Search
  • Follow NativePlanet
Share
» »ಯಮಯಿ ದೇವಸ್ಥಾನದಲ್ಲಿರುವ 7 ಕೆ.ಜಿ ಚಿನ್ನದ ಕಲಶ ನೋಡಿದ್ದೀರಾ?

ಯಮಯಿ ದೇವಸ್ಥಾನದಲ್ಲಿರುವ 7 ಕೆ.ಜಿ ಚಿನ್ನದ ಕಲಶ ನೋಡಿದ್ದೀರಾ?

ಯಮಯಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಇದು ಮಹಾರಾಷ್ಟ್ರದ ಸತಾರದಲ್ಲಿರುವ ಪ್ರಸಿದ್ಧ ದೇವಾಯವಾಗಿದೆ. ಅಷ್ಟೇ ಅಲ್ಲದೆ ಯಮಯಿ ಮಹಾರಾಷ್ಟ್ರದ ಸಾಕಷ್ಟು ಕುಟುಂಬದ ಕುಲದೇವಿಯೂ ಆಗಿದ್ದಾಳೆ. ಹಾಗಾದರೆ ಈ ದೇವಾಲಯದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಯಮಯಿ ದೇವಸ್ಥಾನ ?

ಎಲ್ಲಿದೆ ಯಮಯಿ ದೇವಸ್ಥಾನ ?

PC: wikipedia

ಯಮಯಿ ದೇವಸ್ಥಾನ ಸತಾರಾದಿಂದ 44 ಕಿ.ಮೀ ಮತ್ತು ಪಂಚಗನಿಯಿಂದ 63 ಕಿ.ಮೀ ದೂರದಲ್ಲಿದೆ. ಯಮಯಿ ದೇವಿ ದೇವಾಲಯ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಔಂಧ್ ನಲ್ಲಿರುವ ಒಂದು ಬೆಟ್ಟದ ಮೇಲೆ ನೆಲೆಗೊಂಡಿದೆ. ಮಹಾರಾಷ್ಟ್ರದಲ್ಲಿ ಈ ದೇವಸ್ಥಾನವನ್ನು ಪೂಜಿಸಲಾಗುತ್ತದೆ ಮತ್ತು ಸತಾರಾದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಇದೂ ಒಂದಾಗಿದೆ.

ಮಗುವಿನ ಹಣೆಬರಹ ಬರೆಯುತ್ತಾಳಂತೆ ದೇವಿ

ಮಗುವಿನ ಹಣೆಬರಹ ಬರೆಯುತ್ತಾಳಂತೆ ದೇವಿ

PC: Pratk26

ಯಮಯಿ ದೇವಿ ಜ್ಯೋತಿಬಾ ದೇವಿಯ ಸಹೋದರಿ. ಯಮಯಿ ದೇವಿ ಅನೇಕ ಮಹಾರಾಷ್ಟ್ರ ಕುಟುಂಬಗಳ ಕುಲ-ದೇವಿಯಾಗಿದ್ದಾಳೆ. ಪ್ರಸಿದ್ಧ ದಂತಕಥೆಯ ಪ್ರಕಾರ, ಮಗು ಜನಿಸಿದ ಐದು ದಿನಗಳಲ್ಲಿ ಯಮಯಿ ದೇವಿ ಮಗುವಿನ ಹಣೆಬರಹವನ್ನು ಬರೆಯುತ್ತಾಳಂತೆ. ಜ್ಯೋತಿ ಬಾ ದೇವಿ ಕೂಡಾ ಬಹಳಷ್ಟು ಜನರ ಕುಲದೇವಿಯಾಗಿದ್ದಾಳೆ. ಮಹಾರಾಷ್ಟ್ರದ ಕೊಲ್ಲಾಪುರ ತಾಲೂಕಿನಲ್ಲಿರುವ ಜ್ಯೋತಿ ಬಾ ದೇವಸ್ಥಾನವನ್ನು ಭೇಟಿ ನೀಡಿದ ನಂತರ ಯಮಯಿ ದೇವಸ್ಥಾನವನ್ನು ಭೇಟಿ ನೀಡಲೇ ಬೇಕು. ಆಗ ಮಾತ್ರ ಯಾತ್ರೆ ಸಂಪೂರ್ಣವಾಗುವುದು ಎನ್ನಲಾಗುತ್ತದೆ.

2 ಮೀಟರ್ ಎತ್ತರದ ಮೂರ್ತಿ

2 ಮೀಟರ್ ಎತ್ತರದ ಮೂರ್ತಿ

ಯಮಯಿ ದೇವಿ ಅನೇಕ ಮಹಾರಾಷ್ಟ್ರ ಕುಟುಂಬಗಳ ಕುಟುಂಬದ ದೇವತೆಯಾಗಿದ್ದು, ಕಪ್ಪು ಕಲ್ಲಿನಲ್ಲಿರುವ ದೇವಿ ಮಹಿಷಾಸೂರ ಮರ್ದಿನಿಯ ಮೂರ್ತಿ ಇದಾಗಿದೆ. ಇದು ಸುಮಾರು 2 ಮೀಟರ್ ಎತ್ತರದಲ್ಲಿದೆ. ಈ ವಿಗ್ರಹವು ನಾಲ್ಕು ಕೈಗಳನ್ನು ಹೊಂದಿದೆ ಕೈಯಲ್ಲಿ ಗಧೆ, ಬಾಣ, ತ್ರಿಶೂಲ ಮತ್ತು ಪನಪತ್ರೆಯನ್ನು ಹೊಂದಿದ್ದಾಳೆ

ಚಿನ್ನದ ಕಲಶ

ಈ ದೇವಾಲಯವು ಅನೇಕ ಶತಮಾನಗಳಿಂದ ಪಂತ್ ಕುಟುಂಬದೊಂದಿಗೆ ಸಂಬಂಧ ಹೊಂದಿದೆ. ಈ ಹಿಂದಿನ ಪಂಥ್ ಕುಟುಂಬದ ಆಡಳಿತದ ಮುಖ್ಯಸ್ಥೆ ಗಾಯತ್ರಿದೇವಿ ಪಂಥ್‌ ಪ್ರತಿನಿಧಿ, ಬೆಟ್ಟದ ಮೇಲಿರುವ ಯಮಯಿ ದೇವಸ್ಥಾನದ ಮೇಲೆ 7 ಕಿಲೋಗ್ರಾಂ ಘನ ಚಿನ್ನದ ಕಲಶವನ್ನು ಸ್ಥಾಪಿಸಿದ್ದಾರೆ.

 ಭವಾನಿ ವಸ್ತು ಸಂಗ್ರಹಾಲಯ

ಭವಾನಿ ವಸ್ತು ಸಂಗ್ರಹಾಲಯ

PC: Shakher59
ಭಕ್ತರು ಬೆಟ್ಟದ ಕೆಳಭಾಗದಲ್ಲಿ ಪ್ರಾರಂಭವಾಗುವ ಮೆಟ್ಟಿಲುಗಳನ್ನು ಬಳಸಿ ದೇವಾಲಯವನ್ನು ತಲುಪಬಹುದು. ಬೆಟ್ಟದ ಮೇಲೆ ನೇರವಾದ ರಸ್ತೆ ಕೂಡ ಲಭ್ಯವಿದೆ. ಆಂಧ್ರದ ಮಹಾರಾಜರ ಖಾಸಗಿ ಸಂಗ್ರಹದಿಂದ ಶ್ರೀ ಭವಾನಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಮ್ಯೂಸಿಯಂನಲ್ಲಿ 19 ನೇ ಮತ್ತು 20 ನೇ ಶತಮಾನದ ಭಾರತೀಯ ಕಲಾವಿದರಾದ ಎಮ್. ವಿ. ಧುರಂಧರ್, ಬಾಬುರಾವ್ ಪೇಂಟರ್, ಮಾಧವ್ ಸತ್ವಾಲೇಕರ್ ಮತ್ತು ರಾಜ ರವಿವರ್ಮಾರ ಚಿತ್ರಕಲಾಕೃತಿಯನ್ನು ಕಾಣಬಹುದು. ಜೊತೆಗೆ ಬ್ರಿಟಿಷ್ ಕಲಾವಿದ ಹೆನ್ರಿ ಮೂರ್ ಅವರ ಪ್ರಸಿದ್ಧ ತಾಯಿ ಮತ್ತು ಮಗುವಿನ ಕಲ್ಲಿನ ರಚನೆಯಂತಹ ವರ್ಣಚಿತ್ರಗಳನ್ನು ಹೊಂದಿದೆ.

 ವಾರ್ಷಿಕ ಜಾತ್ರೆ

ವಾರ್ಷಿಕ ಜಾತ್ರೆ

PC: Pratk26
ಯಮಯಿ ದೇವಿ ದೇವಾಲಯದ ವಾರ್ಷಿಕ ಜಾತ್ರೆಯು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಪ್ರಕಾರ ಪುಷ್ಯ ತಿಂಗಳಲ್ಲಿ ಪುಷ್ಯ ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಂದು ಯಮಯಿ ದೇವಿ ಯಾತ್ರೆ ಆಚರಿಸಲಾಗುತ್ತದೆ. ಈ ಹಬ್ಬವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.

ಯೆ ಮಾಯಿ

ಯೆ ಮಾಯಿ

"ಯೆ ಮಾಯಿ" ಎನ್ನುವುದು ಮರಾಠಿ ಪದವಾಗಿದ್ದು, " ಬಾ ತಾಯಿ" ಎಂದು ಅರ್ಥ. ಕೊಲ್ಹಾಪುರದ ದೇವತೆ ಮಹಾಲಕ್ಷ್ಮಿ ಮತ್ತು ಜ್ಯೋತಿಬಾ ದೇವಿಯು ಯಮೈ ಎಂದು ಕರೆದರು. ಉಳಿದಂತೆ ಈ ದೇವಸ್ಥಾನದ ದೇವಿಯನ್ನು ಯಮಯಿ ದೇವಿ ಎಂದು ಕರೆಯಲಾಗುತ್ತದೆ.

ಸ್ಕಂದ ಪುರಾಣದ ಪ್ರಕಾರ

ಸ್ಕಂದ ಪುರಾಣದ ಪ್ರಕಾರ

ದಂತ ಕಥೆಯ ಪ್ರಕಾರ, ಔಂಧಾಸುರ ಎನ್ನುವ ರಾಕ್ಷಸ ಭೂ ಲೋಕದ ಜನರಿಗೆ, ಋಷಿ ಮುನಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದನು. ಆ ಸಮಯದಲ್ಲಿ ದೇವತೆಗಳು ಅಸಹಾಯಕ ಮತ್ತು ಬಲಹೀನರಾಗಿದ್ದರು.ಇವರು ದೇವಿಯನ್ನು ಪ್ರಾರ್ಥಿಸುತ್ತಾರೆ. ಈ ಅಸುರನಿಂದ ತಮ್ಮನ್ನು ರಕ್ಷಿಸುವಂತೆ ದೇವಿಯ ಮೊರೆ ಹೋಗುತ್ತಾರೆ. ಹಾಗಾಗಿ ದೇವಿಯು ಈ ಅಸುರನನ್ನು ಸಂಹರಿಸುತ್ತಾಳೆ. ಔಂಧಾಸುರ ಎನ್ನುವ ರಾಕ್ಷಸನನ್ನು ಸಂಹರಿಸಿದ್ದಕ್ಕಾಗಿ ಆ ಊರಿಗೆ ಔಂದ್ ಎನ್ನುವ ಹೆಸರು ಬಂದಿದೆ.

ವಜ್ರೈ ಜಲಪಾತ

ವಜ್ರೈ ಜಲಪಾತ

PC: Vinayakmore

ಸತಾರದ ಬಳಿ ನೋಡಲು ಇನ್ನಷ್ಟು ಪ್ರವಾಸಿ ಆಕರ್ಷಣೆಗಳಿವೆ ಅವುಗಳಲ್ಲಿ ವಜ್ರೈ ಜಲಪಾತವೂ ಒಂದು. ವಜ್ರೈ ಜಲಪಾತವು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾಸ್ ಹೂವಿನ ಕಣಿವೆಯ ಸಮೀಪವಿರುವ ಒಂದು ಆಕರ್ಷಕ ಜಲಪಾತವಾಗಿದೆ. ಇದು ಮಹಾರಾಷ್ಟ್ರದ ಅತ್ಯಂತ ಅದ್ಭುತ ಜಲಪಾತವಾಗಿದೆ ಮತ್ತು ಪುಣೆ ಸಮೀಪದ ಪ್ರಮುಖ ಮಾನ್ಸೂನ್ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇದು ಸುಮಾರು 853 ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇದು ವರ್ಷವಿಡೀ ಹರಿಯುವ ಜಲಪಾತವಾಗಿದೆ ಆದರೆ ಮಳೆಗಾಲದಲ್ಲಿ ಇಲ್ಲಿನ ನೋಟವು ಅತ್ಯಂತ ಅದ್ಭುತವಾಗಿರುತ್ತದೆ.

ಮಹಾಬಲೇಶ್ವರ

ಮಹಾಬಲೇಶ್ವರ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಒಂದು ಜನಪ್ರಿಯ ಪ್ರವಾಸಿ ತಾಣ. ಇದು ಭಾರತದ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ 1,353 ಮೀಟರ್ ಎತ್ತರದಲ್ಲಿದೆ. ಪುಣೆ ಮತ್ತು ಮುಂಬೈ ಬಳಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಈ ಸುಂದರವಾದ ಗಿರಿಧಾಮವನ್ನು ಹೆಚ್ಚಾಗಿ ಮಹಾರಾಷ್ಟ್ರದ ಗಿರಿಧಾಮಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಭವ್ಯವಾದ ಶಿಖರಗಳು ಮತ್ತು ಸುತ್ತಮುತ್ತಲಿನ ಕಾಡಿನೊಂದಿಗೆ ಸಮತಟ್ಟಾದ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಮಹಾಬಲೇಶ್ವರ ಮಾಲ್ಕಮ್ ಪೆತ್, ಓಲ್ಡ್ ಮಹಾಬಲೇಶ್ವರ ಮತ್ತು ಶಿಂಡೋಲಾ ಹಳ್ಳಿಯ ಕೆಲವು ಭಾಗಗಳನ್ನು ಹೊಂದಿದೆ. ಮಹಾಬಲೇಶ್ವರದಲ್ಲಿ ನೋಡಲು ಸಾಕಷ್ಟು ಪ್ರೇಕ್ಷಣೀಯ ತಾಣಗಳಿವೆ.

ತಲುಪುವುದು ಹೇಗೆ?

ಇದು ರಸ್ತೆ, ರೈಲು ಮತ್ತು ಗಾಳಿಯಿಂದ ಉತ್ತಮ ಸಂಪರ್ಕ ಹೊಂದಿದೆ. ಸತಾರಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು 100 ಕಿ.ಮೀ ದೂರದಲ್ಲಿರುವ ಪುಣೆ ಲೋಹೆಗಾಂವ್ ವಿಮಾನ ನಿಲ್ದಾಣ. ಇನ್ನು ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಮುಂಬೈ 200 ಕಿ.ಮೀ ದೂರದಲ್ಲಿದೆ.
ನೀವು ಪುಣೆಯಿಂದ ರೈಲು ನಿಲ್ದಾಣದಿಂದ ಸತಾರಕ್ಕೆ ರೈಲಿನ ಮೂಲಕ ತಲುಪಬಹುದು. ಮುಂಬೈ, ಚೆನ್ನೈ, ನವ ದೆಹಲಿ ಮತ್ತು ಕೊಲ್ಕತ್ತಾ ಸೇರಿದಂತೆ ಭಾರತದ ಇತರ ನಗರಗಳಿಂದ ಸತಾರಾಗೆ ನಿರಂತರ ಮತ್ತು ನಿಯಮಿತ ರೈಲುಗಳು ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X