Search
  • Follow NativePlanet
Share
» »ಈ ಪುಷ್ಪಕಣಿವೆ ನಿಮಗೇಕೆ ಇಷ್ಟವಾಗಬಹುದು?

ಈ ಪುಷ್ಪಕಣಿವೆ ನಿಮಗೇಕೆ ಇಷ್ಟವಾಗಬಹುದು?

By Vijay

ಈ ಲೇಖನದ ಚಿತ್ರಗಳನ್ನು ನೋಡಿದಾಗ, ಇಲ್ಲಿಗೆ ಯಾಕೊಮ್ಮೆ ಹೋಗಬಾರದು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ. ಇಲ್ಲಿನ ಅಗಾಧ ಪ್ರಕೃತಿ ಸೌಂದರ್ಯವೆ ಹಾಗಿದೆ. ತಂಪಾದ ಹವಾಮಾನ, ತಾಜಾ ಗಾಳಿ, ಪ್ರಶಾಂತ ಪರಿಸರ ಎಲ್ಲವೂ ಸೇರಿ ನಿಮ್ಮ ಒತ್ತಡಗಳನ್ನು ಒಂದೆ ಕ್ಷಣದಲ್ಲಿ ಹೊಡೆದೋಡಿಸುತ್ತವೆ.

ಉತ್ತರಾಖಂಡದ ದಂಗುಬಡಿಸುವ ರೋಮಾಂಚಕ ಚಿತ್ರಗಳು

ಇದು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಪುಷ್ಪಕಣಿವೆ. ಇದನ್ನು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಪಕ್ಕದಲ್ಲಿರುವ ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಸೇರಿ ಒಟ್ಟಾರೆಯಾಗಿ ಈ ಸ್ಥಳವು ವಿಶ್ವ ಪರಂಪರೆಯ ತಾಣವಾಗಿ ಮಾನ್ಯತೆ ಪಡೆದಿದೆ.

ಉತ್ತರ ಭಾರತದವರು ಸೇರಿದಂತೆ ಸಾಕಷ್ಟು ವಿದೇಶಿ ಪ್ರವಾಸಿಗರ ನೆಚ್ಚಿನ ರಜಾ ಸಮಯ ಕಳೆಯುವ ಅದ್ಭುತ ತಾಣವಾಗಿದೆ ಈ ವೈವಿಧ್ಯಮಯ ಹೂವುಗಳ ಕಣಿವೆ. ಇಲ್ಲಿರುವ ಪ್ರಾಕೃತಿಕ ಶ್ರೀಮಂತಿಕೆಯನ್ನು ಲೇಖನದ ಸ್ಲೈಡುಗಳ ಮೂಲಕ ನೋಡಿದಾಗ ಇದರ ಜನಪ್ರೀಯತೆಯ ಹಿಂದಿರುವ ಸತ್ಯ ತಿಳಿದುಬರುತ್ತದೆ.

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಉತ್ತರಾಖಂಡ ರಾಜ್ಯದ ಪಶ್ಚಿಮ ಹಿಮಾಲಯದ ಭಾಗದಲ್ಲಿರುವ ಈ ಉದ್ಯಾನವು ತನ್ನ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಹುಲ್ಲುಗಾವಲಿನ ಮೈದಾನಗಳಲ್ಲಿ ನೂರಾರು ಬಗೆಯ ಹೂವುಗಳ ಬೃಹತ್ ನೈಸರ್ಗಿಕ ತೋಟವನ್ನೆ ಕಾಣಬಹುದು.

ಚಿತ್ರಕೃಪೆ: M Tracy Hunter

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಎಂಥವರೆ ಆಗಲಿ ಇಲ್ಲಿನ ಪರಿಸರದಲ್ಲಿ ಒಂದೆರಡು ಸುತ್ತು ಹೋಡೆದರೆ ಸಾಕು ತಮ್ಮೆಲ್ಲ ಕಷ್ಟ, ಕಾರ್ಪಣ್ಯಗಳನ್ನು ಮರೆತು ಉಲ್ಲಾಸ, ಉತ್ಸಾಹಗಳನ್ನು ಮತ್ತೆ ಮರಳಿ ಪಡೆಯಬಹುದು.

ಚಿತ್ರಕೃಪೆ: __sandip__

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಕೇವಲ ಪುಷ್ಪಕಣಿವೆಯಂತಲ್ಲ, ಇಲ್ಲಿ ಆಕರ್ಷಕ ಪ್ರಾಣಿ ಪಕ್ಷಿಅಗಳನ್ನೂ ಸಹ ಕಾನಬಹುದಾಗಿದೆ. ಜೀವ ವೈವಿಧ್ಯದ ನೆಲೆಯಾಗಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಕಪ್ಪು ಕರಡಿ, ಹಿಮ ಚಿರತೆ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ವನ್ಯ ಜೀವಿಗಳಿಗೆ ನೆಲೆಯಾಗಿದೆ.

ಚಿತ್ರಕೃಪೆ: Manas Jaitly

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಈ ಪುಷ್ಪಕಣಿವೆಯು ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ಇವೆರಡನ್ನು ಒಟ್ಟಾರೆಯಾಗಿ ವಿಶ್ವ ಪಾರಂಪರಿಕ ತಾಣ ಎಂದು ಮಾನ್ಯ ಮಾಡಲಾಗಿದೆ. ಇದರ ಭೂಮೇಲ್ಮೈ ಪ್ರದೇಶವು ಪರ್ವತಗಳನ್ನು ಹೊಂದಿದ್ದರೂ ಇವು ಅಷ್ಟೊಂದು ಕಡಿದಾಗಿಲ್ಲ.

ಚಿತ್ರಕೃಪೆ: __sandip__

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಸುಮಾರು 87.5 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ತನ್ನ ಮೇಲ್ಮೈ ಮೇಲೆ ವಿವಿಧ ಬಗೆಯ ಸಸ್ಯಗಳು, ಅಂದ ಚೆಂದದ, ಬಣ್ಣ ಬಣ್ಣದ ಹೂವುಗಳನ್ನು, ಕೀಟಗಳನ್ನು ಹೊಂದಿರುವ ಶ್ರೀಮಂತ ಜೈವಿಕ ಪ್ರದೇಶವಾಗಿದೆ.

ಚಿತ್ರಕೃಪೆ: __sandip__

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪರಿಸರ ಪ್ರವಾಸೋದ್ಯಮಕ್ಕೆ ಮಾದರಿಯಾಗಿರುವ ಪುಷ್ಪಕಣಿವೆ ಪಶ್ಚಿಮ ಹಿಮಾಲಯದಲ್ಲಿರುವ ಜೀವವಲಯದ ಪ್ರತಿನಿಧಿ ಅಂತಲೇ ಹೇಲಬಹುದು. ಅಲ್ಲದೆ ಇಲ್ಲಿರುವ ಸುಂದರ ಆಲ್ಪೈನ್ ಗಿಡಮರಗಳ ಕಾಡುಗಳು ವಿದೇಶಗಲಲ್ಲಿರುವ ಉದ್ಯಾನಗಳಂತೆ ಕಂಡುಬರುತ್ತವೆ.

ಚಿತ್ರಕೃಪೆ: Prashant Ram

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಇಲ್ಲಿನ ಜೀವ ವೈವಿಧ್ಯಗಳು ಒಂದು ರೀತಿಯಲ್ಲಿ ವಿಶಿಷ್ಟವಾಗಿವೆ ಹಾಗೂ ಅಳಿವಿನಂಚಿನಲ್ಲಿವೆ. ಏಕೆಂದರೆ ಇಲ್ಲಿ ಕಂಡುಬರುವ ಕೆಲವು ಅಪರೂಪದ ಜೀವಿಗಳು ಭಾರತದ ಇತರೆ ಭಾಗ ಮಾತ್ರವಲ್ಲ, ಸ್ವತಃ ಇದರ ಪಕ್ಕದಲ್ಲೆ ಇರುವ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲೂ ಸಹ ಕಂಡುಬರುವುದಿಲ್ಲ.

ಚಿತ್ರಕೃಪೆ: __sandip__

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಇನ್ನೊಂದು ಸಂಗತಿಯೆಂದರೆ ಇಲ್ಲಿ ಔಷಧೀಯ ಗುಣವುಳ್ಳ ಅನೇಕ ವಿಶಿಷ್ಟ ರೀತಿಯ, ಮತ್ತಿನ್ನೆಲ್ಲೂ ಕಂಡುಬರದ ಗಿಡ ಮೂಲಿಕೆಗಳನ್ನು ಕಾನಬಹುದು. ಅಲ್ಲದೆ ಏಳು ತಳಿಗಳ ಪಕ್ಷಿಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.

ಚಿತ್ರಕೃಪೆ: Virag

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಈ ಕಣಿವೆ ಪ್ರದೇಶವನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಉತ್ತರಾಖಂಡದ ಗಡ್ವಾಲ್ ಭಾಗದಲ್ಲಿರುವ ಈ ಕಣಿವೆ ಪ್ರದೇಶವನ್ನು ವರ್ಷದ ಎಲ್ಲಾ ಸಮಯದಲ್ಲೂ ತಲುಪುವುದು ಕಷ್ಟಕರವಾಗಿದೆ. ಜೂನ್ ನಿಂದ ಸೆಪ್ಟಂಬರ್ ಇಲ್ಲಿಗೆ ತೆರಳಲು ಪ್ರಶಸ್ತ ಸಮಯವೆಂದೆ ಹೇಳಬಹುದು.

ಚಿತ್ರಕೃಪೆ: Manas Jaitly

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಅಲ್ಲದೆ ಜಾನುವಾರುಗಳನ್ನು ಇಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ತೆರೆದಿರುವ ಈ ಪ್ರದೇಶವು ವರ್ಷದ ಇತರ ಸಮಯದಲ್ಲಿ ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತದೆ.

ಚಿತ್ರಕೃಪೆ: Mahendra Pal Singh

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಚಾರಣದ ಮೂಲಕವೆ ಈ ಕಣಿವೆಯನ್ನು ತಲುಪಬೇಕಾಗಿದೆ. ಅದಕ್ಕೆಂದೆ ಸುಮಾರು ಹನ್ನೆರಡು ಕಿ.ಮೀ. ಗಳಷ್ಟು ದೂರವನ್ನು ಕಾಲ್ನಡೆಯಿಂದಲೆ ಕ್ರಮಿಸಬೇಕಾಗುತ್ತದೆ. ಈ ಕಣಿವೆಗೆ ಹತ್ತಿರದಲ್ಲಿರುವ ಪಟ್ಟಣವೆಂದರೆ ಜೋಷಿಮಠ.

ಚಿತ್ರಕೃಪೆ: __sandip__

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಜೋಷಿಮಠವು ಹರಿದ್ವಾರ ಮತ್ತು ಡೆಹ್ರಾ ಡೂನ್ ನಗರಗಳೋದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜೋಷಿಮಠದಿಂದ ಬದರಿನಾಥಕ್ಕೆ ತೆರಳುವ ರಸ್ತೆಯಲ್ಲಿ ಗೋವಿಂದ್ ಘಾಟ್ ಎಂಬ ಹಳ್ಳಿಗೆ ಸಾಗಿ ಅಲ್ಲಿಂದ ಮುಂದೆ ಕಾಲುದಾರಿಯನ್ನು ಹಿಡಿದು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಕ್ಕೆ ತೆರಳಬೇಕಾಗುತ್ತದೆ.

ಚಿತ್ರಕೃಪೆ: Guptaele

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಗೋವಿಂದ ಘಾಟ್ ಈ ಚಾರಣದ ಪ್ರಾರಂಭಿಕ ಹಂತವಾಗಿದ್ದು ಇಲ್ಲಿಂದ ಹದಿನಾಲ್ಕು ಕಿ.ಮೀ ಗಳಷ್ಟು ಚಾರಣ ಮಾಡಿದಾಗ ಘಂಘಾರಿಯಾ ಎಂಬ ಪುಟ್ಟ ಗ್ರಾಮ ದೊರೆಯುತ್ತದೆ. ವಿಶೇಷವೆಂದರೆ ಇಲ್ಲಿಂದ ಚಾರಣ ಪಥವು ಎರಡು ಕವಲುಗಳಲ್ಲಿ ಒಡೆದಿದ್ದು ಒಂದು ಪುಷ್ಪಕಣೆವೆಯೆಡೆ ಹೋದರೆ ಇನ್ನೊಂದು ಹೇಮಕುಂಡ್ ಸಾಹಿಬ್ ನತ್ತ ಕರೆದೊಯ್ಯುತ್ತದೆ. ಗೋವಿಂದ್ ಘಾಟ್ ನಿಂದ ಘಂಘಾರಿಯಾಗೆ ಹೋಗುವ ಮಾರ್ಗ.

ಚಿತ್ರಕೃಪೆ: Happy_Vagabond

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಘಂಘಾರಿಯಾದಿಂದ ಮೂರು ಕಿ.ಮೀ ದೂರದಲ್ಲಿ ಪುಷ್ಪ ಕಣಿವೆ ಹಾಗೂ ಐದು ಕಿ.ಮೀ ದೂರದಲ್ಲಿ ಸಿಖ್ಖರ ಪವಿತ್ರ ತಾಣವಾದ ಹೇಮಕುಂಡ ಸಾಹಿಬ್ ಸ್ಥಿತವಿದೆ. ಸಿಖ್ಖರು ಹೇಮಕುಂಡ್ ಸಾಹಿಬ್ ಗೆ ತೆರಳುತ್ತಿರುವುದು.

ಚಿತ್ರಕೃಪೆ: __sandip__

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ:

ಇಲ್ಲಿನ ಹೂವುಗಳು ಆಲ್ಪೈನ್ ತಳಿಗೆ ಸೇರಿದ್ದು ಮುಖ್ಯವಾಗಿ ಆರ್ಖಿಡ್, ಪ್ರೈಮ್ಯೂಲಾ, ಮೇರಿಗೋಲ್ಡ್, ಡೈಸೀಗಳು ಹೆಚ್ಚಾಗಿವೆ. ಇಲ್ಲಿನ ಪ್ರದೇಶವು ಆಲ್ಪೈನ್ ಬಿರ್ಚ್ ಮತ್ತು ರೋಡೋಡೆಂಡ್ರಾನ್ ಮರಗಳನ್ನು ಹೆಚ್ಚಾಗಿ ಹೊಂದಿರುವ ಕಾಡಿನಿಂದ ಆವೃತವಾಗಿದೆ.

ಚಿತ್ರಕೃಪೆ: __sandip__

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X