Search
  • Follow NativePlanet
Share
» »ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ

ಭಕ್ತಾದಿಗಳಿಗೆ ತನ್ನ ಕಣ್ಣ ತೆರೆದು ದರ್ಶನ ಕೊಡುವ ದೇವಿ ಆಂಡಾಳಮ್ಮ

21ನೇ ಶತಮಾನದಲ್ಲಿ ದೇವರನ್ನು ಈಗ ನಂಬುವವರು ಯಾರಿದ್ದಾರೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎನ್ನುವ ಅನೇಕರ ಸವಾಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲಿದೆ ಈ ದೇವಾಲಯ. ಈ ದೇವಾಲಯದ ವಿಶೇಷವೆಂದರೆ ನಾರಾಯಣ ಎಂದೊಡನೆ ದೇವಿ ಅಂಡಾಳಮ್ಮ ತನ್ನ ತೆರೆಯುತ್ತಾಳೆ. ಬನ್ನಿ ಎಲ್ಲಿದೆ ಈ ದೇವಾಲಯ, ಈ ದೇವಾಲಯದ ವಿಶೇಷವೇನು, ಈ ದೇವಾಲಯದ ಮಹಿಮೆ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯೋಣ.

Andalu Devi Temple In Hedathale : Attractions And How To Reach

ಆಂಡಾಳು ದೇವಿ :

ನಂಜನಗೂಡು ತಾಲೂಕು ಹೆಡತಲೆ ಗ್ರಾಮದಲ್ಲಿರುವ ಲಕ್ಮೀಕಾಂತಸ್ವಾಮಿ ದೇವಸ್ಥಾನದಲ್ಲಿ ಈ ದೇವಿಯು ನೆಲೆಸಿದ್ದಾಳೆ. ಈ ದೇವಾಲಯವು ಹೊಯ್ಸಳರ ಕಾಲದ್ದಾಗಿದ್ದು, ಇದು ಹೊಯ್ಸಳರ ವಾಸ್ತುಶಿಲ್ಪಗಳನ್ನು ಹೊಂದಿದೆ. ಹೊಯ್ಸಳರ ಕಾಲದ ಈ ದೇವಾಲಯದಲ್ಲಿ 16 ಮುಖದ ಛಾವಣಿಗಳನ್ನು ಕಾಣಬಹುದು.

ಈ ದೇವಾಲಯದಲ್ಲಿ ಲಕ್ಮೀಕಾಂತ, ವೇಣುಗೋಪಾಲ ಸ್ವಾಮಿ ಮತ್ತು ಲಕ್ಮೀನರಸಿಂಹ ದೇವರುಗಳು ನೆಲೆಸಿದ್ದಾರೆ. ಇಲ್ಲಿಯೇ ಆಂಡಾಳು ದೇವಿಯೂ ನೆಲೆಸಿದ್ದು, ಭಕ್ತರಿಗೆ ತನ್ನ ಕಣ್ಣ ತೆರೆದು ದರ್ಶನ ನೀಡುವ ಮೂಲಕ ವಿಶೇಷ ಮಹಿಮೆಗೆ ಹೆಸರುವಾಸಿಯಾಗಿದ್ದಾಳೆ.

ಇಲ್ಲಿನ ಆಂಡಾಳು ದೇವಿಯ ಮಹಿಯೆ :

ಆಂಡಾಳು ದೇವಿಯ ವಿಗ್ರಹಕ್ಕೆ ಅರ್ಚಕರು ಪೂಜೆ ಯನ್ನು ಮಾಡುವಾಗ ಆರತಿ ಮಾಡುವ ಸಮಯದಲ್ಲಿ ಮಂತ್ರ ಹೇಳಿ ನಂತರ ನಾರಾಯಣ ಅಂದೊಡನೆ ತಾಯಿ ಆಂಡಾಳು ದೇವಿಯು ತನ್ನ ಎರಡು ಕಣ್ಣು ಗಳನ್ನು ಬಿಟ್ಟು ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಈ ಪವಾಡವನ್ನು ಅದೆಷ್ಟೋ ಭಕ್ತಾದಿಗಳು ಕಣ್ತುಂಬಿಕೊಂಡಿದ್ದಾರೆ. ದೇವಿಯ ಮಹಿಮೆಯನ್ನು ಕಾಣಲು ಅದೆಷ್ಟೋ ಭಕ್ತಾದಿಗಳು ದೂರದೂರುಗಳಿಂದಲೂ ಆಗಮಿಸುತ್ತಾರೆ. ಇಲ್ಲಿ ಲಕ್ಮೀನರಸಿಂಹ ಸ್ವಾಮಿಗೆ ನಡೆಯುವ ಅಷ್ಟೋತ್ತರ ಪೂಜೆಯು ತುಂಬಾನೆ ವಿಭಿನ್ನವಾಗಿರುತ್ತದೆ ಎನ್ನುವುದು ಭಕ್ತಾದಿಗಳ ಅಭಿಪ್ರಾಯ.

ಎಲ್ಲಿದೆ ಈ ದೇವಾಲಯ ಮತ್ತು ಇಲ್ಲಿಗೆ ತಲುಪುವುದು ಹೇಗೆ ? :

ನಂಜನಗೂಡು ತಾಲೂಕು ಹೆಡತಲೆ ಗ್ರಾಮದಲ್ಲಿ ಈ ದೇವಾಲಯವಿದೆ. ಇಲ್ಲಿಗೆ ತಲುಪಲು ನೀವು ಮೈಸೂರು ಜಿಲ್ಲೆಗೆ ಆಗಮಿಸಬೇಕು. ನಂತರ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮಕ್ಕೆ ಭೇಟಿ ನೀಡಿದರೆ, ನೀವು ಈ ದೇವಾಲಯವನ್ನು ತಲುಪಬಹುದು.

* ಸ್ವಂತ ವಾಹನದಲ್ಲಿ ತೆರಳುವುದಾದರೆ ಮೈಸೂರು-ಊಟಿ ರಸ್ತೆಯಲ್ಲಿ ಮುಂದುವರಿಯಿರಿ, ನಂಜನಗೂಡು ಪಟ್ಟಣವನ್ನು ದಾಟಿದ ನಂತರ ಹೆಡತಲೆ ಕಡೆಗೆ ಎಡಕ್ಕೆ ತಿರುಗುವ ಮೊದಲು ಸುಮಾರು 5 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ.
* ಬೆಂಗಳೂರಿನಿಂದ ಮೈಸೂರಿಗೆ ಮತ್ತು ಮೈಸೂರಿನಿಂದ ನಂಜನಗೂಡಿಗೆ ಸಾಕಷ್ಟು ನೇರ ಬಸ್ಸುಗಳು ಸಂಚರಿಸುತ್ತವೆ. ನಂಜನಗೂಡಿನಿಂದ ಖಾಸಗಿ ಟ್ಯಾಕ್ಸಿ ಅಥವಾ ಆಟೋ ಬಾಡಿಗೆಗೆ ದೊರೆಯುತ್ತವೆ.

ಈ ದೇವಾಲಯಕ್ಕೆ ಭೇಟಿ ನೀಡುವ ಸಮಯ :

ಈ ದೇವಾಲಯಕ್ಕೆ ಬೆಳಿಗ್ಗೆ 7:30 ರಿಂದ 9:30ರೊಳಗೆ ಮತ್ತು ಸಂಜೆ 6:30 ರಿಂದ 8:30ರೊಳಗೆ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X