ಜಮುಯಿ ಬಿಹಾರದ ಪ್ರಸಿದ್ಧ ರಾಜ್ಯಗಳಲ್ಲಿ ಒಂದು. ಇದು ಮುಖ್ಯವಾಗಿ ಜೈನ ಧರ್ಮದ ಪೌರಾಣಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಗಾಗಿ ಹೆಸರುವಾಸಿಯಾಗಿದೆ. ಇದು ಬಿಹಾರದ 38 ರಾಜ್ಯಗಳಲ್ಲೊಂದು. ಜಮುಯಿ ಜಿಲ್ಲೆಯು ಮಹಾಭಾರತ ಕಾಲದಿಂದಲೂ ಪ್ರಸಿದ್ಧವಾಗಿದೆ. ಜಮುಯಿ ಪ್ರವಾಸೋದ್ಯಮವು ಮತ್ತೊಂದು ಕಾರಣಕ್ಕಾಗಿ ಮುಖ್ಯವಾದುದು. ಅದೇನೆಂದರೆ ಭಗವಾನ್ ಮಹಾವೀರನು ಜ್ರಿಭಿಕ್ಗ್ರಾಮ್ ಅಥವ ‘ಜಂಭಿಯಾಗ್ರಾಮ್’ ಎನ್ನುವ ಹಳ್ಳಿಯಲ್ಲಿ ತನ್ನ ಕೈವಲ್ಯಜ್ಞಾನವನ್ನು ಪಡೆದನಂತೆ.
ಜಮುಯಿಯಲ್ಲಿ ಹಲವು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳಿವೆ. ಇವುಗಳಲ್ಲಿ ಹೆಚ್ಚು ಚರ್ಚಿತವಾಗುವ ಸ್ಥಳಗಳೆಂದರೆ ಜೈನ ಮಂದಿರ, ಕ್ಷತ್ರಿಯ ಕುಂಡ ಗ್ರಾಮ, ಗಿದ್ಧೇಶ್ವರ ದೇವಾಲಯ, ಪಟ್ನೇಶ್ವರ ಮಂದಿರ, ಕಾಳಿ ಮಂದಿರ, ಹಜರತ್ ಖಾನ್ ಗಾಜಿ ದರ್ಗಾ, ಸಿಮುಲ್ತಲ್ಲ ಗಿರಿಧಾಮ, ಕುಮಾರ ಗ್ರಾಮ, ಸುಗ್ಗಿ, ನಾಗಿ ಅಣೆಕಟ್ಟು ವನ್ಯಜೀವಿಧಾಮ ಇತ್ಯಾದಿ. ಜಮುಯಿಗೆ ಉತ್ತಮ ರೈಲು, ರಸ್ತೆ ಮತ್ತು ವಾಯು ಸೌಲಭ್ಯವಿದೆ. ವಿಮಾನದ ಮೂಲಕ ಬರಲಿಚ್ಛಿಸುವ ಪ್ರವಾಸಿಗರು ಗಯಾ ಮತ್ತು ಪಟ್ನಾ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಜಮುಯಿ ಹಲವು ಪ್ರಸಿದ್ಧ ಸಾಹಿತಿಗಳು ಮತ್ತು ಸಂಗೀತಗಾರರಿಗೆ ಜನ್ಮನೀಡಿದೆ.
ಜುಲೈ-ನವಂಬರ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.
ತಲುಪುವುದು ಹೇಗೆ?
ಈ ಸ್ಥಳಕ್ಕೆ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವಿದೆ.


Click it and Unblock the Notifications