
ಪ್ರವಾಸಕ್ಕೆ ಹೋದಾಗ ಸ್ನೇಹಿತರಿಗೆ , ಫ್ಯಾಮಿಲಿಗೆ ಏನಾದರೂ ತೆಗೆದುಕೊಂಡು ಬರಬೇಕು ಅನಿಸುವುದು ಸಾಮಾನ್ಯ. ಅದೇ ಮೈಸೂರು ಪ್ರವಾಸಕ್ಕೆ ಹೋದಾಗ ಏನನ್ನು ತೆಗೆದುಕೊಳ್ಳಬೇಕು ಎನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ. ಹಾಗಿರುವಾಗ ಮೈಸೂರಿನಲ್ಲಿ ಏನೆಲ್ಲಾ ಫೇಮಸ್ ಅನ್ನೋದನ್ನು ಮೊದಲು ತಿಳಿಯಬೇಕಾಗುತ್ತದೆ. ಅದಕ್ಕಾಗಿ ಕೆಲವು ಲಿಸ್ಟ್ ಇಲ್ಲಿದೆ.
ಸ್ತ್ರೀ ರೂಪದ ಹನುಮನನ್ನು ಎಲ್ಲಾದರೂ ಕಂಡಿದ್ದೀರಾ?

ಮೈಸೂರು ಸಿಲ್ಕ್ ಸೀರೆ
ಉತ್ತರ ಭಾರತದಲ್ಲಿ ಬನಾರಸ್ ಸೀರೆ ಹೇಗೆ ಫೇಮಸ್ಸೋ ಹಾಗೆಯೇ ದಕ್ಷಿಣ ಭಾರತದಲ್ಲಿ ಮೈಸೂರು ಸಿಲ್ಕ್ ಫೇಮಸ್. ಈ ಸೀರೆಯ ವಿಶೇಷತೆ ಏನೆಂದರೆ ಇದನ್ನು ಶುದ್ಧ ರೇಷ್ಮೇ ಹಾಗೂ ಜರಿಯಿಂದ ಮಾಡಲಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಮಾಡಲು ಮೈಸೂರ್ ಸಿಲ್ಕ್ ಉತ್ತಮವಾಗಿದೆ.

ಪೈಂಟಿಂಗ್
ನಿಮಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆಯೆಂದಾದರೆಮೈಸೂರ್ ಪೈಂಟಿಂಗ್ ಕೂಡಾ ಖರೀದಿಸಬಹುದು.ಇವುಗಳನ್ನು ಮನೆಯ ಗೋಡೆಯಲ್ಲಿ ನೇತಾಕಬಹುದು.

ಚೆನ್ನಪಟ್ಟಣದ ಗೊಂಬೆ
ಮೈಸೂರಿನಿಂದ ೮೩ ಕಿ.ಮೀ ದೂರದಲ್ಲಿರುವ ಸಣ್ಣ ಊರು ಚೆನ್ನಪಟ್ಟಣ. ಇದು ಗೊಂಬೆಗಳಿಗೆ ಫೇಮಸ್. ದಸರಾ ಸಂದರ್ಭ ಇಲ್ಲಿಯ ಗೊಂಬೆಗಳನ್ನು ಮನೆಗಳಲ್ಲಿ ಅಳವಡಿಸುತ್ತಾರೆ.

ಕಾಫಿ ಪೌಡರ್
ನೀವು ಕಾಫಿ ಪ್ರೀಯರಾಗಿದ್ದಲ್ಲಿ ನೀವು ಮೈಸೂರಿನ ಕಾಫಿ ಪೌಡರ್‌ನ ಕಾಫಿ ಟೇಸ್ಟ್ ಮಾಡಲೇ ಬೇಕು. ಹಾಗೇ ಮಡಿಕೇರಿಯಲ್ಲೂ ಒಳ್ಳೆಯ ಕಾಫಿ ಹುಡಿ ಸಿಗುತ್ತದೆ. ಅಲ್ಲಿಂದಲೂ ಖರೀದಿಸಬಹುದು.

ಗಂಧದ ಎಣ್ಣೆ, ಸಾಬೂನು
PC: youtube
ಗಂಧದ ತುಂಡಿನಿಂದ ತಯಾರಿಸಲಾದ ಸಾಮಾನುಗಳಾದ ಸಾಬೂನು, ಅಗರಬತ್ತಿ, ಎಣ್ಣೆಗೆ ಮೈಸೂರು ಫೇಮಸ್ ಆಗಿದೆ. ಮೈಸೂರ್ ಸ್ಯಾಂಡಲ್ ಸೋಪಿ ಬಗ್ಗೆ ನೀವು ಕೇಳಿರಬಹುದು.

ಮೈಸೂರು ಪೇಟ
PC: youtube
ಮೈಸೂರು ಪೇಟಾ ಎಂದ ಕೂಡಲೇ ಥಟ್ಟೆಂದು ನೆನಪಾಗುವುದೇ ಹಿಂದಿನ ರಾಜರು ಧರಿಸಿರುವ ಶಾಸ್ತ್ರೀಯ ರಾಯಲ್ ಭಾರತೀಯ ಉಡುಪು. ಮೈಸೂರು ಒಡೆಯರ್ ವಂಶಸ್ಥರ ಗುರುತಿನ ಸಂಕೇತವಾಗಿ ಈ ಪೇಟವನ್ನು ಇಂದಿಗೂ ಕರ್ನಾಟಕ ರಾಜ್ಯದಲ್ಲಿ ಬಳಕೆ ಮಾಡಲಾಗುತ್ತದೆ.

ಮೈಸೂರು ಪಾಕ್
ಮೈಸೂರು ಪಾಕ್ ಒಂದು ದಕ್ಷಿಣ ಭಾರತದ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ , ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಮೈಸೂರು ಆಸ್ಥಾನದಲ್ಲಿ ಹುಟ್ಟಿದ್ದು ಎನ್ನಲಾಗುತ್ತದೆ. ಮೈಸೂರಿಗೆ ಹೋದ ಮೇಲೆ ಮೈಸೂರ್ ಪಾಕ್ ಸವಿಯಲೇ ಬೇಕಲ್ಲವೇ?

ಅಗರಬತ್ತಿ
ದೇವರ ಪೂಜೆಗೆ ಅಗರಬತ್ತಿ ಬಳಸುತ್ತೇವೆ.ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ಅಗರಬತ್ತಿ ಸಿಗುತ್ತದೆ. ಆದರೆ ನೀವು ಮೈಸೂರಿನ ಅಗರಬತ್ತಿಯನ್ನು ಬಳಸಿದ್ದೀರಾ? ಇಲ್ಲವೆಂದಾದಲ್ಲಿ ಮೈಸೂರು ಅಗರಬತ್ತಿಯನ್ನು ಬಳಸಲೇಬೇಕು.