• Follow NativePlanet
Share
» »ಭಾರತದಲ್ಲಿ ಈ ಪ್ರಾಚೀನ ದೇವಾಲಯಗಳು ನಿಸ್ಸಂಶಯವಾಗಿ ಸಮಯಕ್ಕೆ ನಿಮ್ಮನ್ನು ಹಿಂತಿರುಗಿಸುತ್ತದೆ

ಭಾರತದಲ್ಲಿ ಈ ಪ್ರಾಚೀನ ದೇವಾಲಯಗಳು ನಿಸ್ಸಂಶಯವಾಗಿ ಸಮಯಕ್ಕೆ ನಿಮ್ಮನ್ನು ಹಿಂತಿರುಗಿಸುತ್ತದೆ

Posted By: Manjula Balaraj Tantry

ಭಾರತವು ನಿಮ್ಮನ್ನು ಧಾರ್ಮಿಕತೆಯ ಕಡೆಗೆ ಪ್ರಯಾಣ ಬೆಳೆಸುವಂತೆ ಮಾಡುವುದಲ್ಲದೆ, ದೇಶದ ಆಧ್ಯಾತ್ಮಿಕ ಮತ್ತು ಧಾರ್ಮಿಕ ದೃಷ್ಟಿಯ ಮೂಲಕ ಪ್ರವಾಸ ಮಾಡಲು ನೀವು ಬಯಸಿದರೆ ಭಾರತವು ಒಂದು ಅವೆಲ್ಲವನ್ನು ಪೂರೈಸುವ ಒಂದು ರಾಷ್ಟ್ರ ವಾಗಿದೆ. ಈ ದೇಶವು ಅದರ ಧಾರ್ಮಿಕ ನಂಬಿಕೆಗಳು, ಭಾಷೆಗಳು, ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಸಂಪ್ರದಾಯಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಒಳಗಿನ ವಿಷಯಗಳ ಬಗ್ಗೆ ತಿಳಿಯಲು ಅಥವಾ ಅಧ್ಯಯನ ಮಾಡಲು ಆಸಕ್ತಿ ಹೊಂದಿದವರಾಗಿದ್ದಲ್ಲಿ ಭಾರತವು ಖಂಡಿತವಾಗಿಯೂ ಅಂತಹ ಆಸಕ್ತಿದಾಯಕ ದೇಶವಾಗಿದೆ. ಆಧ್ಯಾತ್ಮಿಕ ಅನುಯಾಯಿಗಳು ಮತ್ತು ಇತಿಹಾಸ ಭಕ್ತರಿಗೆ ದೇಶದಾದ್ಯಂತ ಹರಡಿರುವ ಅಸಂಖ್ಯಾತ ಅನಿರೀಕ್ಷಿತಗಳು ನಿಮ್ಮನ್ನು ಆಕರ್ಷಿಸುತ್ತವೆ.

ಕೇದಾರನಾಥ ಶಬರಿಮಲೆಯವರೆಗಿನ ಭಾರತದ ದೇವಾಲಯಗಳು ತಮ್ಮಲ್ಲಿರುವ ನಿಗೂಢತೆ ಮತ್ತು ಪ್ರಶಾಂತತೆಯನ್ನು ಪ್ರತಿಬಿಂಬಿಸುತ್ತದೆ. ಜಗತ್ತಿನಾದ್ಯಂತದ ಅಸಂಖ್ಯಾತ ಜನರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಭಾರತದ ಇಂತಹ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

ಅವರಲ್ಲಿ ಕೆಲವರು ಪ್ರಾರ್ಥನೆಗಳನ್ನು ಹೃದಯದಲ್ಲಿ ಹೊತ್ತುಕೊಂಡು ಕೆಲವರು ಕಣ್ಣೀರಿನಿಂದ ಪ್ರಾರ್ಥನೆ ಸಲ್ಲಿಸಲು ದೇವಾಲಯಗಳಿಗೆ ಬರುತ್ತಾರೆ. ದೇಶದ ಇಂತಹ ದೇವಾಲಯಗಳ ಕಡೆಗೆ ನಿಮ್ಮ ಪ್ರಯಾಣವನ್ನು ಬೆಳೆಸುವುದಕ್ಕೆ ಮೊದಲು ಯಾವುದನ್ನು ಮೊದಲು ಭೇಟಿ ಮಾಡಬಹುದು ಎಂಬುದರ ಕಡೆಗೆ ಗಮನಹರಿಸಿ

ಮುಂಡೇಶ್ವರಿ ದೇವಿ ದೇವಾಲಯ, ಬಿಹಾರ

ಮುಂಡೇಶ್ವರಿ ದೇವಿ ದೇವಾಲಯ, ಬಿಹಾರ

ಈ ದೇವಾಲಯವು ದೈವಿ ದಂಪತಿಗಳಾದ ಶಿವ ಮತ್ತು ಶಕ್ತಿಗೆ ಸಮರ್ಪಿತವಾಗಿದೆ. ಈ ದೇವಾಲಯವು ಜಗತ್ತಿನ ಅತ್ಯಂತ ಹಳೆಯದಾದ ದೇವಾಲಯವಾಗಿದೆ. ಶಕೆ ಯುಗಗಳಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಭಾರತದ ಪುರಾತತ್ವ ಸರ್ವೇಯು ಈ ರಚನೆಯನ್ನು 108 ಕ್ರಿ.ಪೂ ಆಗಿರಬಹುದು ಎಂದು ಹೇಳುತ್ತದೆ. ಈ ದೇವಾಲಯ ಅಷ್ಟಭುಜಾಕೃತಿಯಲ್ಲಿ ರಚನೆಯಾಗಿದ್ದು ಇದು ಅಪರೂಪದ ನಾಗರಾ ಶೈಲಿಯ ವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಉದಾಹರಣೆಗಳಲ್ಲೊಂದಾಗಿದೆ.

PC: Lakshya2509

ಸಲುವಾಂಕುಪುರಾಮ್ ಸುಬ್ರಹ್ಮಣ್ಯ ದೇವಸ್ಥಾನ, ತಮಿಳುನಾಡು

ಸಲುವಾಂಕುಪುರಾಮ್ ಸುಬ್ರಹ್ಮಣ್ಯ ದೇವಸ್ಥಾನ, ತಮಿಳುನಾಡು

ತಮಿಳುನಾಡಿನ ತೀರದಲ್ಲಿರುವ ಈ ದೇವಾಲಯವು 2004ರ ಸುನಾಮಿ ನಂತರ, 2005ರಲ್ಲಿ ಬೆಳಕಿಗೆ ಬಂದಿತು. ಪುರಾತತ್ವ ವಿಶ್ಲೇಷಕರ ಪ್ರಕಾರ ಇಲ್ಲಿ ಒಂದು ಕಲ್ಲಿನ ವಿಗ್ರಹ ಮತ್ತು ದೈವಿಕ ಈಟಿಗೆಯ ಉಪಸ್ಥಿತಿಯ ಕಾರಣ ಈ ದೇವಾಲಯವು ಮುರುಗ ದೇವರಿಗೆ ಸಮರ್ಪಿತವಾಗಿರ ಬಹುದು ಎಂದು ನಂಬಲಾಗಿದೆ.

ಇಲ್ಲಿಯ ಅವಶೇಷಗಳು ಎರಡು ರಚನೆಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ ಅವುಗಳಲ್ಲಿ ಒಂದು 9ನೆಯ ಶತಮಾನದ ಪಲ್ಲವರ ಯುಗದ ಸೇರಿದ್ದಾಗಿದ್ದು ಇನ್ನೊಂದು 8ನೇ ಶತಮಾನದ ಸಂಗಮ್ ಯುಗಕ್ಕೆ ಸೇರಿದ್ದಾಗಿದೆ.

PC: Ravichandar84


ಕೊಡುಂಗಲ್ಲೂರ್ ಭಗವತಿ ದೇವಸ್ಥಾನ, ಕೇರಳ

ಕೊಡುಂಗಲ್ಲೂರ್ ಭಗವತಿ ದೇವಸ್ಥಾನ, ಕೇರಳ

ಈ ದೇವಾಲಯವು ಭದ್ರಕಾಳಿ ದೇವಿಗೆ ಸಮರ್ಪಿತವಾಗಿದ್ದು, ಇದನ್ನು ಶ್ರೀ ಕುರುಂಬ ಭಗವತಿ ದೇವಾಲಯವೆಂದೂ ಕರೆಯಲಾಗುತ್ತದೆ. ಈ ದೇವಾಲಯದ ನಿರ್ಮಾಣದ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ. ಇಲ್ಲಿಯ ದೇವಿಯ ವಿಗ್ರಹವನ್ನು ಚೇರ ಸಾಮ್ರಾಜ್ಯದ ಚೇರನ್ ಸೆಂಗುತ್ತುವನ್ ಅವರಿಂದ ನಿರ್ಮಿಸಲಾಗಿದೆ ಎಂದು ಕೆಲವರ ನಂಬಿಕೆ

ಈ ದೇವಾಲಯದ ಮೂಲದ ಬಗ್ಗೆ ಅನೇಕ ಊಹಾಪೋಹಗಳಿವೆ. ಇಲ್ಲಿಯ ಸ್ಥಳೀಯರ ಪ್ರಕಾರ ಇಲ್ಲಿ ಮೊದಲಿಗೆ ಶಿವನ ದೇವಾಲವಿದ್ದು ನಂತರ ದೇವಿಯ ವಿಗ್ರಹವನ್ನು ಪರಶುರಾಮ ಮುನಿಯಿಂದ ಸ್ಥಾಪಿಸಲ್ಪಟ್ಟಿತು ಎಂದು. ಇನ್ನು ಕೆಲವರ ಪ್ರಕಾರ ಇದು ಬೌದ್ದ ಸ್ತೂಪವಾಗಿತ್ತು ಎಂದು ಇವೆಲ್ಲ ಹೇಳಿಕೆಗಳಾಗಿದ್ದು ಯಾರೊಬ್ಬರಿಗೂ ಈ ದೇವಾಲಯದ ಬಗ್ಗೆ ಸರಿಯಾಗಿ ಮಾಹಿತಿ ದೊರೆತಿಲ್ಲ.

ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯ

ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯ

ಈ ದೇವಾಲಯವು ಯುನೆಸ್ಕೋ ಪರಂಪರೆ ಯ ತಾಣಗಳಲ್ಲೊಂದಾಗಿದ್ದು 13ನೇ ಶತಮಾನದಲ್ಲಿ ಪೂರ್ವ ಗಂಗಾ ವಂಶಕ್ಕೆ ಸೇರಿದ ರಾಜರುಗಳು ಈ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವು ಸೂರ್ಯ ದೇವರಿಗೆ ಸಮರ್ಪಿತವಾಗಿದ್ದು, ಈ ದೇವಸ್ಥಾನವು 100 ಅಡಿ ಎತ್ತರದ ರಥವಾಗಿದ್ದು, 12 ದೈತ್ಯ ಚಕ್ರಗಳು ಮತ್ತು ಏಳು ಕುದುರೆಗಳನ್ನು ಹೊಂದಿದೆ. ಇವೆಲ್ಲವುಗಳನ್ನು ಕಲ್ಲಿನಿಂದ ಕೆತ್ತಲಾಗಿದೆ.

ಆದರೆ ಈ ದೇವಾಲಯದ ಮುಖ್ಯ ಭಾಗವು ಪಾಳುಬಿದ್ದಿದೆ ಮತ್ತು ಇಲ್ಲಿಯ ಅಭಯಾರಣ್ಯದ ಮೇಲಿರುವ ದೊಡ್ಡ ದೊಡ್ಡ ಗೋಪುರವು ಕುಸಿದಿದೆ. ಇದು ಈಗಿರುವ ಗೋಪುರದ ರಚನೆಗಿಂತ ಹೆಚ್ಚು ಎತ್ತರದಲ್ಲಿರುವುದಾಗಿದೆ.


PC: Alokprasad84


ಬ್ರಹ್ಮ ದೇವಾಲಯ , ರಾಜಸ್ಥಾನ

ಬ್ರಹ್ಮ ದೇವಾಲಯ , ರಾಜಸ್ಥಾನ

ಈ ದೇವಾಲಯವು ಪುಷ್ಕರ್ ನಲ್ಲಿದೆ. ಈ ದೇವಾಲಯವು ದೇಶದಲ್ಲಿಯ ಬ್ರಹ್ಮ ದೇವರಿಗೆ ಸಮರ್ಪಿತವಾದ ಕೆಲವೇ ಕೆಲವು ದೇವಾಲಯಗಳಲ್ಲೊಂದಾಗಿದೆ. ಈ ದೇವಾಲಯವನ್ನು ವಿಶ್ವಾಮಿತ್ರ ಮುನಿಯಿಂದ ನಿರ್ಮಿಸಲಾಯಿತು ಎಂದು ನಂಬಲಾಗಿದೆ ಮತ್ತು ಈ ದೇವಾಲಯದ ಜಾಗವನ್ನು ಸ್ವತಃ ಬ್ರಹ್ಮ ದೇವರಿಂದಲೇ ಆರಿಸಲ್ಪಟ್ಟಿದೆ ಎಂದು ಕೂಡಾ ಹೇಳಲಾಗುತ್ತದೆ.

ಈ ದೇವಾಲಯವನ್ನು 8ನೇ ಶತಮಾನದಲ್ಲಿ ಶ್ರೀ ಆದಿ ಶಂಕರಾಚಾರ್ಯರು ನವೀಕರಿಸಿದರು. ಪ್ರಸ್ತುತ ರಚನೆಯು 14ನೇ ಶತಮಾನದ್ದಾಗಿದ್ದು ಇದನ್ನು ಮಹಾರಾಜ ಜಗತ್ ರಾಜ್ ಪುನಃಸ್ಥಾಪಿಸಿದನು, ಅವನು ಮೂಲ ವಿನ್ಯಾಸವನ್ನು ಹಾಗೇ ಉಳಿಸಿ ಅದಕ್ಕೆ ಕೆಲವು ಸೇರ್ಪಡೆಗಳನ್ನು ಮಾಡಿದನು.

PC: Official Site

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ