Search
  • Follow NativePlanet
Share
» »ಮದ್ವೆಗೂ ಮುನ್ನ ಬ್ಯಾಚುಲರ್ ಪಾರ್ಟಿ ಎಲ್ಲಿ ಮಾಡೋದು ಯೋಚಿಸಿದ್ದೀರಾ?

ಮದ್ವೆಗೂ ಮುನ್ನ ಬ್ಯಾಚುಲರ್ ಪಾರ್ಟಿ ಎಲ್ಲಿ ಮಾಡೋದು ಯೋಚಿಸಿದ್ದೀರಾ?

ಸದ್ಯದಲ್ಲೇ ಮದುವೆಯಾಗುತ್ತೀದ್ದೀರಾ ಹಾಗಾದ್ರೆ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿ ಮಾಡೋದಿಲ್ವಾ? ಈಗಾಗಲೇ ಫ್ರೆಂಡ್ಸ್‌ ಎಲ್ಲಾ ಬ್ಯಾಚುಲರ್ ಪಾರ್ಟಿಗಾಗಿ ಗೋಳು ಹಿಡಿದಿರಬೇಕಲ್ಲಾ? ಹಾಗಾದ್ರೆ ಇಲ್ಲಿದೆ ಕೆಲವು ಬೆಸ್ಟ್ ಬ್ಯಾಚುಲರ್ ಪಾರ್ಟಿ ಡೆಸ್ಟಿನೇಶನ್‌ಗಳು.

ಈ ದೇವಸ್ಥಾನದಲ್ಲಿ ಪುರುಷರಿಗೆ ನೋ ಎಂಟ್ರಿಈ ದೇವಸ್ಥಾನದಲ್ಲಿ ಪುರುಷರಿಗೆ ನೋ ಎಂಟ್ರಿ

ಗೋವಾ

ಗೋವಾ

PC:Mike Lehmann

ಹೆಚ್ಚಿನವರು ಬ್ಯಾಚುರಲರ್ ಪಾರ್ಟಿಗಾಗಿ ಆಯ್ಕೆ ಮಾಡುವ ಸ್ಥಳವೆಂದರೆ ಗೋವಾ. ಗೋವಾದ ವಾತಾವರಣ ನಿಮ್ಮನ್ನು ಪಾರ್ಟಿ ಮೂಡ್‌ಗೆ ಸೆಳೆಯುತ್ತದೆ. ಸ್ನೇಹಿತರ ಜೊತೆ, ಬೀಚ್ ಕಿನಾರೆಯಲ್ಲಿ ಹ್ಯಾಂಗ್‌ಔಟ್ ಮಾಡಿಕೊಂಡು ಕುಣಿದು, ಕುಪ್ಪಳಿಸಲು ಗೋವಾ ಬೆಸ್ಟ್ ಆಯ್ಕೆಯಾಗಿದೆ.

ಲಡಾಕ್‌ಗೆ ಬೈಕ್ ಟ್ರಿಪ್

ಲಡಾಕ್‌ಗೆ ಬೈಕ್ ಟ್ರಿಪ್

PC:Safina dhiman
ಲಡಾಕ್‌ಗೆ ರೋಡ್ ಟ್ರಿಪ್ ಹೋಗೋದು ಒಂದು ರೀತಿಯ ಸಾಹಸಮಯ ಚಟುವಟಿಕೆಯಾಗಿದೆ. ನೀವು ನಿಮ್ಮ ಫ್ರೆಂಡ್ಸ್‌ ಗ್ಯಾಂಗ್ ಜೊತೆ ಬೈಕ್ ತೆಗೆದುಕೊಂಡು ಲಡಾಕ್‌ಗೆ ಹೋಗಿ ಪಾರ್ಟಿ ಮಾಡಿ. ಇದು ಒಂದು ರೀತಿ ನೆನಪಿನಲ್ಲಿ ಉಳಿಯುವಂತಹ ಚಟುವಟಿಕೆಯಾಗಿದೆ.

ಮುಂಬೈ

ಮುಂಬೈ

PC:Rakesh Krishna Kumar
ಮುಂಬೈ ಹಾಗೂ ಅಲ್ಲಿಯ ಲೈಫ್ ಯಾರನ್ನಾದರೂ ತನ್ನತ್ತ ಸೆಳೆಯದೇ ಇರದು. ಇದೊಂದು ರೀತಿಯ ಮಾಯಾನಗರಿ. ಇಲ್ಲಿನ ಲೈಫ್‌ ಸ್ಟೈಲ್ ಉಳಿದೆಲ್ಲಾ ರಾಜ್ಯಗಳಿಗಿಂತಲೂ ಭಿನ್ನವಾಗಿದೆ. ಪಬ್, ಡಿಸ್ಕೋತೆಕ್, ಬಾರ್ ಇವೆಲ್ಲಾ ಇಲ್ಲಿನ ಯುವಕರಿಗೆ ಕಾಮನ್ ಹ್ಯಾಂಗ್‌ಔಟ್ ಸ್ಥಳವಾಗಿದ್ದು, ಬ್ಯಾಚುಲರ್ ಪಾರ್ಟಿಯನ್ನು ಪಬ್‌ನಲ್ಲೇ ಮಾಡುತ್ತಾರೆ.

ರಾಜಸ್ಥಾನ

ರಾಜಸ್ಥಾನ

PC:Coolgama
ಜೈಸಲ್ಮರ್‌ನಲ್ಲಿ ಒಂಟೆ ಸವಾರಿ ಮಾಡಿ. ನಿಮ್ಮ ಆತ್ಮೀಯ ಸ್ನೇಹಿತರ ಜೊತೆ ಜೈಸಲ್ಮರ್‌ಗೆ ತೆರಳಿ ಅಲ್ಲಿನ ಮರುಭೂಮಿಯಲ್ಲಿ ಒಂಟೆ ಸವಾರಿಯ ಆನಂದ ಪಡೆಯಿರಿ. ಇದು ನಿಮ್ಮ ಜೀವನದಲ್ಲಿ ಒಂದು ರೀತಿ ವಿಭಿನ್ನ ಅನುಭವವನ್ನು ನೀಡುತ್ತದೆ.

ಸೋಲಂಗ್

ಸೋಲಂಗ್

PC:Arupamdas
ಮದುವೆಯಾದ ನಂತರ ಯಾರಿಗೆಗೊತ್ತು ನಿಮ್ಮ ಪಾರ್ಟನರ್ ನಿಮಗೆ ಇಷ್ಟವಿದ್ದಂತಹ ಸಾಹಸಮಯ ಚಟುವಟಿಕೆಯನ್ನು ಮಾಡಲು ಬಿಡುತ್ತಾರೋ ಇಲ್ಲವೋ? ಅದಕ್ಕಾಗಿ ಬ್ಯಾಚುಲರ್ ಲೈಫ್‌ನಲ್ಲಿ ನಿಮಗೆ ಮಾಡಬೇಕೆನಿಸಿದ ಎಲ್ಲಾ ರೀತಿಯ ಸಾಹಸಮಯ ಕ್ರೀಡೆಯನ್ನು ಆಡಿ. ಇಂತಹ ಚಟುವಟಿಕೆಗೆ ಜಮ್ಮುಕಾಶ್ಮೀರದಲ್ಲಿರುವ ಸೋಲಂಗ್ ಉತ್ತಮ ಆಯ್ಕೆಯಾಗಿದೆ.

Read more about: india goa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X