಲ್ಲಿ ಅದು ಹಾರ್ಲ್ಸಿ ಹಿಲ್ಸ್ ಕೂಡ ಒಂದು. ಇದು ಸಮುದ್ರ ಮಟ್ಟದಿಂದ ಸುಮಾರು 4100 ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಕೃತಿಯ ಸೌಂದರ್ಯವು ಅತ್ಯಂತ ರಮಣೀಯವಾಗಿರುವುದರಿಂದ ಅನೇಕ ಮಂದಿ ಪ್ರವಾಸಿಗರು ವಾರಾಂತ್ಯದ ಸಮಯದಲ್ಲಿ ತಪ್ಪದೇ ಈ ತಾಣಕ್ಕೆ ಭೇಟಿ ನೀಡುತ್ತಿರುತ್ತಾರೆ. ಮುಖ್ಯವಾಗಿ ಗಂಗೋತ್ರಿಯ ಹೆಸರಿನಲ್ಲಿರುವ ಚಿಕ್ಕ ಚಿಕ್ಕ ನದಿಗಳು, ಚಿಕ್ಕ-ಚಿಕ್ಕ ಜಲಪಾತಗಳಿವೆ. ನಿಮಗೆ ಗೊತ್ತ? ಈ ಗಿರಿಧಾಮವು ಆಂಧ್ರ ಪ್ರದೇಶ ರಾಜ್ಯದ ಪ್ರಮುಖ ಹನಿಮೂನ್ ಡೆಸ್ಟಿನೇಷನ್ ಕೂಡ.

4.ತಿರುಪತಿಯಿಂದ 130 ಕಿ.ಮೀ
PC:YOUTUBE
ತಿರುಪತಿಯಿಂದ ಸುಮಾರು 130 ಕಿ.ಮೀ ದೂರದಲ್ಲಿ ಹಾರ್ಲ್ಸ್ ಹಿಲ್ಸ್‍ಗೆ ಸೇರಲು ಉತ್ತಮ ವಾಹನ ಸೌಕರ್ಯ ವ್ಯವಸ್ಥೆಯು ಕೂಡ ಇವೆ. ಮುಖ್ಯವಾಗಿ ಸೂರ್ಯಾಸ್ತ ಹಾಗು ಸೂರ್ಯೋದಯವನ್ನು ಕಾಣಲು ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿ ಮುಖ್ಯವಾಗಿ ಕೌಟಿಣ್ಯ ಅಭಯಾರಣ್ಯ, ಮಲ್ಲಮ್ಮ ದೇವಾಲಯ, ಗಾಲಿಬಂಡ, ಆಂದ್ರಪ್ರದೇಶ ಶಾಖೆ ನಿರ್ವಹಣೆಯು ವಸತಿ ಸೌಕರ್ಯವನ್ನು ಒದಗಿಸುತ್ತದೆ.

5.ಎಲಗಿರಿ
PC:YOUTUBE
ಸಮುದ್ರಮಟ್ಟದಿಂದ ಸುಮಾರು 3,460 ಅಡಿ ಎತ್ತರವಿರುವ ಎಲಗಿರಿ 14 ಚಿಕ್ಕ-ಚಿಕ್ಕ ಗ್ರಾಮಗಳಿಂದ ಕೂಡಿರುವ ಗಿರಿಧಾಮವಾಗಿದೆ. ಎಲಗಿರಿಯಲ್ಲಿ ಮನೋಹರವಾದ ಹಚ್ಚ ಹಸಿರಿನಿಂದ ಕೂಡಿದ ಮೈದಾನಗಳು, ಪರ್ವತ ಕಣಿವೆಗಳು ಕಾಣಿಸುತ್ತವೆ. ಇಲ್ಲಿ ಅನೇಕ ಪುರಾಣ ಪ್ರಸಿದ್ಧಿ ಹೊಂದಿರುವ ದೇವಾಲಯಗಳು ಕೂಡ ನಮಗೆ ಕಾಣಿಸುತ್ತವೆ. ಅದೇ ವಿಧವಾಗಿ ಹೆಜ್ಜೆ-ಹೆಜ್ಜೆಗೂ ಜಲಪಾತಗಳಿರುವುದನ್ನು ಕೂಡ ಕಾಣಬಹುದು.

6.ತಿರುಪತಿಯಿಂದ 200 ಕಿ.ಮೀ
PC:YOUTUBE
ತಿರುಪತಿಯಿಂದ 200 ಕಿ.ಮೀ ದೂರದಲ್ಲಿರುವ ಎಲಗಿರಿ ಗಿರಿಧಾಮದ ಸಮೀಪವಿರುವ ಪುಂಗನೂರು ಸರೋವರದಲ್ಲಿ ಬೋಟಿಂಗ್ ಮಾಡುವುದು ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ. ಅದೇ ವಿಧವಾಗಿ ವೆಲವಾನ್ ದೇವಾಲಯ, ಜಲಗಂ ಪರಯ್ ಜಲಪಾತ ಇಲ್ಲಿ ನೋಡಬೇಕಾಗಿರುವ ಪ್ರವಾಸಿ ಸ್ಥಳಗಳು.

7.ನಲ್ಲಮಲಾ ಹಿಲ್ಸ್
PC:YOUTUBE
ತಿರುಪತಿಗೆ ಸಮೀಪದಲ್ಲಿ ಆಂಧ್ರ ಪ್ರದೇಶದ ಹಾಗು ತೆಲಂಗಾಣಕ್ಕೂ ಕೂಡ ಪ್ರಸರಿಸಿಕೊಂಡಿರುವ ನಲ್ಲಮಲಾ ಅರಣ್ಯ ಪ್ರದೇಶವು ಈ ಮಳೆಗಾಲದಲ್ಲಿ ಸುಂದರವಾದ ಸೌಂದರ್ಯವನ್ನು ಹೊಂದಿಕೊಂಡು ಪ್ರವಾಸಿಗರನ್ನು ಆಹ್ವಾನಿಸುತ್ತದೆ. ನದಿ , ಪರ್ವತ, ಕಣಿವೆಗಳಿಂದ ಕೂಡಿರುವ ಈ ಅರಣ್ಯ ಪ್ರದೇವೇ ಟ್ರೆಕ್ಕಿಂಗ್‍ಗೆ ಈಗೀಗಾ ಹೆಸರುವಾಸಿ ಪಡೆಯುತ್ತಿದೆ.

8.ತಿರುಪತಿಯಿಂದ 200 ಕಿ.ಮೀ ದೂರದಲ್ಲಿ
PC:YOUTUBE
ತಿರುಪತಿಗೆ ಸುಮಾರು 249 ಕಿ.ಮೀ ದೂರದಲ್ಲಿರುವ ಈ ನಲ್ಲಮಲ ಬೆಟ್ಟದ ಪರಿಸರ ಪ್ರದೇಶದಲ್ಲಿ ಜ್ಯೋತಿರ್‍ಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದೆ. ಅದೇ ವಿಧವಾಗಿ ನಾಗರ್ಜುನ ಸಾಗರ್, ಹುಲಿಗಳ ಅಭಯಾರಣ್ಯ, ತೀರ್ಥ ಜಲಪಾತ ಕೂಡ ಇಲ್ಲಿ ನೋಡಬೇಕಾಗಿರುವ ತಾಣಗಳು.