Search
  • Follow NativePlanet
Share
» »ಮಳೆಗಾಲದಲ್ಲಿ ಈ ಪ್ರವಾಸಿ ತಾಣಗಳ ಸೊಬಗು ಮತ್ತಷ್ಟು ಸುಂದರವಾಗಿರುತ್ತವೆಯಂತೆ...

ಮಳೆಗಾಲದಲ್ಲಿ ಈ ಪ್ರವಾಸಿ ತಾಣಗಳ ಸೊಬಗು ಮತ್ತಷ್ಟು ಸುಂದರವಾಗಿರುತ್ತವೆಯಂತೆ...

By Sowmyabhai

ಮಳೆಗಾಲದ ಪ್ರವಾಸ ಎಂದರೆ ಸಾಮಾನ್ಯವಾಗಿ ಸ್ವಲ್ಪ ಜನರಿಗೆ ಇಷ್ಟವಾದರೆ, ಮತ್ತೆ ಕೆಲವು ಜನರಿಗೆ ಇಷ್ಟವಾಗದೇ ಇರಬಹುದು. ಮಳೆಗಾಲದಲ್ಲಿ ಪ್ರವಾಸ ಮಾಡಿದರೆ ಸುತ್ತ-ಮುತ್ತಲಿನ ಪ್ರದೇಶವೆಲ್ಲಾ ಹಚ್ಚಹಸಿರಿನಿಂದ ಶ್ರೀಮಂತವಾಗಿ ಕಂಗೊಳಿಸುತ್ತಿರುತ್ತದೆ. ಸುಂದರವಾದ ವಾತಾವರಣ, ತಂಪಾದ ಗಾಳಿ, ನವ ವಧುವಿನಂತೆ ಶೃಂಗಾರಗೊಂಡ ಗಿರಿಶಿಖರಗಳು, ಚುಮು-ಚುಮು ಚಳಿಗೆ ಮೈ ಒಡ್ಡಿರುವ ವೃಕ್ಷಗಳು, ಗಗನದಿಂದ ಹಾಲಿನ ನೊರೆಯಂತೆ ಧುಮುಕುತ್ತಿರುವ ಜಲಪಾತಗಳು ಆಹಾ.. ಎಂಥಹ ಮನೋಹರವಾದ ಸೌಂದರ್ಯ.....

ಈ ಸುಂದರವಾದ ಪ್ರಾಕೃತಿಕ ಸೌಂದರ್ಯದ ಜೊತೆ-ಜೊತೆಗೆ ವನ್ಯಜೀವಿಗಳನ್ನು, ಸಾಹಸ ಕ್ರೀಡೆಗಳನ್ನು, ಟ್ರೆಕ್ಕಿಂಗ್‍ಗಳಿಗೆ, ಜಲಪಾತಗಳಿಗೆ. ವಿಶ್ರಾಂತಿ ರಜಾದಿನಗಳಿಗೆ ಅತ್ಯುತ್ತಮವಾದ ಪ್ರವಾಸಿ ಸ್ಥಳಗಳನ್ನು ಕೂಡ ಇಲ್ಲಿ ಅನ್ವೇಷಿಸಬಹುದು.

ಕೆಲವರಿಗೆ ಮಾತ್ರ ಮಳೆಗಾಲದಲ್ಲಿಯೇ ಪ್ರವಾಸ ಮಾಡಬೇಕು ಎಂದು ಆಸೆ ಇರುತ್ತದೆ. ಅಂಥವರಿಗೆ ಲೇಖನದಲ್ಲಿ ತಿಳಿಸಲಾಗುವ ತಾಣಗಳು ಹೇಳಿ ಮಾಡಿಸಿದ ಹಾಗೆ ಇರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ಬನ್ನಿ ನಮ್ಮ ಕರ್ನಾಟಕ ರಾಜ್ಯದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿರುವ ಮಳೆಗಾಲದ ಸಮಯದಲ್ಲಿ ಭೇಟಿ ನೀಡಬಹುದುದಾದ ತಾಣಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

1.ಹೊಗೆನಕಲ್ ಜಲಪಾತ

1.ಹೊಗೆನಕಲ್ ಜಲಪಾತ

PC:NAVEEN

ಬೆಂಗಳೂರಿನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾವೇರಿ ನದಿಯಲ್ಲಿ ಜಲಪಾತಗಳು ಇದೆ. ಹೊಗೆನಕಲ್ಲ ಜಲಪಾತಕ್ಕೆ "ನಯಾಗರಾ ಫಾಲ್ಸ್ ಆಫ್ ಇಂಡಿಯಾ" ಎಂದು ಕರೆಯುತ್ತಾರೆ. ಈ ಸುಂದರವಾದ ಜಲಪಾತದಲ್ಲಿರುವ ಜಲವು ಒಂದು ಔಷಧಿ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಇಲ್ಲಿ ದೋಣಿ ಸವಾರಿಗಳಿಗೆ ಈ ತಾಣವು ಹೆಸರುವಾಸಿಯಾಗಿದೆ. ದಕ್ಷಿಣ ಏಶಿಯಾ ಮತ್ತು ಪ್ರಪಂಚದಲ್ಲಿ ಇಲ್ಲಿ ಕಂಡುಬರುವ ಕ್ಯಾರೋಬೋನಿಟೈಟ್ ಶಿಲೆಗಳು ಕೂಡ ಇವೆ. ಅವುಗಳು ಧರ್ಮಪುರಿ ಪಟ್ಟಣದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ.

ಹೊಗೆನಕಲ್ ಜಲಪಾತ

ಹೊಗೆನಕಲ್ ಜಲಪಾತ

PC:NAVEEN

ಇಲ್ಲಿನ ಜಲಪಾತದಲ್ಲಿ ಅತ್ಯಂತ ಪ್ರಸಿದ್ಧವಾದುದು ಎಂದರೆ, ತಾಜಾ ಮೀನಿನಿಂದ ತಯಾರಿಸಿದ ಆಹಾರ ಹಾಗು ಮಸಾಜ್. ಈ ಸುಂದರವಾದ ತಾಣವು ಮಳೆಗಾಲದಲ್ಲಿ ಮತ್ತಷ್ಟು ಸುಂದರವಾಗಿರುತ್ತದೆ. ಅದ್ದರಿಂದಲೇ ದೇಶದ ಮೂಲೆ-ಮೂಲೆಗಳಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಸಮೀಪದ ಆಕರ್ಷಣೀಯ ತಾಣವೆಂದರೆ ಕಾವೇರಿ ವನ್ಯಜೀವಿ ಅಭಯಾರಣ್ಯ. ದಕ್ಷಿಣ ಭಾರತದ ಅಪರೂಪದ ದೃಶ್ಯಗಳನ್ನು ನೀವು ಇಲ್ಲಿ ಕಂಡು ಆನಂದಿಸಬಹುದು.

2.ಆಗುಂಬೆಯ ಮಳೆಯ ಕಾಡು

2.ಆಗುಂಬೆಯ ಮಳೆಯ ಕಾಡು

PC: Mylittlefinger

ಕರ್ನಾಟಕದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಆಗುಂಬೆಯು ಒಂದು, ಇದು ಭಾರತದ ಪ್ರಖ್ಯಾತವಾದ ಉಷ್ಣವಲಯದ ಮಳೆಕಾಡುಗಳಿಗೆ ನೆಲೆಯಾಗಿದೆ. ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮವಾದ ಸ್ಥಳಗಳಲ್ಲಿ ಇದು ಕೂಡ ಒಂದು. ನಿಮಗೆ ಗೊತ್ತ ಪ್ರಸಿದ್ಧ ಕೋಬ್ರಾವನ್ನು ಇಲ್ಲಿ ನೀವು ಕಾಣಬಹುದು. ಅಷ್ಟೇ ಅಲ್ಲ, ಅಪರೂಪದ ವನ್ಯಜೀವಿ ಪ್ರಾಣಿಗಳು ಕೂಡ ಇಲ್ಲಿವೆ. ಇಲ್ಲಿನ ಮನೋಹರವಾದ ವಾತಾವರಣದಲ್ಲಿ ಟ್ರೆಕ್ಕಿಂಗ್ ಕೂಡ ಮಾಡಬಹುದು.

ಆಗುಂಬೆಯ ಮಳೆಯ ಕಾಡು

ಆಗುಂಬೆಯ ಮಳೆಯ ಕಾಡು

ಇಲ್ಲಿನ ಜಲಪಾತಗಳು ಅತ್ಯಂತ ಸುಂದರವಾದ ಜಲಪಾತಗಳಿವೆ. ಅಷ್ಟೇ ಅಲ್ಲ, ಪ್ರಕೃತಿ ಪ್ರಿಯರಿಗೆ ಕೇವಲ 14 ಕಿ.ಮೀ ದೂರದಲ್ಲಿ ಅದ್ಭುತವಾದ ಸೂರ್ಯಾಸ್ತದ ಸ್ಥಳವನ್ನು ಒದಗಿಸುವ ತಾಣಗಳಿವೆ. ಇಲ್ಲಿನ ಸಮೀಪದ ಆಕರ್ಷಣೀಯ ಸ್ಥಳಗಳೆಂದರೆ, ಹೆಬ್ರಿಯಲ್ಲಿ ಸೀತಾ ನದಿ. ರಾಫ್ಟಿಂಗ್, ಶೃಂಗೇರಿ, ಕುಡ್ಲೂ ತೀರ್ಥ ಮತ್ತು ಸೋಮೇಶ್ವರ್ ವನ್ಯಜೀವಿ ಧಾಮ. ಇಲ್ಲಿನ ಕುಂಚಿಕಲ್ ಜಲಪಾತವು ಸುಮಾರು 1493 ಅಡಿ ಎತ್ತರದಲ್ಲಿದೆ. ಭಾರತದ ಅತಿ ಎತ್ತರದ ಜಲಪಾತ ಎಂದು ಹೆಸರುವಾಸಿಯಾಗಿದೆ.

3.ಕುಮಾರ ಪರ್ವತ

3.ಕುಮಾರ ಪರ್ವತ

PC::Palachandra

ಪ್ರಕೃತಿ ಪ್ರೇಮಿಗಳು ಮತ್ತು ಚಾರಣೆಗರು ಈ ಅದ್ಭುತವಾದ ಕುಮಾರ ಪರ್ವತಕ್ಕೆ ಭೇಟಿ ನೀಡಬಹುದು. ಈ ಸುಂದರವಾದ ಮುಂಗಾರಿನ ಸಮಯದಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ತಾಣವೆಂದರೆ ಅದು ಕುಮಾರ ಪರ್ವತ. ಇದೊಂದು "ಗ್ರೀನ್ ಹೆವೆನ್" ಎಂದೇ ಕರೆಯಲಾಗುತ್ತದೆ, ಮಳೆಗಾಲದಲ್ಲಿ ಈ ಸ್ಥಳವು ಸಂಪೂರ್ಣವಾಗಿ ಹಸಿರಿನಿಂದ ಕೂಡಿದ್ದು, ಮನೋಹರವಾದ ದೃಶ್ಯವನ್ನು ಪ್ರವಾಸಿಗರಿಗೆ ನೀಡುವುದರಲ್ಲಿ ಅನುಮಾನವೇ ಇಲ್ಲ.

ಕುಮಾರ ಪರ್ವತ

ಕುಮಾರ ಪರ್ವತ

PC: Vivekvaibhavroy

ಕುಮಾರ ಪರ್ವತಕ್ಕೆ ಟ್ರೆಕ್ಕಿಂಗ್ ಮಾಡಲು 2 ಆಯ್ಕೆಗಳಿವೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೂರ್ಗ್‍ನ ಸೋಮವಾರ ಪೇಟೆ. ಈ ಎರಡೂ ಟ್ರೆಕ್ಕ್ ನಿಮಗೆ ಚಾರಣದ ಥ್ರಿಲ್ ನೀಡುವುದರಲ್ಲಿ ಅನುಮಾನವೇ ಇಲ್ಲ, ಇಲ್ಲಿನ ಸಮೀಪದ ಪ್ರವಾಸಿ ಆಕರ್ಷಣೆ ಎಂದರೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ.

4.ಕಬಿನಿ ಅರಣ್ಯ

4.ಕಬಿನಿ ಅರಣ್ಯ

ಕರ್ನಾಟಕದ ವನ್ಯಜೀವಿ ಧಾಮಗಳಲ್ಲಿ ಕಬಿನಿ ಸಾಂಪ್ರದಾಯಿಕ ಸ್ಥಾನಮಾನವನ್ನು ಹೊಂದಿದೆ. ಆದರೆ ಇದರ ವಿಶಿಷ್ಟತೆಯು ಇತರ ರಾಷ್ಟ್ರೀಯ ಉದ್ಯಾನವನಗಳು ಮತ್ತು ಹುಲಿ ನಿಕ್ಷೇಪಗಳು ಪ್ರವಾಸಿಗರಿಗೆ ಆಕರ್ಷಿಸುತ್ತದೆ. ಮಳೆಗಾಲದಲ್ಲಿ ಭೇಟಿ ನೀಡಲು ಅತ್ತುತ್ತಮವಾದ ತಾಣಗಳಲ್ಲಿ ಕಬಿನಿ ಕೂಡ ಒಂದು. ಇಲ್ಲಿ ಹುಲಿ, ಚಿರತೆ, ಕಾಡು ನಾಯಿಗಳು ಮತ್ತು ಆನೆಗಳನ್ನು ಕಾಣಲು ಮಳೆಗಾಲ ಮನೋಹರವಾದ ಅನುಭವವನ್ನು ಒದಗಿಸುತ್ತದೆ.

ಕಬಿನಿ ಅರಣ್ಯ

ಕಬಿನಿ ಅರಣ್ಯ

ಏಕೆಂದರೆ ಮಳೆಗಾಲದ ಸಮಯದಲ್ಲಿ ಈ ಕಬಿನಿಯಲ್ಲಿ ನವಿಲಿನ ಸಂಯೋಗದ ನೃತ್ಯವನ್ನು ಕಣ್ಣುತುಂಬಿಕೊಳ್ಳಬಹುದು. ಇಲ್ಲಿನ ಆಕರ್ಷಣೀಯ ಸ್ಥಳಗಳೆಂದರೆ, ಲಕ್ಷ್ಮಣ ತೀರ್ಥ ಜಲಪಾತ, ಕೊಡಗು ಕಾಫಿ ಎಸ್ಟೇಟ್, ಬೈಲಕುಪ್ಪೆ ಟಿಬೆಟಿಯನ್ ಬೌದ್ಧ ಮಠ, ರಂಗನತಿಟ್ಟು ಪಕ್ಷಿಧಾಮ, ಮೈಸೂರು. ಈ ಸುಂದರ ತಾಣಕ್ಕೆ ಕೇವಲ ಕರ್ನಾಟಕದಿಂದಲೇ ಇತರ ರಾಜ್ಯಗಳಿಂದಲೂ ಕೂಡ ಕಬಿನಿ ಅರಣ್ಯ ಹಾಗು ಜಲಾಶಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X