Search
  • Follow NativePlanet
Share
» »ಈ ಅಣಬೆಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡಿ

ಈ ಅಣಬೆಗಳನ್ನು ನೋಡಲು ಇಲ್ಲಿಗೆ ಭೇಟಿ ನೀಡಿ

By Vijay

ಇತ್ತೀಚೆಗೆ ಸ್ಪೇನ್, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಅಣಬೆ ಪ್ರವಾಸೋದ್ಯಮ ಎಂಬುವುದು ಪ್ರಸಿದ್ಧವಾಗುತ್ತಿದೆ. ಅಣಬೆಗಳು ತಿನ್ನುವ ಪದಾರ್ಥಗಳಾಗಿಯೂ ಭಾರತ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಬಳಸಲ್ಪಡುತ್ತವೆ. ಆದರೆ ಎಲ್ಲ ಅಣಬೆಗಳನ್ನು ತಿನ್ನಲಾಗುವುದಿಲ್ಲ. ಮೂಲತಃ ಅಣಬೆ ಎಂಬುವುದು ಶಿಲೀಂಧ್ರಗಳಿಂದ ಉಂಟಾಗುವ ವಾಯು ರಂಧ್ರಗಳಿರುವ ಒಂದು ವಿಶಿಷ್ಟ ಆಕೃತಿಯ ಬೆಳೆ ಅಥವಾ ಉತ್ಪನ್ನ.

ಕನ್ನಡದ ಆಡು ಭಾಷೆಯಲ್ಲಿ ನಾಯಿ ಕೊಡೆ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ನಾಯಿ ಛತ್ರಿಗಳೆಂದು ಕರೆಯಲ್ಪಡುವ ಅಣಬೆಗಳು ಸಾಕಷ್ಟು ವೈವಿಧ್ಯಮಯವಾಗಿಯೂ ಕಂಡುಬರುತ್ತವೆ. ಅಣಬೆಗಳಲ್ಲಿ ಆಸಕ್ತಿ ಇರುವ ಎಷ್ಟೊ ಜನರಿಗೆ ವಿವಿಧ ಅಣಬೆಗಳನ್ನು ನೋಡುವುದೆಂದರೆ ಹೆಚ್ಚಿನ ಕುತೂಹಲ.

ನಿಮಗಿಷ್ಟವಾಗಬಹುದಾದ : ಪಶ್ಚಿಮಘಟ್ಟದ ವೈವಿಧ್ಯಮಯ ಜೀವಸಂಕುಲ

ಅದರಲ್ಲೂ ಜೀವ ವಿಜ್ಞಾನ, ಸಸ್ಯಶಾಸ್ತ್ರ ಓದುತ್ತಿರುವ ವಿದ್ಯಾರ್ಥಿಗಳು, ಅಧ್ಯಯನಕಾರರಿಗೆ ವಿಶಿಷ್ಟ ಪ್ರಬೇಧಗಳ ಅಣಬೆಗಳ ಕುರಿತು ತಿಳಿಯುವುದೆಂದರೆ ಬಲು ಆಸಕ್ತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣಬೆ ಉತ್ಸವಗಳನ್ನೂ ಸಹ ಆಯೋಜಿಸಲಾಗುತ್ತದೆ. ಹಾಗೆ ಅಣಬೆ ಪ್ರವಾಸಗಳನ್ನೂ ಸಹ ಮಾಡಲಾಗುತ್ತದೆ.

ಪ್ರಸ್ತುತ ಲೇಖನವು ಭಾರತದ ಯಾವ್ಯಾವ ಸ್ಥಳಗಳಲ್ಲಿ ಯಾವ ರೀತಿಯ ವಿಶೇಷ ಅಣಬೆಗಳು ನೋಡ ಸಿಗುತ್ತವೆ ಎಂಬುದರ ಕುರಿತು ತಿಳಿಸುತ್ತದೆ. ನೀವೇನಾದರೂ ಈ ಸ್ಥಳಗಳಿಗೆ ಭೇಟಿ ನೀಡಿದರೆ, ಅದರಲ್ಲೂ ನೀವು ಪ್ರಕೃತಿ ಪ್ರಿಯರಾಗಿದ್ದರೆ ಈ ಅಣಬೆಗಳನ್ನು ನೋಡಲು ಮರೆಯದಿರಿ. ಅಥವಾ ನೀವೂ ಸಹ ಅಣಬೆ ಅಭಿಮಾನಿಗಳಾಗಿದ್ದರೆ ಈ ಸ್ಥಳಗಳಿಗೊಮ್ಮೆ ಭೇಟಿ ನೀಡಿ.

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಾರಾಟಾಂಗ್ ಪ್ರದೆಶದ ಕಾಡುಗಳಲ್ಲಿ ಕಂಡುಬರುವ ವಿಶಿಷ್ಟ ಅಣಬೆ.

ಚಿತ್ರಕೃಪೆ: Kriti.kuhoo

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಲಕೋನ ಕಾಡು ಪ್ರದೇಶಗಳಲ್ಲಿ ಅಮೋಘವಾಗಿ ಕಂಡುಬರುವ ಆಕರ್ಷಕ ಅಣಬೆ.

ಚಿತ್ರಕೃಪೆ: J.M.Garg

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಆಂಧ್ರದ ಪುರ್ವ ಘಟ್ಟದ ತಿರುಮಲ ಬೆಟ್ಟಗಳ ಅರಣ್ಯ ಪ್ರದೇಶಗಳಲ್ಲಿ ಕಂದುಬರುವ ಅಣಬೆಗಳು.

ಚಿತ್ರಕೃಪೆ: Adityamadhav83

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಹೈದರಾಬಾದ್ ಸುತ್ತಮುತ್ತಲಿನ ತೇವವಿರುವ ಭೂಪ್ರದೇಶಗಳಲ್ಲಿ ಕಂದುಬರುವ ಅಣಬೆ.

ಚಿತ್ರಕೃಪೆ: J.M.Garg

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಕರ್ನಾಟಕದ ಪಶ್ಚಿಮಘಟ್ಟದ ಕಾಡುಗಳಲ್ಲಿ ವಿಶೇಷವಾಗಿ ಕೆಲವು ಸ್ಥಳಗಳಲ್ಲಿ ಮಾತ್ರವೆ ಕಂಡುಬರುವ ಅಣಬೆ.

ಚಿತ್ರಕೃಪೆ: Shashidhara halady

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ವಿಶಾಖಾಪಟ್ಟಣದ ಕಂಬಲಕೊಂಡ ವನ್ಯಜೀವಿಧಾಮದಲ್ಲಿ ಕಂಡುಬರುವ ದೈತ್ಯ ಅಣಬೆ.

ಚಿತ್ರಕೃಪೆ: Adityamadhav83

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಕೇರಳದ ಪಶ್ಚಿಮಘಟ್ಟದಲ್ಲಿ ಕಂಡುಬರುವ ವಿಶಿಷ್ಟ ರೀತಿಯ ಅಣಬೆ.

ಚಿತ್ರಕೃಪೆ: Sankara Subramanian

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಕೇರಳದ ಪ್ರಖ್ಯಾತ ಪ್ರವಾಸಿ ತಾಣವಾದ ವಯನಾಡ್ ಸುತ್ತಮುತ್ತಲಿನ ಪರಿಸರದ ಕಾಡುಗಳ ಗಿಡ ಮರಗಳ ಕೊಂಬೆ ರೆಂಬೆಗಳ ಮೇಲೆ ಕಂಡುಬರುವ ವಿಶಿಷ್ಟ ರೀತಿಯ ಅಣಬೆ.

ಚಿತ್ರಕೃಪೆ: L. Shyamal

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಕೇರಳದ ಕಾಡುಗಳಲ್ಲಿ ಕಂಡುಬರುವ ಇನ್ನೊಂದು ವಿಶೇಷ ರೀತಿಯ ಅಣಬೆ.

ಚಿತ್ರಕೃಪೆ: Vaishak Kallore

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ಮಹಾರಾಷ್ಟ್ರದ ಥಾಣೆ ಪಟ್ಟಣದ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಕೇಸರಿ ಬಣ್ಣದ ಆಕರ್ಷಕ ಅಣಬೆಗಳು.

ಚಿತ್ರಕೃಪೆ: Dr. Raju Kasambe

ಅಣಬೆಗಳ ಪ್ರವಾಸ :

ಅಣಬೆಗಳ ಪ್ರವಾಸ :

ತಮಿಳುನಾಡಿನ ಯೇರ್ಕಾಡ್ ಗಿರಿಧಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಮ್ಡುಬರುವ ದಟ್ಟ ಹಳದಿ ವರ್ಣದ ಸುಂದರ ಅಣಬೆ.

ಚಿತ್ರಕೃಪೆ: Yercaud-elango

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X