ರಘುಪುರ ಕೋಟೆ ಸಮುದ್ರ ಮಟ್ಟದಿಂದ 3540 ಮೀಟರ್ ಎತ್ತರದಲ್ಲಿದ್ದು ಶೋಜಾದಲ್ಲಿರುವ ಏಕೈಕ ಐತಿಹಾಸಿಕ ತಾಣ. ಇಲ್ಲಿ ಸುಂದರವಾದ ಹೊಂಡಗಳು ಮತ್ತು ಮೀನು ಕೊಳಗಳಿವೆ. ಕೋಟೆಯ ಗೋಡೆಯ ಮೇಲೆ ಹಿಂದಿನ ಕಾಲದಲ್ಲಿ ಗುಂಡಿನ ಧಾಳಿಯಿಂದಾದ ತೂತುಗಳನ್ನು ನೋಡಬಹುದು. ತೀರ್ಥನ್ ಕಣಿವೆ ಮತ್ತು ಹಿಮಾಲಯ ಪರ್ವತ ಶ್ರೇಣಿಯ ರಮಣೀಯ ದೃಶ್ಯವನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಇದಕ್ಕೆ ಹೊರತಾಗಿ, ಪರ್ವತಗಳ ಇಳಿಜಾರಿನಲ್ಲಿ ದನಗಾಹಿಗಳು ತಮ್ಮ ದನಕರುಗಳನ್ನು ಮೇಯಿಸುವುದನ್ನು ಪ್ರವಾಸಿಗರು ನೋಡಬಹುದು.