Search
  • Follow NativePlanet
Share
» »ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಒಮ್ಮೆ ಪ್ರವಾಸ ಆಯೋಜಿಸಿ!

ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಒಮ್ಮೆ ಪ್ರವಾಸ ಆಯೋಜಿಸಿ!

ವಾರಣಾಸಿಯು ಅದರ ದೇವಾಲಯಗಳು ಮತ್ತು ಘಾಟ್ ಗಳಿಗಾಗಿ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಪವಿತ್ರ ನಗರಗಳಲ್ಲೊಂದೆನಿಸಿದ ಈ ಸ್ಥಳವು ಮನಮೋಹಕ ವಾತಾವರಣವನ್ನು ಹೊಂದಿದ್ದು ಇದರ ಅನುಭವವನ್ನು ಪಡೆದು ಅದರಲ್ಲಿ ಭಾಗಿಯಾಗಲು ಅಸಂಖ್ಯಾತ ಪ್ರಯಾಣಿಕರು ಮತ್ತು ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. ಇಲ್ಲಿ ಸುಮಾರು ನೂರು ಘಾಟ್ ಗಳಿದ್ದು, ವಾರಣಾಸಿಯ ದಶಾಶ್ವಮೇಧ ಘಾಟ್ ಅತ್ಯಂತ ವಿಭಿನ್ನವಾದುದು ಮತ್ತು ಎಲ್ಲಕ್ಕಿಂತ ಮಹತ್ವಪೂರ್ಣವಾದುದು. ದಶಾಶ್ವಮೇಧ ಘಾಟ್ ನ ಬಗ್ಗೆ ಅನ್ವೇಷಣೆ ಮಾಡೋಣ ಬನ್ನಿ!

dashashwamedhghat

ದಶಾಶ್ವಮೇಧ ಘಾಟ್ ನ ಹಿಂದಿರುವ ದಂತಕಥೆಗಳು

ವಾರಣಾಸಿಯ ದಶಾಶ್ವಮೇಧ ಘಾಟ್ ಗೆ ಸಂಬಂಧಿಸಿದ ಎರಡು ಆಸಕ್ತಿದಾಯಕ ಕಥೆಗಳಿವೆ. ಒಂದು ದಂತಕಥೆಯ ನಂಬಿಕೆಯ ಪ್ರಕಾರ, ಬ್ರಹ್ಮಾಂಡವನ್ನು ಸೃಷ್ಟಿಸಿದ ಬ್ರಹ್ಮದೇವನು ಈ ಘಾಟ್ ಅನ್ನು ಶಿವನನ್ನು ಸ್ವಾಗತಿಸಲು ರಚಿಸಿದರೆನ್ನಲಾಗುತ್ತದೆ. ಮತ್ತೊಂದು ಜನಪ್ರಿಯ ನಂಬಿಕೆಯೆಂದರೆ, ಇಲ್ಲಿ ಯಜ್ಞವನ್ನು ನಡೆಸುವಾಗ, ಭಗವಾನ್ ಬ್ರಹ್ಮನು ಹತ್ತು ಕುದುರೆಗಳನ್ನು ಬಲಿಕೊಟ್ಟನು, ಇದರಿಂದ ಘಾಟ್‌ಗೆ ಹೆಸರು ಬಂದಿದೆ ಎನ್ನಲಾಗುತ್ತದೆ.

ದಶಾಶ್ವಮೇಧ ಘಾಟ್ ನ ಮಹತ್ವ

ದಶಾಶ್ವಮೇಧ ಘಾಟ್ ನ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ನಡೆಯುವ ಅಗ್ನಿ ಪೂಜೆ (ಬೆಂಕಿಯ ಪೂಜೆ) ಇದನ್ನು ಪ್ರತೀ ಸಂಜೆ ನಡೆಸಲಾಗುತ್ತದೆ. ಅಗ್ನಿ ಪೂಜೆಯು ದೇವರಿಗೆ ಸಲ್ಲಿಸುವ ಒಂದು ಪೂಜೆಯ ವಿಧಾನವಾಗಿದ್ದು ಇದನ್ನು ಶಿವದೇವರು, ಗಂಗಾನದಿ, ಸೂರ್ಯ (ಸೂರ್ಯದೇವರು) ಅಗ್ನಿ (ಬೆಂಕಿ ದೇವರು) ಮತ್ತು ಬ್ರಹ್ಮಾಂಡಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಪ್ರತೀ ಮಂಗಳವಾರ ಇಲ್ಲಿ ಧಾರ್ಮಿಕ ಆಚರಣೆಯಾದ ಗಂಗಾ ಆರತಿ ನಡೆಯುತ್ತದೆ. ಈ ಆರತಿಯನ್ನು ಕೇಸರಿ ಬಟ್ಟೆ ಧರಿಸಿದ ಅರ್ಚಕರ ಗುಂಪು ಕೈಯಲ್ಲಿ ಪೂಜಾ ಬಟ್ಟಲು ಮತ್ತು ಹಿತ್ತಾಳೆಯ ಆರತಿ ಬೆಳಗಿಸಿ ಪೂಜೆಯನ್ನು ನಡೆಸುತ್ತಾರೆ. ಈ ದೃಶ್ಯ ಮನೋಹರ ಗಂಗಾ ಆರತಿಯ ಮನಮೋಹಕ ನೋಟವನ್ನು ಕಣ್ತುಂಬಿಸಿಕೊಳ್ಳಲು ಅಸಂಖ್ಯಾತ ಭಕ್ತರು ಮತ್ತು ಪ್ರವಾಸಿಗರು ಸೇರುತ್ತಾರೆ. ಅದರಲ್ಲೂ ಪ್ರತೀವರ್ಷ ಕಾರ್ತಿಕ ಪೂರ್ಣಿಮೆಯಂದು ನಡೆಯುವ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ಅಸಂಖ್ಯಾತ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ದಶಾಶ್ವಮೇಧ ಘಾಟಿಗೆ ತಲುಪುವುದು ಹೇಗೆ?

ವಾರಾಣಾಸಿಯ ರೈಲ್ವೇ ನಿಲ್ದಾಣ ಅಥವಾ ಬಸ್ ನಿಲ್ದಾಣಕ್ಕೆ ನೀವು ಒಮ್ಮೆ ತಲುಪಿದಿರಿ ಎಂದರೆ ಅಲ್ಲಿಂದ ನೀವು ಆಟೋ ರಿಕ್ಷಾ ಅಥವಾ ಟ್ಯಾಕ್ಸಿ ಮಾಡಿಕೊಂಡು ಗೊಡೊಲಿಯಾಗೆ ತಲುಪಬಹುದು. ಗೋಡಾಲಿಯಾದಿಂದ ಈ ಘಾಟ್ ಗೆ ಕೇವಲ ಐದು ನಿಮಿಷಗಳು ನಡಿಗೆಯಲ್ಲಿ ತಲುಪಬಹುದಾಗಿದೆ.

dashashwamedhaghat

ವಾರಣಾಸಿಯಲ್ಲಿರು ಇನ್ನಿತರ ಘಾಟ್ ಗಳು

ವಾರಣಾಸಿಯಲ್ಲಿ ಅನೇಕ ಇತರ ಘಾಟ್‌ಗಳಿವೆ, ಅವುಗಳಲ್ಲಿ ಗಮನಾರ್ಹವಾದವುಗಳಲ್ಲಿ ಮಣಿಕರ್ಣಿಕಾ ಘಾಟ್, ಮಾನ್-ಮಂದಿರ ಘಾಟ್, ಲಲಿತಾ ಘಾಟ್, ಸಿಂಧಿಯಾ ಘಾಟ್ ಮತ್ತು ಬಚ್ರಾಜ್ ಘಾಟ್ ಸೇರಿವೆ. ಪ್ರತಿಯೊಂದು ಘಾಟ್ ತನ್ನದೇ ಆದ ಪೌರಾಣಿಕ ಪ್ರಸ್ತುತತೆಯನ್ನು ಹೊಂದಿದೆ ಎಂದು ನಂಬಲಾಗಿದೆ.

ಈ ಪುರಾತನ ನಗರಕ್ಕೆ ಪ್ರಯಾಣಿಸಿ, ಮತ್ತು ಆ ಸ್ಥಳದ ದೈವಿಕತೆಯನ್ನು ನೀವು ನೆನೆಸಿದಂತೆ ಅಲ್ಲಿ ಶಾಂತಿಯುತ ಸಮಯವನ್ನು ಕಳೆಯಿರಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X