Search
  • Follow NativePlanet
Share
ಮುಖಪುಟ » ಸ್ಥಳಗಳು » ಶೋಜಾ » ಹವಾಮಾನ

ಶೋಜಾ ಹವಾಮಾನ

ಬೇಸಿಗೆ ಸಮಯ ಶೋಜಾಕ್ಕೆ ಭೇಟಿ ನೀಡಲು ಸೂಕ್ತವಾದ ಕಾಲ. 

ಬೇಸಿಗೆಗಾಲ

(ಏಪ್ರಿಲ್-ಜೂನ್): ಏಪ್ರಿಲ್ ನಲ್ಲಿ ಶುರುವಾಗುವ ಬೇಸಿಗೆ ಜೂನ್ ವರೆಗೆ ಮುಂದುವರೆಯುತ್ತದೆ. ಗರಿಷ್ಟ 30 ಡಿಗ್ರಿ ಮತ್ತು ಕನಿಷ್ಟ 5 ಡಿಗ್ರಿ ತಾಪಮಾನ ಇಲ್ಲಿ ದಾಖಲಾಗುತ್ತದೆ. ಬೇಸಿಗೆಯಲ್ಲಿ ಹಿತಕರವಾದ ವಾತಾವರಣವಿರುತ್ತದೆ. ಸಹಿಸಿಕೊಳ್ಳಬಹುದಾದ ವಾತಾವರಣವಿರುವುದರಿಂದ ಬೇಸಿಗೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಮಳೆಗಾಲ

(ಜುಲೈ-ಸೆಪ್ಟೆಂಬರ್): ಜುಲೈನಿಂದ ಸೆಪ್ಟೆಂಬರ್ ವರೆಗೆ ಸಾಧಾರಣ ಮಳೆಯಾಗುತ್ತದೆ. ಮಳೆಗಾಲವೂ ಕೂಡ ಪ್ರವಾಸಕ್ಕೆ ಸೂಕ್ತ ಸಮಯ.

ಚಳಿಗಾಲ

(ಡಿಸೆಂಬರ್-ಫೇಬ್ರವರಿ): ಚಳಿಗಾಲದಲ್ಲಿ ತಾಪಮಾನ ಝೀರೋ ಡಿಗ್ರಿಗೆ ಕುಸಿತ ಕಾಣುತ್ತದೆ ಮತ್ತು ಹಿಮಪಾತವೂ ಆಗುತ್ತದೆ. ಕೊರೆಯುವಂತಹ ಚಳಿ ಇರುವುದರಿಂದ ಚಳಿಗಾಲದ ಅವಧಿಯಲ್ಲಿ ಈ ಪ್ರದೇಶಕ್ಕೆ ಭೇಟಿ ಒಳ್ಳೆಯದಲ್ಲ.