Search
  • Follow NativePlanet
Share
» »ಮಿನಿ ಪೂರಿ ಕ್ಷೇತ್ರವನ್ನು ನೋಡಿದ್ದೀರಾ?

ಮಿನಿ ಪೂರಿ ಕ್ಷೇತ್ರವನ್ನು ನೋಡಿದ್ದೀರಾ?

By Sowmyabhai

ಪೂರಿ ಎಂಬ ತಕ್ಷಣ ಜಗನ್ನಾಥ, ಸುಭದ್ರ, ಬಲರಾಮ ಗುರುತಿಗೆ ಬರುತ್ತಿದೆ. ಪ್ರತಿ ಹಿಂದೂವು ತನ್ನ ಜೀವಿತಾವಧಿಯಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಚಾರ್ ಧಾಂ ಪುಣ್ಯಕ್ಷೇತ್ರದಲ್ಲಿ ಈ ಪೂರಿಯಲ್ಲಿನ ಜಗನ್ನಾಥ ದೇವಾಲಯವು ಒಂದು. ಈ ದೇವಾಲಯದಲ್ಲಿ ಶ್ರೀ ಕೃಷ್ಣನ ಜೊತೆ ಜೊತೆಗೆ ಸುಭದ್ರ, ದ್ರೌಪತಿ ವಿಗ್ರಹಗಳಿಗೆ ಮಾಡುವ ಅಲಂಕಾರ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ.

ಅದ್ದರಿಂದಲೇ ಈ ರಥಯಾತ್ರೆಯನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸುತ್ತಾರೆ. ಇಷ್ಟೇ ಪ್ರಾಧನ್ಯತೆಯನ್ನು ಹೊಂದಿರುವ ಮತ್ತೊಂದು ದೇವಾಲಯವು ಕೂಡ ಒರಿಸ್ಸಾದಲ್ಲಿದೆ. ಅಲ್ಲಿಯೂ ಕೂಡ ಶ್ರೀಕೃಷ್ಣ, ಬಲರಾಮ ಸಮೇತ ದ್ರೌಪತಿ ವಿಗ್ರಹಗಳನ್ನು ನಾವು ಕಾಣಬಹುದು. ಅದ್ದರಿಂದಲೇ ಈ ದೇವಾಲಯವನ್ನು ಮಿನಿ ಪೂರಿ ಕ್ಷೇತ್ರವೆಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದ ವಿವರವನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಅನಂತ ವಾಸುದೇವ ದೇವಾಲಯ

1.ಅನಂತ ವಾಸುದೇವ ದೇವಾಲಯ

PC:YOUTUBE

ಒರಿಸ್ಸಾ ರಾಜ್ಯದಲ್ಲಿನ ಭವನೇಶ್ವರದಲ್ಲಿರುವ ಅನಂತ ವಾಸುದೇವ ದೇವಾಲಯವನ್ನೇ ಮಿನಿ ಪೂರಿ ಕ್ಷೇತ್ರ ಎಂದು ಕರೆಯುತ್ತಾರೆ. ಇಲ್ಲಿ ಶ್ರೀ ಕೃಷ್ಣನು, ಬಲರಾಮ, ಸುಭದ್ರ ದೇವತೆಗಳನ್ನು ಪ್ರಧಾನವಾಗಿ ಆರಾಧಿಸುತ್ತಾರೆ.

2.ಅನಂತ ವಾಸುದೇವ ದೇವಾಲಯ

2.ಅನಂತ ವಾಸುದೇವ ದೇವಾಲಯ

PC:YOUTUBE

ಈ ದೇವಾಲಯದಲ್ಲಿ ಪ್ರಪಂಚದಲ್ಲಿಯೇ ಎಲ್ಲಿಯೂ ಇಲ್ಲದ ಬಲರಾಮನು 7 ತಲೆಯನ್ನು ಹೊಂದಿರುವ ಸರ್ಪದ ಕೆಳಗೆ ನಿಂತಿರುವ ಶಿಲ್ಪದ ಕೆತ್ತನೆಯು ಭಕ್ತರಿಗೆ ಆಕರ್ಷಿಸುತ್ತದೆ. ಇನ್ನು ಸುಭದ್ರ ದೇವಿಯು ಒಂದು ಕೈಯಲ್ಲಿ ರತ್ನದ ಕುಂಡ ಹಾಗು ಇನ್ನೊಂದು ಕುಂಡದಲ್ಲಿ ತಾವರೆ ಹೂವುನ್ನು ಹಿಡಿದಿರುವ ಭಂಗಿಯಲ್ಲಿ ಇರುವುದನ್ನು ಕಾಣಬಹುದು. ಅದೇ ವಿಧವಾಗಿ ಎಡ ಪಾದದ ಬಳಿ ಮತ್ತೊಂದು ರತ್ನದ ಕುಂಡ ಇರುವುದನ್ನು ನಾವು ಇಲ್ಲಿ ಕಾಣಬಹುದು.

3.ಅನಂತ ವಾಸುದೇವ ದೇವಾಲಯ

3.ಅನಂತ ವಾಸುದೇವ ದೇವಾಲಯ

PC:YOUTUBE

ಈ ದೇವಾಲಯ ಲಿಂಗರಾಜ ದೇವಾಲಯ ನಿರ್ಮಾಣಕ್ಕೆ ಹೋಲುತ್ತದೆ. ಮುಖ್ಯವಾಗಿ ಇಲ್ಲಿನ ಸ್ತ್ರಿ ಶಿಲ್ಪಗಳ ಮೇಲೆ ಇರುವ ಆಭರಣಗಳನ್ನು ನೋಡಿ ಅನೇಕ ಮಂದಿ ಅಂಥಹುದೇ ಆಭರಣಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನು ಮಿನಿ ಪೂರಿ ಕ್ಷೇತ್ರ ಎಂದು ಕರೆದರೂ ಕೂಡ ಅಲ್ಲಿನ ವಿಗ್ರಹ, ಅಲ್ಲಿನ ಅದ್ಭುತವಾದ ವಿಗ್ರಹ ರಮಣೀಯವಾದುದು.

4.ಅನಂತ ವಾಸುದೇವ ದೇವಾಲಯ

4.ಅನಂತ ವಾಸುದೇವ ದೇವಾಲಯ

PC:YOUTUBE

ಈ ದೇವಾಲಯವು ಲಿಂಗರಾಜ ದೇವಾಲಯದ ನಿರ್ಮಾಣಕ್ಕೆ ಹೋಲಿಸಬಹುದು. ಇಲ್ಲಿನ ವಿಗ್ರಹಗಳೆಲ್ಲಾ ಗ್ರಾನೈಟ್‍ನಿಂದ ಕೆತ್ತನೆ ಮಾಡಲಾಗಿದೆ. ಆದರೆ ಪೂರಿಯಲ್ಲಿನ ವಿಗ್ರಹಗಳು ಮರದ ಚಕ್ಕೆಗಳಿಂದ ತಯರಾಗುವ ವಿಷಯ ತಿಳಿದಿರುವ ವಿಷಯವೇ. ಈ ಅನಂತವಾಸುದೇವ ದೇವಾಲಯ ಚಕ್ರಕ್ಷೇತ್ರವಾಗಿದ್ದರೆ, ಪೂರಿಯಲ್ಲಿನ ಜಗನ್ನಾಥನ ದೇವಾಲಯ ಶಂಖಕ್ಷೇತ್ರವಾಗಿರುವುದು ಗಮನಾರ್ಹ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X