Search
  • Follow NativePlanet
Share
» »ನಿಮಗೆ ತಿಳಿಯದ 7 ರಹಸ್ಯಗಳು!!

ನಿಮಗೆ ತಿಳಿಯದ 7 ರಹಸ್ಯಗಳು!!

ಭಾರತ ದೇಶದಲ್ಲಿ ಅನೇಕ ವಿಷಯಗಳು ಎಷ್ಟೋ ನಿಗೂಢವಾಗಿ ಕಾಣಿಸುತ್ತಿರುತ್ತವೆ. ಅವುಗಳು ಪ್ರಕೃತಿಗೆ ಸಂಬಂಧಿಸಿದ್ದೇ ಇರಬಹುದು. ವಾಸ್ತವಿಕವಾಗಿ ಕಾಣುವ ಆಶ್ಚರ್ಯಕರವಾದ ಘಟನೆಗಳೇ ಆಗಿರಬಹುದು. ಅವುಗಳೆಲ್ಲಾ ನಮಗೆ ಆಶ್ಚರ್ಯಗೊಳ್ಳುವಂತೆ ಮಾಡದೇ ಇರದು. ಅವುಗಳಲ್ಲಿ ದೇವಾಲಯಗಳು ಒಂದು. ಅವುಗಳನ್ನು ಹೇಗೆ ನಿರ್ಮಾಣ ಮಾಡಿದರು ಎಂಬುದು ಕೂಡ ಕುತೂಹಲ ಕೆರಳಿಸುತ್ತದೆ. ಅವುಗಳು ಊಹಿಸಿಕೊಳ್ಳಲು ಕೂಡ ಆಗುವುದಿಲ್ಲ. ಮಾನವನ ಮೆಧಸ್ಸಿಗೆ ಅರ್ಥವಾಗದ ಕೆಲವು ವಿಷಯಗಳು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ ಬನ್ನಿ.

ಅಯಸ್ಕಾಂತ ಪರ್ವತ

ಅಯಸ್ಕಾಂತ ಪರ್ವತ

ಅಯಸ್ಕಾಂತ ಪರ್ವತವು ವಿವರಿಸಲಾಗದ ಅದ್ಭುತವೇ ಆಗಿದೆ. ಸಾಧಾರಣವಾಗಿ ಪರ್ವತದ ಮೇಲೆ ಏರಬೇಕು ಎಂದರೆ ಎಷ್ಟೊ ಕಷ್ಟ ಪಡಬೇಕು. ಒಂದು ವೇಳೆ ಆ ಬೆಟ್ಟದ ಮೇಲೆ ರಸ್ತೆ ಹಾಕಿ ಕಾರು ಹೋಗು ಎಂದರು ಕಾರು ನಿಧಾನವಾಗಿ ಮೇಲೆ ಹೋಗುತ್ತದೆ. ಇದರಿಂದ ಇಂಧನವು ಉಳಿಯುತ್ತದೆ ಅಲ್ಲವೇ? ಹಾಗಾದರೆ ಕಾಶ್ಮೀರದಲ್ಲಿನ ಲಡಾಖ್ ಪ್ರದೇಶದಲ್ಲಿ ಲೇಹದ ಸಮೀಪದಲ್ಲಿರುವ ಈ ಪರ್ವತ ಮಾತ್ರ ಬೇರೆ ಪರ್ವತದ ಹಾಗಲ್ಲ. ತನ್ನ ಸಮೀಪದಲ್ಲಿ ಬರುವವರಿಗೆ ಎಷ್ಟೊ ಅಪ್ಯಾಯಮಾನವಾಗಿ ಸ್ವಾಗತಿಸಿ, ತಾನೇ ಸ್ವಯಂ ಕರೆದುಕೊಂಡು ಹೋಗುತ್ತದೆ.

ಅಂದರೆ ಈ ಬೆಟ್ಟದ ಮೇಲೆ ಕಾರಲ್ಲಿ ಹೋಗುವವರು ಹಾಯಾಗಿ ಇಂಜಿನ್ ಆಫ್ ಮಾಡಿ ಸ್ಟಿರಿಂಗ್ ಹಿಡಿದುಕೊಂಡು ಕುಳಿತುಕೊಂಡರೆ ಸಾಕು. ಅಯಸ್ಕಾಂತ ಆಕರ್ಷಿಸಿದಂತೆ ಕಾರನ್ನು ಇಳೆಯುತ್ತದೆ. ಸಹಸ ಸಿದ್ಧವಾಗಿ ಏರ್ಪಾಟಾದ ಅಯಸ್ಕಾಂತ ತತ್ವವನ್ನು ಹೊಂದಿದೆ.

PC:Nadine Spielmann / Amit Rawat

ಗುರುತ್ವಾಕರ್ಷಣಕ್ಕೇ ಸವಾಲ್

ಗುರುತ್ವಾಕರ್ಷಣಕ್ಕೇ ಸವಾಲ್

ಲಕ್ನೋದಲ್ಲಿನ ಒಂದು ಪ್ಯಾಲೆಸ್ ಗುರುತ್ವಾಕರ್ಷಣೆಗೆ ಸವಾಲಾಗಿ ನಿಂತಿದೆ. ಈ ಪ್ಯಾಲೆಸ್ ಅನ್ನು 18 ನೇ ಶತಮಾನದಲ್ಲಿ ಅಂದಿನ ರಾಜ ನವಾಬ್ ಅಸ್ ಉದ್ ದೌಲಾ ನಿರ್ಮಾಣ ಮಾಡಿದರು. ಅತ್ಯದ್ಭುತವಾದ ವಾಸ್ತುವನ್ನು ಈ ಭವನದಲ್ಲಿ ಪ್ರವೇಶಿಸಿದವರು ಅಲ್ಲಿನ ಸೆಂಟ್ರಲ್ ಹಾಲ್‍ನಿಂದ ಹೊರಗೆ ಬರಲು ಇಷ್ಟ ಪಡುವುದಿಲ್ಲ. ಎಷ್ಟೊ ಮಂದಿ ಆ ಹಾಲ್‍ನಲ್ಲಿ ಪ್ರವೇಶಿಸಿದರೆ, ಪುರಾಣದಲ್ಲಿನ ಪುಷ್ಪಕ ವಿಮಾನದ ಹಾಗೆ ಇರುತ್ತದೆ ಎಂತೆ. 50 ಮೀಟರ್ ಎತ್ತರವಿರುವ ಈ ಹಾಲ್, ಮೂರು ಅಂತಸ್ತನ್ನು ಹೊಂದಿದೆ. ಈ ಹಾಲ್ ಅನ್ನು ಒಂದು ಸ್ತಂಭದ ಆಧಾರವಿಲ್ಲದೇ ನಿರ್ಮಾಣ ಮಾಡಿದ್ದಾರೆ.

PC:Sudeep Bansal

ಶನಿವಾರ್‍ವಾಡ ಕೋಟೆ

ಶನಿವಾರ್‍ವಾಡ ಕೋಟೆ

ಚಾರಿತ್ರಿಕ ಶ್ರೀಮಂತಿಕೆಯನ್ನು ಹೊಂದಿರುವ ಕೋಟೆಗಳಲ್ಲಿ ಶನಿವಾರ್‍ವಾಡ ಕೋಟೆ ಕೂಡ ಒಂದು. ಈ ಕೋಟೆಯನ್ನು 1746 ರಲ್ಲಿ ನಿರ್ಮಾಣ ಮಾಡಿದರು. 1818ರವರೆಗೆ ಈ ಕೋಟೆಯನ್ನು ಪೇಶ್ವೆ ರಾಜರ ಅಧೀನದಲ್ಲಿತ್ತು, ನಂತರ ಬ್ರಿಟೀಷರ ಕೈ ಸೇರಿತು. ನಾಶವಾಗದೇ ಉಳಿದ ಭಾಗಗಳನ್ನು ಪ್ರಸ್ತುತ ಪ್ರವಾಸಿ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಹಾರಾಷ್ಟ್ರದ ಪೂಣೆಯಲ್ಲಿರುವ ಈ ಕೋಟೆಯ ಬಗ್ಗೆ ಅಲ್ಲಿನ ಸ್ಥಳೀಯರು ಅನೇಕ ಕಥೆಗಳನ್ನು ತಿಳಿಸುತ್ತಾರೆ.

ಚಿಕ್ಕ ಬಾಲಕ (ಯುವ ರಾಜ)ನನ್ನು ಅಮಾನುಷವಾಗಿ ಹತ್ಯೆ ಮಾಡಿದರು ಎಂದು ಹೇಳುತ್ತಾರೆ. ಹಾಗಾಗಿಯೇ ಆತನ ಆತ್ಮ ಈ ಕೋಟೆಯಲ್ಲಿ ಇದ್ದು, ವಿವಿಧ ಭಯಾನಕವಾದ ಶಬ್ಧಗಳು ರಾತ್ರಿಯ ಸಮಯದಲ್ಲಿ ಕೇಳಿಸುತ್ತವೆ ಎಂದು ಹೇಳುತ್ತಾರೆ. ರಾತ್ರಿಯ ಸಮಯದಲ್ಲಿ "ಕಾಕ ಮಲಾ ಬಚಾವ್" ಎಂಬ ಕೂಗು ಕೇಳಿ ಬರುತ್ತಿರುತ್ತವೆ ಎಂತೆ.

PC:Rohit Mattoo

ದ್ರಾಸ್ ವ್ಯಾಲಿ

ದ್ರಾಸ್ ವ್ಯಾಲಿ

ಏಶಿಯಾದ ಅತಿ ಶೀತಲ ಪ್ರದೇಶದಲ್ಲಿ ದ್ರಾಸ್ ವ್ಯಾಲಿ 2 ನೇಯದು. ಜಮ್ಮು-ಕಾಶ್ಮೀರದಲ್ಲಿನ ಕಾರ್ಗಿಲ್ ಜಿಲ್ಲೆಯಲ್ಲಿ ಈ ವ್ಯಾಲಿ ಇದೆ. ಸಾಧಾರಣ ಕಾಲದಲ್ಲಿಯೇ ಇಲ್ಲಿನ ಚಳಿಗೆ ತಡೆದುಕೊಳ್ಳುವುದಕ್ಕೆ ಕಷ್ಟ. ಇನ್ನು ಚಳಿಕಾಲದಲ್ಲಿ ಭೇಟಿ ನೀಡಿದರೆ ಮಾತ್ರ ಪ್ರವಾಸಿಗರ ಕಥೆ ಅಷ್ಟೇ. ಏಕೆಂದರೆ ಇಲ್ಲಿನ ಉಷ್ಣಗ್ರತೆ ಮೈನಸ್ 50 ಯಿಂದ ಮೈನಸ್ 60 ಡಿಗ್ರಿಗೆ ಬೀಳುತ್ತದೆ. ಎಷ್ಟೇ ದೇಹವನ್ನು ಬೆಚ್ಚಗೆ ಮಾಡಿಕೊಂಡರು ಕೂಡ ಆ ಚಳಿಯನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ಟೈಗರ್ ಬೆಟ್ಟದ ಮೇಲೆ ಪಾಕಿಸ್ತಾನಿಗಳು ಮಾಡಿದ ಕೆಲವು ದುಸ್ಸಾಹಸ ಸಮಯದಲ್ಲಿ ದ್ರಾಸ್ ವ್ಯಾಲಿ ಪ್ರಮುಖವಾಗಿ ಬೆಳಕಿಗೆ ಬಂದಿತು. ಈ ವ್ಯಾಲಿಯಿಂದ ಟೈಗರ್ ಪರ್ವತವನ್ನು ಸುಲಭವಾಗಿ ನೋಡಬಹುದು.

PC:Narender Kumar Gautam

ಧನುಷ್ಕೋಡಿ

ಧನುಷ್ಕೋಡಿ

ರಾಮಾಯಣ ಕಾಲದಲ್ಲಿ ಶ್ರೀರಾಮನು ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿದ ಸ್ಥಳವಾಗಿ ಧನುಷ್ಕೋಡಿಯನ್ನು ಗುರುತಿಸುತ್ತಾರೆ. ರಾವಣಾಸುರನನ್ನು ಕೊಂದು, ವಿಜಯವನ್ನು ಸಾಧಿಸಿದ ನಂತರ ರಾಮನು ತನ್ನ ಧನಸ್ಸನ್ನು ಇಲ್ಲಿನ ಮರಳಿನಲ್ಲಿ ಮುಚ್ಚಿ ಇಟ್ಟನು ಎಂದು ಒಂದು ಕಥೆಯು ಕೂಡ ಪ್ರಚಾರದಲ್ಲಿದೆ. ಹಿಂದೂ ಮಹಾಸಮುದ್ರ, ಬಂಗಾಳಕೊಲ್ಲಿ ಸೇರುವ ಪ್ರದೇಶದಲ್ಲಿ ರಾಮೇಶ್ವರದ ಸಮೀಪದಲ್ಲಿ ಧನುಷ್ಕೋಡಿ ಇದೆ.

ಸಮುದ್ರ ಮಧ್ಯೆಯಲ್ಲಿ ದ್ವೀಪವಾಗಿ ಕಾಣಿಸುವ ಈ ಪ್ರದೇಶದಿಂದ ಆಂಗ್ಲೇಯರ ಕಾಲದಲ್ಲಿ ಶ್ರೀಲಂಕಕ್ಕೆ ರೈಲು ಮಾರ್ಗ ಹಾಕುವ ಯತ್ನ ನಡೆಯಿತು. ಆದರೆ 1964 ರಲ್ಲಿ ಸಂಭವಿಸಿದ ಬಿರುಗಾಳಿಯಿಂದಾಗಿ ಈ ಪಟ್ಟಣವು ಸಂಪೂರ್ಣವಾಗಿ ನಾಶವಾಯಿತಂತೆ.

PC:Vinodh Venkatesan

ನೀರಿನಲ್ಲಿ ಆನೆ

ನೀರಿನಲ್ಲಿ ಆನೆ

ಇದು ಮತ್ತೊಂದು ಅದ್ಭುತ. ಸಾಧಾರಣವಾಗಿ ಸಮುದ್ರದಲ್ಲಿ ಈಜಾಡುವ ಕೋರಿಕೆ ಅನೇಕ ಮಂದಿಗೆ ಇದ್ದೇ ಇರುತ್ತದೆ. ಅದರಲ್ಲಿಯೂ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಧರಿಸಿಕೊಂಡು, ಸಮುದ್ರದ ಅಡಿಯಲ್ಲಿ ಹೋಗಿ ಬರಬೇಕು ಎಂದು ಅಂದುಕೊಳ್ಳುತ್ತಿರುತ್ತಾರೆ. ಹೀಗೆ ಹೋಗುವವರಿಗೆ ಸ್ಕೂಬ್ ಡೈವರ್ಸ್ ಎಂದು ಕರೆಯುತ್ತಾರೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಸ್ಕೂಬಾ ಡೈವರ್ಸ್ ಆಕರ್ಷಿಸುತ್ತದೆ.

ಡೈವರ್ಸ್ ಹಾಯಾಗಿ ನೀರಿನ ಮಧ್ಯೆದಲ್ಲಿ ಹೋಗಿ ಈಜಾಡುತ್ತಾ ಆನಂದವನ್ನು ಹೊಂದುತ್ತಾರೆ. ಅದೇ ರೀತಿ ಒಂದು ಆನೆಯು ಕೂಡ ನೀರಿನ ಆಳಕ್ಕೆ ತೆರಳಿ ಈಜಾಡುತ್ತಾ ಇರುತ್ತದೆ. ರಾಜ ಎಂಬ ಈ ಆನೆಯು 59 ವರ್ಷ ವಯಸ್ಸಾಗಿದೆ. ಇದಕ್ಕೆ ಸ್ಕೂಬಾ ಡೈವಿಂಗ್ ಎಂದರೆ ಬಲು ಇಷ್ಟ.

PC:andaman nicobar govt

ವಾಲಾಡುತ್ತಿರುವ ಸ್ತಂಭ

ವಾಲಾಡುತ್ತಿರುವ ಸ್ತಂಭ

ವಾಲಾಡುತ್ತಿರುವ ಸ್ತಂಭವೇ ಎಂದು ಆಶ್ಚರ್ಯ ಪಡೆಬೇಡಿ, ಹೌದು ಆಂಧ್ರ ಪ್ರದೇಶದಲ್ಲಿರುವ ಅನಂತಪುರದಲ್ಲಿರುವ ಲೇಪಾಕ್ಷಿ ದೇವಾಲಯದಲ್ಲಿ ವಾಲಾಡುತ್ತಿರುವ ಸ್ತಂಭವಿದೆ. ಈ ಸ್ತಂಭವು ತನ್ನ ಅದ್ಭುತವಾದ ಕೆತ್ತನೆಗಳಿಂದಲೇ ಅಲ್ಲದೇ ನಿಗೂಢತೆಗಳನ್ನು ಕೂಡ ಒಳಗೊಂಡಿದೆ. ಈ ಸ್ತಂಭವು ಭೂಮಿಗೆ ಸ್ವಲ್ಪ ಮೇಲೆ ಇದ್ದು ಎಲ್ಲಾ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿ ತನ್ನತ್ತ ಸೆಳೆದುಕೊಳ್ಳುತ್ತಿದೆ.

ಈ ಸುಂದರವಾದ ಪ್ರವಾಸಿ ತಾಣಗಳಿಗೆ ಕೇವಲ ದೇಶದ ಮೂಲೆ ಮೂಲೆಯಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಈ ವಿಚಿತ್ರವನ್ನು ಕಾಣಲು ಭೇಟಿ ನೀಡುತ್ತಾರೆ. ಈ ಸ್ತಂಭದ ಮಧ್ಯ ಭಾಗದಲ್ಲಿ ಅನೇಕ ಪ್ರವಾಸಿಗರು ಅನ್ವೇಷಿಸುತ್ತಾರೆ. ಪೇಪರ್‍ಅನ್ನು ಸ್ತಂಭದ ಕೆಳಗಿನಿಂದ ತೆಗೆಯುವುದು, ಬಟ್ಟೆಯನ್ನು ತೆಗೆಯುವುದು, ಸ್ತಂಭವನ್ನು ಅಲ್ಲಾಡಿಸುವುದು ಹೀಗೆ ಹಲಾವರು ಚಟುವಟಿಕೆಗಳಿಂದ ಆ ಸ್ತಂಭವನ್ನು ಪರೀಕ್ಷಿಸುತ್ತಿರುತ್ತಾರೆ.

PC:Trayaan

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more