» »9 ವಿಭಿನ್ನ ವಾಸ್ತುಶಿಲ್ಪಗಳ ಕಟ್ಟಡಗಳು

9 ವಿಭಿನ್ನ ವಾಸ್ತುಶಿಲ್ಪಗಳ ಕಟ್ಟಡಗಳು

Written By: Sowmyabhai

ವಾಸ್ತುಶಿಲ್ಪವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಭಾರತದ ಇತಿಹಾಸದಲ್ಲಿ ಹಲವಾರು ಮಿಶ್ರಣದ ವಾಸ್ತುಶಿಲ್ಪವನ್ನು ನಾವು ಕಾಣಬಹುದು. ಈ ಸಮ್ಮಿಶ್ರಣದಿಂದ ಭಾರತವನ್ನು ಮತ್ತಷ್ಟು ಶ್ರೀಮಂತಗೊಂಡಿದೆ. ನಮ್ಮ ದೇಶದಲ್ಲಿ ಹಲವಾರು ಅರಸರು ಬೇರೆ ಬೇರೆ ಕಾಲಾವಧಿಯಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಸುಂದರವಾದ ದೇವಾಲಯಗಳು, ಕೋಟೆಗಳು, ಅರಮನೆಗಳು, ಉದ್ಯಾನವನಗಳನ್ನು ನಿರ್ಮಿಸಿ ಭಾರತ ಚರಿತ್ರೆಯಲ್ಲಿ ಅಜರಾಮರರಾಗಿದ್ದಾರೆ. ಪ್ರಸುತ್ತ ಲೇಖನದಲ್ಲಿ 9 ವಿಭಿನ್ನವಾದ ವಾಸ್ತು ಶಿಲ್ಪವನ್ನು ತಿಳಿಯೋಣ.

ಇನ್ಫೋಸಿಸ್ ಮಲ್ಟಿಫ್ಲೆಕ್ಸ್

ಇನ್ಫೋಸಿಸ್ ಮಲ್ಟಿಫ್ಲೆಕ್ಸ್

ಈ ಇನ್ಫೋಸಿಸ್ ಮಲ್ಟಿಫ್ಲೆಕ್ಸ್ ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿದೆ. ಸಭಾಂಗಣದಲ್ಲಿ ಸುಮಾರು 1500 ಆಸನಗಳಿದ್ದು ಇದು ಅತ್ಯಂತ ವಿಭಿನ್ನವಾದ ಗುಮ್ಮಟಾಕರದಂತೆ ನಿರ್ಮಿಸಲಾಗಿದೆ. ಇದು ಪ್ರವಾಸಿ ತಾಣವಲ್ಲ. ಇಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲ, ಪ್ರವೇಶಕ್ಕೆ ಅವಕಾಶವಿಲ್ಲ ಬದಲಾಗಿ ಇದೊಂದು ಇನ್ಫೋಸಿಸ್ ಮಲ್ಟಿಫ್ಲೆಕ್ಸ್‍ನಲ್ಲಿ ಕೆಲಸ ಮಾಡುವವರಿಗೆ ಮಾತ್ರ ಪ್ರವೇಶ.
PC:Mahendra M

ಇ ಫ್ಲೆಕ್ಸ್ ಕಟ್ಟಡ

ಇ ಫ್ಲೆಕ್ಸ್ ಕಟ್ಟಡ

ಈ ಕಟ್ಟಡವು ಬೆಂಗಳೂರಿನ ಸಿ,ವಿ ರಾಮನ್ ನಗರದಲ್ಲಿದೆ. ಇದು ಅತ್ಯಂತ ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದ್ದು, 144,000 ಚದರ ಅಡಿಗಳಷ್ಟಿದೆ. ಇಲ್ಲಿ ಸುಮಾರು 1500ಕ್ಕಿಂತ ಹೆಚ್ಚು ಕೆಲಸಗಾರರು ಉದ್ಯೋಗ ಮಾಡುತ್ತಿದ್ದಾರೆ. ಯಾವುದೇ ಪ್ರವೇಶ ಶುಲ್ಕ, ಪ್ರವೇಶವಿಲ್ಲ.
PC:Rajithmohan

ಅರೋವಿಲ್ಲೆ

ಅರೋವಿಲ್ಲೆ

ಅರೋವಿಲ್ಲೆಯು ತಮಿಳುನಾಡಿನ ಬೋಮ್ಮಯಪಾಳ್ಯಂನಲ್ಲಿದೆ. ಅರೋವಿಲ್ಲೆಯ ವಾಸ್ತು ಶಿಲ್ಪವು ಗೊಮ್ಮಟಾಕರವಾಗಿದ್ದು ಈ ಕಟ್ಟಡವನ್ನು ಕಟ್ಟಲು ಸರಾಸರಿ 37 ವರ್ಷಗಳ ಕಾಲ ಸಮಯ ತೆಗೆದುಕೊಂಡಿದೆ. ಪ್ರವಾಸಿಗರಿಗೆ ಪ್ರವೇಶವು ಬೆಳಗ್ಗೆ 9 ರಿಂದ ಸಂಜೆ 4:30 ರವರೆಗೆ ಅನುಮತಿ ಇದೆ.
PC:NATARAJ

ವಿಕ್ಟೋರಿಯಾ ಮೆಮೋರಿಯಲ್

ವಿಕ್ಟೋರಿಯಾ ಮೆಮೋರಿಯಲ್

ಈ ವಿಕ್ಟೋರಿಯಾ ಮೆಮೋರಿಯಲ್ ಬ್ರಿಟೀಷರು ರಾಣಿ ವಿಕ್ಟೋರಿಯಾಗೆ ಮುಡಿಪಾಗಿ ನಿರ್ಮಿಸಿರುವ ಕಟ್ಟಡವಾಗಿದೆ. ಈ ಕಟ್ಟಡವು ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಇದೆ. ಇದರ ವಾಸ್ತುಶಿಲ್ಪವು ಬ್ರಿಟೀಷ್, ಮೊಗಲ್, ಇಸ್ಲಾಮಿಕ್, ಈಜಿಫ್ಟ್, ಡೆಕ್ಕನ್ ಸಮ್ಮಿಶ್ರಣವಾಗಿ ವಿಕ್ಟೋರಿಯಾ ಮೆಮೋರಿಯಲ್ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಬೆಳಗ್ಗೆ 5:30 ರಿಂದ ಸಂಜೆ 6:15 ರವರೆಗೆ ತೆರೆದಿರಲಾಗಿದ್ದು, ಪ್ರವೇಶ ಶುಲ್ಕವಿರುತ್ತದೆ.
PC:Utkarsh saxena

ಲೊಟಸ್ ಟೆಂಪಲ್( ಕಮಲದ ದೇವಾಲಯ

ಲೊಟಸ್ ಟೆಂಪಲ್( ಕಮಲದ ದೇವಾಲಯ

ಈ ಸುಂದರವಾದ ಲೊಟಸ್ ಟೆಂಪಲ್ ದೆಹಲಿಯ ಬಾಹಾಪುರ್‍ದಲ್ಲಿದೆ. ಈ ದೇವಾಲಯವು ಒಂದು ಆಧ್ಯಾತ್ಮಿಕವಾದ ದೇವಾಲಯವಾಗಿದ್ದು, ನವೀನ ರೀತಿಯಲ್ಲಿ ಇದರ ವಾಸ್ತು ಶಿಲ್ಪವಿದೆ. ಮಾರ್ಬಲ್‍ನಿಂದ ನಿರ್ಮಾಣ ಮಾಡಲಾಗಿರುವ ಈ ದೇಗುಲ ನೋಡುಗರಿಗೆ ನವೀನ ರೀತಿಯ ಅನುಭವವನ್ನು ಉಂಟು ಮಾಡುತ್ತದೆ. ಲೊಟಸ್ ಟೆಂಪಲ್‍ಗೆ ಪ್ರವೇಶ ಸಮಯವು ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ. ಯಾವುದೇ ಪ್ರವೇಶ ಶುಲ್ಕವಿಲ್ಲ.
PC:Jools Asher

ಛತ್ರಪತಿ ಶಿವಾಜಿ ಟರ್ಮಿನಸ್

ಛತ್ರಪತಿ ಶಿವಾಜಿ ಟರ್ಮಿನಸ್

ಛತ್ರಪತಿ ಶಿವಾಜಿ ಟರ್ಮಿನಸ್‍ಯು ಮಹಾರಾಷ್ಟ್ರದ ಮಹಾನಗರಿ ಮುಂಬೈನಲ್ಲಿದೆ. ಈ ಟರ್ಮಿನಸ್ ಅತ್ಯಂತ ವಿಭಿನ್ನ ರೀತಿಯ ವಾಸ್ತು ಶಿಲ್ಪವನ್ನು ಹೊಂದಿದ್ದು, ಇದು ಕೇಂದ್ರ ರೈಲ್ವೆಯಾಗಿದೆ. ಇದನ್ನು ವಿಕ್ಟೋರಿಯಾ ಟರ್ಮಿನಸ್ ಎಂದೂ ಸಹ ಕರೆಯುತ್ತಾರೆ. ಇದನ್ನು 1887 ರಲ್ಲಿ ನಿರ್ಮಾಣ ಮಾಡಲಾಗಿದೆ. ವಿಶ್ವದ ಪಾರಂಪರಿಕ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಟರ್ಮಿನಸ್‍ನ್ನು ಸೇರಿಸಲಾಗಿದೆ. ಇದು ಭಾರತ ಸಂಸ್ಕøತಿಯ ವಾಸ್ತುಶಿಲ್ಪದಲ್ಲಿದೆ. ಇದು ಪ್ರತಿನಿತ್ಯ 24 ಗಂಟೆಗಳ ಕಾಲವು ತೆರೆದಿರಲಾಗಿದ್ದು ಯಾವುದೇ ಪ್ರವೇಶ ಶುಲ್ಕವಿಲ್ಲ.
PC:Sebastianjude

ಸಾಂಚಿ ಸ್ತೂಪ

ಸಾಂಚಿ ಸ್ತೂಪ

ಈ ಸಾಂಚಿ ಸ್ತೂಪವು ಮಧ್ಯ ಪ್ರದೇಶದ ಸಾಂಚಿಯಲ್ಲಿದ್ದು, ಭಾರತದ ಅತ್ಯಂತ ಹಳೆಯದಾದ ಕಟ್ಟಡವಾಗಿದೆ. ಸ್ತೂಪವನ್ನು ಚಕ್ರವರ್ತಿ ಅಶೋಕನು ನಿರ್ಮಿಸಿರುವುದಾಗಿದೆ. ಇದೊಂದು ಬುದ್ಧ ಶೈಲಿಯ ವಾಸ್ತು ಶಿಲ್ಪ. ಈ ಸ್ತೂಪವು ಕೂಡ ವಿಶ್ವ ಪಾರಂಪರಿಕದ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಪ್ರವಾಸಿಗರಿಗೆ ಈ ಸ್ತೂಪದ ಪ್ರವೇಶವನ್ನು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರಲಾಗಿದ್ದು, ಪ್ರವೇಶ ಶುಲ್ಕವನ್ನು ಪಾವತಿಸ ಬೇಕಾಗಿರುತ್ತದೆ.
PC:Aditya Maurya

ತಾಜ್‍ಮಹಲ್

ತಾಜ್‍ಮಹಲ್

ತಾಜ್ ಮಹಲ್‍ನ ವಾಸ್ತು ಶಿಲ್ಪ ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ ಏಕೆಂದರೆ ತಾಜ್ ಮಹಲ್ ಭಾರತದ ಸೌಂದರ್ಯದ ಮೆರಗು, ತನ್ನ ವಾಸ್ತು ಶಿಲ್ಪದಿಂದಲೇ ದೇಶ, ವಿದೇಶದ ಜನರಿಗೆ ತನ್ನತ್ತ ಬರಮಾಡಿಕೊಳ್ಳುವ ಆರ್ಕಷಣೆಯನ್ನು ಹೊಂದಿದೆ. ಈ ಸುಂದರ ಮಹಲ್ ಕೂಡ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದಲ್ಲಿದ್ದು, ಮೊಗಲ್ ಚಕ್ರವರ್ತಿ ಷಹಜಾಹನ್ ನಿರ್ಮಿಸಿದ ಅದ್ಭುತ ಮಹಲ್ ಇದಾಗಿದೆ. ಪ್ರವೇಶವನ್ನು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಇದ್ದು, ಪ್ರವೇಶ ಶುಲ್ಕ ಪಾವತಿಸಬೇಕಾಗಿರುತ್ತದೆ.
PC:Diego Delso

ಕುತುಬ್ ಮೀನಾರ್

ಕುತುಬ್ ಮೀನಾರ್

ಕುತಬ್ ಮೀನಾರ್ ದೆಹಲಿಯ ಮೆಹರೌಲಿಯಲ್ಲಿದೆ. ಇದೊಂದು ಐತಿಹಾಸಿಕ ನಿದರ್ಶನವಾಗಿದ್ದು, ಅತ್ಯಂತ ಸುಂದರವಾದ ವಾಸ್ತು ಶಿಲ್ಪವನ್ನು ಹೊಂದಿದೆ. ಕುತುಬ್ ಮೀನಾರ್ ಕೂಡ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇದು ಒಂದು. ಕುತುಬ್ ಮೀನಾರ್ ಪ್ರಪಂಚದ ಅತಿ ಎತ್ತರದ ಇಟ್ಟಿಗೆಯಿಂದ ನಿರ್ಮಿಸಿರುವ ಗೋಪುರವಾಗಿದೆ. ಪ್ರವಾಸಿಗರಿಗೆ ಪ್ರವೇಶವನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ತೆರೆದಿರಲಾಗುತ್ತದೆ ಹಾಗೂ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
PC:Danibaba

Please Wait while comments are loading...