Search
  • Follow NativePlanet
Share
» »ಇವುಗಳ ನಿರ್ಮಾಣ ರಹಸ್ಯಗಳು ಏಲಿಯನ್ಸ್‍ಗಳೇ ಮಾಡಿದವೆನೋ.....

ಇವುಗಳ ನಿರ್ಮಾಣ ರಹಸ್ಯಗಳು ಏಲಿಯನ್ಸ್‍ಗಳೇ ಮಾಡಿದವೆನೋ.....

ನಮ್ಮ ಭಾರತ ದೇಶದಲ್ಲಿ ನಂಬಲು ಅಸಾಧ್ಯವಾದ ಅನೇಕ ಸ್ಥಳಗಳಿವೆ. ಅವೆಲ್ಲಾ ಸ್ಥಳಗಳು ಇಂದಿಗೂ ಯಾರು? ಯಾವಾಗ? ನಿರ್ಮಾಣ ಮಾಡಿದರು ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ. ಪ್ರತಿಯೊಬ್ಬರಲ್ಲಿಯೂ ಆ ಅಪೂರ್ವವಾದ ಪ್ರಾಕೃತಿಕ ಹಾಗು ಕಲಾ ಸೌಂದರ್ಯವನ

By Sowmyabhai

ಮ್ಮ ಭಾರತ ದೇಶದಲ್ಲಿ ನಂಬಲು ಅಸಾಧ್ಯವಾದ ಅನೇಕ ಸ್ಥಳಗಳಿವೆ. ಅವೆಲ್ಲಾ ಸ್ಥಳಗಳು ಇಂದಿಗೂ ಯಾರು? ಯಾವಾಗ? ನಿರ್ಮಾಣ ಮಾಡಿದರು ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ. ಪ್ರತಿಯೊಬ್ಬರಲ್ಲಿಯೂ ಆ ಅಪೂರ್ವವಾದ ಪ್ರಾಕೃತಿಕ ಹಾಗು ಕಲಾ ಸೌಂದರ್ಯವನ್ನು ಮರುಳಾಗದ ಜನರು ಯಾರು ಇರಲಾರರು.

ದೊಡ್ಡ-ದೊಡ್ಡ ಭವನಗಳನ್ನು ಕಂಡಾಗ ಇದನ್ನು ಹೇಗೆ ನಿರ್ಮಾಣ ಮಾಡಿದರು ಎಂಬ ಅನುಮಾನ ಮೂಡುವುದು ಸಹಜವೇ. ಆದರೆ ಪ್ರಾಚೀನ ಯುಗದಲ್ಲಿ ನಿರ್ಮಾಣ ಮಾಡಿದ ಕೆಲವು ಕಟ್ಟಡಗಳು ಅಥವಾ ಗುಹೆಗಳನ್ನು ಮಾತ್ರ ಇಂದಿಗೂ ಅದರ ನಿರ್ಮಾಣ ರಹಸ್ಯವಾಗಿಯೇ ಇವೆ. ಆ ಕಟ್ಟಡಗಳನ್ನು ಸಾಮಾನ್ಯ ಮಾನವರು ನಿರ್ಮಾಣ ಮಾಡಲು ಸಾಧ್ಯವಾಗುವಂತಹುದಲ್ಲ, ಬದಲಾಗಿ ಏಲಿಯನ್ಸ್‍ಗಳು ನಿರ್ಮಾಣ ಮಾಡಿರಬಹುದೆಂಬ ಅನುಮಾನಗಳಿವೆ. ಹಾಗಾದರೆ ಆ ಸ್ಥಳಗಳು ಯಾವುವು ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

1.ಅಜಂತಾ ಗುಹೆಗಳು

1.ಅಜಂತಾ ಗುಹೆಗಳು

PC:YOUTUBE

ಮಹಾರಾಷ್ಟ್ರದಲ್ಲಿನ ಅಜಂತಾ ಗುಹೆಗಳಲ್ಲಿ ಕಲ್ಲಿನ ಸೂಕ್ಷ್ಮವಾದ ಕೆತ್ತನೆಗಳ ಶಿಲ್ಪಕಲೆಗಳನ್ನು ಹೊಂದಿರುವ ಗುಹೆಗಳ ನಿರ್ಮಾಣವನ್ನು ಕಾಣಬಹುದಾಗಿದೆ. ಇವುಗಳು ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿರುವುದು ಎಂದು ಗುರುತಿಸಲಾಗಿದೆ. ಇಲ್ಲಿನ ಶಿಲ್ಪಕಲೆಗಳು ಬೌದ್ಧಮತಕ್ಕೆ ಸಂಬಂಧಿಸಿದ್ದಾಗಿದೆ. ಈ ಸುಂದರವಾದ ಅಜಂತಾ ಗುಹೆಗಳು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ. ಇದೊಂದು ಅಪರೂಪವಾದ ಚಾರಿತ್ರಿಕ ಸಂಪತ್ತು ಆಗಿದೆ.

ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಈ ಗುಹೆಗಳು ಅತ್ಯಂತ ಸುಂದರವಾಗಿದೆ. ಸಾಮಾನ್ಯವಾಗಿ ಇಲ್ಲಿನ ಗುಹೆಗಳನ್ನು ಕಂಡು ಮರುಳಾಗದೇ ಯಾರು ಇರಲಾರರು. ಈ ಗುಹೆಗಳನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಯಿತು. ಈ ಅದ್ಭುತವಾದ ಅಜಂತ ಗುಹೆಗಳು 56 ಮೀಟರ್ ಎತ್ತರದಲ್ಲಿನ ಪರ್ವತದ ಮೇಲೆ ಇದು ಪಶ್ಚಿಮದಿಂದ ಪೂರ್ವಕ್ಕೆ ಹರಡಿದೆ.

ಈ ಗುಹೆಗಳನ್ನು ಇಂದಿಗೂ ಯಾರು ನಿರ್ಮಾಣ ಮಾಡಿದರು ಎಂಬುದು ಅನುಮಾನವಾಗಿಯೇ ಉಳಿದಿದೆ.

2.ಎಲಿಫೆಂಟಾ ಗುಹೆ

2.ಎಲಿಫೆಂಟಾ ಗುಹೆ

PC:YOUTUBE

ಮುಂಬೈ ನಗರದ ಸಮೀಪದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿ ಈ ಗುಹಾಲಯವಿದೆ. ಇದನ್ನು ಮೊದಲು ಘಾರಾಪುರಿ ಎಂದು ಕರೆಯುತ್ತಿದ್ದರು. ನಂತರ ಪೋರ್ಚುಗೀಸರು ಎಲಿಫೆಂಟಾ ಎಂದು ಬದಲಾಯಿಸಿದರು ಎನ್ನಲಾಗುತ್ತದೆ. 1987ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿತು. ಈ ಗುಹಾಲಯವು 9 ರಿಂದ 13ನೇ ಶತಮಾನದಲ್ಲಿದ್ದ ಸಿಲ್ಹರ ಅರಸರ ಕಾಲದ್ದು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿರುವ ಕೆಲವು ಕೆತ್ತನೆ ಹಾಗೂ ಮೂರ್ತಿಗಳು ಮಾನ್ಯಖೇಟರು ಹಾಗೂ ರಾಷ್ಟ್ರಕೂಟರ ಕಾಲದ್ದು ಎನ್ನುವುದನ್ನು ಬಿಂಬಿಸುತ್ತವೆ.

ಮೂರು ಮುಖಗಳ ಸದಾಶಿವ ವಿಗ್ರಹ, ನಟರಾಜ, ಅರ್ಧನಾರೀಶ್ವರ ಹಾಗೂ ಅಲ್ಲಲ್ಲಿ ಅನೇಕ ಪೌರಾಣಿಕ ಹಾಗೂ ಸಾಮಾಜಿ ಧಾರ್ಮಿಕ ಕಾರ್ಯಗಳ ಕೆತ್ತನೆಗಳನ್ನು ಒಳಗೊಂಡಿದೆ. ವಿಶಾಲ ಆಕೃತಿಯ ಕಂಬಗಳು ಹಾಗೂ ಅವುಗಳ ಕೆತ್ತನೆಗಳು ರಮಣೀಯವಾಗಿವೆ. ಇಲ್ಲಿ ಒಂದು ಶಿವಾಲಯವು ಪ್ರಧಾನವಾಗಿರುವುದನ್ನು ಕಾಣಬಹುದು.

3.ಬಾದಾಮಿ ಗುಹೆಗಳು

3.ಬಾದಾಮಿ ಗುಹೆಗಳು

PC:YOUTUBE

ನಮ್ಮ ಬಾದಾಮಿ ಗುಹೆಗಳು ಅಜಂತಾ ಗುಹೆಗಳಂತೆ ಪ್ರಸಿದ್ಧಿ ಹೊಂದಿದೆ. ಈ ಸುಂದರವಾದ ಗುಹೆಗಳು ಇರುವುದು ನಮ್ಮ ಕರ್ನಾಟಕ ರಾಜ್ಯದ ಉತ್ತರಭಾಗದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಪಟ್ಟಣದಲ್ಲಿದೆ. ಇದೊಂದು ಗುಹಾ ದೇವಾಲಯವಾಗಿದ್ದು, ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇವಾಲಯಗಳಿವೆ. ಈ ಎಲ್ಲಾ ಗುಹೆಗಳು ಭಾರತೀಯ ರಾಕ್ ಕಟ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಾದಾಮಿಯನ್ನು ಹಿಂದೆ ಚಾಲುಕ್ಯ ರಾಜವಂಶದ ರಾಜಧಾನಿ ವಾತಪೀ ಎಂದು ಬಾದಾಮಿಯನ್ನು ಕರೆಯುತ್ತಿದ್ದರು.

ಇಲ್ಲಿನ ಗುಹೆಗಳು ಬೆಟ್ಟದ ಬಂಡೆಯ ಮೇಲೆ ಮೃದುವಾದ ಬಾದಾಮಿ ಮರುಳುಗಲ್ಲಿನಿಂದ ಕೆತ್ತಲಾಗಿದೆ. ಇಲ್ಲಿ ಆಕರ್ಷಕ ಪ್ರವೇಶ ದ್ವಾರಗಳು, ಸುಂದರವಾದ ಮುಖ ಮಂಟಪಗಳನ್ನು ಕಾಣಬಹುದಾಗಿದೆ. ವಿಶೇಷವೆನೆಂದರೆ ಇಲ್ಲಿ ಮುಖ್ಯ ಸಭಾಂಗಣವನ್ನು ಕೂಡ ಕಾಣಬಹುದಾಗಿದೆ.

4.ಉದಯಗಿರಿ ಸ್ಕಂದಗಿರಿ ಗುಹೆಗಳು

4.ಉದಯಗಿರಿ ಸ್ಕಂದಗಿರಿ ಗುಹೆಗಳು

PC:YOUTUBE

ಒಡಿಶಾದಲ್ಲಿನ ಭುವನೇಶ್ವರದಲ್ಲಿ ಉದಯಗಿರಿ ಸ್ಕಂದಗಿರಿ ಗುಹೆಗಳಿವೆ. ಈ ಗುಹೆಗಳು ಬಗೆಹರಿಸಲಾಗದ ರಹಸ್ಯಗಳಿಗೆ ನಿಲಯ. ಉದಯಗಿರಿ ಗುಹೆಯ ಸೌಂದರ್ಯವನನು ಸೂರ್ಯೋದಯದ ಸಮಯದಲ್ಲಿ ಮತ್ತಷ್ಟು ಹಿಮ್ಮಡಿಗೊಳಿಸುತ್ತದೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.

ಇಲ್ಲಿರುವ ಗುಹೆಗಳಲ್ಲಿ ಹೆಚ್ಚಾಗಿ ಸುಂದರವಾದ ಜೈನ ಧರ್ಮಕ್ಕೆ ಸಂಬಂಧಿಸಿದ ವಿಗ್ರಹಗಳನ್ನು ಕಾಣಬಹುದು. ಮುಖ್ಯವಾಗಿ ಹುಲಿಯ ಮುಖದ ಆಕಾರವನ್ನು ಹೋಲುವ ಒಂದು ಗುಹೆಯ ಒಳಗೆ ತೆರಳಿ ಅಲ್ಲಿನ ವಿಶೇಷತೆಗಳನ್ನು ನೋಡಬೇಕೆ ವಿನಃ, ಕೇವಲ ಮಾತಿನಲ್ಲಿ ವರ್ಣಿಸಲು ಆಗುವುದಿಲ್ಲ.

5.ಉಂಡವಲ್ಲಿ ಗುಹಾಲಯ

5.ಉಂಡವಲ್ಲಿ ಗುಹಾಲಯ

PC:YOUTUBE

ಒಂದು ದೊಡ್ಡ ಪರ್ವತ ಸಮುದಾಯವನ್ನು ಮುಂಭಾಗದಿಂದ ಕೆತ್ತನೆ ಮಾಡಿಕೊಂಡು ಉಂಡಿವಲ್ಲಿ ಗುಹೆಗಳನ್ನು ಏರ್ಪಾಟು ಮಾಡಿದ್ದಾರೆ. ಇವುಗಳ ನಿರ್ಮಾಣ ಕ್ರಿ.ಶ 4 ಅಥವಾ 5 ನೇ ಶತಮಾನದಲ್ಲಿ ನಡೆದಿರಬಹುದು ಎಂದು ಪುರಾವಸ್ತು ಶಾಖೆಯ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದಾರೆ. ಗುಹೆಗಳ ಮಧ್ಯೆದಲ್ಲಿರುವ ಸ್ತಂಭಗಳ ಮೇಲೆ ಸುಂದರವಾಗಿ ಕೆತ್ತನೆ ಮಾಡಿರುವ ಶಿಲ್ಪಗಳು. ಲತೆಗಳನ್ನು ನೋಡುವುದಕ್ಕೆ ಅತ್ಯಂತ ಅದ್ಭುತವಾಗಿರುತ್ತದೆ.

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರತಿ ರೂಪಗಳನ್ನು ನಾವು ಇಲ್ಲಿ ಕಾಣಬಹುದು. ಮುಖ್ಯವಾಗಿ ಗ್ರಾನೈಟ್ ಕಲ್ಲಿನಿಂದ ಕೆತ್ತನೆ ಮಾಡಿರುವ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಅತ್ಯಂತ ಸುಂದರವಾಗಿ ಕಾಣುತ್ತದೆ. ಗುಂಟೂರಿನಿಂದ ಉಂಡವಲ್ಲಿಗೆ 37 ಕಿ.ಮೀ ದೂರದಲ್ಲಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X