Search
  • Follow NativePlanet
Share
» »ಒಡಿಶಾದ ಜನಪ್ರಿಯ ಉತ್ಸವಗಳ ಬಗ್ಗೆ ಮಾಹಿತಿ

ಒಡಿಶಾದ ಜನಪ್ರಿಯ ಉತ್ಸವಗಳ ಬಗ್ಗೆ ಮಾಹಿತಿ

By Majula Balaraj

ಅರಣ್ಯ ಪ್ರದೇಶಗಳು ಮತ್ತು ಹಸಿರು ಪ್ರದೇಶಗಳು ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವುದರಿಂದ ಒಡಿಶಾವು ಬೇರೆ ಕಡೆಗಳಿಗೆ ಹೋಲಿಸಿದರೆ ಕಡಿಮೆ ಪ್ರಚಲಿತದಲ್ಲಿರುವ ಪ್ರವಾಸಿ ತಾಣವಾಗಿದೆ. ಹೆಚ್ಚಾಗಿ ಕೊನಾರ್ಕ್ ಸೂರ್ಯ ದೇವಸ್ಥಾನ ಅಥವಾ ಪುರಿ ಜಗನ್ನಾಥ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ, ಒಡಿಶಾ ಜಿಜ್ಞಾಸಾ ಪೂರ್ವಕವಾಗಿ ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡಿರುವ ರಾಜ್ಯವಾಗಿದೆ.

ಒಡಿಶಾ ಪಾಕಪದ್ಧತಿ, ಬಾಯಿನೀರೂರಿಸುವ ಭಕ್ಷ್ಯಗಳು ಮುಂತಾದ ಅಡುಗೆ ಪದ್ದತಿಗಳು ನೋಡಿದರೆ ಈ ರಾಜ್ಯವನ್ನು ಪ್ರೀತಿಸದೇ ಇರಲು ಸಾಧ್ಯವಿಲ್ಲ! ಕಲ್ಲಿನಲ್ಲಿಯ (ರಾಕ್) ಕೆತ್ತನೆಗಳು, ದೇವಾಲಯಗಳು, ಸರೋವರಗಳು ಮತ್ತು ಪರೀಕ್ಷಿತ ಬೌದ್ಧ ವಿಶ್ವವಿದ್ಯಾನಿಲಯಗಳಲ್ಲಿ ಇವೆಲ್ಲವನ್ನು ನೋಡಿ ಆನಂದಿಸಿ. ಅಷ್ಟೆ ಅಲ್ಲದೆ, ಆಹಾರ ಮತ್ತು ಆಸಕ್ತಿಯ ಸ್ಥಳಗಳಿಗಿಂತ ಒಡಿಶಾದಲ್ಲಿ ಇನ್ನೂ ಹೆಚ್ಚಿನದು ಇದೆ. ಪ್ರತಿ ವರ್ಷ ಅತ್ಯಂತ ವೈಭವದಿಂದ ಆಚರಿಸಲಾಗುವ ಈ ಉತ್ಸವಗಳ ಬಗ್ಗೆ ಓದಿ ಆನಂದಿಸಿ.

ಜಗನ್ನಾಥ ರಥ ಯಾತ್ರೆ

ಜಗನ್ನಾಥ ರಥ ಯಾತ್ರೆ

ಜಗನ್ನಾಥ ರಥ ಯಾತ್ರೆಯು ಬಹುನಿರೀಕ್ಷಿತ ವಾರ್ಷಿಕ ಉತ್ಸವಗಳಲ್ಲಿ ಒಂದಾಗಿದೆ, ಇದು ಪುರಿಯಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುತ್ತದೆ. ಹೆಸರೇ ಸೂಚಿಸುವಂತೆ, ಇದು ಶ್ರೀಕೃಷ್ಣ , ಅವನ ಸಹೋದರರಾದ ಬಲರಾಮ ಮತ್ತು ದೇವತೆ ಸುಭದ್ರರೊಂದಿಗೆ ಜಗದನ್ನಾಥ ದೇವರಿಗೆ ಅರ್ಪಿತವಾಗಿದೆ.

ಮೂರು ದೇವತೆಗಳ ವಿಗ್ರಹಗಳನ್ನು ಮರದ ರಥಗಳ ಮೇಲೆ ಜಗನ್ನಾಥ ದೇವಸ್ಥಾನದಿಂದ ಪುರಿ ಗುಂಡಿಚಾ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ರಥಗಳು ಉತ್ಸವದ ಮುಖ್ಯ ಆಕರ್ಷಣೆಯಾಗಿದ್ದು, ಅವುಗಳು 14-18 ಚಕ್ರಗಳುಳ್ಳ 26 ಅಡಿ ಎತ್ತರದಾಗಿದ್ದು ಸುಂದರವಾಗಿ ಅಲಂಕರಿಸಲಾಗಿದೆ. PC: Krupasindhu Muduli

ಛೌ ಉತ್ಸವ

ಛೌ ಉತ್ಸವ

ಚೈತ್ರ ಪರ್ವದಲ್ಲಿ ನಡೆಯಲಾಗುವ ಈ ಹಬ್ಬವು ಪ್ರತೀವರ್ಷ ಎಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. 3 ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಹೆಚ್ಚಾಗಿ ಒಡಿಶಾದ ಭ್ಹುಯಾನ್ ಬುಡಕಟ್ಟು ಜನಾಂಗದವರು ಆಚರಿಸುತ್ತಾರೆ.ಉತ್ಸವದ ಪ್ರಮುಖ ಆಕರ್ಷಣೆಯಾಗಿ ಒಡಿಶಾ ಜನರು ಚಾವು ನೃತ್ಯ ಪ್ರದರ್ಶಿಸುತ್ತಾರೆ.

ಛೌ ನೃತ್ಯವು ಅರೆ ಶಾಸ್ತ್ರೀಯ ಶೈಲಿಯ ನೃತ್ಯವಾಗಿದ್ದು, ಸ್ವಲ್ಪಮಟ್ಟಿಗೆ ಸಮರ ಕಲೆ ಮತ್ತು ಜಾನಪದ ಅಂಶಗಳನ್ನು ಒಳಗೊಂಡಿದೆ. ಈ ನೃತ್ಯವನ್ನು ಮುಖವಾಡ ಧರಿಸಿ ಮಾಡಲಾಗುತ್ತದೆ. ಛೌ ಎಂಬ ಪದವು "ಚಾಯಾ" ಎಂಬ ಶಬ್ದದಿಂದ ಬಂದಿದ್ದು ನೆರಳು ಎಂಬುದು ಇದರ ಅರ್ಥವಾಗಿದೆ. ನೃತ್ಯ ಹೊರತುಪಡಿಸಿ,ಈ ಹಬ್ಬವು ಹಾಡುವುದು, ನೃತ್ಯ ಮಾಡುವುದು, ನಾಟಕಗಳನ್ನು ಮಾಡುವುದು ಮತ್ತು ಭೋಜನಕೂಟ ಇತ್ಯಾದಿಗಳನ್ನೊಳಗೊಂಡ ವಿನೋದ ತುಂಬಿದ ಆಚರಣೆಯಾಗಿದೆ.
PC: Skasish

ಕೊನಾರ್ಕ್ ನೃತ್ಯ ಉತ್ಸವ

ಕೊನಾರ್ಕ್ ನೃತ್ಯ ಉತ್ಸವ

1986 ರಲ್ಲಿ ಪ್ರಾರಂಭವಾದ ಕೊನಾರ್ಕ್ ನೃತ್ಯ ಉತ್ಸವವನ್ನು ಎಲ್ಲಾ ರೀತಿಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳ ಕಲಾವಿದರನ್ನು ಒಟ್ಟಿಗೆ ಮತ್ತು ಒಂದೇ ವೇದಿಕೆಯಲ್ಲಿ ತಂದು ಆಚರಿಸುವಂತಹುದಾಗಿದೆ. ತನ್ಮೂಲಕ, ಇಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ಪಡೆಯುವುದು.

ಪ್ರತಿವರ್ಷ ಫೆಬ್ರವರಿ 19 ರಿಂದ 23 ರವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರು ನೃತ್ಯ ಪ್ರದರ್ಶಿಸುತ್ತಾರೆ. ಇಲ್ಲಿ ನಡೆಯುವ ಕೆಲವು ನೃತ್ಯ ಪ್ರಕಾರಗಳಲ್ಲಿ ಮಣಿಪುರಿ, ಭರತನಾಟ್ಯಂ, ಕೂಚಿಪುಡಿ, ಒಡಿಸ್ಸಿ, ಇತ್ಯಾದಿ ಸೇರಿವೆ. ಅಲ್ಲದೆ ಇಲ್ಲಿ ಮೆಚ್ಚುಗೆ ಪಡೆದ ಕಲಾವಿದರಿಂದ ಸಂಗೀತ ಪ್ರದರ್ಶನಗಳನ್ನು ಕೂಡ ಒಳಗೊಂಡಿರುತ್ತದೆ.
PC: Thejas Panarkandy

ದುರ್ಗಾ ಪೂಜೆ

ದುರ್ಗಾ ಪೂಜೆ

ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ದುರ್ಗಾ ಪೂಜೆಯು ಭಾರತದಾದ್ಯಂತ ಆಚರಿಸಲಾಗುವ ಭವ್ಯ ಉತ್ಸವವಾಗಿದೆ. ಈ ಋತುವಿನಲ್ಲಿ ಒಡಿಶಾ ರಾಜ್ಯದ ಎಲ್ಲಾ ಭಾಗಗಳಲ್ಲಿ ಪೆಂಡಾಲ್ ಗಳನ್ನು ಹಾಕಿ ಎಲ್ಲರೂ ಜೊತೆ ಸೇರಿ ಉತ್ಸಾಹಭರಿತ ಆಚರಣೆಯನ್ನು ಮಾಡಲಾಗುತ್ತದೆ, ಅಲ್ಲಿ ದುರ್ಗಾ ದೇವಿಯ ವಿಗ್ರಹಗಳು ಪ್ರದರ್ಶಿಸಲ್ಪಡುತ್ತವೆ, ಕೆಲವೊಮ್ಮೆ ಮಾ ಸರಸ್ವತಿ ಮತ್ತು ಮಾ ಲಕ್ಷ್ಮೀ ಅವರ ಎರಡು ಅವತಾರಗಳು ಕೂಡಾ ಕಾಣಿಸಿಕೊಳ್ಳುತ್ತವೆ.

ಈ ಹಬ್ಬವು 3-4 ದಿನಗಳ ಕಾಲ ನಡೆಯುತ್ತದೆ ಮತ್ತು ಹಿಂದೂ ಭಕ್ತರ ವರ್ಷದ ಅತ್ಯಂತ ಪ್ರಮುಖ ಹಬ್ಬವಾಗಿದೆ.. ಈ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಪೆಂಡಾಲಿನ ಅಲಂಕಾರಗಳು. ಭುವನೇಶ್ವರ ಮತ್ತು ಕಟಕ್ ನಲ್ಲಿ ಈ ಉತ್ಸವವನ್ನು ಅತ್ಯಂತ ಭವ್ಯವಾದ ರೀತಿಯಲ್ಲಿ ಆಚರಿಸಲಾಗುತ್ತದೆ.
PC: Matthias Rosenkranz

ಕಳಿಂಗ ಮಹೋತ್ಸವ

ಕಳಿಂಗ ಮಹೋತ್ಸವ

ಕಳಿಂಗ ಮಹೋತ್ಸವವು ಯುದ್ಧದ ಮೇಲೆ ಶಾಂತಿಯ ವಿಜಯವನ್ನು ಆಚರಿಸುವ ಉತ್ಸವವಾಗಿದೆ. ಭಾರತದ ಸುಂದರ ಸಮರ ಕಲೆಗಳನ್ನು ಪ್ರದರ್ಶಿಸುವ ಮೂಲಕ ಇದನ್ನು ಆಚರಿಸಲಾಗುತ್ತದೆ. ರಾಜ ಅಶೋಕ ಆಳ್ವಿಕೆಯ ಸಮಯದಲ್ಲಿ ರಕ್ತಮಯವಾದ ಯುದ್ದವನ್ನು ಮಾಡಿ ಕಳಿಂಗಕ್ಕೆ ಸಲ್ಲಿಸಿದ ಗೌರವಾರ್ಥಕ್ಕಾಗಿ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ಫೆಬ್ರವರಿಯಲ್ಲಿ ಆಚರಿಸಲಾಗುತ್ತದೆ.

ಉತ್ಸವದಲ್ಲಿ ಭಾಗವಹಿಸಲು ದೇಶದಾದ್ಯಂತದ ಯುದ್ಢ ಕಲಾ ಪ್ರದರ್ಶಕರಿಗೆ ಹುರುಪು ನೀಡುವ ಮೂಲಕ ಭಾರತದ ಸಂಪ್ರದಾಯಗಳನ್ನು ಈ ಉತ್ಸವವು ಉತ್ತೇಜಿಸುತ್ತದೆ. ಇಲ್ಲಿ ಸಾಕ್ಷಿಯಾಗಿರುವ ಕೆಲವು ಸಮರ ಕಲೆಗಳೆಂದರೆ ಒಡಿಶಾದಿಂದ ಚೊವ್ ಮತ್ತು ಪಿಕ, ಮಣಿಪುರದಿಂದ ಥಂಗ್ ತಾ, ಕೇರಳದ ಕಲಾರಿಪಯಟ್ಟು, ಮುಂತಾದುವುಗಳು ಪ್ರಮುಖವಾದುವು.
PC: Elroy Serrao

ಮಕರ ಮೇಳ

ಮಕರ ಮೇಳ

ಮಕರ ಮೇಳ, ಇದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ, ಇದು ದೇಶದಾದ್ಯಂತ ಆಚರಿಸಲಾಗುವ ಹಬ್ಬ. ಆದಾಗ್ಯೂ, ಪ್ರತಿ ಪ್ರದೇಶವೂ ಹಬ್ಬವನ್ನು ಆಚರಿಸಲು ತನ್ನದೇ ಆದ ವಿವಿಧ ರೀತಿಯನ್ನು ಹೊಂದಿದೆ; ಒಡಿಶಾ ಕೂಡ ಒಂದು ನಿರ್ದಿಷ್ಟ ರೀತಿಯನ್ನು ಹೊಂದಿದೆ.

ಮಕರ ಚೌಲಾ ಈ ಉತ್ಸವದ ಒಂದು ಪ್ರಮುಖ ಭಾಗವಾಗಿದೆ, ಇಲ್ಲಿ ಬೇಯಿಸದ, ಹೊಸದಾಗಿ ಕೊಯ್ಲು ಮಾಡಿದ ಅನ್ನದೊಂದಿಗೆ ಬೆಣ್ಣೆ, ತೆಂಗಿನಕಾಯಿ ಬೆಲ್ಲ ಮುಂತಾದುವುಗಳಿಂದ ಮಾಡಿದ ತಿಂಡಿಗಳನ್ನು ಮಾಡಲಾಗುತ್ತದೆ. ಈ ಹಬ್ಬವನ್ನು ದೇಶದಾದ್ಯಂತ ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ.

PC: Subhashish Panigrahi

ಇಂಟರ್ನ್ಯಾಷನಲ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ (ಅಂತರರಾಷ್ಟ್ರೀಯ ಮರಳು ಮತ್ತು ಕಲಾ ಉತ್ಸವ)

ಇಂಟರ್ನ್ಯಾಷನಲ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ (ಅಂತರರಾಷ್ಟ್ರೀಯ ಮರಳು ಮತ್ತು ಕಲಾ ಉತ್ಸವ)

ಕೊನಾರ್ಕದಿಂದ 3 ಕಿ.ಮೀ ದೂರದಲ್ಲಿರುವ ಚಂದ್ರಭಾಗ ಬೀಚ್ ನಲ್ಲಿ ನಡೆಯುವ ಇಂಟರ್ನ್ಯಾಷನಲ್ ಸ್ಯಾಂಡ್ ಆರ್ಟ್ ಉತ್ಸವದಲ್ಲಿ ನೋಡುವ ಮತ್ತು ಭಾಗವಹಿಸುವ ಸಲುವಾಗಿ ದೇಶಾದ್ಯಂತ ಸಾವಿರಾರು ಜನರು ಒಟ್ಟುಗೂಡುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮರಳು ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ ಮತ್ತು ನಿರ್ದಿಷ್ಟ ನಗದು ಬಹುಮಾನಕ್ಕಾಗಿ ಸ್ಪರ್ಧಿಸುತ್ತಾರೆ.

ಹಬ್ಬವು 2015 ರಲ್ಲಿ ಪ್ರಾರಂಭವಾದ ಹೊಸ ಪರಿಚಯವಾಗಿದೆ ಮತ್ತು ಇನ್ನೂ ಹೆಚ್ಚಿನ ಗಮನವನ್ನು ಪಡೆಯಬೇಕಾಗಿದೆ. ಪ್ರತಿ ವರ್ಷ ಡಿಸೆಂಬರ್ 1 ರಿಂದ 5 ರವರೆಗೆ ಉತ್ಸವ ನಡೆಯುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more