Search
  • Follow NativePlanet
Share

ಬರಾನ್ - ಧಾರ್ಮಿಕ ಮತ್ತು ಉಲ್ಲಾಸಭರಿತ ಕ್ಷೇತ್ರ

18

ಬರಾನ್, ಇದೊಂದು ರಾಜಸ್ತಾನದ ಜನಪ್ರಿಯ ಜಿಲ್ಲೆ. ಇದನ್ನು 1991, ಏಪ್ರಿಲ್ 10ರಿಂದ ಕೋಟಾ ಜಿಲ್ಲೆಯಲ್ಲಿ ವಿಲೀನಗೊಳಿಸಲಾಗಿದೆ. ಈ ಪ್ರದೇಶವು ಸಾಗವಾನ್, ಖೇರ್, ಸಾಲನ್ ಮತ್ತು ಗರ್ಗಸಾರಿ ಅರಣ್ಯದಿಂದ ಮತ್ತು ಕಾಳಿಸಿಂದ್ ನದಿಯಿಂದ ಸುತ್ತುವರಿದಿದೆ. ಇದನ್ನು 14 ಮತ್ತು 15ನೇ ಶತಮಾನದಲ್ಲಿ ಸೋಲಂಕಿ ರಜಪೂತರು ಆಳಿದ್ದರು.ರಾಮಾಯಣದಲ್ಲಿ ಬರಾನ್ದೇಶಾದ್ಯಂತ ಹಲವು ಪ್ರದೇಶಗಳಿಂದ ಪ್ರವಾಸಿಗರನ್ನು ಸೆಳೆಯುವಂತಹ ಅನೇಕ ತಾಣಗಳು ಬರಾನ್‌ ನಲ್ಲಿವೆ. ಸಿತಾಬರಿ, ಕಕೋನಿ, ಬಿಲಾಸ್‌ಗಢ ಮತ್ತು ಶಹಾಬಾದ್ ಕೋಟೆಗಳು ಕೆಲವು ಪ್ರಮುಖ ಪ್ರವಾಸಿ ತಾಣಗಳು. ಇವುಗಳಲ್ಲಿ ಸಿತಾಬರಿಯು ಐತಿಹಾಸಿಕ ಮತ್ತು ಧಾರ್ಮಿಕ ಅಂಶಗಳನ್ನು ಹೊಂದಿದೆ. ಹಿಂದೂ ಪುರಾಣದ ಪ್ರಕಾರ ರಾಮನ ಪತ್ನಿಯಾದ ಸೀತಾದೇವಿಯು ಈ ಪ್ರದೇಶದಲ್ಲಿ ಲವ ಕುಶರಿಗೆ ಜನ್ಮ ನೀಡಿದ್ದಳು. ಅಯೋಧ್ಯೆಯನ್ನು ಬಿಟ್ಟ ನಂತರ ಸೀತೆಯು ತನ್ನ ಮಕ್ಕಳ ಜೊತೆ ಇದೇ ಪ್ರದೇಶದಲ್ಲಿ ವಾಸಿಸಿದ್ದಳು. ಇಲ್ಲಿ ಸೀತೆಯ ದೇವಸ್ಥಾನವೂ ಕೂಡಾ ಇದೆ. ದೇವಸ್ಥಾನದ ಸಮೀಪದಲ್ಲಿ ಹಲವು ನೀರಿನ ಕುಂಡಗಳನ್ನು ಪ್ರವಾಸಿಗರು ಕಾಣಬಹುದು. ಸಿತಾಬರಿ ಮೇಳವು ಅತ್ಯಂತ ಜನಪ್ರಿಯವಾಗಿದ್ದು, ಪ್ರತಿವರ್ಷ ಇಲ್ಲಿ ನಡೆಯುತ್ತದೆ.

ಕೆಲವು ಗಮನಾರ್ಹ ಧಾರ್ಮಿಕ ಸ್ಥಳಗಳು

ಬರಾನ್‌ನಲ್ಲಿರುವ ಕೆಲವು ಪ್ರಮುಖ ಧಾರ್ಮಿಕ ಸ್ಥಳಗಳೆಂದರೆ, ಭಂದ್ ದೇವ್ರ ದೇವಸ್ಥಾನ, ಬ್ರಹ್ಮಣಿ ಮಾತಾಜಿ ದೇವಸ್ಥಾನ ಮತ್ತು ಮಣಿಹರ ಮಹಾದೇವ ಮಂದಿರ. ಬರಾನ್‌ನ ಅತ್ರು ತೆಹ್ಸಿಲ್‌ನಲ್ಲಿ ಗರ‍್ಗಚ್‌ನ್ನು ನೋಡಬಹುದು. ಇವು 9ರಿಂದ 13ನೇ ಶತಮಾನದಲ್ಲಿ ನಿರ್ಮಿಸಿದ ಪುರಾತನ ದೇವಸ್ಥಾನಗಳು.ಭಂದ್ ದೇವ್ರ ದೇವಸ್ಥಾನವು ಬರಾನ್‌ನಲ್ಲಿರುವ ಅತ್ಯಂತ ಜನಪ್ರಿಯ ಧಾರ್ಮಿಕ ಸ್ಥಳ. ಇದನ್ನು ’ರಾಜಸ್ತಾನದ ಖುಜರಾಹೋ’ ಎಂದೂ ಕೂಡಾ ಕರೆಯಲಾಗಿದೆ. ರಾಮಗಢ ಗುಡ್ಡದಲ್ಲಿ ಬರಾನ್‌ನಿಂದ ಸುಮಾರು 40 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ದೇವಸ್ಥಾನವು ಹಿಂದೂ ದೇವ ಶಿವನಿಗೆ ಅರ್ಪಿತವಾಗಿದ್ದು, ಇದನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಕಿಸ್ನಾಯ್ ಮತ್ತು ಅನುಪಮ ದೇವಿ ದೇವಸ್ಥಾನವೂ ಇದೆ.

ಬರಾನ್‌ಗೆ ಹೋಗುವುದು

ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಈ ಪ್ರದೇಶವನ್ನು ದೇಶದ ಎಲ್ಲಾ ಭಾಗಗಳಿಂದಲೂ ಸಂಪರ್ಕವನ್ನು ಹೊಂದಿದೆ. ಜೈಪುರ ವಿಮಾನ ನಿಲ್ದಾಣ ಮತ್ತು ಬರಾನ್ ರೈಲ್ವೆ ನಿಲ್ದಾಣವು ಹತ್ತಿರವಾಗಿದೆ. ಪ್ರವಾಸಿಗರು ಬರಾನ್‌ಗೆ ಸಮೀಪದ ಪಟ್ಟಣಗಳಾದ ಅಜ್ಮೇರ್, ಬಿಕಾನೇರ್, ಜೈಪುರ, ದೆಹಲಿ, ಕೋಟಾ ಮತ್ತು ಗ್ವಾಲಿಯರ್‌ನಿಂದ ರಸ್ತೆಯ ಮೂಲಕ ಸಂಪರ್ಕ ಪಡೆಯಬಹುದು.

ಪ್ರವಾಸಕ್ಕೆ ಸೂಕ್ತ ಕಾಲ

ಬರಾನ್‌ಗೆ ಪ್ರವಾಸ ಮಾಡುವ ಪ್ರಯಾಣಿಕರು ಫೆಬ್ರುವರಿ ಮತ್ತು ಅಕ್ಟೋಬರ್ ತಿಂಗಳ ಮಧ್ಯದ ಅವಧಿಯನ್ನು ಆಯ್ಕೆ ಮಾಡಬಹುದು. ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಸುತ್ತಲಿನ ಪ್ರದೇಶಗಳನ್ನು ನೋಡಲು ಸೂಕ್ತವಾಗಿದೆ.

ಬರಾನ್ ಪ್ರಸಿದ್ಧವಾಗಿದೆ

ಬರಾನ್ ಹವಾಮಾನ

ಉತ್ತಮ ಸಮಯ ಬರಾನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬರಾನ್

  • ರಸ್ತೆಯ ಮೂಲಕ
    ಬರಾನ್‌ಗೆ ಸಮೀಪದ ಪಟ್ಟಣಗಳಾದ ಜೈಪುರ, ಉದಯ್‌ಪುರ, ಶಿವಪುರಿ, ಗ್ವಾಲಿಯರ್, ನಹರ್‌ಗರ್ ಮತ್ತು ಶಹಾಬಾದ್‌ನಿಂದ ಸುಲಭವಾಗಿ ಬಸ್‌ಗಳು ಲಭ್ಯವಿದೆ. ಪ್ರವಾಸಿಗರು ತಮ್ಮ ಬಜೆಟ್‌ಗೆ ಅನುಕೂಲವಾಗಿ ಎಸಿ ಅಥವಾ ಎಸಿಯಲ್ಲದ ಬಸ್‌ಗಳನ್ನು ಪಡೆದು ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬರಾನ್ ರೈಲ್ವೆ ಸ್ಟೇಷನ್‌ಗೆ ಭಾರತದ ಪ್ರಮುಖ ನಗರಗಳಿಂದ ಸಾಕಷ್ಟು ರೈಲುಗಳಿವೆ. ಭೋಪಾಲ್, ಜೈಪುರ, ಜೋಧ್‌ಪುರ ಮತ್ತು ಕೋಟಾ ರೈಲುಗಳು ಈ ರೈಲ್ವೆ ಸ್ಟೇಷನ್‌ಗೆ ನಿರಂತರವಾಗಿ ಸಂಪರ್ಕವನ್ನು ಹೊಂದಿದೆ. ನಗರದ ಕೇಂದ್ರ ಭಾಗದಿಂದ ರೈಲ್ವೆ ಸ್ಟೇಷನ್ ಸುಮಾರು 2 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬರಾನ್‌ಗೆ ಸಮೀಪದ ವಿಮಾನ ನಿಲ್ದಾಣವು ಜೈಪುರದಲ್ಲಿದೆ. ಇದು ಸುಮಾರು 250 ಕಿ.ಮೀ ದೂರದಲ್ಲಿದೆ. ಇದು ಪ್ರಮುಖ ಭಾರತೀಯ ನಗರಗಳಾದ ಮುಂಬೈ ಮತ್ತು ನವದೆಹಲಿಯಿಂದ ಸಂಪರ್ಕವನ್ನು ಹೊಂದಿವೆ. ವಿಮಾನನಿಲ್ದಾಣದಿಂದ ಪ್ರವಾಸಿಗರು ಕ್ಯಾಬ್‌ಗಳನ್ನು ಅಥವಾ ಬಸ್‌ಗಳನ್ನು ಪಡೆದು ನಗರದ ಮಧ್ಯಭಾಗಕ್ಕೆ ಬರಬಹುದು. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೋಟಾಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed