Search
  • Follow NativePlanet
Share

ಬರೇಲಿ : ಉತ್ತರ ಪ್ರದೇಶದ ಒಂದು ಪ್ರಮುಖ ವಾಣಿಜ್ಯ ನಗರ

14

ಉತ್ತರ ಪ್ರದೇಶದಲ್ಲಿನ ಬರೇಲಿ ಜಿಲ್ಲೆಯು ಉತ್ತರ ಭಾರತದ ಮುಖ್ಯ ವಾಣಿಜ್ಯ ಕೇಂದ್ರ. ಇದು ನಗರದಲ್ಲಿರುವ ಹಲವು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರಸಿದ್ಧವಾಗಿದೆ. ರಾಮಗಂಗಾ ನದಿ ದಂಡೆಯಲ್ಲಿರುವ ಈ ನಗರವು ಹಲವು ಕುತೂಹಲಕಾರಿ ವಸ್ತು ಸಂಗ್ರಹಾಲಯಗಳಿಗೆ ಮತ್ತು ಮನೋರಂಜನಾ ಉದ್ಯಾನವನಗಳಿಗೆ ತವರು ಪ್ರದೇಶವಾಗಿದೆ.

ಬರೇಲಿಯು ಪೀಠೋಪಕರಣ ತಯಾರಿಕೆಯ ಮುಖ್ಯ ಕೇಂದ್ರ. ಅದರಲ್ಲೂ ಬಿದಿರಿನ ಪೀಠೋಪಕರಣಗಳಿಗೆ ಪ್ರಸಿದ್ಧವಾದದ್ದು. ಈ ನಗರವು ಬನ್ಸ್-ಬರೇಲಿ ಎಂದು ಪ್ರಸಿದ್ಧವಾಗದೆ. ಬನ್ಸ್ ಎಂದರೆ ಬಿದಿರು ಎಂದರ್ಥ. ಆದರೆ ಈ ನಗರಕ್ಕೆ ಈ ಹೆಸರು ಬಂದದ್ದು ಬಿದಿರಿನಿಂದಲ್ಲ. ಬದಲಿಗೆ 1537ರಲ್ಲಿ ಜಗತ್‍ಸಿಂಗ್‍ನ ಇಬ್ಬರು ಮಕ್ಕಳಾದ ಬನ್ಸಲ್‍ದೇವ್ ಮತ್ತು ಬಲದೇವ ಈ ನಗರವನ್ನು ಕಟ್ಟಿದ್ದರಿಂದ ಈ ಹೆಸರು ಬಂದಿತು.

ಬರೇಲಿಯ ಸುತ್ತಮುತ್ತಲ ಪ್ರವಾಸಿ ತಾಣಗಳು

ಬರೇಲಿಯಲ್ಲಿ ನಾಲ್ಕು ಪ್ರಮುಖ ಶಿವ ದೇವಾಲಯಗಳಿವೆ: ದೊಪೇಶ್ವರನಾಥ, ಮಧಿನಾಥ, ತ್ರಿವಾತಿನಾಥ ಮತ್ತು ಅಲೋಕನಾಥ. ಈ ನಾಲ್ಕು ದೇವಾಲಯಗಳು ನಗರದ ನಾಲ್ಕು ದಿಕ್ಕುಗಳಲ್ಲಿವೆ. ಇಲ್ಲಿನ ಲಕ್ಷ್ಮೀನಾರಾಯಣ ದೇವಾಲಯವು ಭೇಟಿ ನೀಡಲೇಬೇಕಾದ ಮುಖ್ಯ ದೇವಾಲಯ. ಬರೇಲಿಯಲ್ಲಿ ಫನ್ ಸಿಟಿ ಎನ್ನುವ ಪ್ರಸಿದ್ಧವಾದ ಮನೋರಂಜನಾ ಉದ್ಯಾನವನವಿದ್ದು ನೀರಿನಾಟಗಳಿಗೆ ಮತ್ತು ಕುಟುಂಬದವರೊಂದಿಗೆ ಪ್ರವಾಸ ಹೋಗಲು ಸೂಕ್ತ ಸ್ಥಳ. ಇಲ್ಲಿನ ಇನ್ನಿತರ ಧಾರ್ಮಿಕ ಸ್ಥಳಗಳೆಂದರೆ ದರ್ಗಾ ಏ ಅಲ-ಹಜ಼ರತ್, ಬೀಬೀ ಜಿ ಕೀ ಮಸ್ಜಿದ್ ಮತ್ತು ಶ್ರೀ ಸಾಯಿ ಮಂಡಿ. ನಗರದ ಇತಿಹಾಸವನ್ನು ತಿಳಿಯಲು ಆಸಕ್ತಿಯಿರುವವರು ಇಲ್ಲಿನ ಪಾಂಚಾಲ ವಸ್ತುಸಂಗ್ರಹಾಲಯ ಮತ್ತು ಆರ್ಮಿ ಸರ್ವೀಸ್ ಕಾರ್ಪ್ಸ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು.

ಬರೇಲಿಗೆ ಭೇಟಿ ನೀಡಲು ಸೂಕ್ತ ಸಮಯ

ಚಳಿಗಾಲ ಬರೇಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಬರೇಲಿಗೆ ತಲುಪುವುದು ಹೇಗೆ?

ಬರೇಲಿಯನ್ನು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು. ನವದೆಹಲಿ ಬರೇಲಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ.

ಬರೇಲಿ ಪ್ರಸಿದ್ಧವಾಗಿದೆ

ಬರೇಲಿ ಹವಾಮಾನ

ಉತ್ತಮ ಸಮಯ ಬರೇಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬರೇಲಿ

  • ರಸ್ತೆಯ ಮೂಲಕ
    ಬರೇಲಿಯು ಉತ್ತರ ಪ್ರದೇಶದ ಮುಖ್ಯ ನಗರಗಳು ಮತ್ತು ಅಕ್ಕಪಕ್ಕದ ರಾಜ್ಯಗಳೊಂದಿಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಸಂಪರ್ಕ ಹೊಂದಿದೆ. ಇಲ್ಲಿಂದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಜೈಪುರ, ಆಗ್ರಾ, ಮಥುರ, ಘಾಜಿಬಾದ್, ನವದೆಹಲಿ, ಲಕ್ನೋ ಮತ್ತು ವಾರಣಾಸಿಗಳಂತಹ ಪ್ರಮುಖ ನಗರಗಳಿಗೆ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬರೇಲಿಯು ದೆಹಲಿ-ಕೋಲ್ಕತ್ತಾ ರೈಲ್ವೇ ಮಾರ್ಗದಲ್ಲಿದ್ದು ಉತ್ತರ ಪ್ರದೇಶದ ಮುಖ್ಯ ಸ್ಥಳಗಳು ಮತ್ತು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಬರೇಲಿಯ ಕಂಟೋನ್ಮೆಂಟ್ (ದಿಂಡು) ನಿಲ್ದಾಣವು ಇಲ್ಲಿನ ಪ್ರಮುಖ ನಿಲ್ದಾಣ. ಇಲ್ಲಿಗೆ ಪ್ರಮುಖ ನಗರಗಳಾದ ದೆಹಲಿ, ಕಾನ್ಪುರ, ಕೋಲ್ಕತ್ತಾ ಮತ್ತು ಮುಂಬೈಗಳಿಗೆ ರೈಲು ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಸನಿಹದ ವಿಮಾನ ನಿಲ್ದಾಣ ನವದೆಹಲಿಯಲ್ಲಿದ್ದು 250 ಕಿಮೀ ದೂರದಲ್ಲಿದೆ. ಇಲ್ಲಿಂದ ಬರೇಲಿ ತಲುಪಲು ಸರ್ಕಾರಿ/ಖಾಸಗಿ ಬಸ್ಸುಗಳು ಅಥವ ಬಾಡಿಗೆ ಟ್ಯಾಕ್ಸಿಗಳು ಅಥವ ರೈಲಿನ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed