Search
  • Follow NativePlanet
Share
» »ಶಬರಿಮಲೈಗೆ ತೆರಳುತ್ತಿದ್ದೀರಾ?

ಶಬರಿಮಲೈಗೆ ತೆರಳುತ್ತಿದ್ದೀರಾ?

ಶಬರಿಮಲೈ ಪೂರ್ತಿಯಾಗಿ ಒಂದು ದಟ್ಟವಾದ ಅರಣ್ಯ ಪ್ರದೇಶದಲ್ಲಿದೆ. ಹಾಗಾಗಿ ಯಾತ್ರಿಕರು ಗುಂಪು ಗುಂಪುಗಳಾಗಿ ಹೋಗುವುದು ಅಂದಿನಿಂದ ಬಂದ ಪದ್ಧತಿಯಾಗಿದೆ. ಇಂದಿಗೂ ಅಯ್ಯಪ್ಪ ಭಕ್ತರು ಹಾಗೆಯೇ ಮಾಡುತ್ತಾ ಬಂದಿದ್ದಾರೆ. ಆದರೆ ಪ್ರಸ್ತುತ ಶಬರಿಮಲೈಗೆ ಭೇಟಿ ನೀಡಿ ಬರುವುದೆಂದರೆ ನೀರು ಕುಡಿದ ಹಾಗೆಯೇ ಆಗಿದೆ. ಆದರೆ ಒಂದು ಕಾಲದಲ್ಲಿ ಶಬರಿಮಲೈನ ಯಾತ್ರೆ ಎಂದರೆ ಭಕ್ತರು ಭಯದಿಂದ ಹೋಗುತ್ತಿದ್ದರು. ಯಾವ ಸಮಯದಲ್ಲಿ ಯಾವ ಅವಘಡ ಸಂಭವಿಸುತ್ತದೆಯೋ ಯಾರಿಗೂ ತಿಳಿಯುತ್ತಿರಲಿಲ್ಲ. ಅಂದು ಶಬರಿಮಲೈಗೆ ತೆರಳುವುದಕ್ಕೆ ಎರುಮೆಲಿಮಾರ್ಗ ಎಂಬ ದಾರಿಯನ್ನು ಉಪಯೋಗಿಸುತ್ತಿದ್ದರಂತೆ.

ಈ ದಾರಿಯ ಮುಖಾಂತರವೇ ಪೂಜಾರಿಗಳು, ಸಿಬ್ಬಂದಿಗಳು ದೇವಾಲಯಕ್ಕೆ ತಲುಪುತ್ತಿದ್ದರಂತೆ. ಪೂಜಾರಿಗಳು ಸ್ವಾಮಿಗೆ ಪ್ರತ್ಯೇಕವಾದ ಪೂಜೆಗಳು ಮಾಡುತ್ತಿದ್ದರು. ಇವರು ಯಾವ ಸಮಯದಲ್ಲಿ ಹೋಗಬೇಕಾದರು ಗುಂಪು-ಗುಂಪುಗಳಾಗಿ ಹೋಗುತ್ತಿದ್ದರಂತೆ.

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಎರಡು ಸಾವಿರ ವರ್ಷಗಳ ಹಿಂದೆ 70 ಮಂದಿ ಶಬರಿಮಲೈ ಯಾತ್ರೆಗೆ ಹೋದರು ಎಂದೂ, ಆ ವರ್ಷದ ಆದಾಯ 7 ರೂಪಾಯಿಗಳೆಂದು ರೆಕಾರ್ಡ್‍ನಲ್ಲಿ ನಮೂದಿಸಲಾಗಿದೆ. 1907 ರಲ್ಲಿ ಶಬರಿಮಲೈ ಗರ್ಭಗುಡಿಯ ಶಿಖರವು ಆನೇಕ ಎಲೆಗಳಿಂದ ತುಂಬಿತ್ತಂತೆ. ಅಂದು ಗರ್ಭಗುಡಿಯಲ್ಲಿ ಏಕಶಿಲಾ ವಿಗ್ರಹಕ್ಕೆ ಪೂಜೆಗಳನ್ನು ಮಾಡುತ್ತಿದ್ದರು. 1909 ರಲ್ಲಿ ದೇವಾಲಯದಲ್ಲಿ ಅಗ್ನಿ ಪ್ರಮಾದ ಸಂಭವಿಸಿತು.

PC:sreenisreedharan


ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ದೇವಾಲಯವನ್ನು 1909-1910 ವರ್ಷದಲ್ಲಿ ಪುನರ್ ನಿರ್ಮಾಣ ಮಾಡಿದರು ಎಂದು ಹೇಳಲಾಗಿದೆ. ಅಂದು ಶಿಲಾ ವಿಗ್ರಹಕ್ಕೆ ಬದಲಿಗೆ, ಪಂಚಲೋಹದಲ್ಲಿ ತಯಾರು ಮಾಡಿರುವ ಅಯ್ಯಪ್ಪ ವಿಗ್ರಹವನ್ನು ಪ್ರತಿಷ್ಟಾಪಿದರು. ಅಂದಿನಿಂದ ಪಂಚಲೋಹ ವಿಗ್ರಹಕ್ಕೆ ಪೂಜೆಯನ್ನು ಮಾಡುವುದು ಗಮನಾರ್ಹ.

PC:gallery.oneindia.com

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

1935ರ ನಂತರ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಮಕರ ಜ್ಯೋತಿಯನ್ನು ದರ್ಶನವೇ ಅಲ್ಲದೇ ಮಂಡಲ ಪೂಜೆಗೂ ಕೂಡ ಭಕ್ತರು ಪಾಲ್ಗೊಳ್ಳುತ್ತಿದ್ದರು.

PC:Challiyan

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಚಾಲಕ್ಕಾಯಮಾರ್ಗ, ವಡಿಪೆರಿಯಾರ್ ಮಾರ್ಗ ಏರ್ಪಾಟು ಆದ್ದರಿಂದ ಶಬರಿಮಲೈ ಯಾತ್ರೆಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಕೇವಲ ಮಕರ ಜ್ಯೋತಿ ಸಮಯದಲ್ಲಿಯೇ ಅಲ್ಲದೇ ಮಳಿಯಾಳಿಗರ ವಿಶೇಷವಾದ ಹಬ್ಬಗಳ ಸಮಯದಲ್ಲಿಯೂ ಕೂಡ ದೇವಾಲಯದ ಪ್ರವೇಶವನ್ನು ನೀಡಬೇಕು ಎಂದು 1945 ರಲ್ಲಿ ದೇವಾಲಯದ ಬೋರ್ಡ್ ತೀರ್ಮಾನಿಸಿದರು.

PC:ragesh ev


ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

1950ರಲ್ಲಿ ಪರಶುರಾಮ ನಿರ್ಮಾಣ ಮಾಡಿದ ದೇವಾಲಯವು ಮೂರು ಬಾರಿ ಅಗ್ನಿಗೆ ಆಹುತಿಯಾಯಿತು. 1951 ರಲ್ಲಿ ಪಂಚಲೋಹ ವಿಗ್ರಹವನ್ನು ಚೆಂಗನೂರಿನಿಂದ ತರಿಸಿ ವೇದ ಪಂಡಿತರು ಮಂತ್ರ ಉಚ್ಛಾರಣೆಯ ಮಧ್ಯದಲ್ಲಿ ಪ್ರತಿಷ್ಟಾಪಿಸಿದರು. ಅಂದಿನವರೆವಿಗೂ ಕೇರಳಿ ವಿಗ್ರಹವಾಗಿ ಕೀರ್ತಿಯನ್ನು ಪಡೆದ ಅಯ್ಯಪ್ಪ ಸ್ವಾಮಿ ಭಾರತೀಕೇರಳಿ ವಿಗ್ರಹವಾಗಿ ಕೀರ್ತಿಯನ್ನು ಹೊಂದಿತು.

PC:Jaya jaya


ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಬೆಂಗಳೂರಿನ ಒಬ್ಬ ಭಕ್ತನು ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ಮೇಲೆ ಅದರ ಸುತ್ತ ಬಂಗಾರದ ಶೀಟ್ ಅನ್ನು ಹಾಕಿಸದರಂತೆ. ಇದರಿಂದಾಗಿ ಶಬರಿಮಲೈನ ಅಯ್ಯಪ್ಪ ದೇವಾಲಯವು ಸ್ವರ್ಣ ದೇವಾಲಯವಾಗಿ ಮಾರ್ಪಟಾಯಿತು.

PC:: AnjanaMenon

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

1984 ಕ್ಕಿಂತ ಪೂರ್ವದಲ್ಲಿ ಶಬರಿಮಲೈಗೆ ತೆರಳಲು ಭಕ್ತರು ಪರಶುರಾಮರಿಂದ ನಿರ್ಮಾಣವಾದ ಕಲ್ಲಿನ ಮೆಟ್ಟಿಲುಗಳನ್ನು ಬಳಸುತ್ತಿದ್ದರು. ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಪ್ರತಿ ಮೆಟ್ಟಿಲಿನ ಮೇಲೆ ಒಂದೊಂದು ಕೊಬ್ಬರಿಕಾಯಿಯನ್ನು ಹೊಡೆಯುತ್ತಿದ್ದರು. ಅದರಿಂದ ಭಕ್ತರು ಮೆಟ್ಟಿಲುಗಳನ್ನು ಏರುವುದಕ್ಕೆ ಕಷ್ಟವಾಗುತ್ತಿತ್ತು.

PC:Aruna

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಇಂದಿಗೂ ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ಭದ್ರವಾಗಿ ಇಟ್ಟಿದ್ದಾರೆ. ಅಲ್ಲಿನಿಂದ ಪ್ರತಿ ವರ್ಷ ಮಕರಸಂಕ್ರಾತಿಯ ದಿನದಂದು ಮೂರು ಪೆಟ್ಟಿಗೆಗಳಲ್ಲಿ ಭದ್ರವಾಗಿಟ್ಟ ಆ ಆಭರಣಗಳನ್ನು 11 ಮಂದಿ ಮೂರು ದಿನಗಳ ಕಾಲ ಹೊತ್ತುಕೊಂಡು ಬಂದು 84 ಕಿ.ಮೀ ದೂರದಲ್ಲಿರುವ ಶಬರಿಮಲೈಗೆ ಸೇರುತ್ತಾರೆ.

PC:telugu native planet

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ತೆಗೆದುಕೊಂಡ ಬಂದ ಆಭರಣಗಳನ್ನು ಸ್ವಾಮಿಗೆ ಅಲಂಕಾರ ಮಾಡಿ, ಕರ್ಪೂರ ಹಾರತಿ ಬೆಳಗಿದ ನಂತರ ದೇವಾಲಯದ ಪೂರ್ವ ದಿಕ್ಕಿನಲ್ಲಿ ಉದಯಿಸುವ ಮಕರ ಜ್ಯೋತಿಯ ದರ್ಶನವನ್ನು ಭಕ್ತರು ಕಣ್ಣುತುಂಬಿಕೊಳ್ಳುತ್ತಾರೆ.

PC:gallery.oneindia.com

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಆಭರಣದ ಹಿಂದೆ ಪಂಢಲ ರಾಜರ ವಂಶಸ್ಥರಲ್ಲಿ ಒಬ್ಬರು (ದೊಡ್ಡವರು) ಕತ್ತಿ ಹಿಡಿದುಕೊಂಡು ನೀಲಿಮಲದವರೆವಿಗೂ ಬಂದು ಅಲ್ಲಿ ವಿಶ್ರಮಿಸುತ್ತಾರೆ. ನಂತರ ಜನವರಿ 20ರಲ್ಲಿ ಆಭರಣಗಳ ಹಿಂದೆ ಪಂದಳಂನವರೆವಿಗೆ ತೆರಳಿ ಅವುಗಳನ್ನು ನೀಡಿ ಬರುತ್ತಾರೆ.

PC:: sreenisreedharan

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more