Search
  • Follow NativePlanet
Share
» »ಚಳಿಗಾಲದ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ಕೊಡಬಹುದಾದ 10 ಅತ್ಯುತ್ತಮ ಸ್ಥಳಗಳು

ಚಳಿಗಾಲದ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ಕೊಡಬಹುದಾದ 10 ಅತ್ಯುತ್ತಮ ಸ್ಥಳಗಳು

ಸುಂದರವಾದ ದೃಶ್ಯಾವಳಿಗಳನ್ನು ಒದಗಿಸುವ ದಕ್ಷಿಣಭಾರತದ ಐದು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕರ್ನಾಟಕವು ಹಲವಾರು ಧಾರ್ಮಿಕ ಕೇಂದ್ರಗಳು, ಮರಳುಯುಕ್ತ ಕಡಲತೀರಗಳು, ಆಧುನಿಕ ಜೀವನ ಶೈಲಿಯ ನಗರ, ಗಗನ ಚುಂಬಿ ಬೆಟ್ಟಗಳು, ಫ್ರೆಂಚರು ಮತ್ತು ಬ್ರಿಟೀಶ್ ವಾಸ್ತುಶಿಲ್ಪ ಶೈಲಿಯ ಹಲವಾರು ಕಟ್ಟಡಗಳು ಇತ್ಯಾದಿಗಳನ್ನು ಒಳಗೊಂಡಿದ್ದು ಅವುಗಳು ತಮ್ಮದೇ ಆದ ರೀತಿಯಲ್ಲಿ ಕರ್ನಾಟಕವನ್ನು ಅತ್ಯಂತ ಹೆಸರುವಾಸಿಯಾಗುವಂತೆ ಮಾಡಿವೆ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಚಳಿಗಾಲದಲ್ಲಿ ಭೇಟಿ ಕೊಡಬಹುದಾದ ಕರ್ನಾಟಕದ ಕೆಲವು ಸ್ಥಳಗಳ ಪಟ್ಟಿ ಈ ಕೆಳಗಿನಂತಿವೆ.

ಬಾದಾಮಿ

ಬಾದಾಮಿ

ನೀವು ಹಂಪೆಗೆ ಪ್ರವಾಸ ಆಯೋಜಿಸುವಾಗ ಅದಕ್ಕೆ ಹತ್ತಿರದಲ್ಲಿರುವ ಪರಂಪರೆಯ ತಾಣವಾಗಿರುವ ಬಾದಾಮಿ, ಪಟ್ಟದಕಲ್ ಮತ್ತು ಐಹೊಳೆ ಈ ಸ್ಥಳಗಳಿಗೆ ಭೇಟಿ ಕೊಡುವುದು ಅತ್ಯಂತ ಉತ್ತಮವಾದ ಆಯ್ಕೆಯಾಗಿದೆ. ಮೊದಲು ಬಾದಾಮಿಯನ್ನು ವಾತಾಪಿ ಎಂದು ಕರೆಯಲಾಗುತ್ತಿದ್ದು, ಇದನ್ನು 400 ಎ.ಡಿ ಯಿಂದ 800 ಎಡಿ ಯವರೆಗೆ ಚಾಲುಕ್ಯರಿಂದ ಆಳಲ್ಪಟ್ಟಿತು. ಇದರ ಪರಿಣಾಮವಾಗಿ ಈ ಸ್ಥಳವು ದೇವಾಲಯಗಳು, ಸ್ಮಾರಕಗಳು, ಮತ್ತು ಆ ಯುಗದ ಅವಶೇಷಗಳನ್ನು ಹೊಂದಿದೆ. ಐಹೊಳೆಯಲ್ಲಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯನ್ನು ಗಮನಾರ್ಹವಾಗಿ ಬಳಸಲಾಗಿದ್ದು ಅದ್ಬುತವಾಗಿದೆ. ಮತ್ತು ಈ ಕುಗ್ರಾಮವು ಸುಮಾರು 120 ಕಲ್ಲಿನ ದೇವಾಲಯಗಳಿಂದ ತುಂಬಿದೆ, ವಿಷಾದವೆಂದರೆ ಇದು ಅದಕ್ಕೆ ತಕ್ಕುದಾದ ಮನ್ನಣೆಯನ್ನು ಇನ್ನೂ ಪಡೆದಿಲ್ಲ. ಭವ್ಯವಾದ ಗುಹೆಗಳು ಮತ್ತು ನಾಲ್ಕು ಮೂಲೆಗಳಿರುವ ಪ್ರಭಾವಶಾಲಿ ಪ್ರಾಚೀನ ರಾಕ್-ಕಟ್ ದೇವಾಲಯಗಳೊಂದಿಗೆ, ಬಾದಾಮಿ ನಿಮ್ಮ ಜೀವಿತಾವಧಿಯಲ್ಲಿ ಒಮ್ಮೆ ನೋಡಬಹುದಾದ ಪ್ರಮುಖ ಐತಿಹಾಸಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ! ಬಾದಾಮಿಗೆ ಹೋಲಿಸಿದರೆ ಪಟ್ಟದಕಲ್ಲು ಹೆಚ್ಚು ಸಾಧಾರಣವಾಗಿದೆ, ಒಂದೇ ದೇವಾಲಯದ ಸಂಕೀರ್ಣವಿದೆ ಆದರೂ ಇದು ಭವ್ಯವಾಗಿದೆ!

ಮೈಸೂರು

ಮೈಸೂರು

ಮೈಸೂರು ಒಂದು ಅತ್ಯದ್ಬುತವಾದ ಶ್ರೀಮಂತ ಪರಂಪರೆಯನ್ನು ಹೊಂದಿದ ನಗರವಾಗಿದ್ದು, ಭವ್ಯವಾದ ಮೈಸೂರು ಅರಮನೆಯು ಪ್ರವಾಸಿಗರ ಕಣ್ಮನ ಸೆಳೆಯುವ ಪ್ರಮುಖ ಆಕರ್ಷಣೆಯಲ್ಲೊಂದಾಗಿದೆ. ಇಲ್ಲಿಯೂ ಹಲವಾರು ಗಮನ ಸೆಳೆಯುವಂತಹ ಕಟ್ಟಡಗಳು, ದೇವಾಲಯಗಳುಮತ್ತು ಅರಮನೆಗಳಿವೆ. ಅಲ್ಲದೆ ಇದು ಯೋಗದಲ್ಲಿ ಪಾಲ್ಗೊಳ್ಳಲು ಮತ್ತು ಶ್ರೀಗಂಧದ ಮರ ಮತ್ತು ಇತರ ಸ್ಮಾರಕಗಳನ್ನು ಖರೀದಿಸಲು ಅಸಾಮಾನ್ಯ ಸ್ಥಳವೆನಿಸಿದೆ. ಮೈಸೂರು ಮೃಗಾಲಯವು ಕರ್ನಾಟಕದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಮೃಗಾಲಯಗಳಲ್ಲಿ ಒಂದಾಗಿದೆ ಮತ್ತು ಅದರ ಆಶ್ರಯದಲ್ಲಿ ಅನೇಕ ಸುಂದರವಾದ ಪ್ರಾಣಿಗಳನ್ನು ನೋಡಬಹುದಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ನೀವು ಸುಂದರವಾದ ಪ್ರಕೃತಿ ಮತ್ತು ವನ್ಯ ಜೀವಿಗಳ ಮಧ್ಯೆ ನಿಮ್ಮ ರಜಾದಿನಗಳಲ್ಲಿ ಉತ್ತಮ ಸಮಯವನ್ನು ಕಳೆಯಬಯಸಿದಲ್ಲಿ, ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನವು ನಿಮಗೆ ಸೂಕ್ತವಾದುದಾಗಿದೆ. ಇಲ್ಲಿಯ ನೈಸರ್ಗಿಕ ಪರಿಸರದಲ್ಲಿ ನೀವು ಆನೆಗಳು ಮತ್ತು ಇನ್ನಿತರ ಅಪರೂಪದ ಪ್ರಾಣಿಗಳನ್ನು ಹತ್ತಿರದಲ್ಲಿ ಕಾಣಬಹುದಾಗಿದೆ. ನದಿಯ ದಡದಲ್ಲಿ ಆನೆಗಳ ಹಿಂಡುಗಳನ್ನು ನೋಡುವುದು ಅಸಾಮಾನ್ಯವೇನಲ್ಲ ಮತ್ತು ಜೀಪ್ ಸಫಾರಿ ಮೂಲಕ ಇಲ್ಲಿಯ ಅರಣ್ಯಪ್ರದೇಶಗಳನ್ನು ಅನ್ವೇಷಿಸಬಹುದು. ಈ ರಾಷ್ಟ್ರೀಯ ಉದ್ಯಾನವನವು ಪ್ರಶಾಂತ ಅರಣ್ಯ, ಹರಿಯುವ ತೊರೆಗಳು ಮತ್ತು ಶಾಂತವಾದ ಸರೋವರವನ್ನು ಹೊಂದಿರುವ ಮಾಲಿನ್ಯರಹಿತ ಅರಣ್ಯ ಪ್ರದೇಶವಾಗಿದೆ. ಅನೇಕ ಸಾಹಸ ಪ್ರಿಯರು ಈ ಪ್ರದೇಶದಲ್ಲಿ ಪಾದಯಾತ್ರೆ ಮಾಡಲು ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ!

ಮುರುಡೇಶ್ವರ

ಮುರುಡೇಶ್ವರ

ವಿಶ್ವದ ಎರಡನೇ ಅತ್ಯಂತ ಎತ್ತರದ ಶಿವನ ಪ್ರತಿಮೆಯನ್ನು (ಮೊದಲನೆಯದು ನೇಪಾಳದಲ್ಲಿದೆ)ಹೊಂದಿರುವುದಕ್ಕೆ ಹೆಸರುವಾಸಿಯಾದ ಮುರುಡೇಶ್ವರವು ಕೊಂಕಣತೀರದ ಪಟ್ಟಣವಾಗಿದೆ ಈ ಸ್ಥಳವು ಮಂಗಳೂರಿನಿಂದ 140 ಕಿ.ಮೀ ದೂರದಲ್ಲಿದೆ. ಈ ಸುಂದರವಾದ ಮತ್ತು ಪ್ರಭಲವಾದ ದೇವಾಲಯವು 20 ಅಂತಸ್ತಿನ ಗೋಪುರ ಮತ್ತು ಶಿಖರದವರೆಗೂ ಹೋಗುವ ಸುತ್ತುವರಿದ ಲಿಫ್ಟ್‌ನ್ನು ಒಳಗೊಂಡಿದೆ. ಇದಲ್ಲದೆ, ಮುರುಡೇಶ್ವರವು ಕರ್ನಾಟಕದ ಸುಸಜ್ಜಿತ ಬೀಚ್‌ಗಳಲ್ಲಿ ಒಂದಾಗಿದ್ದು, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್‌ನಂತಹ ನೀರಿನ ಚಟುವಟಿಕೆಗಳಲ್ಲಿ ನೀವು ಭಾಗವಹಿಸಬಹುದು.

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ತನ್ನ ದೃಶ್ಯ ಸೌಂದರ್ಯತೆಗಾಗಿ ಭಾರತಾದ್ಯಂತದ ಪ್ರವಾಸಿಗರಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಕರ್ನಾಟಕದ ನೈಋತ್ಯ ಭಾಗದಲ್ಲಿರುವ ಪಶ್ಚಿಮ ಘಟ್ಟಗಳ ನಡುವೆ ನೆಲೆಸಿರುವ ಚಿಕ್ಕಮಗಳೂರು ಚಳಿಗಾಲದಲ್ಲಿ ಅತ್ಯಂತ ಸುಂದರವಾಗಿರುತ್ತದೆ. ರಾಜ್ಯದ ಅತ್ಯಂತ ಭವ್ಯವಾದ ಮುಳ್ಳಯ್ಯನಗಿರಿ ಶಿಖರವನ್ನು ಏರಲು ಸಾವಿರಾರು ಪಾದಯಾತ್ರಿಕರು ಅಲ್ಲಿಗೆ ಭೇಟಿ ನೀಡುತ್ತಾರೆ. ಈ ಪ್ರದೇಶವು ವೈವಿಧ್ಯಮಯ ಜಲಪಾತಗಳು, ವನ್ಯಜೀವಿ ತಾಣಗಳು, ಹೋಮ್‌ಸ್ಟೇಗಳು ಮತ್ತು ದೇವಾಲಯಗಳನ್ನು ಸಹ ಒಳಗೊಂಡಿದೆ.

ಬೆಂಗಳೂರು

ಬೆಂಗಳೂರು

ಕರ್ನಾಟಕದ ರಾಜಧಾನಿ ಹಾಗೂ ಆಧುನಿಕತೆ ಪ್ರವರ್ಧಮಾನಕ್ಕೆ ಬರುತ್ತಿರುವ ನಗರವಾಗಿರುವ ಬೆಂಗಳೂರು ಭಾರತದ ಬೆಳೆಯುತ್ತಿರುವ ಐಟಿ ಉದ್ಯಮಕ್ಕೆ ವಾಸಸ್ಥಾನವಾಗಿರುವ ಇದು ಉದಯೋನ್ಮುಖ ಉದ್ಯಮಿಗಳಿಂದ ತುಂಬಿದೆ ಮತ್ತು ಅದರ ಸುತ್ತಲೂ ಉತ್ಸಾಹಭರಿತ, ನಗರವನ್ನು ಹೊಂದಿದೆ. ಇದು ಆರ್ಥಿಕ ರಾಜಧಾನಿಯಾಗಿ ಹೆಸರುವಾಸಿಯಾಗಿದ್ದರೂ ಸಹ, ಅನೇಕರು ಬೆಂಗಳೂರನ್ನು ಅದರ ಹಸಿರು, ಪ್ರಭಾವಶಾಲಿ ರಚನೆಗಳು ಮತ್ತು ಚರ್ಚ್‌ಗಳಿಗಾಗಿ ಪ್ರೀತಿಸುತ್ತಾರೆ. ಮತ್ತು ನೀವು ಕರ್ನಾಟಕದಲ್ಲಿ ಅದ್ಭುತವಾದ ಚಳಿಗಾಲದ ಸಮಯದಲ್ಲಿ ಅತ್ಯುತ್ತಮ ವಾತಾವರಣದಲ್ಲಿ ಇರಲು ಬಯಸಿದರೆ, ಬೆಂಗಳೂರು ಅತ್ಯುತ್ತಮ ಸ್ಥಳವಾಗಿದೆ!

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+