Search
  • Follow NativePlanet
Share
ಮುಖಪುಟ » ಸ್ಥಳಗಳು» ಮುಂಗೇರ್

ಮುಂಗೇರ್ ಪ್ರವಾಸೋದ್ಯಮ: ಚೇತೋಹಾರಿ ಪ್ರವಾಸದ ಅನುಭವ

29

ಮುಂಗೇರ್ ನಗರವು ಬಿಹಾರದ ಆಕರ್ಷಣೀಯ ನಗರಗಳಲ್ಲಿ ಒಂದು. ಪ್ರವಾಸಿಗರಿಗೆ ಮುದ ನೀಡುವ ವಿಷಯದಲ್ಲಿ ಮುಂಗೇರ್ ನಗರ ಮುಂಚೂಣಿಯಲ್ಲಿದೆ. ಈ ನಗರಕ್ಕೆ ಐತಿಹಾಸಿಕ ಮಹತ್ವವಿದ್ದು ಇದು ಕಾಸಿಂ ಅಲಿ ಖಾನ್ನ ಆಳ್ವಿಕೆಯ ಕಾಲ ಅಂದರೆ 1762ರಲ್ಲಿ ಬಂಗಾಳದ ರಾಜಧಾನಿಯಾಗಿತ್ತು. ಈ ನಗರವು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಮುಂಗೇರ್ ಪಟ್ಟಣದಲ್ಲಿ ಬಂದೂಕುಗಳನ್ನು ತಯಾರಿಸಲಾಗಿತ್ತು. 1962ರ ಭಾರತ-ಚೀನಾ ಯುದ್ಧ ಸಂದರ್ಭದಲ್ಲಿ ಕೂಡ ಮುಂಗೇರು ಬಂದೂಕು ಕಾರ್ಖಾನೆಯು ಮಹತ್ವದ ಪಾತ್ರವನ್ನು ವಹಿಸಿತ್ತು. ಮುಂಗೇರು ನಗರವು ಗಂಗಾ ತೀರದಲ್ಲಿದ್ದು ಬೆಟ್ಟ ಶ್ರೇಣಿಗಳು ಇದರ ಸಮೀಪದಲ್ಲಿದೆ. ಇದು ನಗರದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿದೆ.

ಇಲ್ಲಿ ನೋಡಬೇಕಾದ ಮುಖ್ಯ ಸ್ಥಳಗಳೆಂದರೆ ಮುಂಗೇರ್ ಕೋಟೆ, ಬಿಹಾರದ ಯೋಗಶಾಲೆ, ಸೀತಾ ಕುಂಡ, ಖಗರ್ಪುಂರ ಸರೋವರ, ಪೀರ್ ಷಾ ನಫಾ ಗೋಪುರ, ಭೀಮಬಂದ್ ವನ್ಯಜೀವಿಧಾಮ, ಶ್ರೀ ಕೃಷ್ಣ ವಾಟಿಕ, ಶಾ ಮುಸ್ತಾಫ ಸೂಫಿ ಸಮಾಧಿ ಮತ್ತು ದಿಲ್ವಾಪುರ್. ಮುಂಗೇರ್ ನಗರದಲ್ಲಿ ಹಲವು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿವೆ. ಇವುಗಳನ್ನು ನೋಡುವುದೇ ವಿಶಿಷ್ಟ ಅನುಭವ.

ಮುಂಗೇರು ಪಟ್ಟಣದ ಪ್ರಮುಖ ಪ್ರವಾಸಿ ಆಕರ್ಷಣೆ ಇಲ್ಲಿರುವ ಕೋಟೆ. ಇದನ್ನು ಮಧ್ಯಕಾಲೀನ ಯುಗದಲ್ಲಿ ಕಟ್ಟಲಾಗಿದೆ. ಬಿಹಾರದ ಯೋಗಶಾಲೆಯು ಪ್ರಪಂಚದಾದ್ಯಂತ ಯೋಗ ತರಬೇತಿಗೆ ಹೆಸರುವಾಸಿಯಾಗಿದೆ. ಈ ಶಾಲೆಯ ಪ್ರಮುಖ ಧ್ಯೇಯ ಯೋಗದ ಮೂಲಕ ಮನುಷ್ಯನ ವ್ಯಕ್ತಿತ್ವವನ್ನು ವಿಕಸನಗೊಳಿಸುವುದು. ಸೀತಾಕುಂಡ, ಖಗರ್ಪುರ ಸರೋವರ, ಪೀರ್ ಷಾ ನಫಾ ಗೋಪುರ, ರಾಮೇಶ್ವರ ಕುಂಡ ಇತ್ಯಾದಿಗಳು ಇಲ್ಲಿನ ಧಾರ್ಮಿಕ ಸ್ಥಳಗಳು.

ಮುಂಗೇರಿನಲ್ಲಿ ಬೇಸಗೆಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರುತ್ತದೆ ಮತ್ತು ಚಳಿಗಾಲದಲ್ಲಿ ಚಳಿ ಹೆಚ್ಚಿರುತ್ತದೆ. ಮತ್ತು ಮಳೆಗಾಲದಲ್ಲಿ ಒಳ್ಳೆಯ ಮಳೆಯಾಗುತ್ತದೆ. ಆದ್ದರಿಂದ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಸೆಪ್ಟಂಬರ್-ಮಾರ್ಚ್.

ಮುಂಗೇರು ನಗರವು ಕಬ್ಬಿಣದ ಕೆಲಸಗಳು ಮತ್ತು ಕಬ್ಬಿಣದಿಂದ ತಯಾರಾಗುವ ವಸ್ತುಗಳು ಮತ್ತು ಕಬ್ಬಿಣದಿಂದ ತಯಾರಾಗುವ ಕಲಾತ್ಮಕ ವಸ್ತುಗಳ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದಿದೆ. ಇಲ್ಲಿನ ಪ್ರಮುಖ ಹಬ್ಬಗಳೆಂದರೆ ಛತ್ ಪೂಜಾ, ದುರ್ಗಾ ಪೂಜಾ, ರಕ್ಷಾ ಬಂಧನ ಮತ್ತು ಕ್ರಿಸ್ಮಸ್. ಈ ನಗರವು ಉತ್ತಮ ರಸ್ತೆ, ರೈಲು ಮತ್ತು ವಾಯು ಸೌಲಭ್ಯವನ್ನು ಹೊಂದಿದೆ.

ಪ್ರವಾಸಕ್ಕೆ ಸೂಕ್ತ ಸಮಯ

ಮುಂಗೇರಿಗೆ ಭೇಟಿ ನೀಡಲು ಸೂಕ್ತ ಸಮಯ ಸೆಪ್ಟಂಬರ್-ಮಾರ್ಚ್

ಹೋಗುವುದು ಹೇಗೆ?

ಮುಂಗೇರು ಪಟ್ಟಣಕ್ಕೆ ಉತ್ತಮ ರಸ್ತೆ ಮತ್ತು ರೈಲು ಸೌಲಭ್ಯವಿದೆ.

 

ಮುಂಗೇರ್ ಪ್ರಸಿದ್ಧವಾಗಿದೆ

ಮುಂಗೇರ್ ಹವಾಮಾನ

ಉತ್ತಮ ಸಮಯ ಮುಂಗೇರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮುಂಗೇರ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 80 ಮತ್ತಿತರ ರಾಜ್ಯ ಹೆದ್ದಾರಿಗಳೊಂದಿಗೆ ಸಂಪರ್ಕ ಹೊಂದಿದೆ. ಇದು ಭಗ್ಲಾಪುರ, ಬೇಗುಸರೈ ಮತ್ತು ಪಟ್ನಾಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ ಸಾಹಿಬಾಗ್ನಿಯ ಜಮಾಲ್ಪುರ ಮತ್ತು ಭಗ್ಲಾಪುರ. ಇದು ಹೌವ್ರಾ-ದೆಹಲಿ ಮಾರ್ಗದಲ್ಲಿದೆ. ಇದು ನಗರದಿಂದ 8 ಕಿಮೀ ದೂರದಲ್ಲಿದೆ. ದೇಶದ ಎಲ್ಲ ಭಾಗಗಳೊಂದಿಗೆ ಇದು ರೈಲು ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಪಟ್ನಾದಲ್ಲಿದೆ. ಇಲ್ಲಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸೌಲಭ್ಯವಿದೆ. ಇಲ್ಲಿಗೆ ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun