» »ಇಂದಿಗೂ ಕಂಗೊಳಿಸುವ ಸಾವಿರ ವರ್ಷದ ದೇಗುಲಗಳು

ಇಂದಿಗೂ ಕಂಗೊಳಿಸುವ ಸಾವಿರ ವರ್ಷದ ದೇಗುಲಗಳು

Posted By: Divya

ಅಮೋಘವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಭಾರತ ದಕ್ಷಿಣ ಏಷ್ಯಾದ ಅತಿದೊಡ್ಡ ದೇಶ. 800 ವಿಭಿನ್ನ ಭಾಷಿಗರನ್ನು ಹೊಂದಿರುವ ಅದ್ಭುತ ನಾಡು. ವಿವಿಧ ಧರ್ಮ ಜಾತಿಗಳ ನಡುವೆಯೂ ನಾವೆಲ್ಲಾ ಒಂದೇ ಎನ್ನುವ ಮನೋಭಾವ ಇಲ್ಲಿಯ ಜನತೆದು. ಈ ಪುಣ್ಯ ಭೂಮಿಯಲ್ಲಿ ಅದೆಷ್ಟೋ ರಾಜ ಮನೆತನದವರು ಆಳಿ ಹೋಗಿದ್ದಾರೆ. ಆ ಕಾಲದ ಗತವೈಭವಗಳನ್ನು ಇಂದಿಗೂ ಸಾರುವ ಅನೇಕ ಐತಿಹಾಸಿಕ ತಾಣಗಳು ಹಾಗೂ ದೇವಾಲಯಗಳು ಇಲ್ಲಿವೆ.

ಇಲ್ಲಿಯ ಸಂಪತ್ತು ಹಾಗೂ ಪ್ರಕೃತಿಯ ಸೌಂದರ್ಯವನ್ನು ಮೆಚ್ಚಿಬಂದ ವಿದೇಶಿಗರು ನಮ್ಮನ್ನೇ ಆಳಿ ಹೋಗಿದ್ದಾರೆ. ಯಾರ ಕಡಿವಾಣಕ್ಕೂ ಹೆದರದ ಭೂತಾಯಿ ಇಂದಿಗೂ ಅನೇಕ ಸುಂದರ ತಾಣಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದ್ದಾಳೆ. ಅಂತಹ ತಾಣಗಳಲ್ಲಿ ಭವ್ಯವಾಗಿ ನಿಂತಿರುವ ದೇವಾಲಯಗಳು ಒಂದು. ರಾಜರ ಕಾಲದ ಕೊಡುಗೆಯಾಗಿ ನಿಂತಿರುವ ಹಲವಾರು ದೇವಾಲಯಗಳು ಸಾವಿರ ವರ್ಷದ ಇತಿಹಾಸವನ್ನು ಹೊಂದಿವೆ. ಭಾರತದೆಲ್ಲೆಡೆ ಇರುವ ಭವ್ಯ ದೇಗುಲಗಳ ಫೋಟೋ ಪ್ರವಾಸ ಮಾಡೋಣ ಬನ್ನಿ...

ಅಮೃನಾಥ ದೇಗುಲ

ಅಮೃನಾಥ ದೇಗುಲ

11ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲ ಮಹಾರಾಷ್ಟ್ರದಲ್ಲಿದೆ. ಶಿವನನ್ನು ಆರಾಧಿಸುವ ಈ ದೇಗುಲವನ್ನು ಕ್ರಿ.ಶ. 1060ರಲ್ಲಿ ನಿರ್ಮಿಸಲಾಯಿತು. ಶಿಲಾಹರ ರಾಜ ಛಿತ್ತರಾಜನು ಕಟ್ಟಿಸಿದನು ಎನ್ನಲಾಗುತ್ತದೆ. ವಿಶೇಷ ಕಲಾಕೃತಿಯನ್ನು ಹೊಂದಿರುವ ಈ ದೇಗುಲದ ಒಳಗೆ 20 ಮೆಟ್ಟಿಲುಗಳನ್ನು ಇಳಿದು ಹೋಗಬೇಕು. ಅಲ್ಲಿಯೇ ಶಿವಲಿಂಗವನ್ನು ಇಡಲಾಗಿದೆ.
PC: wikipedia.org

ಬೃಹದೀಶ್ವರ ದೇಗುಲ

ಬೃಹದೀಶ್ವರ ದೇಗುಲ

ತಂಜಾವೂರಿನಲ್ಲಿರುವ ಶಿವನ ದೇವಾಲಯ ಇದು. ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಈ ದೇಗುಲ ಪ್ರತಿಬಿಂಬಿಸುತ್ತದೆ. ಇದನ್ನು ಕ್ರಿ.ಶ. 1010ರಲ್ಲಿ ನಿರ್ಮಿಸಲಾಯಿತು. ಶಿವರಾತ್ರಿಯಲ್ಲಿ ಬಹಳ ವಿಜೃಂಭಣೆಯಿಂದ ಆರಾಧಿಸಲಾಗುತ್ತದೆ.
PC: wikipedia.org

ಕೈಲಾಸ ದೇಗುಲ

ಕೈಲಾಸ ದೇಗುಲ

8ನೇ ಶತಮಾನದ ಇತಿಹಾಸ ಹೊಂದಿರುವ ಈ ದೇಗುಲ ಎಲ್ಲೋರದಲ್ಲಿದೆ. ಬಂಡೆಗಳಲ್ಲಿ ಕೆತ್ತನೆ ಮಾಡಿರುವ ಈ ದೇಗುಲ ಪಲ್ಲವರ ಕೊಡುಗೆ ಎನ್ನಲಾಗುತ್ತದೆ. ಸೂಕ್ಷ್ಮ ಕೆತ್ತನೆಗಳು, ಸುಂದರವಾದ ಒಳಾಂಗಣ ಹಾಗೂ ಹೊರಾಂಗಣವನ್ನು ಹೊಂದಿದೆ.
PC: wikipedia.org

ಶೋರ್ ದೇಗುಲ

ಶೋರ್ ದೇಗುಲ

7ನೇ ಶತಮಾನದ ಈ ದೇಗುಲ ಮಹಾಬಲಿಪುರಂನಲ್ಲಿದೆ. ದಕ್ಷಿಣ ಭಾರತದಲ್ಲಿರುವ ಪುರಾತನ ದೇಗುಲಗಳಲ್ಲಿ ಇದು ಒಂದು. ಕ್ರಿ.ಶ. 700ರಲ್ಲಿ ಪಲ್ಲವರ ದೊರೆ 2ನೇ ನರಸಿಂಹವರ್ಮ ನಿರ್ಮಿಸಿದನು ಎನ್ನಲಾಗುತ್ತದೆ. ಮೋಹಕ ಕೆತ್ತನೆಗಳಿಂದಲೇ ದೇಗುಲ ಜನರನ್ನು ಆಕರ್ಷಿಸುತ್ತದೆ.
PC: wikipedia.org

ಸೋಮನಾಥ ದೇಗುಲ

ಸೋಮನಾಥ ದೇಗುಲ

ಶಿವನನ್ನು ಆರಾಧಿಸುವ ಈ ದೇಗುಲ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಗುಜರಾತಿನಲ್ಲಿರುವ ಈ ದೇಗುಲ 7ನೇ ಶತಮಾನದ್ದು. ಇದನ್ನು ಅನೇಕ ಬಾರಿ ಪುನರ್ ನವೀಕರಣ ಮಾಡಲಾಗಿದೆ ಎನ್ನಲಾಗುತ್ತದೆ. ವಾಸ್ತುಶಿಲ್ಪವು ಚಾಲುಕ್ಯರ ಶೈಲಿಯನ್ನು ಪ್ರತಿಬಿಂಬಿಸುತ್ತವೆ.
PC: wikipedia.org

ಚನ್ನಕೇಶವ ದೇಗುಲ

ಚನ್ನಕೇಶವ ದೇಗುಲ

ಕರ್ನಾಟಕದ ಬೇಲೂರಿನಲ್ಲಿರುವ ಈ ದೇಗುಲ ಯಾಗಚಿ ನದಿಯ ದಡದಲ್ಲಿದೆ. ಹೊಯ್ಸಳರ ಕೊಡುಗೆಯಾದ ಈ ದೇಗುಲ 10-11ನೇ ಶತಮಾನದ್ದು. ಈ ದೇವಾಲಯ ವಿಷ್ಣು ದೇವರಿಗೆ ಸೀಮಿತವಾಗಿದೆ.
PC: wikipedia.org

ಕೇದಾರನಾಥ ದೇಗುಲ

ಕೇದಾರನಾಥ ದೇಗುಲ

ಮಂದಾಕಿನಿ ನದಿ ದಡದ ಮೇಲೆ ನಿಂತಿರುವ ಈ ದೇಗುಲದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕೇದಾರನಾಥದಲ್ಲಿರುವ ಈ ದೇಗುಲ 8ನೇ ಶತಮಾನದ ಇತಿಹಾಸವನ್ನು ಹೇಳುತ್ತದೆ. ಇದನ್ನು 12 ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.
PC: wikipedia.org

ಆದಿ ಕುಂಬೇಶ್ವರ ದೇಗುಲ

ಆದಿ ಕುಂಬೇಶ್ವರ ದೇಗುಲ

ತಮಿಳುನಾಡಿನ ಪ್ರಸಿದ್ಧ ದೇಗುಲವಾದ ಆದಿ ಕುಂಬೇಶ್ವರ 9ನೇ ಶತಮಾನದ್ದು. 30,181 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ನಿಂತಿರುವ ಈ ದೇಗುಲ ಚೋಳರ ಶೈಲಿಯಲ್ಲಿದೆ.
PC: wikipedia.org

ಜಗತ್‍ಪೀಠ ಬ್ರಹ್ಮ ದೇಗುಲ

ಜಗತ್‍ಪೀಠ ಬ್ರಹ್ಮ ದೇಗುಲ

ರಾಜಸ್ಥಾನದಲ್ಲಿರುವ ಈ ದೇಗುಲ ಒಂದನೇ ಶತಮಾನದ್ದು. ಇದೊಂದು ಅಪರೂಪದ ಬ್ರಹ್ಮ ದೇಗುಲ. ಇದು ಸುಮಾರು 2000 ವರ್ಷಗಳಷ್ಟು ಪುರಾತನದ್ದು ಎಂದು ಹೇಳಲಾಗುತ್ತದೆ. ಭಿನ್ನ ಶೈಲಿಯ ಕೆತ್ತನೆಗಳು ಹಾಗೂ ವಾಸ್ತುಶಿಲ್ಪವನ್ನು ಒಳಗೊಂಡ ಈ ದೇಗುಲ ಪ್ರವಾಸಿಗರಿಗೊಂದು ಆಕರ್ಷಕ ಕೇಂದ್ರ.
PC: wikipedia.org

ವರದರಾಜ ಪೆರುಮಾಳ ದೇಗುಲ

ವರದರಾಜ ಪೆರುಮಾಳ ದೇಗುಲ

ವಿಷ್ಣುವನ್ನು ಆರಾಧಿಸುವ ಈ ದೇಗುಲ ಕಾಂಚಿಪುರಂ ನಲ್ಲಿದೆ. ಇದನ್ನು ಚೋಳರು 11ನೇ ಶತಮಾನದಲ್ಲಿ ನಿರ್ಮಿಸಿದ್ದರು ಎನ್ನಲಾಗುತ್ತದೆ. ವಿಶೇಷ ಶೈಲಿಯ ಕೆತ್ತನೆಗಳು ಹಾಗೂ ವಾಸ್ತುಶಿಲ್ಪಗಳನ್ನು ಇಲ್ಲಿ ಕಾಣಬಹುದು.
PC: wikipedia.org

ಬಾದಾಮಿ ಗುಹಾಲಯ

ಬಾದಾಮಿ ಗುಹಾಲಯ

ಕರ್ನಾಟಕದ ಬಾದಾಮಿಯಲ್ಲಿರುವ ಈ ಗುಹಾಲಯವನ್ನು ಬಂಡೆಗಳನ್ನು ಕೊರೆದು ನಿರ್ಮಿಸಲಾಗಿದೆ. 6ನೇ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದ ದೇಗುಲವಿದು. ಸುಂದರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಈ ತಾಣ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ.
PC: wikipedia.org

ಬದರೀನಾಥ್ ದೇವಾಲಯ

ಬದರೀನಾಥ್ ದೇವಾಲಯ

ಬದರೀನಾಥ್ ನಗರ ಪ್ರದೇಶದಲ್ಲಿರುವ ಈ ದೇವಸ್ಥಾನದಲ್ಲಿ ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. ಇದು ನಾಲ್ಕು ಚಾರ್ ದಾಮ್‍ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ಮೊದಲು ಬೌದ್ಧರ ಪವಿತ್ರ ಕ್ಷೇತ್ರವಾಗಿತ್ತು. ಆದಿ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಹಿಂದೂ ದೇವಾಲಯವನ್ನಾಗಿ ಪರಿವರ್ತಿಸಿದರು ಎನ್ನಲಾಗುತ್ತದೆ.
PC: wikipedia.org

ಲಿಂಗರಾಜ ದೇವಾಲಯ

ಲಿಂಗರಾಜ ದೇವಾಲಯ

ಭುವನೇಶ್ವರದಲ್ಲಿರುವ ಈ ದೇವಸ್ಥಾನ 6ನೇ ಶತಮಾನದ ಇತಿಹಾಸವನ್ನು ತೆರೆದಿಡುತ್ತದೆ. ಪುರಾತನ ಕಾಲದ ಅತಿದೊಡ್ಡ ದೇಗುಲ ಎನ್ನಲಾಗುತ್ತದೆ. ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.
PC: wikipedia.org

ವಿರೂಪಾಕ್ಷ ದೇವಾಲಯ

ವಿರೂಪಾಕ್ಷ ದೇವಾಲಯ

ಹಂಪಿಯಲ್ಲಿರುವ ಪ್ರಸಿದ್ಧ ದೇಗುಲ ಇದು. 7ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇಗುಲ ತುಂಗಭದ್ರಾ ನದಿ ತೀರದಲ್ಲಿದೆ. ಶಿವನಿಗೆ ಮೀಸಲಾದ ಈ ದೇವಾಲಯಕ್ಕೆ ಪ್ರವಾಸಿಗರ ಹರಿವು ಜೋರಾಗಿವೆ.
PC: wikipedia.org

ದ್ವಾರಕಾಧೀಶ್ ದೇಗುಲ

ದ್ವಾರಕಾಧೀಶ್ ದೇಗುಲ

2500 ವರ್ಷಗಳಷ್ಟು ಪುರಾತನವಾದ ಈ ದೇಗುಲ ಗುಜರಾತಿನಲ್ಲಿದೆ. ವಿಷ್ಣು ದೇವರನ್ನು ಆರಾಧಿಸುವ ಈ ದೇಗುಲ ನಾಲ್ಕು ಚಾರ್ ಧಾಮ್‍ಗಳಲ್ಲಿ ಒಂದು.
PC: wikipedia.org

ಶ್ರೀರಂಗನಾಥ ಸ್ವಾಮಿ ದೇಗುಲ

ಶ್ರೀರಂಗನಾಥ ಸ್ವಾಮಿ ದೇಗುಲ

ತಿರುಚಿನಾಪಳ್ಳಿಯಲ್ಲಿರುವ ಈದೇಗುಲದಲ್ಲಿ ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. 7ನೇ ಶತಮಾನದ ಹಿನ್ನೆಲೆ ಹೊಂದಿರುವ ಈ ದೇವಸ್ಥಾನ ವಿಷ್ಣುವಿನ ಪ್ರಮುಖ ದೇಗುಲಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.
PC: wikipedia.org

ಮೀನಾಕ್ಷಿ ಅಮ್ಮನ ದೇಗುಲ

ಮೀನಾಕ್ಷಿ ಅಮ್ಮನ ದೇಗುಲ

ಮಧುರೈ ಮೀನಾಕ್ಷಿ ಎಂದು ಪ್ರಸಿದ್ಧಿ ಪಡೆದ ಈ ದೇವಸ್ಥಾನ 6ನೇ ಶತಮಾನದ್ದು. ಇಲ್ಲಿ ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ವಿಶಾಲವಾದ ಪ್ರದೇಶಗಳಲ್ಲಿ ನಿಂತಿರುವ ಈ ದೇಗುಲ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದು.
PC: wikipedia.org

ಮುಂಡೇಶ್ವರಿ ದೇಗುಲ

ಮುಂಡೇಶ್ವರಿ ದೇಗುಲ

ಬಿಹಾರದಲ್ಲಿರುವ ಈ ದೇವಾಲಯ ಬಹಳ ಪುರಾತನ ಕಾಲದ್ದು. ಇಲ್ಲಿ ಶಿವ ಹಾಗೂ ಪಾರ್ವತಿಯನ್ನು ಪೂಜಿಸುತ್ತಾರೆ. ಇದನ್ನು ವಿಶ್ವದ ಕ್ರಿಯಾತ್ಮಕ ಹಳೆಯ ದೇವಾಲಯ ಎಂದು ಕರೆಯಲಾಗುತ್ತದೆ. ಒಂದನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇಗುಲ ವಿಭಿನ್ನ ಕಲಾಕೃತಿಯನ್ನು ಒಳಗೊಂಡಿದೆ.
PC: wikipedia.org

ಐಹೊಳೆಯ ದುರ್ಗಾ ದೇವಾಲಯ

ಐಹೊಳೆಯ ದುರ್ಗಾ ದೇವಾಲಯ

ಕರ್ನಾಟಕದ ಐಹೊಳೆಯಲ್ಲಿರುವ ಈ ದೇವಾಲಯ ಚಾಲುಕ್ಯರ ಕೊಡುಗೆ ಎನ್ನಲಾಗುತ್ತದೆ. ಇಲ್ಲಿ ಶಿವ ಹಾಗೂ ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. ದುರ್ಗಾ ಎಂದರೆ ಇಲ್ಲಿ ರಕ್ಷಕ ಎಂಬ ಅರ್ಥವನ್ನು ನೀಡುತ್ತದೆ. 7ನೇ ಶತಮಾದ ಇತಿಹಾಸ ಹೊಂದಿರುವ ಈ ದೇಗುಲದಲ್ಲಿ ಸುಂದರವಾದ ಕೆತ್ತನೆಗಳಿರುವುದನ್ನು ನೋಡಬಹುದು.
PC: wikipedia.org

ಲಾಡ್ ಖಾನ್ ದೇವಾಲಯ

ಲಾಡ್ ಖಾನ್ ದೇವಾಲಯ

ಐಹೊಳೆಯಲ್ಲಿರುವ ಇನ್ನೊಂದು ಪ್ರಮುಖ ದೇಗುಲ ಇದು. ಇದನ್ನು 5ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಶಿವನ್ನು ಆರಾಧಿಸುವ ಈ ದೇಗುಲ ಭಿನ್ನ ರೀತಿಯ ಕಲಾಕೃತಿಗಳಿಂದ ಕೂಡಿದೆ.
PC: wikipedia.org