• Follow NativePlanet
Share
» »ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್ ಎಲ್ಲಿದೆ ಗೊತ್ತ?

Written By:

ನಮ್ಮ ಭಾರತದೇಶದಲ್ಲಿ ಹಲವಾರು ಕಡೆ ಚೋರ್ ಬಜಾರ್‍ಗಳು ಇವೆ ಅದು ಎಲ್ಲಿ ನಿಮಗೆ ಗೊತ್ತ? ಚೋರ್ ಬಜಾರ್ ಎಂದರೆ ಕಳ್ಳ ಮಾಲುಗಳನ್ನು ತಂದು ಒಂದು ಸ್ಥಳದಲ್ಲಿ ಮಾರುವುದೇ ಆಗಿದೆ. ಆದರೆ ಇಂಥಹ ಬಜಾರ್‍ಗಳು ಎಲ್ಲಿವೆ? ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಾಮಾಗ್ರಿಗಳು ದೊರೆಯುತ್ತದೆ ಎಂಬ ಕಾರಣದಿಂದ ಚೋರ್ ಬಜಾರ್‍ಗೆ ಅತಿ ಹೆಚ್ಚು ಜನರು ಭೇಟಿ ನೀಡುತ್ತಾರೆ.

ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಪ್ರಸ್ತುತ ದೇಶದಲ್ಲಿಯೇ ಅತ್ಯಂತ ದೊಡ್ಡ ಚೋರ್ ಬಜಾರ್‍ನ ಬಗ್ಗೆ ತಿಳಿಯೋಣ. ಇಲ್ಲಿ ಕಳ್ಳತನ ಮಾಡಿರುವ ಮಾಲುಗಳು ಕಡಿಮೆ ಬೆಲೆಗಳಲ್ಲಿ ದೊರೆಯುತ್ತವೆ. ಇಲ್ಲಿ ಮೂಖ್ಯವಾಗಿ, ಫ್ಯಾನ್ಸ್, ಮೊಬೈಲ್, ಲ್ಯಾಪ್ ಟಾಪ್ಸ್ ಇನ್ನು ಹಲವಾರು ಸರಕುಗಳನ್ನು ಇಲ್ಲಿ ಕೊಳ್ಳಬಹುದಾಗಿರುತ್ತದೆ. ದೇಶದಲ್ಲಿನ ಚೋರ್ ಬಜಾರ್‍ನಲ್ಲಿ ಕಳ್ಳತನ ಮಾಡಿದ ವಾಹನಗಳನ್ನು ಕೆಲವು ಮಾರ್ಪಾಟು ಮಾಡಿ ಮಾರಾಟ ಮಾಡುತ್ತಾರೆ.

ಗೋವಾದಲ್ಲಿನ ಪ್ರಸಿದ್ಧ 7 ಕೋಟೆಗಳು

ಎಚ್ಚರಿಕೆ ಏನೆಂದರೆ ಮುಖ್ಯವಾಗಿ ಚೋರ್ ಬಜಾರ್‍ಗೆ ಭೇಟಿ ನೀಡುವ ಸಮಯದಲ್ಲಿ ವಾಹನಗಳನ್ನು ತೆಗೆದುಕೊಂಡು ಹೋಗಬಾರದು. ಅಲ್ಲಿ ವಾಹನವನ್ನು ಬಿಟ್ಟು ವಸ್ತುವನ್ನು ಕೊಳ್ಳಲು ಬಂದರೆ ಆ ವಾಹನ ಅಷ್ಟೇ... ಗೋವಿಂದ... ವಾಹನದಲ್ಲಿನ ಸ್ಪೆರ್ ಪಾರ್ಟ್ಸ್ ಎಲ್ಲವೂ ಮಂಗಮಾಯವಾಗುತ್ತದೆ.

ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ಪ್ರಸ್ತುತ ಲೇಖನದಲ್ಲಿ ಭಾರತ ದೇಶದಲ್ಲಿನ 5 ಅತ್ಯಂತ ದೊಡ್ಡ ಚೋರ್ ಬಜಾರ್‍ನ ಬಗ್ಗೆ ತಿಳಿಯೋಣ.

ಮುಂಬೈ ಚೋರ್ ಬಜಾರ್

ಮುಂಬೈ ಚೋರ್ ಬಜಾರ್

ದಕ್ಷಿಣ ಮುಂಬೈ, ಮಟನ್, ಸ್ವೀಟ್ಸ್, ಮಹಮ್ಮದ್ ಆಲಿ ರೋಡ್ ದಾರಿಯಲ್ಲಿ ಚೋರ್ ಬಜಾರ್ ಇದೆ. ಈ ಮಾರ್ಕೆಟ್ ಸುಮಾರು 150 ವರ್ಷಗಳಿಂದ ಇಲ್ಲಿಯೇ ಇದೆ. ಮೊದಮೊದಲು ಇದನ್ನು ಷೋರ್ ಬಜಾರ್ ಎಂದು ಕರೆಯುತ್ತಿದ್ದರು. ಇಲ್ಲಿಯೂ ಕೂಡ ಹಲವಾರು ಕದ್ದ ಮಾಲನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಮುಂಬೈ ಚೋರ್ ಬಜಾರ್

ಮುಂಬೈ ಚೋರ್ ಬಜಾರ್

ಷೋರ್ ಎಂದರೆ ಅವಸರ. ಇಲ್ಲಿ ವಸ್ತುಗಳನ್ನು ಕೂಗುತ್ತಾ, ಮಾರುತ್ತಾ ಇರುತ್ತಾರೆ. ಕೆಲವು ಕಾಲಗಳ ನಂತರ ಇದನ್ನು ಚೋರ್ ಬಸಾರ್ ಎಂದು ಕರೆಯಲು ಪ್ರಾರಂಭವಾಯಿತು.

ದೆಹಲಿ ಚೋರ್ ಬಜಾರ್

ದೆಹಲಿ ಚೋರ್ ಬಜಾರ್

ಇದು ದೇಶದಲ್ಲಿಯೇ ಪುರಾತನವಾದ ಚೋರ್ ಬಜಾರ್ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಮೊದಲು ಇಲ್ಲಿ ಸಂಡೆ ಮಾರ್ಕೆಟ್ ದೆಹಲಿಯ ಕೆಂಪು ಕೋಟೆಯ ಹಿಂದೆ ಇತ್ತು. ಪ್ರಸ್ತುತ ದರಿಯಾಗಂಜ್‍ನಲ್ಲಿನ ನಾವೆಲ್ಲಿ ಜಮ್ಮು ಮಸೀದಿಯ ಸಮೀಪದಲ್ಲಿದೆ.

ದೆಹಲಿ ಚೋರ್ ಬಜಾರ್

ದೆಹಲಿ ಚೋರ್ ಬಜಾರ್

ಎಲ್ಲಾ ವಾಹನಗಳ ಸ್ಪೆರ್ ಪಾಟ್ರ್ಸ್ ಇಲ್ಲಿ ದೊರೆಯುತ್ತದೆ. ಇಲ್ಲಿ ಕಳ್ಳತನ ಮಾಡಿದ ಹಳೆಯ ವಾಹನಗಳು, ಆಕ್ಸಿಡೆಂಟ್ ಆದ ವಾಹನಗಳನ್ನು ಹೆಚ್ಚಾಗಿ ಈ ಸ್ಥಳದಲ್ಲಿ ದೊರೆಯುತ್ತದೆ.

ಚಿಕ್ಕ ಪೇಟೆ

ಚಿಕ್ಕ ಪೇಟೆ

ದೆಹಲಿ, ಮುಂಬೈನ ಚೋರ್ ಬಜಾರ್‍ಗೆ ಹೋಲಿಸಿದರೆ ಬೆಂಗಳೂರಿನ ಚೋರ್ ಬಸಾರ್ ಕಡಿಮೆ ಎಂದೇ ಹೇಳಬಹುದು. ಈ ಚೋರ್ ಬಜಾರ್ ಮಾರ್ಕೆಟ್ ಬೆಂಗಳೂರಿನ ಚಿಕ್ಕ ಪೇಟೆಯಲ್ಲಿದೆ. ಇದು ಪ್ರತಿ ಭಾನುವಾರದ ದಿನದಂದು ನಡೆಯುತ್ತದೆ.

ಚಿಕ್ಕ ಪೇಟೆ

ಚಿಕ್ಕ ಪೇಟೆ

ಇಲ್ಲಿ ಹೆಚ್ಚಾಗಿ ಸೆಕೆಂಡ್ ಹ್ಯಾಂಡ್ ಮೊಬೈಲ್, ಕಳ್ಳತನ ಮಾಡಿದ ಕ್ಯಾಮೆರಾಗಳು, ಎಲೆಕ್ಟ್ರಾನಿಕ್ ಐಟೆಮ್ಸ್ ಇನ್ನೂ ಹಲವಾರು ವಸ್ತುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಈ ಮಾರ್ಕೆಟ್ ಲೋಕಲ್ ಮಾರ್ಕೆಟ್ ಮಾದರಿಯ ಹಾಗೆಯೇ ಇರುತ್ತದೆ.

ಚೆನ್ನೈ

ಚೆನ್ನೈ

ಸೆಂಟರ್ ಚೆನ್ನೈಯಲ್ಲಿರುವ ಆಟೋನಗರದಲ್ಲಿ ಪುರಾತನವಾದ, ಕಳ್ಳತನವಾದ ಕಾರುಗಳನ್ನು ಮತ್ತೇ ನವೀಕರಣಗೊಳಿ ಮಾರಾಟ ಮಾಡುತ್ತಾರೆ. ಇಲ್ಲಿ ಸಾವಿರಕ್ಕಿಂತ ಅಧಿಕ ಅಂಗಡಿಗಳನ್ನು ಕಾಣಬಹುದಾಗಿದೆ.

ಚೆನ್ನೈ

ಚೆನ್ನೈ

ಈ ಅಂಗಡಿಗಳಲ್ಲಿ ವಾಹಾನಗಳು ಒರಿಜಿನಲ್ ಸ್ಫೇರ್ ಪಾರ್ಟ್ಸ್‍ನ್ನು ಬದಲಿಸುವುದಕ್ಕೆ ಫೇಮಸ್ ಎಂದು ಹೇಳುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ