ಹಿಮಾಚಲ ಪ್ರದೇಶದ ಸೆರಾಜ್ ಕಣಿವೆಯಲ್ಲಿರುವ ಸುಂದರ ತಾಣ ಶೋಜಾ. ಜಲೋರಿ ರಹದಾರಿಯಿಂದ 5 ಕಿಲೋ ಮೀಟರ್ ಅಂತರದಲ್ಲಿರುವ ಶೋಜಾ ಸಮುದ್ರ ಮಟ್ಟದಿಂದ 2368 ಮೀಟರ್ ಎತ್ತರದಲ್ಲಿದೆ. ಹಿಮಾವೃತವಾದ ಪರ್ವತ ಶ್ರೇಣಿಗಳ ನೋಟದಿಂದ ಶೋಜಾ ಕಂಗೊಳಿಸುತ್ತದೆ.
ಸೆರೋಲ್ಸರ್ ಸರೋವರ, ರಘುಪುರ ಕೋಟೆ, ಜಲಪಾತ, ಜಲೋರಿ ರಹದಾರಿ ಮತ್ತು ತೀರ್ಥನ್ ಕಣಿವೆ ಇಲ್ಲಿರುವ ಕೆಲವು ಪ್ರವಾಸಿ ಆಕರ್ಷಣೆಗಳು. ಜಲೋರಿ ರಹದಾರಿ ಲೋಹದ ರಸ್ತೆಯಿಂದಾಗಿ ಪ್ರಸಿದ್ದವಾಗಿದ್ದು ಶಿಮ್ಲಾ ಮತ್ತಿತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಜಲೋರಿ ಪಾಸ್ ನಿಂದ 5 ಕಿಲೋ ಮೀಟರ್ ದೂರದಲ್ಲಿರುವ ಸೆರೋಸ್ಲರ್ ಸರೋವರ ಶೋಜಾದ ಪ್ರಸಿದ್ದತೆಗೆ ಗರಿ ಮೂಡಿಸಿದ ಮತ್ತೊಂದು ತಾಣ. ಈ ಪ್ರದೇಶದ ದೇವತೆ ಬುಧಿ ನಾಗಿನ್ ಗೆ ಅರ್ಪಿತವಾದ ಮತ್ತೊಂದು ಪ್ರಸಿದ್ದ ದೇವಸ್ಥಾನ ಇಲ್ಲಿದೆ. ನೂರು ಮಕ್ಕಳನ್ನು ಹೊಂದಿರುವ ಆಶ್ರಯ ದೇವತೆ ಈ ಪ್ರದೇಶವನ್ನು ಕಾಪಾಡಿ ಪೊರೆಯುತ್ತಾಳೆ ಎಂಬ ನಂಬಿಕೆ ಇಲ್ಲಿನ ಜನರದ್ದು.
ಇಲ್ಲಿನ ಜಲಪಾತ ಕೇಂದ್ರವನ್ನಂತೂ ಖಂಡಿತ ತಪ್ಪಿಸಿಕೊಳ್ಳಲೇಬಾರದು. ನಿಸರ್ಗದ ಮಡಿಲಲ್ಲಿರುವ ಜಲಪಾತ ಕೇಂದ್ರ ಉಸಿರು ಬಿಗಿ ಹಿಡಿದು ನೋಡುವಷ್ಟು ಸುಂದರವಾಗಿದೆ. ಇದು ಶೋಜಾ ನಗರಕ್ಕೆ ಕೇವಲ 1 ಕಿಲೋ ಮೀಟರ್ ಅಂತರದಲ್ಲಿದೆ. ಹೀಗಾಗಿ ಜನ ಇಲ್ಲಿಗೆ ಬೆಳಗಿನ ವಾಕಿಂಗ್ ಗಾಗಿ ಬರುತ್ತಾರೆ. ಜಲಪಾತದ ತಣ್ಣಗಿನ ನೀರು ಸಿಹಿಯಾಗಿದೆ.
ಪ್ರವಾಸಿಗರು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ಶೋಜಾ ತಲುಪಬಹುದು. ಭುಂತರ್ ವಿಮಾನ ನಿಲ್ದಾಣ ಅಥವಾ ಕುಲು ಮನಾಲಿ ವಿಮಾನ ನಿಲ್ದಾಣ ಶೋಜಾಕ್ಕೆ ಹತ್ತಿರದಲ್ಲಿದೆ. ಶೋಜಾದಿಂದ 80 ಕಿಲೋ ಮೀಟರ್ ದೂರದಲ್ಲಿರುವ ಈ ವಿಮಾನ ನಿಲ್ದಾಣ ದೆಹಲಿ, ಶಿಮ್ಲಾ ಮುಂತಾದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜೋಗಿಂದರ್ ರೈಲು ನಿಲ್ದಾಣ ಶೋಜಾಕ್ಕೆ ಹತ್ತಿರದಲ್ಲಿರುವ ರೈಲು ಸಂಪರ್ಕವಾಗಿದ್ದು 164 ಕಿಲೋ ಮೀಟರ್ ದೂರದಲ್ಲಿದೆ. ಕುಲುವಿನಿಂದ ಶೋಜಾಕ್ಕೆ ನಿರಂತರ ಬಸ್ ಸಂಪರ್ಕವಿದೆ.
ವರ್ಷಪೂರ್ತಿ ಸಮಶೀತೋಷ್ಣ ವಾತಾವರಣವಿದ್ದು ಬೇಸಿಗೆ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ.


Click it and Unblock the Notifications