Search
  • Follow NativePlanet
Share
ಮುಖಪುಟ » ಸ್ಥಳಗಳು » ಬರಾನ್ » ಹವಾಮಾನ

ಬರಾನ್ ಹವಾಮಾನ

ಅಕ್ಟೋಬರಿನಿಂದ ಫೆಬ್ರುವರಿಯ ಅವಧಿಯು ಬರಾನ್ ಭೇಟಿ ಮಾಡಲು ಸೂಕ್ತ ಕಾಲ. ಈ ಅವಧಿಯಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌ನಿಂದ ಜೂನ್): ಮಾರ್ಚ್ ತಿಂಗಳಲ್ಲಿ ಬೇಸಿಗೆ ಕಾಲ ಆರಂಭವಾಗಿ ಜೂನ್ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ವಾತಾವರಣವು ತುಂಬಾ ಅನಾನುಕೂಲದ್ದಾಗಿದ್ದು ಒಣಹವೆಯಾಗಿರುತ್ತದೆ. ಗರಿಷ್ಟ ಮತ್ತು ಕನಿಷ್ಟ ತಾಪಮಾನವು 45 C ನಿಂದ 20 C ಇರುತ್ತದೆ. ಈ ಅವಧಿಯಲ್ಲಿ ಬರಾನ್‌ಗೆ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ್): ಮಳೆಗಾಲವು ಜುಲೈ ಮತ್ತು ಸಪ್ಟೆಂಬರ್ ಅವಧಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತದೆ. ಮಳೆಯು ಉಷ್ಣಾಂಶದ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಚಳಿಗಾಲ

(ಅಕ್ಟೋಬರ್‌ನಿಂದ ಫೆಬ್ರುವರಿ): ಬರಾನ್‌ನಲ್ಲಿ ಚಳಿಗಾಲ ಆರಂಭವಾಗುವುದು ಅಕ್ಟೋಬರ್‌ನಲ್ಲಿ ಮತ್ತು ಫೆಬ್ರುವರಿಯಲ್ಲಿ ಕೊನೆಯಾಗುತ್ತದೆ. ಈ ಅವಧಿಯಲ್ಲಿ, ಗರಿಷ್ಟ ಮತ್ತು ಕನಿಷ್ಟ ಉಷ್ಣಾಂಶವು 24 C ನಿಂದ 10 C ಇರುತ್ತದೆ. ಇಲ್ಲಿನ ಚಳಿಗಾಲವು ಒಣಹವೆಯನ್ನು ಕೂಡಿದ್ದು ವುಲನ್ ಬಟ್ಟೆಗಳನ್ನು ತೊಡುವುದು ಸೂಕ್ತವಲ್ಲ. ಬರಾನ್‌ಗೆ ಪ್ರವಾಸ ಕೈಗೊಳ್ಳಲು ಚಳಿಗಾಲವು ಅತ್ಯುತ್ತಮವಾಗಿದೆ.