Search
  • Follow NativePlanet
Share
» »ದಣಿವಾರಿಸಿಕೊಳ್ಳಲು ಒಂದು ಅತ್ಯುತ್ತಮ ನಿಲುಗಡೆಯ ತಾಣ - ಚಿಕ್ಕಮಗಳೂರು!

ದಣಿವಾರಿಸಿಕೊಳ್ಳಲು ಒಂದು ಅತ್ಯುತ್ತಮ ನಿಲುಗಡೆಯ ತಾಣ - ಚಿಕ್ಕಮಗಳೂರು!

ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿರುವ ಚಿಕ್ಕಮಗಳೂರು ಪ್ರಸಿದ್ದ ಪ್ರವಾಸಿ ತಾಣಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಇದು ರಾಜ್ಯದ ಸದಾ ತೇವಭರಿತವಾಗಿರುವ ಮಲೆನಾಡಿನ ಒಂದು ಪ್ರದೇಶವಾಗಿದೆ.

ಚಿಕ್ಕಮಗಳೂರು ಅಂದರೆ " ಸಣ್ಣ ಮಗಳ ಭೂಮಿ" ಎಂದು ಅರ್ಥೈಸುತ್ತದೆ. ಇಲ್ಲಿನ ಪೌರಾಣಿಕ ನಾಯಕನ ಕಿರಿಯ ಮಗಳಿಗೆ ವರದಕ್ಷಿಣೆಯ ಉಡುಗೊರೆಯಾಗಿ ನೀಡಲಾಗಿದ್ದು ಇದಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ ಮತ್ತು ಈಗ ಚಿಕ್ಕಮಗಳೂರು ಜಿಲ್ಲೆಯ ಭಾಗವಾಗಿರುವ ಹಿರೇಮಗಳೂರು ಎಂಬ ಹಿರಿಯ ಮಗಳಿಗೆ ಕೊಟ್ಟ ಭೂಮಿಯಾಗಿದ್ದು ಅದಕ್ಕೆ ಆ ಹೆಸರನ್ನು ಇಡಲಾಗಿದೆ ಎಂದೂ ಹೇಳಲಾಗುತ್ತದೆ.

ಚಿಕ್ಕಮಗಳೂರು ಪಟ್ಟಣ ಮತ್ತು ಅದರ ಸೌಂದರ್ಯತೆ

ಚಿಕ್ಕಮಗಳೂರು ಪಟ್ಟಣ ಮತ್ತು ಅದರ ಸೌಂದರ್ಯತೆ

ಚಿಕ್ಕಮಗಳೂರನ್ನು ಅತ್ಯಂತ ಪ್ರಶಾಂತವಾದ ಸ್ಥಳವೆಂದು ಪರಿಗಣಿಸಿ ಇದನ್ನು ವಿಶ್ರಾಂತಿ ಪಡೆಯಲು ಅತ್ಯುತ್ತಮವಾದುದೆಂದು ವರ್ಣೀಸಲ್ಪಟ್ಟಿದ್ದರೂ ಸಹ ಇಲ್ಲಿ ತಗ್ಗಿನ ಸಮತಟ್ಟಾದ ಭೂಮಿಗಳಿಂದ ಮಲೆನಾಡಿನ ಗುಡ್ಡಗಾಡು ಪ್ರದೇಶಗಳವರೆಗೆ ಇದರ ಸುತ್ತಮುತ್ತಲಿನ ಪ್ರದೇಶಗಳು ವಿವಿಧ ಭೂದೃಶ್ಯಗಳನ್ನು ಹೊಂದಿದೆ. ಈ ಜಿಲ್ಲೆಯು ಹಲವಾರು ಸಂಖ್ಯೆಯ ಕಾಫಿ ಎಸ್ಟೇಟ್ ಗಳನ್ನು ಹೊಂದಿದೆ ಹಾಗೂ ಈಗ ಇದನ್ನು ಕರ್ನಾಟಕದ ಕಾಫಿ ರಾಜಧಾನಿ ಎಂದು ಕರೆಯಲ್ಪಡುತ್ತದೆ.

ಈ ಪಟ್ಟಣವು ಮಹಾತ್ಮಾಗಾಂಧಿ ಉದ್ಯಾನವನವನ್ನು ಹೊಂದಿದ್ದು, ಇದು ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಜಾನಪದ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ದೃಶ್ಯಗಳು ಪ್ರಯಾಣಿಕರನ್ನು ಮೋಡಿ ಮಾಡುವುದರಿಂದ ಈ ಪಟ್ಟಣಕ್ಕೆ ಪ್ರವಾಸಿಗರು ಸಾಮಾನ್ಯವಾಗಿ ದಸರಾ(ನವರಾತ್ರಿ) ಸಮಯದಲ್ಲಿ ಹೆಚ್ಚಾಗಿ ಭೇಟಿ ಕೊಡುತ್ತಾರೆ.

ಶಾಪಿಂಗ್ ಪ್ರಿಯರು ಉತ್ತಮ ಸಮಯವನ್ನು ಕಳೆಯುವುದಕ್ಕಾಗಿ ಇಲ್ಲಿಯ ಎಂಜಿ ರಸ್ತೆಗೆ ಭೇಟಿಕೊಡಬಹುದು ಮತ್ತು ಸಾಹಸಿಗಳು ಸುತ್ತಮುತ್ತಲಿನ ಸ್ಥಳಗಳನ್ನು ಅನ್ವೇಷಿಸಬಹುದು.

ಕಾಂಕ್ರೀಟ್ ಕಾಡಿನಿಂದ ನೈಜ ನೈಸರ್ಗಿಕ ಕಾಡಿಗೆ ಭೇಟಿ-ಚಿಕ್ಕಮಗಳೂರಿನಲ್ಲಿರುವ ಪ್ರವಾಸಿ ಸ್ಥಳಗಳು

ಕಾಂಕ್ರೀಟ್ ಕಾಡಿನಿಂದ ನೈಜ ನೈಸರ್ಗಿಕ ಕಾಡಿಗೆ ಭೇಟಿ-ಚಿಕ್ಕಮಗಳೂರಿನಲ್ಲಿರುವ ಪ್ರವಾಸಿ ಸ್ಥಳಗಳು

ಚಿಕ್ಕಮಗಳೂರಿನಲ್ಲಿ ಮತ್ತು ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಪ್ರವಾಸಿ ತಾಣಗಳು, ಯಾತ್ರಾಸ್ಥಳಗಳಿಂದ ಕಾಫಿ ತೋಟಗಳವರೆಗೆ ಮತ್ತು ವನ್ಯಜೀವಿ ಪ್ರವಾಸಿ ತಾಣಗಳಿಂದ ಸಾಹಸಿಕ್ರೀಡೆಗಳ ತಾಣಗಳವೆರೆಗೆ, ಗಿರಿಧಾಮಗಳು, ದೇವಾಲಯ ಪಟ್ಟಣಗಳು, ಜಲಪಾತಗಳು ವನ್ಯಜೀವಿ ಅಭಯಾರಣ್ಯಗಳು ಎಲ್ಲವನ್ನೂ ಹೊಂದಿದು, ಚಿಕ್ಕಮಗಳೂರು ಪ್ರವಾಸೋದ್ಯಮವು ಪ್ರವಾಸಿಗರ ಸ್ವರ್ಗ ಎಂದೇ ಹೆಳಬಹುದು.

ನಾಲ್ಕನೇ ಕೃಷ್ಣರಾಜ ಒಡೆಯರ ಅಚ್ಚುಮೆಚ್ಚಿನ ಸ್ಥಳವಾಗಿದ್ದ ಕೆಮ್ಮಣ್ಣು ಗುಂಡಿಯು ಒಂದು ಮನಮೋಹಕ ಗಿರಿಧಾಮವಾಗಿದ್ದು, ಹಲವಾರು ಆಕರ್ಷಣೆಗಳನ್ನು ಹೊಂದಿದೆ. ರೋಸ್ ಗಾರ್ಡನ್, ಮತ್ತು ಸುಂದರವಾದ ಜಲಪಾತಗಳು ,ಇತ್ಯಾದಿಗಳು ಚಿಕ್ಕಮಗಳೂರಿನಿಂದ ಸ್ವಲ್ಪವೇ ದೂರದಲ್ಲಿದೆ. .

ಕುದುರೆಮುಖವು ಚಿಕ್ಕಮಗಳೂರಿನ ಹತ್ತಿರದಲ್ಲಿರುವ ಮತ್ತೊಂದು ಸುಂದರವಾದ ಪರ್ವತ ಶ್ರೇಣಿಯಾಗಿದ್ದು, ದಟ್ಟವಾದ ಹುಲ್ಲುಗಾವಲು ಪ್ರದೇಶಗಳು ಮತ್ತು ದಟ್ಟವಾದ ಅರಣ್ಯಪ್ರದೇಶಗಳನ್ನು ಹೊಂದಿದೆ. ಇಲ್ಲಿಯ ಬೆಟ್ಟವು ಒಂದು ಕೋನದಿಂದ ಗಮನಿಸಿದರೆ ಕುದುರೆಯ ಮುಖವನ್ನು ಹೋಲುವ ಕಾರಣದಿಂದ ಈ ಸ್ಥಳಕ್ಕೆ 'ಕುದುರೆಮುಖ' ಎಂದು ಹೆಸರು ಬಂದಿದೆ.

ಬಾಬಾ ಬುಡನ್ ಗಿರಿ ಬೆಟ್ಟಗಳ ಭಾಗವಾಗಿರುವ ಮುಳ್ಳಯ್ಯನಗರಿ ಕರ್ನಾಟಕದ ಅತಿ ಎತ್ತರದ ಶಿಖರವಾಗಿದೆ. ಈ ಬೆಟ್ಟವು 1930 ಮೀ ಎತ್ತರವಿದೆ ಮತ್ತು ಇದು ಚಾರಣಕ್ಕೆ ಉತ್ತಮ ಸ್ಥಳವಾಗಿದೆ. ಶಿಖರದಿಂದ ಬೆರಗುಗೊಳಿಸುವ ನೋಟವು ಪ್ರವಾಸಕ್ಕೆ ಯೋಗ್ಯವಾಗಿರುತ್ತದೆ. ಈ ಪ್ರದೇಶವು ಎರಡು ಕವಲುಗಳಲ್ಲಿ ಹರಿಯುವ ಕಲತಗಿರಿ ಜಲಪಾತ ಅಥವಾ ಕಾಳಹಸ್ತಿ ಜಲಪಾತದಿಂದ ಹೆಬ್ಬೆ

ಜಲಪಾತದವರೆಗೆ ಸಾಕಷ್ಟು ಜಲಪಾತಗಳನ್ನು ಹೊಂದಿದೆ

ಜಲಪಾತದವರೆಗೆ ಸಾಕಷ್ಟು ಜಲಪಾತಗಳನ್ನು ಹೊಂದಿದೆ

ಮಾಣಿಕ್ಯಧಾರಾ ಜಲಪಾತ, ಶಾಂತಿ ಜಲಪಾತ ಮತ್ತು ಕದಂಬಿ ಜಲಪಾತಗಳಂತಹ ಜಲಪಾತಗಳನ್ನು ಸಹ ಈ ಪ್ರದೇಶದಲ್ಲಿ ಭೇಟಿ ಮಾಡಬಹುದು.

ಚಿಕ್ಕಮಗಳೂರಿನ ವನ್ಯಜೀವಿ ತಾಣಗಳು ಮತ್ತು ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣ

ಚಿಕ್ಕಮಗಳೂರಿನ ವನ್ಯಜೀವಿ ತಾಣಗಳು ಮತ್ತು ಆಧ್ಯಾತ್ಮಿಕ ತಾಣಗಳಿಗೆ ಪ್ರಯಾಣ

ಶೃಂಗೇರಿಯಿಂದ ಹೊರನಾಡು ಮತ್ತು ಕಳಸದವರೆಗೆ, ಚಿಕ್ಕಮಗಳೂರಿನ ಬಳಿ ಆಧ್ಯಾತ್ಮಿಕವಾಗಿ ಒಲವು ಹೊಂದಿರುವವರಿಗಾಗಿ ಭೇಟಿ ನೀಡಲು ಅನೇಕ ಸ್ಥಳಗಳಿವೆ. ಭದ್ರಾ ಅಭಯಾರಣ್ಯವು ಚಿಕ್ಕಮಗಳೂರು ಪಟ್ಟಣದಿಂದ 38 ಕಿಮೀ ದೂರದಲ್ಲಿದೆ ಮತ್ತು ಇದು ಇಲ್ಲಿಯ ಒಂದು ಪ್ರವಾಸಿ ತಾಣವಾಗಿದೆ. ಸಾಹಸಿಗಳು ಪ್ರಕೃತಿಯನ್ನು ಅತ್ಯುತ್ತಮವಾಗಿ ಅನುಭವಿಸಲು ಈ ಸ್ಥಳಕ್ಕೆ ಪ್ರವಾಸವನ್ನು ತೆಗೆದುಕೊಳ್ಳಬಹುದು.

ಒಟ್ಟಾರೆಯಾಗಿ, ಚಿಕ್ಕಮಗಳೂರು ಪಟ್ಟಣ ಮತ್ತು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿರುಚಿಗೆ ತಕ್ಕಂತೆ ಎಲ್ಲವನ್ನೂ ನೀಡುವುದರಿಂದ ಈ ಪ್ರದೇಶವನ್ನು ರಜಾದಿನಗಳನ್ನು ಕಳೆಯಲು ಅತ್ಯುತ್ತಮ ತಾಣವನ್ನಾಗಿ ಪರಿಗಣಿಸುವಂತೆ ಮಾಡಿದೆ.

ಚಿಕ್ಕಮಗಳೂರಿಗೆ ಭೇಟಿ ಕೊಡಲು ಅತ್ಯುತ್ತಮ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂಡ ಎಪ್ರಿಲ್ ತಿಂಗಳುಗಳ ವರೆಗೆ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X