Search
  • Follow NativePlanet
Share
ಮುಖಪುಟ » ಸ್ಥಳಗಳು» ಕೋನಾರ್ಕ್

ಕೋನಾರ್ಕ ಪ್ರವಾಸೋದ್ಯಮ : ಶಿಲೆಯಲ್ಲಿ ಕೆತ್ತಲಾದ ಕಥೆ

71

ಕೋನಾರ್ಕವು ಒಡಿಶಾ ರಾಜಧಾನಿ ನಗರ ಭುವನೇಶ್ವರದಿಂದ 65 ಕೀಲೊ ಮೀಟರ ದೂರದಲ್ಲಿದೆ. ಇದು ಬೆರಗುಗೊಳಿಸುವಂತಹ ಸ್ಮಾರಕಗಳು ಮತ್ತು ಸುಂದರ ದೃಶ್ಯಗಳ ಪಟ್ಟಣವಾಗಿದೆ. ಬಂಗಾಳಿ ತೀರ ಕೊಲ್ಲಿಯ ಕರಾವಳಿಗೆ ಸಮೀಪದಲ್ಲಿರವ ಈ ಸಣ್ಣ ಪಟ್ಟಣವು ತನ್ನೊಳಗೆ ತನ್ನದೇ ಆದ ಭಾರತದಲ್ಲಿಯೇ ಅದ್ಭುತ ಎನಿಸುವಂತಹ ವಾಸ್ತು ಶಿಲ್ಪಗಳನ್ನು ಹೊಂದಿದೆ.

ಕೋನಾರ್ಕವು ಒಡಿಶಾ ದೇವಾಲಯಗಳ ವಾಸ್ತುಶಿಲ್ಪಶೈಲಿಯ ಮೂಲತತ್ವವನ್ನು ಪ್ರದರ್ಶಿಸುತ್ತದೆ. ಕೋನಾರ್ಕಿನ ಸೌಂದರ್ಯವು ಅಲ್ಲಿನ ಶಿಲೆಗಳಲ್ಲಿ ಕೆತ್ತಲಾಗಿದೆ. ಮತ್ತು ಇಲ್ಲಿನ ಶಿಲೆಗಳ ಭಾಷೆಯು ಮನುಷ್ಯನ ಭಾಷೆಗಳನ್ನೇ ಸೋಲಿಸುತ್ತದೆ ಎಂದು ವಿವರಿಸಲಾಗಿದೆ. ಕೋನಾರ್ಕನಲ್ಲಿರುವ ಈ ಅದ್ಭುತ ಸ್ಮಾರಕಗಳು ತಮ್ಮ ಧಾರ್ಮಿಕ ಪ್ರಾಮುಖ್ಯತೆಗೂ ಸಹ ಪ್ರಸಿದ್ದವಾಗಿವೆ.

ಕೋನಾರ್ಕ ಮತ್ತು ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಕೋನಾರ್ಕ ಪ್ರವಾಸೋದ್ಯಮವು ಅಸಂಖ್ಯಾತ ಆಕರ್ಷಣೆಗಳನ್ನು ಹೊಂದಿದೆ. ಇದು ವಿಶ್ವದಾದ್ಯಂತ ಇರುವ ಎಲ್ಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ನಗರವು ಸೂರ್ಯ ದೇವಾಲಯದ ಉತ್ಕಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ವಾಸ್ತವವಾಗಿ ಕೋನಾರ್ಕ ಎಂಬ ಶಬ್ದದ ಅರ್ಥ ಏನೆಂದರೆ, ಕೋನ ಎಂದರೆ ಆಂಗಲ್ (Angle) ಮತ್ತು ಅರ್ಕ ಎಂದರೆ ಸೂರ್ಯ ಎಂದರ್ಥ. ಆದ್ದರಿಂದ ಈ ಅದ್ಭುತವಾದ ದೇವಾಲಯವನ್ನು ಸೂರ್ಯ ದೇವರಿಗೆ ಮೀಸಲಾಗಿರಿಸಲಾಗಿದೆ. ಸೂರ್ಯ ದೇವಾಲಯ ಸಂಕೀರ್ಣವು ಮಾಯಾದೇವಿ ದೇವಸ್ಥಾನ ಮತ್ತು ವೈಷ್ಣವ ದೇವಸ್ಥಾನಗಳನ್ನು ಸಹ ಹೊಂದಿದೆ. ಇವು ಕೂಡ ಪ್ರವಾಸಿಗರಿಗೆ ಪ್ರಿಯವಾದ ಸ್ಥಳವಾಗಿವೆ. ಕೋನಾರ್ಕನ ಹಲವು ಪ್ರಸಿದ್ದ ದೇವಾಲಯಗಳ ಮೋಡಿ ಮಾಡುವ ಸೌಂದರ್ಯವನ್ನು ಪ್ರತಿಯೊಬ್ಬರು ಆನಂದಿಸಬೇಕು. ಕೋನಾರ್ಕ ರಾಮಚಂಡಿ ದೇವಸ್ಥಾನವು ಕೋನಾರ್ಕ ರಾಮಚಂಡಿ ದೇವರಿಗೆ ಮೀಸಲಾಗಿರಿಸಲಾಗಿದ್ದು, ಇದು ಪ್ರಸಿದ್ದ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.

ಕುರುಮಾ, ಒಂದು ನಿರ್ಲಕ್ಷಿಸಲ್ಪಟ್ಟ ಭೌದ್ಧ ಸಂನ್ಯಾಸ ಮಂದಿರ ವಿದ್ದು ಇಲ್ಲಿ ಬುದ್ಧನ ಅಪೂರ್ವವಾದ ಒಂದು ವಿಗ್ರಹವಿದೆ. ಇದು ಕೂಡ ಪ್ರವಾಸಿಗರ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ. ಕಾಕತಪುರ ಮಂಗಳ ದೇವಸ್ಥಾನವು ಪ್ರಾಚಿ ನದಿಯ ತೀರದ ಮೇಲೆ ಇದೆ. ಇದು ಝಾಮು ಯಾತ್ರಾ ಎಂಬ ಜನಪ್ರಿಯ ಹಬ್ಬ ಮತ್ತು ಉತ್ಸವದ ಆಚರಣೆಯ ಸಮಯದಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತದೆ. ಚೌರಾಸ್ಸಿಯಲ್ಲಿ ಬಾರಹಿ ದೇವಸ್ಥಾನವು ಇಲ್ಲಿಯ ಮಾತೃ ದೇವತೆಯ ಒಂದು ವಿಶಿಷ್ಟ ವಿಗ್ರಹಕ್ಕಾಗಿ ಪ್ರಖ್ಯಾತವಾಗಿದೆ. ಇಲ್ಲಿ ಸೂರ್ಯನು ಅಸ್ತಂಗತನಾಗುವ ಕ್ಷಿತಿಜದ ನೋಟದ ಅಮೋಘ ದೃಶ್ಯವನ್ನು ನೋಡಿ ಆನಂದಿಸಬೇಕು.

ಕೋನಾರ್ಕ ಮಠವು ಸಹ ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಭವ್ಯ ಸ್ಮಾರಕಗಳು ಮತ್ತು ಧಾರ್ಮಿಕ ಆಕರ್ಷಣೆಗಳ ಹೊರತಾಗಿಯೂ ಕೋನಾರ್ಕ ಮೋಡಿ ಮಾಡುವ ಕಡಲ ತೀರವನ್ನು ಹೊಂದಿದ್ದು, ಪ್ರವಾಸಿಗರನ್ನು ಪ್ರಲೋಭನೆಗೆ ಒಳಪಡಿಸುತ್ತದೆ. ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಸ್ತು ಸಂಗ್ರಹಾಲಯವು ಸಹ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದು ಸೂರ್ಯ ದೇವಾಲಯದ ಸಂಕೀರ್ಣದ ಹಲವಾರು ಅವಶೇಷಗಳ ಅಪಾರ ಸಂಗ್ರಹ ಸಂಗ್ರಹವನ್ನು ಹೊಂದಿದೆ.

ಕೋನಾರ್ಕ : ವರ್ತಮಾನ ಮತ್ತು ಭೂತಕಾಲದ ಮಿಶ್ರಣ

ಕೋನಾರ್ಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಈ ಸ್ಥಳದ ಅದ್ಭುತ ಅನುಭವವನ್ನು ನೀಡುತ್ತದೆ. ಇಲ್ಲಿ ಪ್ರವಾಸಿಗರು ವರ್ತಮಾನಕಾಲದ ಭೂತಕಾಲದೊಂದಿಗಿನ ಸಾಮರಸ್ಯದ ಅದ್ಭುತ ಮಿಶ್ರಣವನ್ನು ಕಾಣಬಹುದು. ಇಲ್ಲಿನ ಐತಿಹಾಸಿಕ ದೇವಾಲಯಗಳು ಮತ್ತು ಶತಮಾನಗಳಷ್ಟು ಹಳೆಯದಾದ ದೇವಾಲಯಗಳ ವಾಸ್ತುಶಿಲ್ಪವು ನಿಮ್ಮ ಉಸಿರನ್ನು ಕಟ್ಟುವಂತೆ ಮಾಡುತ್ತದೆ. ಇಲ್ಲಿನ ಕಡಲ ತೀರ, ಕೋನಾರ್ಕನ ರೋಮಾಂಚಿಕ ಸಾಮಾಜಿಕ ಜೀವನ ಈ ಸ್ಥಳದತ್ತ ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಕೋನಾರ್ಕ : ವರ್ಣರಂಜಿತ ದೃಶ್ಯ ಮತ್ತು ಧ್ವನಿಗಳ ನೆರಳು

ಕೋನಾರ್ಕ ನಿಜವಾಗಿಯೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ನಡೆಯುವ ಹಬ್ಬದ ಆಚರಣೆಗಳಿಂದಾಗಿ ಈ ರೋಮಾಂಚಕ ನಗರವು ವಿಶ್ವದಾದ್ಯಂತ ಇರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿ ಪ್ರತಿವರ್ಷವು ಡಿಸಂಬರ 1 ರಿಂದ 5 ರವರೆಗೆ ಕೋನಾರ್ಕ ನೃತ್ಯೋತ್ಸವವನ್ನು ಏರ್ಪಡಿಸಲಾಗುತ್ತದೆ. ಇದು ದೇಶದ ಸುಪ್ರಸಿದ್ದ ಶಾಸ್ತ್ರೀಯ ನೃತ್ಯೋತ್ಸವಗಳಲ್ಲಿ ಒಂದು ಎಂದು ಹೆಸರು ಪಡೆದಿದೆ. ಈ ಉತ್ಸವದಲ್ಲಿ ಸುಂದರವಾದ, ಭಾವಪರವಶತೆಯಿಂದ ಕೂಡಿದ ಭಾರತೀಯ ಪ್ರಾಚೀನ ಶಾಸ್ತ್ರೀಯ ನೃತ್ಯಪ್ರಕಾರಗಳಾದ ಒಡಿಸ್ಸಿ,  ಭರತನಾಟ್ಯಂ, ಕಥಕ್, ಕುಚಿಪುಡಿ, ಮಣಿಪುರಿ, ಮತ್ತು ಸ್ಥಳೀಯ ನೃತ್ಯವಾದ ಚಾಹು ನೃತ್ಯವನ್ನು ಪ್ರದರ್ಶಿಸಲಾಗುತ್ತದೆ.

ಕೋನಾರ್ಕ ಪ್ರವಾಸೋದ್ಯಮದ ಬಹು ದೊಡ್ಡ ಪ್ರವಾಸಿ ಆಕರ್ಷಣೆ ಎಂದರೆ ಇಲ್ಲಿನ ಕರಕುಶಲ ಮೇಳ. ಇಲ್ಲಿ ಆಹಾರ ಪ್ರಿಯರು ಬಾಯಲ್ಲಿ ನೀರೂರಿಸುವಂತಹ ಪಾಕಗಳನ್ನು ತಿಂದು ತಮ್ಮ ಅಮೂಲ್ಯವಾದ ಸಮಯವನ್ನು ಆನಂದಿಸಬಹುದು. ಕೋನರ್ಕನಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಇನ್ನೊಂದು ಹಬ್ಬ ಎಂದರೆ ಮಾಘ ಸಪ್ತಮಿ ಮೇಳ ಆಥವಾ ಚಂದ್ರ ಭಾಗ ಮೇಳ. ಈ ಹಬ್ಬವನ್ನು ಫೆಬ್ರುವರಿ ತಿಂಗಳಲ್ಲಿ ಆಚರಿಸಲಾಗುತ್ತದೆ.

ಕೋನಾರ್ಕನಲ್ಲಿ ಖರೀದಿಯು ಒಂದು ಅಹ್ಲಾದಕರ ಚಟುವಟಿಕೆಯಾಗಿದೆ. ಇಲ್ಲಿ ವರ್ಣಮಯ ಗೃಹ ಕೈಗಾರಿಕೆಗಳಿದ್ದು,ಸುಂದರವಾದ ಚೀಲಗಳು, ಛತ್ರಿಗಳನ್ನು ತುಂಬಾ ಅಂದವಾಗಿ ಅಲಂಕರಿಸಿ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ನೆನಪಿನ ಕಾಣಿಕೆಯಾಗಿಯೂ ಖರೀದಿಸಬಹುದು. ಹಿಂದು ದೇವರುಗಳ ವಿವಿಧ ಪ್ರತಿಮೆಗಳು, ಮರ, ಕಲ್ಲು, ದಂತದ ಆಕರ್ಷಕ ಕರಕುಶಲ ವಸ್ತುಗಳು ಮತ್ತು ಪಟ್ಟ ಚಿತ್ರಕಲೆಗಳು ಕೂಡ ಇಲ್ಲಿ ಪ್ರಮುಖವಾಗಿ ಖರೀದಿಸಬಹುದಾದ ವಸ್ತುಗಳಾಗಿವೆ.

ಕೋನಾರ್ಕ ನಗರಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯ

ಅಕ್ಟೋಬರನಿಂದ ಮಾರ್ಚ ತಿಂಗಳಿನವರೆಗೂ ಕೋನಾರ್ಕ ನಗರಕ್ಕೆ ಪ್ರಯಾಣವನ್ನು ಕೈಗೊಳ್ಳಬಹುದು. ಇದು ಕೋನಾರ್ಕ ನಗರಕ್ಕೆ ಭೇಟಿ ನೀಡಲು ಯೋಗ್ಯವಾದ ಸಮಯವಾಗಿದೆ. ಈ ಸಮಯದಲ್ಲಿ ಚಳಿಗಾಲದ ತಾಪಮಾನವು ಆಹ್ಲಾದಕತೆಯಿಂದ ಕೂಡಿದ್ದು, ಸುಂದರ ದೃಶ್ಯಗಳನ್ನು ನೋಡಲು ಅನುಕೂಲವಾಗುತ್ತದೆ.

ಕೋನಾರ್ಕ ನಗರವನ್ನು ತಲುಪುವುದು ಹೇಗೆ?

ಕೋನಾರ್ಕ ನಗರವು ಒಂದು ಪ್ರಸಿದ್ದ ಪ್ರವಾಸಿ ಆಕರ್ಷಣ ಸ್ಥಳವಾಗಿದೆ. ಆದ್ದರಿಂದ ಇದು ವಿಮಾನ, ರೇಲ್ವೆ ಮತ್ತು ರಸ್ತೆ ಸಾರಿಗೆಗಳ ಉತ್ತಮ ಸಂಪರ್ಕಜಾಲವನ್ನು ಹೊಂದಿದೆ. ಭುವನೇಶ್ವರ ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರವಾದ ವಿಮಾನ ನಿಲ್ದಾಣವಾಗಿದೆ. ವಿಮಾನದ ಮೂಲಕ ಬರುವ ಪ್ರಯಾಣಿಕರಿಗೆ ಇದು ಪ್ರವೇಶ ದ್ವಾರದಂತೆ ಕಾರ್ಯ ನಿರ್ವಹಿಸುತ್ತದೆ. ಕೋನಾರ್ಕ ನಗರಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣ ಎಂದರೆ ಪುರಿ ಮತ್ತು ಭುಭನೇಶ್ವರ ರೇಲ್ವೆ ನಿಲ್ದಾಣಗಳು. ಇಲ್ಲಿ ರಸ್ತೆ ಸಾರಿಗೆ ಸೌಲಭ್ಯ ಉತ್ತಮವಾಗಿದ್ದು ಕೋನಾರ್ಕ ನಗರಕ್ಕೆ ದೇಶದ ವಿವಿಧ ರಾಜ್ಯದ ಸಣ್ಣ ನಗರಗಳು ಮತ್ತು ದೊಡ್ಡ ನಗರಗಳಿಂದ ಉತ್ತಮ ರಸ್ತೆ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ.

ಕೋನಾರ್ಕ್ ಪ್ರಸಿದ್ಧವಾಗಿದೆ

ಕೋನಾರ್ಕ್ ಹವಾಮಾನ

ಉತ್ತಮ ಸಮಯ ಕೋನಾರ್ಕ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೋನಾರ್ಕ್

  • ರಸ್ತೆಯ ಮೂಲಕ
    ಕೋನಾರ್ಕವು ಉತ್ತಮ ರಸ್ತೆ ಸಾರಿಗೆ ಸೌಲಭ್ಯವನ್ನು ಹೊಂದಿದೆ. ಒಡಿಸ್ಸಾದ ಪ್ರಮುಖ ನಗರ ಮತ್ತು ಪಟ್ಟಣಗಳೊಂದಿಗೆ ಇದು ಉತ್ತಮ ರಸ್ತೆ ಸಾರಿಗೆ ಸಂಪರ್ಕವಿದೆ. ಇಲ್ಲಿಯ ಸುಸಜ್ಜಿತ ರಸ್ತೆಗಳ ಜಾಲವು ಕೋನಾರ್ಕ ನಗರವನ್ನು ದೇಶದ ಇತರ ಪ್ರಮುಖ ನಗರಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಪರ್ಕವನ್ನು ಸಾಧಿಸುವಂತೆ ಮಾಡುತ್ತದೆ. ರಾಜ್ಯ ಹೆದ್ದಾರಿಯು ನೆರೆಹೊರೆಯ ರಾಜ್ಯದ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ. ಬಸ್ಸುಗಳು, ಖಾಸಗಿ ವಾಹನಗಳು ಇಲ್ಲಿನ ರಸ್ತೆ ಸಾರಿಗೆ ಸಂಪರ್ಕದ ಸಾಮಾನ್ಯ ಮತ್ತು ಜನಪ್ರಿಯ ಮಾಧ್ಯಮಗಳಾಗಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೋನಾರ್ಕ ನಗರಕ್ಕೆ ಹತ್ತಿರವಿರುವ ರೇಲ್ವೆ ನಿಲ್ದಾಣ ಎಂದರೆ ಪುರಿ ಮತ್ತು ಭುವನೇಶ್ವರ ರೇಲ್ವೆ ನಿಲ್ದಾಣಗಳು. ಈ ಎರಡು ಜನಜಂಗುಳಿಯ ರೇಲ್ವೆ ನಿಲ್ದಾಣಗಳು ದೇಶದ ಇತರ ರೇಲ್ವೆ ನಿಲ್ದಾಣಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ. ದೇಶದ ಬಹುತೇಕ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಈ ರೇಲ್ವೆ ನಿಲ್ದಾಣಗಳಿಂದ ಉತ್ತಮ ರೇಲ್ವೆ ಸೌಲಭ್ಯ ಇದೆ. ಈ ನಿಲ್ದಾಣಗಳಿಂದ ಕೋನಾರ್ಕ ನಗರವನ್ನು ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೋನಾರ್ಕ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ಭುವನೇಶ್ವರ ವಿಮಾನ ನಿಲ್ದಾಣ. ಈ ಪ್ರಮುಖ ವಿಮಾನ ನಿಲ್ದಾಣವು ದೇಶದ ಇತರ ಪ್ರಮುಖ ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಇಲ್ಲಿಗೆ ದೇಶದ ಪ್ರಮುಖ ನಗರಗಳಿಂದ ವೈಮಾನಿಕ ಸೌಲಭ್ಯ ಇದೆ. ಉದಾ: ಕೋಲ್ಕತ್ತ, ದೆಹಲಿ, ಹೈದ್ರಾಬಾದ ಮತ್ತು ಚೆನ್ನೈ ಮುಂತಾದ ವಿಮಾನ ನಿಲ್ದಾಣಗಳು ಭುವನೇಶ್ವರ ವಿಮಾನ ನಿಲ್ದಾಣಕ್ಕೆ ದೈನಂದಿನ ನಿರಂತರ ವಿಮಾನ ಸೌಲಭ್ಯವನ್ನು ಹೊಂದಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat