Search
  • Follow NativePlanet
Share
» »ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಪೂರ್ವ ದಿಕ್ಕಿನಲ್ಲಿರುವ ಒಂದು ಪ್ರದೇಶವೇ ತಿರುಪತಿ. ಭಾರತ ದೇಶದಲ್ಲಿಯೇ ಸಾಂಸ್ಕ್ರತಿಕವಾಗಿ ಅತ್ಯಂತ ವೈಭವವಾಗಿ ಇರುವ ನಗರಗಳಲ್ಲಿ ತಿರುಪತಿ ಒಂದಾಗಿದೆ. ಸುಪ್ರಸಿದ್ಧವಾದ ತಿರುಪತಿ ದೇವಾಲಯವು ಸಮೀಪದಲ್ಲ

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಪೂರ್ವ ದಿಕ್ಕಿನಲ್ಲಿರುವ ಒಂದು ಪ್ರದೇಶವೇ ತಿರುಪತಿ. ಭಾರತ ದೇಶದಲ್ಲಿಯೇ ಸಾಂಸ್ಕ್ರತಿಕವಾಗಿ ಅತ್ಯಂತ ವೈಭವವಾಗಿ ಇರುವ ನಗರಗಳಲ್ಲಿ ತಿರುಪತಿ ಒಂದಾಗಿದೆ. ಸುಪ್ರಸಿದ್ಧವಾದ ತಿರುಪತಿ ದೇವಾಲಯವು ಸಮೀಪದಲ್ಲಿಯೇ ಇರುವುದರಿಂದ ಇದು ಭಕ್ತರಿಗೆ ಹಾಗು ಪ್ರವಾಸಿಗರಿಗೆ ಬಲು ಇಷ್ಟವಾದ ನಗರವೆಂದೇ ಹೇಳಬಹುದು.

ತಿರುಪತಿ ಎಂಬ ಪದಕ್ಕೆ ಮೂಲವೇನು? ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಯದೇ ಇದ್ದರೂ ಕೂಡ "ತಿರು", "ಪತಿ" ಎಂಬ 2 ಪದಗಳ ಜೋಡಣೆಯಿಂದ ಈ ಹೆಸರು ಏರ್ಪಾಟಾಯಿತು ಎಂದು ಹೇಳುತ್ತಾರೆ. ತಮಿಳಿನಲ್ಲಿ "ತಿರು" ಎಂದರೆ ಗೌರವ ಪ್ರಧಾನವಾದುದು ಎಂದು, "ಪತಿ" ಎಂದರೆ ಗಂಡ ಎಂಬ ಅರ್ಥವು ಇದೆ. ಹಾಗಾಗಿ ಆ ಪದಕ್ಕೆ ಅರ್ಥ "ಗೌರವಯುತವಾದ ಪತಿ" ಎಂಬ ಅರ್ಥವೇ ಆಗಿದೆ. ನಗರಕ್ಕೆ ಅತ್ಯಂತ ಸಮೀಪದಲ್ಲಿರುವ ತಿರುಮಲ ಬೆಟ್ಟವು ಪ್ರಪಂಚದಲ್ಲಿಯೇ 2 ನೇ ಅತ್ಯಂತ ಪ್ರಾಚೀನವಾದ ಬೆಟ್ಟವಾಗಿದೆ ಎಂದು ಹೇಳುತ್ತಾರೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎಂಬುದಕ್ಕೆ ಬಲವಾದ ಸಾಕ್ಷ್ಯಿಗಳು ಇಲ್ಲವಾದ್ದರಿಂದ ಕ್ರಿ.ಶ 4 ನೇ ಶತಮಾನದಿಂದ ವಿವಿಧ ರಾಜವಂಶಿಕರು ದೇವಾಲಯವನ್ನು ನಿರ್ವಹಿಸಿ, ಪುನರ್ ನಿರ್ಮಾಣ ಮಾಡಿದ್ದಾರೆ. 14 ಮತ್ತು 15 ನೇ ಶತಮಾನದಲ್ಲಿ ಈ ದೇವಾಲಯವು ಮುಸ್ಲಿಂ ದಂಡಯಾತ್ರೆಯನ್ನು ವಿಜಯವಂತವಾಗಿ ಆಚರಿಸಲಾಯಿತು. ಹಾಗೆಯೇ ಬ್ರಿಟೀಷ್ ದಾಳಿಗಳಿಂದ ಕೂಡ ತನ್ನನ್ನು ತಾನು ಕಾಪಾಡಿಕೊಂಡು ಈ ಕಟ್ಟಡವನ್ನು ಪ್ರಪಂಚದಲ್ಲಿಯೇ ಸಂರಕ್ಷಿತ ಪ್ರಾಚೀನ ಕಟ್ಟಡವಾಗಿ ನೆಲೆಗೊಂಡಿದೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

1933 ರಲ್ಲಿ ಮದ್ರಾಸ್ ಸರ್ಕಾರ ನೇಮಿಸಿದ ಕಮಿಷನರ್ ಅಧೀನದಲ್ಲಿ ತಿರುಮಲ ತಿರುಪತಿ ದೇವಾಲಯದ ಕಮಿಟಿ ಏರ್ಪಟ್ಟು ಪಾರಿಪಾಲನೆಯ ವ್ಯವಹಾರಗಳನ್ನು ನೋಡಿಕೊಳ್ಳುವ ಸಲುವಾಗಿ ಮದ್ರಾಸ್ ಶಾಸನಸಭೆಯು ಒಂದು ಕಾನೂನನ್ನು ಜಾರಿಗೊಳಿಸಿತು. ಇದರಿಂದಾಗಿ ತಿರುಮಲ ತಿರುಪತಿ ದೇವಾಲಯದ ವ್ಯವಹಾರಗಳು ನಿರ್ವಹಣೆಗಾಗಿ ತಿರುಮಲ ತಿರುಪತಿ ದೇವಾಲಯವು ಏರ್ಪಾಟಾಯಿತು.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಸಲಹ ಮಂಡಳಿಯು ತಿರುಮಲ ತಿರುಪತಿ ದೇವಾಲಯಕ್ಕೆ ಸಲಹೆಗಳನ್ನು ನೀಡಿತು. ತಿರುಪತಿ ನಗರವು ಇಂದಿಗೂ ಕೆ.ಟಿ. ರಸ್ತೆಯಲ್ಲಿ ಕೊತ್ತೂರಿನಲ್ಲಿ ಇತ್ತು. ತದನಂತರ ಅದು ಗೋವಿಂದರಾಜಸ್ವಾಮಿ ದೇವಾಲಯದ ಸಮೀಪದಲ್ಲಿ ಮಾರ್ಪಾಟಾಯಿತು. ಇಂದು ನಗರದ ಸುತ್ತಮುತ್ತ ಪ್ರದೇಶಕ್ಕೂ ಕೂಡ ವಿಸ್ತಾರಗೊಂಡಿದೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಎಷ್ಟೇ ಹೇಳಿದರು ಇನ್ನು ಅನೇಕ ರಹಸ್ಯಗಳನ್ನು ಆ ಸ್ವಾಮಿಯು ತನ್ನಲ್ಲಿ ಅಡಗಿಸಿಕೊಂಡಿದ್ದಾನೆ. ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಪ್ರತಿದಿನ 1 ಲಕ್ಷದಿಂದ 2 ಲಕ್ಷದವರೆವಿಗೂ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಪ್ರತ್ಯೇಕವಾದ ದಿನಗಳಲ್ಲಿ ಸುಮಾರು 5 ಲಕ್ಷಮಂದಿ ಭಕ್ತರು ಸ್ವಾಮಿಯ ದರ್ಶನ ಕೋರಿ ಭೇಟಿ ನೀಡಲು ತಿರುಮಲ ತಿರುಪತಿಗೆ ಭೇಟಿ ನೀಡುತ್ತಾರೆ. ಆ 7 ಬೆಟ್ಟಗಳ ಒಡೆಯನ ಹೆಸರು ಕಿವಿಗೆ ಬಿದ್ದರೆ ಸಾಕು ಭಕ್ತರಿಗೆ ಭಕ್ತಿ-ಭಾವವು ಹೆಚ್ಚಾಗದೇ ಇರದು.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಇನ್ನು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಒಂದು ಬೆಕ್ಕು ವಾಸಿಸುತ್ತಿದೆ ಎಂಬುದು ನಿಮಗೆ ಗೊತ್ತ?. ಸಾಮಾನ್ಯವಾಗಿ ಶ್ರೀನಿವಾಸನ ದೇವಾಲಯಲ್ಲಿನ ಬಂಗಾರದ ಬಾಗಿಲು ಮುಂಜಾನೆ 3 ಗಂಟೆಗೆ ಸುಪ್ರಭಾತದ ಸೇವಾ ಸಮಯದಲ್ಲಿ ಅರ್ಚಕರ ಕೈಯಲ್ಲಿ ತೆರೆಸುತ್ತಾರೆ. ಆ ಸಮಯದಲ್ಲಿ ಬಂಗಾರದ ಬಾಗಿಲ ಒಳಗೆ ಅರ್ಚಕರು, ಜಿಯಂಗರ್ ಸ್ವಾಮಿ, ಒಬ್ಬ ಸನ್ನಿಧಿಗೊಲ್ಲ ಎಂಬ ಒಬ್ಬ ಯಾಧವ ಮಾತ್ರವೇ ಪ್ರವೇಶಿಸುತ್ತಾರೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಆದರೆ ಅದೇ ಸಮಯದಲ್ಲಿ ಆಶ್ಚರ್ಯಕರವಾಗಿ ಒಂದು ಬೆಕ್ಕು ಇವರ ಜೊತೆಗೆ ಬಂಗಾರದ ಬಾಗಿಲ ಒಳಗೆ ಪ್ರವೇಶಿಸುತ್ತದೆ. ಇದು ಶ್ರೀನಿವಾಸನ ಲೀಲೆ ಮಾತ್ರವಲ್ಲದೇ ಮತ್ತೇನೂ ಅಲ್ಲ. ಸಾಮಾನ್ಯವಾಗಿ ರಾತ್ರಿ ಏಕಾಂತ ಸಮಯದಲ್ಲಿ ಬಾಗಿಲುಗಳನ್ನು ಮುಚ್ಚಿ ಹಾಕುತ್ತಾರೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಆ ಸಮಯದಲ್ಲಿ ಬ್ರಹ್ಮಾದಿ ದೇವತೆಗಳು ಶ್ರೀನಿವಾಸನನ್ನು ಪೂಜಿಸುತ್ತಾರೆ ಎಂದು ಪ್ರತೀತಿ ಇದೆ. ಇನ್ನು ಆ ಸಮಯದಲ್ಲಿ ಗರ್ಭಾಲಯದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೇ ಆಗಲಿ ಒಳಗೆ ಯಾರು ಕೂಡ ಇರಬಾರದು. ಇದು ಅನಾದಿಕಾಲದಿಂದಲೂ ಮುಂದುವರೆಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಆ ಬೆಕ್ಕು ಕೂಡ ಈ ನಿಬಂಧನೆಗಳನ್ನು ಕ್ರಮ ತಪ್ಪದೇ ಪಾಲಿಸುತ್ತಿದೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಆ ನಂತರ ಸುಪ್ರಭಾತ ಸಮಯದಲ್ಲಿ ಅರ್ಚಕರ ಜೊತೆಗೆ ಆ ಬೆಕ್ಕು ಕೂಡ ಒಳಗೆ ಪ್ರವೇಶಿಸುತ್ತದೆ. ಆ ಬೆಕ್ಕು ಶ್ರೀನಿವಾಸರಿಗೆ ನೈವೇದ್ಯವನ್ನು ಇಟ್ಟ ನಂತರವೇ ಪ್ರಸಾದವನ್ನು ಸ್ವೀಕರಿಸುತ್ತದೆ. ಅದು ಕೂಡ ಅರ್ಚಕರು ಬೆಕ್ಕಿಗೆ ಮಾಡುವ ಸಂಜ್ಞೆಗಳನ್ನು ಗುರುತಿಸಿ ಪ್ರಸಾದವನ್ನು ಇಟ್ಟಾಗ ಮಾತ್ರವೇ ಅದು ಸ್ವೀಕರಿಸುತ್ತದೆ.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಹಾಗೆಯೇ ರಾತ್ರಿ ಏಕಾಂತ ಸೇವೆಯ ಸಮಯದಲ್ಲಿ ಶ್ರೀನಿವಾಸನಿಗೆ ಇಟ್ಟ ಹಾಲು, ಆರ್ಚಕರು ನೀಡಿದಾಗ ಸ್ವೀಕಾರ ಮಾಡುತ್ತದೆ. ಶ್ರೀನಿವಾಸನಿಗೆ ಇಟ್ಟಿರುವ ಪ್ರಸಾದವನ್ನು ಯಾವುದು ಕೂಡ ಸ್ವೀಕಾರ ಮಾಡುವುದಿಲ್ಲ. ಇದು ಆಶ್ಚರ್ಯಕರವಾದ ವಿಷಯವೇ ಆಗಿದೆ. ಮತ್ತೊಂದು ವಿಷಯವೆನೆಂದರೆ ಈ ಬೆಕ್ಕು ಆಯಸ್ಸು ಮುಗಿದ ನಂತರವೇ ಮತ್ತೊಂದು ಬೆಕ್ಕು ಆ ಸ್ಥಾನದಲ್ಲಿ ಶ್ರೀನಿವಾಸನಿಗೆ ಕೈಂಕರ್ಯವನ್ನು ಮಾಡಲು ಸಿದ್ಧವಾಗಿರುತ್ತದೆ. ಈ ವಿಧವಾಗಿ ವೆಂಕಟೇಶ್ವರ ಸ್ವಾಮಿಯು ಮನುಷ್ಯರ ಜೊತೆ ಜೊತೆಗೆ ಜಂತುಗಳಿಗೂ ಕೂಡ ಕಟಾಕ್ಷವನ್ನು ನೀಡುತ್ತಿದ್ದಾರೆ ಎಂದೇ ಹೇಳಬಹುದು.

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ತಿರುಪತಿ ತಿಮ್ಮಪ್ಪನ ಸೇವೆಯಲ್ಲಿದೆ ಈ ಪ್ರಾಣಿ....

ಅತ್ಯುತ್ತಮ ಸಮಯ
ವರ್ಷದಲ್ಲಿ ಮಳೆಗಾಲದ ನಂತರ ಬರುವ ಶೀತಾಕಾಲದಲ್ಲಿ ತಿರುಪತಿಗೆ ಭೇಟಿ ನೀಡುವುದು ಉತ್ತಮ. ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆವಿಗೂ ತಿರುಪತಿಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದೇ ಹೇಳಬಹುದು. ಆದರೆ ಜೂನ್‍ನಿಂದ ಸೆಪ್ಟೆಂಬರ್ ತಿಂಗಳ ಮಧ್ಯಯಲ್ಲಿ ನಡೆಯುವ ಪ್ರಧಾನವಾದ ಹಬ್ಬವಾದ ಬ್ರಹ್ಮೋತ್ಸವದ ಸಮಯದಲ್ಲಿ ಯಾತ್ರಿಕರು ಭೇಟಿ ನೀಡುವುದು ಉತ್ತಮವಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗದ ಮೂಲಕ
ತಿರುಪತಿಯಲ್ಲಿ ಅತಿ ದೊಡ್ಡದಾದ ಬಸ್ಸು ಟರ್ಮನಲ್ಸ್ ಇದೆ. ಇದು ಎಲ್ಲಾ ಪ್ರಧಾನವಾದ ಪಟ್ಟಣಗಳು, ನಗರಗಳು ಅಥವಾ ದಕ್ಷಿಣ ಭಾರತ ದೇಶದಿಂದ ನೇರವಾಗಿ ಬಸ್ಸುಗಳು ಇವೆ. ಅಲಿಪಿರಿ ಬಸ್ ಸ್ಟಾಪ್‍ನಿಂದ ತಿರುಪತಿಗೆ ಪ್ರತಿ 2 ನಿಮಿಷಕ್ಕೆ ಬಸ್ಸುಗಳು ಸಂಪರ್ಕ ಸಾಧಿಸುತ್ತಿರುತ್ತವೆ. ಈ ನಗರ ಅಂತರ್ ವಾತಾವರಣ ವ್ಯವಸ್ಥೆಯು ಹೆಚ್ಚು ಅಭಿವೃದ್ಧಿಯನ್ನು ಹೊಂದಿರುವ ಕಾರಣವಾಗಿ ಅನೇಕ ಸೌಕರ್ಯಗಳನ್ನು ಇದು ಹೊಂದಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ
ದೇಶ ವ್ಯಾಪಕವಾಗಿ ಸಂಪರ್ಕ ಸಾಧಿಸುತ್ತಿರುವ ರೈಲುಗಳಿಗೆ ತಿರುಪತಿ ಒಂದು ಪ್ರಧಾನವಾದ ರೈಲ್ವೆ ಸ್ಟೇಷನ್ ಆಗಿದೆ. ತಿರುಪತಿಯಿಂದ ರೇಣಿಗುಂಟ ಜಂಕ್ಷನ್‍ಗೆ ಪ್ರಯಾಣವು ಕೇವಲ 10 ನಿಮಿಷ ದೂರದಲ್ಲಿದೆ. ತಿರುಪತಿಯಿಂದ 84 ಕಿ.ಮೀ ದೂರದಲ್ಲಿರುವ ಗೂಡೂರ್ ಜಂಕ್ಷನ್ ಕೂಡ ಯಾತ್ರಿಕರು ಸುಲಭವಾಗಿ ತೆರಳಬಹುದು.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ತಿರುಪತಿ ವಿಮಾನ ನಿಲ್ದಾಣವು ಅಂತರ್‍ಜಾತಿಯ ವಿಮಾನನಿಲ್ದಾಣವಾಗಿ ಪ್ರಕಟಿಸಲಾಗಿದೆ. ಆದರೆ ಇಂದಿಗೂ ಅಂತರ್‍ಜಾತಿ ವಿಮಾನಗಳು ಇಲ್ಲಿ ಸಂಪರ್ಕ ಸಾಧಿಸುತ್ತಿಲ್ಲ. ಪ್ರಸ್ತುತ ಹೈದ್ರಾಬಾದ್, ದೆಹಲಿ, ವೈಜಾಗ್, ಕೊಯಂಬತ್ತೂರ್, ಕೋಲ್ಕತ್ತಾ, ಮುಂಬೈಗೆ ವಿಮಾನಗಳು ಇವೆ. ಈ ವಿಮಾನ ನಿಲ್ದಾಣವು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಚೆನ್ನೈ ಕೂಡ ಸಮೀಪದ ವಿಮಾನ ನಿಲ್ದಾಣವಾಗಿದೆ.

ತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳುತಿರುಪತಿಯ ತಿರುಮಲ ವೆಂಕಟೇಶ್ವರನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು

ತಿರುಮಲದಲ್ಲಿದೆ ಬಂಗಾರದ ಬಾವಿ !ತಿರುಮಲದಲ್ಲಿದೆ ಬಂಗಾರದ ಬಾವಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X