Search
  • Follow NativePlanet
Share
» »ಪರಶುರಾಮರ 108 ಶಿವಾಲಯಗಳು ಭಾಗ 1

ಪರಶುರಾಮರ 108 ಶಿವಾಲಯಗಳು ಭಾಗ 1

By Vijay

*ಈ ಲೇಖನವು ಎರಡು ಭಾಗಗಳಲ್ಲಿ ಮೂಡಿ ಬರಲಿದ್ದು 108 ಪರಶುರಾಮರ ಶಿವ ದೇವಾಲಯಗಳ ಪರಿಚಯ ಮಾಡಿಸುತ್ತದೆ.

ಜಮದಗ್ನಿ ಋಷಿ ಹಾಗೂ ಅವರ ಮಡದಿಯಾದ ರೇಣುಕಾಗೆ ಜನ್ಮಿಸಿದ್ದ ಪರಶುರಾಮರು ವಿಷ್ಣು ಭಗವಂತನ ಆರನೇಯ ಅವತಾರ. ಕ್ಷತ್ರೀಯ ರಾಜರನ್ನು ಸಂಹರಿಸಿದ್ದ ಪರಶುರಾಮರು ಆ ಹತ್ಯಾ ದೋಷದಿಂದ ಮುಕ್ತರಾಗಲು ಶಿವನ ಕುರಿತು ತಪಗೈದು 108 ಸ್ಥಳಗಳಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸಿದ್ದರು. ಪ್ರಸ್ತುತ, ಆ 108 ದೇವಾಲಯಗಳು ಇಂದು ಪರಶುರಾಮರ ಶಿವಾಲಯಗಳೆಂದು ಪ್ರಸಿದ್ಧಿ ಪಡೆದಿವೆ.

ಈ ಒಟ್ಟಾರೆ ಪ್ರಸಂಗದ ಕುರಿತು ಒಂದು ರೋಚಕ ಕಥೆಯಿದೆ. ಹಿಂದೆ ಜಮದಗ್ನಿ ಋಷಿಗಳ ಆಶ್ರಮದಲ್ಲಿ ಕೇಳಿದ್ದೆಲ್ಲವನ್ನು ಕರುಣಿಸುವ ಕಾಮಧೇನುವಿತ್ತು. ಇದರ ಮಹಿಮೆಯ ಕುರಿತು ಬಲಿಷ್ಠ ರಾಜನಾದ ಕರ್ತವೀರ್ಯಾರ್ಜುನನನಿಗೆ ತಿಳಿಯಿತು. ಅದನ್ನು ಪಡೆಯಬೇಕೆಂದು ಬಯಸಿ ಜಮದಗ್ನಿ ಮುನಿಗಳ ಬಳಿ ತೆರಳಿ ತನ್ನ ಆಸೆ ತಿಳಿಸಿದನು. ಆದರೆ ಮುನಿಗಳು ಇದಕ್ಕೆ ಖಡಾ ಖಂಡಿತವಾಗಿ ಒಪ್ಪಲಿಲ್ಲ.

ವಿಶೇಷ ಲೇಖನ : ಕೇರಳದ ಆಶ್ಚರ್ಯಕರ ದೇವಾಲಯಗಳು

ಇದರಿಂದ ಕುಪಿತನಾದ ರಾಜ, ಜಮದಗ್ನಿ ಮುನಿಗಳನ್ನೆ ಕೊಂದು ಬಿಟ್ಟನು. ಈ ವಿಷಯ ತಿಳಿದ ಪರಶುರಾಮರು ಅತ್ಯುಗ್ರರಾಗಿ, ತಮ್ಮ ಅಧಿಕಾರದ ಬಲದಿಂದ ಕೇಡು ಮಾಡುತ್ತಿರುವ ಎಲ್ಲ ಕ್ಷತ್ರೀಯ ರಾಜರುಗಳನ್ನು ಸಂಹರಿಸುವ ಪ್ರತಿಜ್ಞೆ ಮಾಡಿ ತಮ್ಮ ಅಸ್ತ್ರವಾದ ಪರಶು (ಕೊಡಲಿ) ವನ್ನು ಹಿಡಿದು ಕರ್ತವೀರ್ಯನೊಂದಿಗೆ ಯುದ್ಧ ಮಾಡಿ ಅವನನ್ನು ಕೊಂದು ಹಾಕಿದರು. ನಂತರ ಅವರ ವೀರಗಾಥೆ ಮುಂದುವರೆಯಿತು.

ಕೊನೆಯದಾಗಿ ತಮ್ಮ ಹತ್ಯಾ ದೋಷವನ್ನು ತೊಳೆದುಕೊಳ್ಳುವ ಉದ್ದೇಶದಿಂದ ತಪಸ್ಸನ್ನಾಚರಿಸಲು ಮುಂದಾದರು. ದೈವಾಜ್ಞೆಯಂತೆ ತಮ್ಮ ಕೊಡಲಿಯನ್ನು ಎಷ್ಟು ದೂರ ಸಾಧ್ಯವೊ ಅಷ್ಟು ದೂರ ಅರಬ್ಬಿ ಸಮುದ್ರದಲ್ಲಿ ಎಸೆದು ಮತ್ತೆ ಭೂಮಿಯನ್ನು ಹಿಂಪಡೆದರು. ಈ ರೀತಿ ಅವರು ಪಡೆದ ಭೂಮಿ ಉತ್ತರದಲ್ಲಿ ಕರ್ನಾಟಕದ ಗೋಕರ್ಣದಿಂದ ಪ್ರಾರಂಭವಾಗಿ ದಕ್ಷಿಣದ ತುದಿ ಕನ್ಯಾಕುಮಾರಿಯ ಸುಚೀಂದ್ರಂವರೆಗೆ ಚಾಚಿದೆ.

ಉತ್ತರದಿಂದ ದಕ್ಷಿಣದವರೆಗೆ ಅರಬ್ಬಿ ಸಮುದ್ರದಗುಂಟ ಚಾಚಿರುವ ಈ ಪ್ರದೇಶದ ಆಯಾ ಸ್ಥಳಗಳಲ್ಲಿ ಪರಶುರಾಮರು ಪ್ರತಿಷ್ಠಾಪಿಸಿ ಪೂಜೆಗೈದ ಪವಿತ್ರ ಶಿವಾಲಯಗಳನ್ನು ಕಾಣಬಹುದು. ಇವುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳು ಕೇರಳ ರಾಜ್ಯದ ವಿವಿಧೆಡೆಗಳಲ್ಲಿರುವುದು ವಿಶೇಷ. ಹಾಗಾದರೆ ಆ 108 ಶಿವಾಲಯಗಳು ಯಾವುವು ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಪರಶುರಾಮರ 108 ಶಿವಾಲಯಗಳು ಭಾಗ 2

ಲೇಖನದಲ್ಲಿ ಬಳಸಲಾದ ಚಿತ್ರಗಳಿಗೆ ಕೃಪೆ : shaivam.org

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ವಡಕ್ಕನಾಥನ್ ದೇವಾಲಯ, ತ್ರಿಶ್ಶೂರ್ : ಕೇರಳ ರಾಜ್ಯದ ತ್ರಿಶ್ಶೂರ್ ನಗರ ಹೃದಯ ಭಾಗದಲ್ಲಿ ನೆಲೆಸಿದೆ ಈ ಶಿವನ ದೇವಾಲಯ. 108 ಪವಿತ್ರ ಶಿವ ದೇವಸ್ಥಾನಗಳ ಪೈಕಿ ಇದು ಮೊದಲನೆಯದಾಗಿದ್ದು ಇದನ್ನು ಮಹಾಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ನಿತ್ಯವೂ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪಟ್ಟನಕ್ಕಾಡ್ ಮಹಾದೇವ ದೇವಾಲಯ : ಕೇರಳದ ಎರ್ನಾಕುಲಂನಿಂದ ಚೆರ್ತಲೈ ಮಾರ್ಗದ ಬಸ್ಸನ್ನು ಹಿಡಿದು ಪಟ್ಟನಕ್ಕಾಡ್ ಪೊನ್ನಂವೆಲ್ಲಿ ಬಳಿ ಇಳಿದು ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇಲ್ಲಿರುವ ಉಪದೇವತೆಗಳು ಗಣಪತಿ ಹಾಗೂ ಸುಬ್ರಹ್ಮಣ್ಯ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕುಂಭಸಂಭವಮಂದಿರಂ : ಕೇರಳದ ಅಲಪುಳಾ ಜಿಲ್ಲೆಯ ಚೆಂಗಣ್ಣೂರು ಕ್ಷೇತ್ರದಲ್ಲಿ ಈ ಶಿವ ದೇವಾಲಯವಿದೆ. ಅಗಸ್ತ್ಯ ಮುನಿಗಳಿಗೆ ಶಿವನು ಇಲ್ಲಿ ದರ್ಶನ ನೀಡಿದ್ದ ಎಂಬ ಪ್ರತೀತಿಯಿದೆ. ಇದನ್ನು ಚೆಂಗಣ್ಣೂರು ಮಹಾದೇವ ಕ್ಷೇತ್ರ ಎಂತಲೂ ಸಹ ಕರೆಯಲಾಗುತ್ತದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕಂಡಿಯೂರು ಮಹಾದೇವ ದೇವಸ್ಥಾನ : ಕೇರಳದ ಅಲಪುಳ (ಅಲ್ಲೆಪ್ಪಿ) ಜಿಲ್ಲೆಯ ಕಂಡಿಯೂರು ಎಂಬಲ್ಲಿ ಈ ಶಿವ ದೇವಾಲಯವಿದೆ.

ಚಿತ್ರಕೃಪೆ: RajeshUnuppally

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ನಲ್ಪತಿನ್ನೇಶ್ವರನ್ ಮಹಾದೇವ ದೇವಸ್ಥಾನ : ಅಲಪುಳ ಜಿಲ್ಲೆಯ ಚೆರ್ತಲ ಎಂಬ ಗ್ರಾಮದಲ್ಲಿ ಪರಶುರಾಮರ ಈ ಶಿವ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಮಹಾಬಲೇಶ್ವರ ದೇವಸ್ಥಾನ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶಿವನ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಚಿದಂಬರೇಶ್ವರ ದೇವಸ್ಥಾನ : ಕೇರಳದ ಎರ್ನಾಕುಲಂ ಜಿಲ್ಲೆಯ ಚೋವರ ಎಂಬಲ್ಲಿ ಈ ಶಿವನ ದೇವಸ್ಥಾನವಿದೆ. ಚೋವರವು ಅಂಗಮಲಿ ಹಾಗೂ ಆಲುವಾಗಳ ಮಧ್ಯದಲ್ಲಿರುವ ಒಂದು ಗ್ರಾಮವಾಗಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರಿಕ್ಕಾರಿಯೂರು ಮಹಾದೇವ ದೇವಸ್ಥಾನ : ಪರಶುರಾಮರ 108 ಶಿವ ದೇವಾಲಯಗಳ ಪೈಕಿ ಇದು ಕೊನೆಯ ದೇವಸ್ಥಾನ ಎಂದು ಪರಿಗಣಿಸಲಾಗಿದೆ. ಇಲ್ಲಿ ಶಂಕರನಾರಾಯಣನ ವಿಗ್ರಹವಿದ್ದು ವಿಷ್ಣುವಿನ ಉಪಸ್ಥಿತಿಯನ್ನೂ ಸಹ ಕಾಣಬಹುದು. ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ತ್ರಿಕ್ಕಾರಿಯೂರಿನಲ್ಲಿ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಎರ್ನಾಕುಲಂ ಮಹಾದೇವ ದೇವಸ್ಥಾನ : ಕೇರಳದ ಎರ್ನಾಕುಲಂ ನಗರ ಪ್ರದೇಶದ ಹೃದಯ ಭಾಗದಲ್ಲಿ ಈ ಮಹಾದೇವನ ಈ ದೇವಸ್ಥಾನ ನೆಲೆಸಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪಾಳೂರು ಪೆರುಂತಿರು ದೇವಸ್ಥಾನ : ಎರ್ನಾಕುಲಂ ಜಿಲ್ಲೆಯ ಪೆರವೋಂ ನಿಂದ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಸ್ಥಾನವಿದೆ. ಈ ದೇವಸ್ಥಾನದ ಸನಿಹದಲ್ಲಿ ಮುವಟ್ಟುಪುಳಾ ನದಿ ಹರಿದಿರುವುದನ್ನು ಕಾಣಬಹುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ನೆಟ್ಟೂರು ಮಹಾದೇವ ದೇವಾಲಯ : ಎರ್ನಾಕುಲಂ ಜಿಲ್ಲೆಯ ವೈಟಿಲ್ಲ ಪಟ್ಟಣದಿಂದ ಅರೂರು ಕಡೆಗೆ ಹೋಗುವ ಮಾರ್ಗದಲ್ಲಿ ಸುಮಾರು ನಾಲ್ಕು ಕಿ.ಮೀ ಗಳ ಅಂತರದಲ್ಲಿರುವ ನೆಟ್ಟೂರು ಎಂಬ ಗ್ರಾಮದಲ್ಲಿ ಈ ಶಿವ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ವಯಕ್ಕಾಮ್ ಮಹಾದೇವ ದೇವಾಲಯ : ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ವಯಕ್ಕಮ್ ಪಟ್ಟಣದಲ್ಲಿ ಈ ಶಿವ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಅಲುವಾ ಮಹಾದೇವ ದೇವಾಲಯ : ಎರ್ನಾಕುಲಂ ಜಿಲ್ಲೆಯ ಅಲುವಾ ಪಟ್ಟಣದಿಂದ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಚಾಕ್ಕಂಕುಲಂಗರಾ ಶಿವ ದೇವಾಲಯ : ಎರ್ನಾಕುಲಂ ಜಿಲ್ಲೆಯ ತ್ರಿಪುನಿತ್ತುರಾದ ಅದಂಪಲ್ಲಿ ಎಂಬಲ್ಲಿ ಶಿವನ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಚೆರನಲ್ಲೂರು ಮಹಾದೇವ ದೇವಸ್ಥಾನ : ಎರ್ನಾಕುಲಂ ಚೆರನಲ್ಲೂರು ರಸ್ತೆ ಮಾರ್ಗದಲ್ಲಿ ಬರುವ ಪಲ್ಲಿಪದಿಕ್ಕಲ್ ಎಂಬಲ್ಲಿ ಇಳಿದು ಈ ಶಿವನ ದೇವಸ್ಥಾನಕ್ಕೆ ಭೇಟಿ ನೀಡಬಹುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಸ್ತಂ - ಉಲಿಯನ್ನೂರು ದೇವಾಲಯ : ಕೇರಳದಲ್ಲಿ ಕಾಣಸಿಗುವ ದೊಡ್ಡ ಶಿವ ಲಿಂಗಗಳ ಪೈಕಿ ಒಂದಾಗಿರುವ ಶಿವಲಿಂಗವನ್ನು ಹೊಂದಿರುವ ಈ ಮಹಾದೇವ ದೇವಾಲಯವು ಉಲಿಯನ್ನೂರು ದ್ವೀಪದ ಅಲುವಾ ಮಾರುಕಟ್ಟೆಯ ಹಿಂಭಾಗದಲ್ಲಿ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕುನ್ನತುರ್ತಲಿ ಶಿವ ದೇವಾಲಯ : ಚೆಂತಮಂಗಲಂ - ಕುನ್ನತುರ್ತಲಿ ಶಿವ ದೇವಾಲಯ ಎಂದು ಕರೆಯಲಾಗುವ ಶಿವನ ಈ ದೇವಸ್ಥಾನವು ಎರ್ನಾಕುಲಂ ಜಿಲ್ಲೆಯ ಪರವೂರಿನ ಉತ್ತರಕ್ಕೆ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಿರುವಲೂರು ಮಹಾದೇವರ್ ದೇಗುಲ : ಪರಶುರಾಮರು ಪ್ರತಿಷ್ಠಾಪಿಸಿದ ಈ ಶಿವ ದೇವಾಲಯವು ಎರ್ನಾಕುಲಂ ಜಿಲ್ಲೆಯ ಅಲುವಾದಿಂದ ವರಪುಳಾದೆಡೆ ಸಾಗುವ ಮಾರ್ಗದಲ್ಲಿ ಸುಮಾರು ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಚಿರಕ್ಕಾಲ್ ಮಹಾದೇವ ದೇವಾಲಯ : ರೌದ್ರ ಭಾವದ ಶಿವನನ್ನು ಹೊಂದಿರುವ ಈ ಮಹಾದೇವನ ದೇವಾಲಯವು ಪುಲಿಯಾನಂ ಗ್ರಾಮದಲ್ಲಿರುವ ಪ್ರೌಢ ಶಾಲೆಯ ಬಳಿ ಸ್ಥಿತವಿದೆ. ಎರ್ನಾಕುಲಂನ ಅಂಗಮಲಿಯಿಂದ ಪುಲಿಯಾನಂ ಗ್ರಾಮಕ್ಕೆ ತೆರಳಲು ಬಸ್ಸುಗಳು ದೊರೆಯುತ್ತವೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕಾರಿಕ್ಕೊಡೆ ಮಹಾದೇವ ದೇವಾಲಯ : ಕಾರಿಕ್ಕೊಡೆ - ಕನ್ಹಿರಮಾತ್ರಂ ಮಹಾದೇವ ದೇವಾಲಯ ಎಂತಲೂ ಕರೆಯಲ್ಪಡುವ ಈ ಶಿವಾಲಯವು ಇಡುಕ್ಕಿ ಜಿಲ್ಲೆಯ ತೊಡುಪುಳಾ ಟ್ರಾನ್ಸ್ಪೊರ್ಟ್ ಬಸ್ಸು ನಿಲ್ದಾಣದಿಂದ ಸುಮಾರು ಒಂದುವರೆ ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರಿಕ್ಕಪಾಲೇಶ್ವರಂ ಶಿವ ದೇವಾಲಯ : ಪರಶುರಾಮರ ಸ್ಥಾಪಿಸಿದ ಈ ಶಿವ ದೇವಾಲಯವು ಕೇರಳದ ಕಣ್ಣೂರಿನಲ್ಲಿದೆ. ಕಣ್ಣೂರು - ಕೂಣ್ಣಪರಂಬು ರಸ್ತೆ ಮಾರ್ಗದಲ್ಲಿ ಮಧ್ಯ ಬರುವ ಪೇರಲಚೆರಿ ಎಂಬಲ್ಲಿ ಇಳಿದು ಈ ದೇವಾಲಯವನ್ನು ತಲುಪಬಹುದಾಗಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕೊಟ್ಟಿಯೂರು ಶಿವ ದೇವಾಲಯ : ಇಲ್ಲಿ ಶಿವನನ್ನು ಎರಡು ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತದೆ. ಒಂದು ಇಕ್ಕರೆಕೊಟ್ಟಿಯೂರು ಶಿವ ದೇವಾಲಯ ಇನ್ನೊಂದು ಅಕ್ಕರೆ ಕೊಟ್ಟಿಯೂರು ಶಿವ ದೇವಾಲಯ. ಅಕ್ಕರೆ ಕೊಟ್ಟಿಯೂರು ಶಿವಾಲಯವು ಮುಖ್ಯ ದೇವಸ್ಥಾನವಾಗಿದ್ದು ಅಚ್ಚರಿ ಎಂಬಂತೆ ಮಳೆಗಾಲದ ನಿರ್ದಿಷ್ಟ ಸಮಯದಲ್ಲಿ ಕೇವಲ ಒಂದು ತಿಂಗಳವರೆಗೆ ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತದೆ. ಉಳಿದ ಸಮಯದಲ್ಲಿ ಸಾಮಾನ್ಯವಾಗಿ ಶಿವನೆಗೆ ಪೂಜೆಯು ಇಕ್ಕರೆ ಕೊಟ್ಟಿಯೂರಿನ ಶಿವನ ಶಾಶ್ವತ ದೇವಾಲಯದಲ್ಲಿ ಸಲ್ಲುತ್ತದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪುತ್ತೂರು ಮಹಾದೇವ ದೇವಾಲಯ : ಕೇರಳದ ಪುತ್ತೂರಿನಲ್ಲಿರುವ ಮಹಾದೇವನ ದೇವಾಲಯವು ಒಂದು ಮಹಾ ಕ್ಷೇತ್ರವಾಗಿದೆ. ಕಣ್ಣೂರು ಜಿಲ್ಲೆಯ ಕರಿವೆಲ್ಲೂರಿನ ಪೂರ್ವಕ್ಕೆ ಈ ದೇವಾಲಯವು ಸ್ಥಿತವಿದ್ದು ಪಯ್ಯನ್ನೂರಿನಿಂದ ಸುಮಾರಿ ಇಪ್ಪತ್ತು ಕಿ.ಮೀ ಗಳಷ್ಟು ದೂರದಲ್ಲಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕರಿವೆಲ್ಲೂರು ಮಹಾದೇವರ್ ದೇವಾಲಯ ; ಕೊಟ್ಟೂರು - ಕರಿವೆಲ್ಲೂರು ಮಹಾದೇವ ದೇವಾಲಯ ಎಂತಲೂ ಕರೆಯಲ್ಪಡುವ ಈ ಶಿವಾಲಯವು ಒನಕುನ್ನು ಬಸ್ಸುಲ್ ನಿಲ್ದಾಣದ ಬಳಿ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ರಾಮೇಶ್ವರಂ ಶಿವ ದೇವಾಲಯ : ಕೇರಳದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಕೊಲ್ಲಂ ನಗರದಿಂದ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಈ ಶಿವ ದೇವಸ್ಥಾನವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಆನಂದವಲ್ಲೇಶ್ವರಂ ದೇವಾಲಯ : ಕೊಲ್ಲಂ ನಗರದ ಮಧ್ಯ ಭಾಗದಲ್ಲಿ ಶಿವನ ಸುಂದರವಾದ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಚಂಗಂಕುಲಂಗರಾ ಮಹಾದೇವ ಕ್ಷೇತ್ರಂ : ಕೊಲ್ಲಂ ಜಿಲ್ಲೆಯ ಕರುಂಗಪ್ಪಿಲ್ಲಿ ಎಂಬಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಒಚೀರಾ ಪ್ರಬ್ರಹ್ಮಂ ಬಳಿ ಶಿವನ ಈ ದೇವಸ್ಥಾನವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕೊಟ್ಟಾರಕ್ಕಾರಾ ಶಿವ ದೇವಾಲಯ : ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕಾರಾ ಪಟ್ಟಣದಲ್ಲಿ ಈ ಶಿವ ದೇವಾಲಯವಿದೆ. ಇಲ್ಲಿರುವ ಗಣಪತಿ ದೇವಾಲಯವೂ ಸಹ ಬಲು ಪ್ರಸಿದ್ಧಿ ಪಡೆದಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ವೆಲ್ಲೂರು - ಪೆರುಂತಟ್ಟ ಶಿವ ದೇವಾಲಯ : ಕೊಟ್ಟಾಯಂ ಜಿಲ್ಲೆಯ ವೆಲ್ಲೂರಿನಲ್ಲಿರುವ ನಿವ್ಸ್ ಪ್ರಿಂಟ್ ಕಾರ್ಖಾನೆಯ ಬಳಿ ಗುಡ್ಡವೊಂದರ ಮೇಲೆ ಈ ದೇವಾಲಯವಿದೆ. ಮೂಲ ದೇವಾಲಯವು ಕೆಲ ಸಮಯದ ಹಿಂದೆ ಅಗ್ನಿ ಅವಘಡವೊಂದರಲ್ಲಿ ನಾಶ ಹೊಂದಿ ನಂತರ ಆ ಸ್ಥಳದಲ್ಲೆ ಸ್ಥಳೀಯರ ಸಹಕಾರದಿಂದ ಪ್ರಸ್ತುತ ದೇವಾಲಯದ ನಿರ್ಮಾಣವಾಗಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪರಿಪ್ಪು ಮಹಾದೇವ ದೇವಾಲಯ : ಕೊಟ್ಟಾಯಂ ಜಿಲ್ಲೆಯ ಕೊಟ್ಟಾಯಂ ಪಟ್ಟಣದಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿರುವ ಐಮಾನಂ ಗ್ರಾಮ ಪಂಚಾಯತಿ ಪ್ರದೇಶದಲ್ಲಿ ಶಿವನ ಈ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಎಟ್ಟುಮಾನೂರು ಮಹಾದೇವ ದೇವಾಲಯ : ಕೊಟ್ಟಾಯಂ ಪಟ್ಟಣದಿಂದ ಹತ್ತು ಕಿ.ಮೀ ದೂರದಲ್ಲಿರುವ ಎಟ್ಟುಮಾನೂರು ಕ್ಷೇತ್ರವು ತನ್ನಲ್ಲಿರುವ ಮಹಾದೇವ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಳಿಯೀಲ್ ಮಹಾದೇವ ದೇವಾಲಯ : ಕೊಟ್ಟಾಯಂ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಕುಮರಕಂ ಬಳಿ ಈ ಶಿವ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕಡುತುರ್ತಿ ಶಿವ ದೇವಾಲಯ : ಕೊಟ್ಟಾಯಂ ಜಿಲ್ಲೆಯಲ್ಲಿರುವ ಕಡುತುರ್ತಿ ಎಂಬ ಪಟ್ಟಣದಲ್ಲಿ ಶಿವನ ಈ ದೇವಾಲಯವಿದೆ. ಪಟ್ಟಣದಲ್ಲಿರುವ ಬೆಟ್ಟವೊಂದರ ತುದಿಯಲ್ಲಿ ಈ ದೇವಾಲಯ ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಿರುನಕ್ಕಾರಾ ಮಹಾದೇವ ಕ್ಷೇತ್ರ : ಕೊಟ್ಟಾಯಂ ನಗರದ ಹೃದಯ ಭಾಗದಲ್ಲಿ ಈ ದೇವಾಲಯವಿದೆ. ಶಿವಲಿಂಗವು ಚಿಕ್ಕದಾಗಿದ್ದು ಸ್ವರ್ಣ ಗೋಲಕಗಳಿಂದ ಅಲಂಕೃತವಾಗಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕಂಚಿಲಚೇರಿ ಮಹಾದೇವ ದೇವಾಲಯ : ಮನುಷ್ಯನ ಎತ್ತರದಷ್ಟೆ ಎತ್ತರವಾಗಿರುವ ಶಿವಲಿಂಗವನ್ನು ಇಲ್ಲಿ ಕಾಣಬಹುದು. ಅಲ್ಲದೆ ಈ ಲಿಂಗವು ನೀರಿನಲ್ಲಿ ಪ್ರತಿಷ್ಠಾಪಿತವಾಗಿದೆ. ಕೋಳಿಕೋಡ್ ಜಿಲ್ಲೆಯ ಕಿಲಾಂಡಿ ರೈಲು ನಿಲ್ದಾಣದಿಂದ ಆರು ಕಿ.ಮೀ ಚಲಿಸಿದರೆ ಚೇಮಂಚೇರಿ ಪೂಕ್ಕಾಡ್ ಮಾರುಕಟ್ಟೆ ದೊರೆಯುತ್ತದೆ. ಅಲ್ಲಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರಿಕ್ಕಪಾಲೇಶ್ವರಂ ಮಹಾದೇವ ದೇವಾಲಯ : ಕೋಳಿಕೋಡ್ ಜಿಲ್ಲೆಯ ತೊನ್ನೇರಿ ಪಂಚಾಯತ್ ಪಟ್ಟಣದಲ್ಲಿ ಈ ದೇವಾಲಯವಿದೆ. ನಡಪುರಂನಿಂದ ಕೇವಲ ಒಂದು ಕಿ.ಮೀ ಗಳಷ್ಟು ದೂರದಲ್ಲಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಳಿ ಮಹಾದೇವ ದೇವಾಲಯ : ಕೋಳಿಕೋಡ್ ಬಸ್ಸು ನಿಲ್ದಾಣದಿಂದ ಸುಮಾರು ಒಂದುವರೆ ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಸ್ಥಾನವಿದೆ. ಪ್ರಖ್ಯಾತ ರೇವತಿ ಪಟ್ಟಾತನಂ ಕಲೆಯು ಇಲ್ಲಿಯೆ ಪ್ರಾರಂಭವಾಯಿತು ಎಂಬ ಪ್ರತೀತಿಯಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಮನ್ನೂರ್ ಮಹಾದೇವರ್ ದೇವಾಲಯ : ಕೋಳಿಕೋಡ್ ಜಿಲ್ಲೆಯ ಕಡಲುಂದಿ ಪಂಚಾಯತ್ ಪಟ್ಟಣದಲ್ಲಿ ಈ ದೇವಾಲಯವಿದೆ. ಇಲ್ಲಿರುವ ಪ್ರಿಯದರ್ಶಿನಿ ವಯನಶಾಲಾ ಎಂಬ ಸ್ಥಳದಲ್ಲಿಳಿದು ಮುಂದೆ ಎರಡು ಕಿ.ಮೀ ಕ್ರಮಿಸಿ ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರಿಪ್ರಾಂಗೋಡು ಶಿವ ದೇವಾಲಯ : ಇದೊಂದು ಪ್ರಸಿದ್ಧವಾದ ದೇವಾಲಯವಾಗಿದೆ. ಪುರಾಣದ ಪ್ರಕಾರ ಹಿಂದೆ ಮಾರ್ಖಂಡೇಯನು ಶಿವನನ್ನು ಪ್ರಾರ್ಥಿಸಿದಾಗ ಶಿವನು ಪ್ರತ್ಯಕ್ಷನಾಗಿ ಯಮನನ್ನು ತನ್ನ ಮೂರನೆಯ ಕಣ್ಣು ತೆರೆದು ನಾಶ ಮಾಡಿದನೆಂದು ಹೇಳಲಾಗಿದೆ. ಆ ಪ್ರಸಂಗವು ಈ ಸ್ಥಳದಲ್ಲಿಯೆ ಜರುಗಿತೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಈ ದೇವಾಲಯವು ಮಲಪ್ಪುರಂ ಜಿಲ್ಲೆಯ ತ್ರಿಪ್ರಾಂಗೋಡು ಎಂಬಲ್ಲಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಶ್ರೀಮಂಧನಕುಣ್ಣು ಶಿವ ದೇವಾಲಯ : ಮುಖ್ಯವಾಗಿ ತಿರುಮಂಧನಕುಣ್ಣು ಎಂತಲೆ ಕರೆಯಲ್ಪಡುವ ಈ ಶಿವಾಲಯವು ಮಲಪ್ಪುರಂ ಜಿಲ್ಲೆಯ ಪೆರಿಂತಲಿನನ್ನ ಎಂಬ ಸ್ಥಳದ ಬಳಿಯಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪುರಮುಂದೆಕ್ಕಾಡ್ ಮಹಾದೇವ ದೇವಾಲಯ : ಒಂದು ಅಡಿ ಎತ್ತರದಷ್ಟು ಎತ್ತರವಿರುವ ಇಲ್ಲಿನ ಶಿವಲಿಂಗವು ಸ್ವಯಂಭು ಎಂದು ಹೇಳಲಾಗಿದೆ. ಮಲಪ್ಪುರಂ ಜಿಲ್ಲೆಯ ಎಡಪ್ಪಲಂ ಬಸ್ಸು ನಿಲ್ದಾಣದಿಂದ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಈ ಶಿವ ದೇವಾಲಯವು ಸ್ಥಿತವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪೇರುಪರಂಬು ಶಿವ ದೇವಾಲಯ : ಸಣ್ಣ ತೊರೆಗಳು, ಕಾಡುಗಳಿಂದ ಸುತ್ತುವರೆದ ವಿಶಾಲವಾದ ಮೈದಾನವೊಂದರಲ್ಲಿ ಶಿವನ ಈ ದೊಡ್ಡದಾದ ದೇವಾಲಯವಿರುವುದನ್ನು ನೋಡಬಹುದು. ಮಲಪ್ಪುರಂ ಜಿಲ್ಲೆಯ ಎಡಪ್ಪಲ್ - ಪೊನ್ನಂ ರಸ್ತೆಯ ಮಾರ್ಗದಲ್ಲಿ ಸುಮಾರು ಮೂರು ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಮಣಿಯೂರು ಶಿವ ದೇವಾಲಯ : ಈ ದೇವಾಲಯದಲ್ಲಿರುವ ಶಿವನು ರುದ್ರಾಕ್ಷಶಿಲೆಯಲ್ಲಿದ್ದು ಭಕ್ತರನ್ನು ಹರಸುತ್ತಾನೆ. ತಿರೂರು ರೈಲು ನಿಲ್ದಾಣದಲ್ಲಿಳಿದು ಮಲಪ್ಪುರಂ - ಮಂಜಿರಿ ಮಾರ್ಗದಲ್ಲಿ ಸಾಗುತ್ತ ಆನಕ್ಕಾಯಂ ಎಂಬಲ್ಲಿ ಇಳಿಯಬೇಕು. ನಂತರ ಅಲ್ಲಿಂದ ಪೆರಿಂತಲಮನ್ನಕ್ಕೆ ಹೋಗುವ ಮಾರ್ಗದ ಬಸ್ಸನ್ನು ಹಿಡಿದು ಮಂಕಡ ಎಂಬಲ್ಲಿ ಇಳಿಯಬೇಕು. ಇಲ್ಲಿಂದ ಒಂದು ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಿರುನಾವಯಾ ಮಹಾದೇವ ದೇವಾಲಯ : ಭರತಪುಳಾ ನದಿಯ ದಕ್ಷಿಣ ದಂಡೆಯ ಮೇಲೆ ಈ ದೇವಾಲಯ ಸ್ಥಿತವಿದೆ. ತವನೂರು ಮೂಲಕವಾಗಿ ಈ ದೇವಾಲಯವನ್ನು ತಲುಪಬಹುದು. ಕುಟ್ಟಿಪುರಂ ನಿಂದ ತವಣ್ಣೂರು - ಪೊನ್ನನಿ ಬಸ್ಸನ್ನು ಹಿಡಿದು ಎಂಟು ಕಿ.ಮೀ ಕ್ರಮಿಸಿ ಭರತಪುಳ ನದಿಯ ದಕ್ಷಿಣ ದಂಡೆಯ ಮೇಲೆ ನೆಲೆಸಿರುವ ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರಿಕ್ಕಂಡಿಯೂರು ಮಹಾದೇವ ದೇವಾಲಯ : ಮಲಪ್ಪುರಂ ಜಿಲ್ಲೆಯ ತಿರೂರು ರೈಲು ನಿಲ್ದಾಣದಿಂದ ಸುಮಾರು ಎರಡು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಾಲಯವಿರುವುದನ್ನು ಕಾಣಬಹುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಮತೂರು ಶಿವ ದೇವಾಲಯ : ತ್ರಿಶ್ಶೂರ್ ಜಿಲ್ಲೆಯ ಕುನ್ನಂಕುಲಂನ - ವಡಕಂಚೇರಿ ಮಾರ್ಗದ ಪನ್ನಿತಾದಂ ಬಳಿಯಿದೆ. ರುದ್ರಾಕ್ಷಶಿಲೆಯಲ್ಲಿರುವ ಶಿವನು ಭಕ್ತರನ್ನು ಹರಸುತ್ತಾನೆ. ದಕ್ಷಿಣಮೂರ್ತಿ, ಶಾಸ್ತ, ಗಣಪತಿ ಹಾಗೂ ನಾಗಯಕ್ಷಿಗಳ ವಿಗ್ರಹಗಳಿದ್ದು ದಕ್ಷಿಣದಿಂದ ದರ್ಶನವಿದೆ. ಇದೊಂದು ಅಪರೂಪದ ದರ್ಶನ ಎಂದು ಹೇಳಲಾಗುತ್ತದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಶ್ರೀತಾನು ಮಲಯನ್ ದೇವಾಲಯ : ಶಿವನ ಈ ದೇವಾಲಯವು ತಮಿಳುನಾಡಿನಲ್ಲಿದೆ. ತಮಿಳುನಾಡಿನ ಕನ್ಯಾಕುಮಾರಿಯ ವಾಯವ್ಯಕ್ಕೆ ಸುಮಾರು 12 ಕಿ.ಮೀ ಗಳಷ್ಟು ದೂರದಲ್ಲಿರುವ ಸುಚೀಂದ್ರನಲ್ಲಿ ಈ ದೇವಾಲಯ ಸ್ಥಿತವಿದೆ. ಇದನ್ನು ಸುಚೀಂದ್ರಂ ದೇವಾಲಯ ಎಂತಲೂ ಕರೆಯಲಾಗುತ್ತದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಕೈಪಾಯಿಲ ಶಿವ ದೇವಾಲಯ : ಕೇರಳದ ಪಾಲಕ್ಕಾಡ್ ಜಿಲ್ಲೆಯ ಪೆರೂರು ಎಂಬಲ್ಲಿ ಈ ದೇವಾಲಯವಿದೆ. ಸ್ವಯಂಭು ಶಿವಲಿಂಗದೊಂದಿಗೆ ಗಣಪತಿ ಹಾಗೂ ಭಗವತಿಯರೂ ಸಹ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಪಣೈಯೂರು - ಪಾಲೂರು ಶಿವ ದೇವಾಲಯ : ಪಾಲಕ್ಕಾಡ್ ಜಿಲ್ಲೆಯ ತಟಮಂಗಲಂನಿಂದ ಸುಮಾರು ಎರಡು ಕಿ.ಮೀ ಗಳಷ್ಟು ದೂರದಲ್ಲಿ ಶಿವನ ಈ ದೇವಾಲಯ ಸ್ಥಿತವಿದೆ. ದೇವಾಲಯದ ಬಳಿ ಸೋಕನಾಸಿನಿ (ಶೋಕನಾಶಿನಿ) ನದಿಯೂ ಸಹ ಹರಿದಿದೆ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತಿರುಮಿಟ್ಟಕ್ಕೊಡು ಶಿವ ದೇವಾಲಯ : ಪಾಲಕ್ಕಾಡ್ ಜಿಲ್ಲೆಯ ತಿರುಮಿಟ್ಟಕ್ಕೊಡು ಎಂಬಲ್ಲಿ ಈ ದೇವಸ್ಥಾನವಿದೆ. ದಕ್ಷಿಣಮೂರ್ತಿ ಹಾಗೂ ಗಣಪತಿ ಇಲ್ಲಿರುವ ಉಪದೇವತೆಗಳು. ಭರತಪುಳ ನದಿ ದಂಡೆಯ ಮೇಲೆ ನೆಲೆಸಿರುವ ಈ ದೇವಸ್ಥಾನವನ್ನು ಕುನ್ನಂಕುಲಂ-ಪಟ್ಟಾಂಬಿ ರಸ್ತೆ ಮಾರ್ಗದಲ್ಲಿ ಬರುವ ಕೂಟ್ಟುಪಾತ ಎಂಬಲ್ಲಿ ಇಳಿದು ತಲುಪಬೇಕು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಅಲತೂರು - ಪೊಕ್ಕುಣಿ ಮಹಾದೇವ ದೇವಾಲಯ : ಒಂದುವರೆ ಎಕರೆಯಷ್ಟು ವಿಶಾಲವಾದ ಕಲ್ಯಾಣಿಯನ್ನು ಹೊಂದಿರುವ ಈ ಶಿವ ದೇವಾಲಯದಲ್ಲಿ ಸ್ವಯಂಭು ಶಿವಲಿಂಗವಿದೆ. ಇಲ್ಲಿ ಶಿವನನ್ನು ಮೃತ್ಯುಂಜಯನನ್ನಾಗಿ ಪೂಜಿಸಲಾಗುತ್ತದೆ. ಪಾಲಕ್ಕಾಡ್ ಜಿಲ್ಲೆಯ ಅಲತೂರು ಬಳಿಯಿರುವ ವಡವನೂರಿನಲ್ಲಿ ಸ್ಥಿತವಿದೆ ಈ ದೇವಾಲಯ.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರಿಪ್ಪಲೂರು ಮಹಾದೇವ ದೇವಾಲಯ : ಗಾಯತ್ರಿ ನದಿ ದಂಡೆಯ ಮೇಲೆ ನೆಲೆಸಿರುವ ಈ ಶಿವ ದೇವಾಲಯದಲ್ಲಿ ಶಿವಲಿಂಗದ ಹೊರತಾಗಿ ನರಸಿಂಹ ಹಾಗೂ ಕೃಷ್ಣನ ವಿಗ್ರಹಗಳೂ ಸಹ ಪ್ರತಿಷ್ಠಾಪಿಸಲ್ಪಟ್ಟಿವೆ. ಪಾಲಕ್ಕಾಡ್ - ತ್ರಿಶ್ಶೂರ್ ರಸ್ತೆ ಮಾರ್ಗದಲ್ಲಿ ಬರುವ ತ್ರಿಪ್ಪಲೂರಿನಲ್ಲಿಳಿದು ಈ ದೇವಾಲಯವನ್ನು ತಲುಪಬಹುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ತ್ರೀತಳ ಮಹಾದೇವ ದೇವಾಲಯ : ದೊಡ್ಡ ಗಾತ್ರದ ಶಿವಲಿಂಗ ಹೊಂದಿರುವ ಈ ದೇವಾಲಯವು ಭರತಪುಳ ನದಿಯ ಬಳಿ ಸ್ಥಿತವಿದೆ. ಈ ದೇವಾಲಯದಲ್ಲಿರುವ ಇತರೆ ಉಪದೇವತೆಗಳೆಂದರೆ ಅಯ್ಯಪ್ಪ, ಗಣಪತಿ, ಕೃಷ್ಣ, ವಿಷ್ಣು ಹಾಗೂ ಭಗವತಿ ದೇವಿ. ತ್ರಿಶ್ಶೂರಿನಿಂದ ಪಟ್ಟಾಂಬಿಗೆ ಹೋಗುವ ಮಾರ್ಗದಲ್ಲಿ ತ್ರೀತಳ ದೊರೆಯುವುದು.

ಪರಶುರಾಮರ 108 ಶಿವ ದೇವಾಲಯಗಳು:

ಪರಶುರಾಮರ 108 ಶಿವ ದೇವಾಲಯಗಳು:

ಮಂಗಲಂ ಅಂಚುಮೂರ್ತಿ ಮಹಾದೇವ ದೇವಾಲಯ : ಸರ್ವರಿಗೂ ಸನ್ಮಂಗಳವನ್ನುಂಟು ಮಾಡುವ ಈ ಶಿವ ದೇವಾಲಯವು ತ್ರಿಶ್ಶೂರು ಹಾಗೂ ಪಾಲಕ್ಕಾಡ್ ಪಟ್ಟಣಗಳ ಮಧ್ಯದಲ್ಲಿ ನೆಲೆಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X