Search
  • Follow NativePlanet
Share
ಮುಖಪುಟ » ಸ್ಥಳಗಳು» ಕುಶಿನಗರ

ಕುಶಿನಗರ : ಬೌದ್ಧರ ಪವಿತ್ರ ಯಾತ್ರಾ ಕ್ಷೇತ್ರ

21

ಕುಶಿನಗರ ಉತ್ತರಪ್ರದೇಶದ ಪ್ರಖ್ಯಾತ ಬೌಧ್ದ ಯಾತ್ರಾಸ್ಥಳ. ಬೌದ್ಧ ಗ್ರಂಥಗಳ ಆಧಾರದ ಪ್ರಕಾರ, ಗೌತಮ ಬುದ್ಧ ತನ್ನ ಮರಣದ ನಂತರ ಪರಿನಿರ್ವಾಣಗೊಂಡ ಹಿರಣ್ಯಾವತಿ ನದಿ ಬಳಿ ಈ ಯಾತ್ರಾ ಸ್ಥಳವಿದೆ. ಪ್ರಾಚೀನ ಕಾಲದಲ್ಲಿ ಇದನ್ನು ಕುಶಾವತಿ ಎಂದು ಕರೆಯಲಾಗುತ್ತಿತ್ತು ಮತ್ತು ಇದು ರಾಮಾಯಣದಲ್ಲಿ ರಾಮನ ಮಗ ಕುಶ ಎಂಬ ಹೆಸರಾಗಿತ್ತು.ಆದಾಗ್ಯೂ ಇದು ಪ್ರಮುಖವಾಗಿ ಬೌದ್ಧರ ಮುಖ್ಯ ಯಾತ್ರಾಸ್ಥಳವಾಗಿದೆ. ಈ ನಗರವು 3 ಮತ್ತು 5 ನೆ ಶತಮಾನದ ಹಲವಾರು ಸ್ತೂಪ ಮತ್ತು ವಿಹಾರಗಳನ್ನು ಒಳಗೊಂಡಿದೆ. ಇವುಗಳಲ್ಲಿ ಬಹುತೇಕ ಸ್ಮಾರಕಗಳು ಮೌರ್ಯ ಚಕ್ರವರ್ತಿ ಅಶೋಕನಿಂದ ಸ್ಥಾಪಿಸಲ್ಪಟ್ಟಿವೆ. ಈ ಪ್ರದೇಶವು 19 ನೇಯ ಶತಮಾನದಲ್ಲಿ ಬೆಳಕಿಗೆ ಬರುವ ಮುಂಚೆ ಇಲ್ಲಿ ವಿವಿಧ ಕಾಲದಲ್ಲಿ ನಡೆದ ಹಿಂಸಾತ್ಮಕ ದಾಳಿಗಳ ಕಾರಣ ಇದೊಂದು ಅವಶೇಷಗಳ ಬೀಡಾಗಿತ್ತು.

ಕುಶಿನಗರ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು

ಇಲ್ಲಿನ ಹೆಚ್ಚಿನ ಆಕರ್ಷಣೀಯ ಸ್ಥಳಗಳು ಬುದ್ಧ ದೇವನ ಕುರಿತದ್ದಾಗಿದೆ. ಇಲ್ಲಿನ ಹೆಚ್ಚಿನ ಸ್ಥಳಗಳು ಬುದ್ಧ ತನ್ನ ಕೊನೆಯ ದಿನಗಳಲ್ಲಿ ಕಳೆದ ಸ್ಥಳಗಳಾಗಿವೆ. ಇಲ್ಲಿನ ಮಹಾಪರಿನಿರ್ವಾಣ ದೇವಾಲಯವು ಬುದ್ದನ 6 ಅಡಿ ಎತ್ತರದ ವಿಗ್ರಹವನ್ನು ಹೊಂದಿದೆ. ಇಲ್ಲಿರುವ ನಿರ್ವಾಣ ಸ್ತೂಪವನ್ನು 1876 ರಲ್ಲಿ ನಿರ್ಮಿಸಲಾಯಿತು. ಬುದ್ಧನ ಸಮಾಧಿ ಸ್ಥಳದಲ್ಲಿ ರಮಾಭಾರ ಎಂಬ ಸ್ತೂಪವನ್ನು ಕಾಣಬಹುದು. ಇಲ್ಲಿ ಧ್ಯಾನಕ್ಕೆ ಅವಕಾಶವಾಗುವಂತೆ ಸುಂದರವಾದ ಉದ್ಯಾನವನಗಳು, ಕೃತಕ ನೀರಿನ ಜಲಪಾತಗಳನ್ನು ಕಾಣಬಹುದಾಗಿದೆ. ಕುಶಿನಗರದ ವಸ್ತುಸಂಗ್ರಹಾಲಯದಲ್ಲಿ ಇರುವ ಸ್ಮಾರಕಗಳು ಭೂಶೋಧನೆಯಿಂದ ದೊರೆಯಿತು ಎನ್ನಲಾಗಿದೆ.

ಬೌದ್ಧ ಯಾತ್ರಾ ಸ್ಥಳವಾದ ಕುಶಿನಗರ ಪ್ರಪಂಚದ ಎಲ್ಲಾ ಕಡೆಗಳಿಂದ ಯಾತ್ರಾರ್ಥಿ ಗಳನ್ನು ಹೊಂದಿದೆ. ಅವರಲ್ಲಿ ಸಾಕಷ್ಟು ಜನರು ಬೌದ್ಧ ಮತದ ಬಗ್ಗೆ ಸಂಶೋಧನೆ ನಡೆಸಲು ಬರುತ್ತಾರೆ. ಇಲ್ಲಿಗೆ ಬಂದ ಸಾಕಷ್ಟು ಜನರು ಅನೇಕ ದೇವಾಲಯಗಳನ್ನು ಕೂಡ ಕಟ್ಟಿದ್ದಾರೆ. ಉದಾಹರಣೆಗೆ ಇಲ್ಲಿ ಇರುವ ವಾಟ್ ಥಾಯ್ ದೇವಸ್ಥಾನ; ಬುದ್ಧನಿಗೆ ಅರ್ಪಿಸಿ ಕಟ್ಟಲಾದ ಈ ದೇವಾಲಯದ ವಾಸ್ತುಶಿಲ್ಪವು ಭಾರತೀಯ ಶೈಲಿಗಿಂತ ಭಿನ್ನವಾಗಿದೆ ಮತ್ತು ಹೆಚ್ಚು ಥಾಯ್ ಶೈಲಿಯನ್ನು ಹೋಲುತ್ತದೆ. ಮತ್ತೊಂದು ದೇವಸ್ಥಾನವಾದ ಚೀನೀ ದೇವಾಲಯವು ಕೂಡ ಭಗವಾನ್ ಬುದ್ಧನಿಗೆ ಮೀಸಲಾದ ದೇವಾಲಯ, ಹೆಸರೇ ಹೇಳುವಂತೆ ಈ ದೇವಾಲಯದ ವಾಸ್ತುಶಿಲ್ಪ ಚೀನಾ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದೆ. ಇಂಡೋ ಜಪಾನಿ ದೇವಾಲಯವು ಭಾರತ ಮತ್ತು ಜಪಾನಿನ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿದೆ.

ಬೌದ್ಧ ದೇವಾಲಯಗಳನ್ನು ಹೊರತುಪಡಿಸಿ ಕುಶಿನಗರದಲ್ಲಿ ಗುಪ್ತರ ಕಾಲದಲ್ಲಿ ಕಟ್ಟಲಾದ ಸೂರ್ಯ ದೇವಾಲಯವಿದೆ. ಈ ದೇವಾಲಯವನ್ನು ಸಾಕಷ್ಟು ಬಾರಿ ನವೀಕರಿಸಲಾಗಿದ್ದು ಕೊನೆಯ ಬಾರಿ ಎಂದರೆ 1981 ರಲ್ಲಿ ಮತ್ತೆ ನವೀಕರಿಸಲಾಗಿದೆ. ಈ ದೇವಾಲಯ ಜನ್ಮಾಷ್ಟಮಿ ದಿನ ಹೆಚ್ಚು ಭಾಕ್ತಾದಿಗಳಿಂದ ತುಂಬಿಕೊಂಡಿರುತ್ತದೆ.

ಈ ದೇವಾಲಯಗಳೊಂದಿಗೆ ಶಿವ ದೇವಾಲಯವಾದ ಕುಬೇರ ಆಸ್ಥಾನ, ಜೈನ ತೀರ್ಥಂಕರರ ಪ್ರತೀಕವಾದ ದೇವರಾಹ ಆಸ್ಥಾನ, ಹಿಂದೂ ದೇವತೆಗಳ ಪ್ರತೀಕವಾದ ಕುರುಕುಲ್ಲಾ ಆಸ್ಥಾನಗಳನ್ನು ಕೂಡ ಕಾಣಬಹುದು.

ಕುಶಿನಗರ ತಲುಪುವ ಮಾರ್ಗ

ಕುಶಿನಗರವನ್ನು ರಸ್ತೆ,ರೈಲು ಮತ್ತು ವಿಮಾನ ಮಾರ್ಗವಾಗಿ ತಲುಪಬಹುದು.

ಕುಶಿನಗರ ಪ್ರವಾಸಕ್ಕೆ ಉತ್ತಮ ಕಾಲ

ನವೆಂಬರ್ ಮತ್ತು ಮಾರ್ಚ್ ಕುಶಿ ನಗರ ತಲುಪಲು ಸೂಕ್ತ ಸಮಯ.

ಕುಶಿನಗರ ಪ್ರಸಿದ್ಧವಾಗಿದೆ

ಕುಶಿನಗರ ಹವಾಮಾನ

ಉತ್ತಮ ಸಮಯ ಕುಶಿನಗರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುಶಿನಗರ

  • ರಸ್ತೆಯ ಮೂಲಕ
    ಕುಶಿನಗರ ರಾಷ್ಟ್ರೀಯ ಹೆದ್ದಾರಿ 28 ರಲ್ಲಿದೆ ಮತ್ತು ಉತ್ತರಪ್ರದೇಶದ ಇತರ ನಗರಗಳಿಗೆ ಬಸ್ಸಿನ ಸಂಪರ್ಕ ಸುಲಭವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣವೆಂದರೆ ಗೋರಖ್ಪುರ್ ಮತ್ತು ಡೋರಿಯ. ಇವೆರಡು ನಿಲ್ದಾಣಗಳಲ್ಲಿ ಭಾರತದ ಬೇರೆ ಬೇರೆ ನಗರಗಳಿಂದ ರೇಲ್ವೆ ಸಂಪರ್ಕವಿದೆ. ಇಲ್ಲಿಂದ ಟ್ಯಾಕ್ಸಿ ಮೂಲಕ ಕುಶಿನಗರ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕುಶಿನಗರದಿಂದ 252 ಕಿ ಮೀ ಅಂತರದಲ್ಲಿರುವ ಲಖನೌ ವಿಮಾನ ನಿಲ್ದಾಣ ಹತ್ತಿರದ ನಿಲ್ದಾಣವಾಗಿದೆ. ಅಲ್ಲದೆ ಕೆಲವು ವಿಮಾನಗಳು ಗೋರಖ್ಪುರ್ ನಿಂದ ಕೇವಲ 5 ಕಿ ಮೀ ಅಂತರದಲ್ಲಿರುವ ಕಸಿಯ ನಿಲ್ದಾಣದಲ್ಲೂ ಇಳಿಯುತ್ತವೆ. ಇದು ಕುಶಿನಗರದಿಂದ 46 ಕಿ ಮೀ ಅಂತರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri