Search
  • Follow NativePlanet
Share
» »ಅಂತರಗಂಗೆ- ಸಾಹಸಕ್ಕೆ ಯೋಗ್ಯವಾದ ಅತ್ಯುತ್ತಮವಾದ ತಾಣ

ಅಂತರಗಂಗೆ- ಸಾಹಸಕ್ಕೆ ಯೋಗ್ಯವಾದ ಅತ್ಯುತ್ತಮವಾದ ತಾಣ

ಸಾಹಸಪ್ರಿಯರಿಗೆ ಅಂತರಗಂಗೆಯು ನಿಜವಾಗಿಯೂ ಅತ್ಯುತ್ತ,ಅವಾದ ಸ್ಥಳವಾಗಿದೆ. ಅಂತರಗಂಗೆ ಎಂಬ ಹೆಸರು ವಾಸ್ತವವಾಗಿ ಚಿರಸ್ಥಾಯಿಯಾಗಿರುವ ಚಿಲುಮೆಯನ್ನು ಸೂಚಿಸುತ್ತದೆ, ಇದು ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಬೆಟ್ಟಗಳ ಮೇಲೆ ಇದೆ. ಈ ಬುಗ್ಗೆಯು ಬೃಹತ್ ಶಿಲಾ ರಚನೆ ಹಾಗೂ ಸಣ್ಣ ಪುಟ್ಟ ಗುಹೆಗಳ ಮೂಲಕ ತನ್ನ ಮಾರ್ಗಗಳನ್ನು ಮಾಡುತ್ತಾ ಅದರ ಮೂಲಕ ಹೊರಗೆ ಚಿಮ್ಮುತ್ತದೆ .

Anthargange, Kolar

ಈ ಕಲ್ಲಿನ ಬೆಟ್ಟದ ಶ್ರೇಣಿಯು ತಳದಲ್ಲಿ ದಟ್ಟವಾದ ಅರಣ್ಯವನ್ನು ಹೊಂದಿದ್ದು, ಇದು ಅನ್ವೇಷಿಸಲು ಯೋಗ್ಯವಾಗಿದೆ. ಸಸ್ಯವರ್ಗವು ಬಂಡೆಯ ರಚನೆಯ ತುದಿಯ ಕಡೆಗೆ ತೆಳುವಾಗುತ್ತದೆ ಮತ್ತು ಮೇಲ್ಭಾಗವು ಕೆಲವು ಮುಳ್ಳಿನ ಪೊದೆಗಳಿಂದ ಕೂಡಿದ ಕಿರೀಟವನ್ನು ಹೊಂದಿದೆ.

ಪ್ರಯಾಣಿಕರಿಗೆ ಸಾಹಸಕ್ಕೆ ಬೇಕಾಗುವ ಆಯ್ಕೆಗಳು

ಅಂತರಗಂಗೆಯ ಮೋಡಿಯು ಕಲ್ಲಿನ ರಚನೆ ಮತ್ತು ಗುಹೆಗಳಲ್ಲಿ ಇದ್ದು, ಸಾಹಸದ ಮನೋಭಾವ ಹೊಂದಿರುವವರಿಗೆ, ರಾಕ್ ಕ್ಲೈಂಬಿಂಗ್ ಮತ್ತು ಬೆಟ್ಟದ ಮೇಲೆ ಚಾರಣ ಮಾಡುವುದು ಉತ್ತಮ ಅನುಭವವಾಗಿದೆ. ಇಲ್ಲಿರುವ ಗುಹೆಗಳು ಸಹ ಅನ್ವೇಷಿಸಲು ಯೋಗ್ಯವಾಗಿದ್ದು, ಚಾರಣವು ಹತ್ತುವುದಕ್ಕೆ ಕನಿಷ್ಠ ಒಂದು ಅಥವಾ ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಕೆಳಗೆ ಬರುವುದು ಹೆಚ್ಚು ವೇಗವಾಗಿ ಮತ್ತು ಸುಲಭವಾಗಿರುತ್ತದೆ. ರಾಪ್ಪೆಲಿಂಗ್ ಮತ್ತು ಹೈ-ರೋಪ್ ಟ್ರಾವೆಸಿಂಗ್ ಸಾಹಸ ಹುಡುಕುವವರಿಗೆ ಇತರ ಆಯ್ಕೆಗಳಾಗಿವೆ.

Anthargange, Kolar-02

ಅಂತರಗಂಗೆಯು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ದೀರ್ಘಕಾಲಿಕ ಬುಗ್ಗೆಗಳು ಮತ್ತು ಹಳೆಯ ದೇವಾಲಯವನ್ನು ನೋಡಲು ಇಲ್ಲಿಗೆ ಬರುವ ಯಾತ್ರಾರ್ಥಿಗಳು ಇದ್ದಾರೆ. ವಾಸ್ತವವಾಗಿ, ದೇವಾಲಯದ ರಚನೆಯ ಭಾಗವಾಗಿರುವ ಕಲ್ಲಿನ ನಂದಿಯ ಬಾಯಿಯಲ್ಲಿ ಬುಗ್ಗೆಯು ಹರಿಯುತ್ತಾ ಕೊನೆಯಾಗುವುದನ್ನು ಕಾಣಬಹುದು.

ಅಂತರಗಂಗೆ ತಲುಪುವುದು ಹೇಗೆ

ಈ ಸ್ಥಳವು ಬೆಂಗಳೂರಿನಿಂದ 68 ಕಿ.ಮೀ ದೂರದಲ್ಲಿದೆ ಮತ್ತು ಅತ್ಯುತ್ತಮವಾದ ರಸ್ತೆಮಾರ್ಗಗಳು ಮತ್ತು ಸಂಪರ್ಕ ಆಯ್ಕೆಗಳನ್ನು ಹೊಂದಿದ್ದು, ಪ್ರವಾಸಿಗರು ಭೇಟಿ ನೀಡುವಂತೆ ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X