Search
  • Follow NativePlanet
Share
» »ನಾನ್ ತೋರ್ಸಿದ್ದೀನಿ... ನೀವು ಹೋಗ್ಬನ್ನಿ...

ನಾನ್ ತೋರ್ಸಿದ್ದೀನಿ... ನೀವು ಹೋಗ್ಬನ್ನಿ...

By Divya

ಪ್ರವಾಸ ಎಂದಾಕ್ಷಣ ಯಾವ ಸ್ಥಳ? ಹೇಗಿರಬಹುದು? ಹೋಗೋದಾ? ಬೇಡ್ವಾ? ಹೀಗೆ ಅನೇಕ ಚಿಂತೆಗೆ ಒಳಗಾಗುತ್ತೇವೆ. ಅದೇ ಹೋಗೋ ದಾರಿ ಹೇಗಿದೆ? ಎನ್ನುವುದರ ಬಗ್ಗೆ ನಂತರ ಯೋಚಿಸ್ತೀವಿ. ನಿಜಾ ಹೇಳ್ಬೇಕು ಅಂದ್ರೆ, ಎಷ್ಟೋ ಬಾರಿ ನಾವು ಹೋಗೋ ಸ್ಥಳಕ್ಕಿಂತ ಹೆಚ್ಚು ಖುಷಿಯನ್ನು ರಸ್ತೆ ಮಾರ್ಗ ಹಾಗೂ ಅದರ ಅಕ್ಕ ಪಕ್ಕದಲ್ಲಿದ್ದ ಪ್ರಕೃತಿ ಸೌಂದರ್ಯ ನೀಡಿರುತ್ತವೆ. ಹೌದಾ? ಅಲ್ವಾ?

ವಿಶಾಲವಾದ ಹಾಗೂ ಕಿರಿದಾದ ರಸ್ತೆ, ಗಿಡ-ಮರಗಳ ಸಾಲು, ಸುಂದರ ಸೇತುವೆ ಮಾರ್ಗ, ಭಯಾನಕ ತಿರುವಿನ ರಸ್ತೆ, ಘಟ್ಟ ಪ್ರದೇಶ, ಇಳಿಜಾರಿನ ರಸ್ತೆ, ಮಂಜು ಕವಿದಿರುವ ವಾತಾವರಣ, ತುಂತುರು ಹನಿಯ ಝೇಂಕಾರ ಹೀಗೆ ರಸ್ತೆ ಮಾರ್ಗದಲ್ಲಿ ಆಗುವ ಅದ್ಭುತ ಅನುಭವ ಕೇವಲ ಚಾಲಕನೊಬ್ಬನೆ ಹೇಳಬಲ್ಲ. ಅಂತಹ ಅಪರೂಪದ ಸಂಗತಿಗಳನ್ನು ಒಳಗೊಂಡಂತಹ ರಸ್ತೆ ಮಾರ್ಗಗಳು ನಮ್ಮ ದೇಶದಲ್ಲಿ ಅನೇಕ ಕಡೆಯಿದೆ. ಅದ್ಯಾವುದು ಅನ್ನೋದನ್ನಾ ನಾನ್ ಹೇಳ್ತೀನಿ... ನೀವು ಹೋಗ್ಬನ್ನಿ...

ಪಂಬನ್ ಸೇತುವೆ

ಪಂಬನ್ ಸೇತುವೆ

1914ರಲ್ಲಿ ನಿರ್ಮಾಣಗೊಂಡ ಈ ಸೇತುವೆ ರೈಲ್ವೆ ಮಾರ್ಗದ ಸೇತುವೆ. ರಾಮೇಶ್ವರ ದ್ವೀಪವನ್ನು ಸಂಪರ್ಕಿಸುವ ಈ ಸೇತುವೆ ಭಾರತದ ಮೊದಲ ಸಮುದ್ರ ಸೇತುವೆ. 2 ಕಿ.ಮೀ. ಉದ್ದವನ್ನು ಹೊಂದಿದ್ದು, ಪಾಕ್ ಜಲಸಂಧಿಯನ್ನು ಹಾದು ಹೋಗುತ್ತದೆ. ಸುತ್ತ ನೀರಿನ ಮಧ್ಯೆ ಹಾದುಹೋಗುವಾಗ ಆಗುವ ರೋಮಾಂಚನ ಹಾಗೂ ವಿಸ್ಮಯಗಳನ್ನು ಹೇಳಲು ಅಸಾಧ್ಯ. ಅದನ್ನು ಅನುಭವಿಸಬೇಕಷ್ಟೆ.

PC: wikipedia.org

ಮನಾಲಿ- ಲೆಹ್

ಮನಾಲಿ- ಲೆಹ್

ಬಹಳ ಅಪರೂಪದ ಸೌಂದರ್ಯವನ್ನು ಒಳಗೊಂಡ ರಸ್ತೆ ಮಾರ್ಗ ಇದು. ಇಲ್ಲಿ ಅನೇಕ ಬಾಲಿವುಡ್ ಚಲನಚಿತ್ರಗಳಿಗೆ ಚಿತ್ರೀಕರಣ ಮಾಡಲಾಗಿದೆ. 479 ಕಿ.ಮೀ. ಉದ್ದಳತೆಯನ್ನು ಹೊಂದಿರುವ ಈ ರಸ್ತೆ ಮಾರ್ಗ ಅದ್ಭುತ ಕಣಿವೆಗಳ ಸಾಲು, ಎತ್ತರದ ಘಟ್ಟ ಪ್ರದೇಶ ಹಾಗೂ ವರ್ಣಿಸಲಾಗದ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಎರಡು ದಿನದ ಲಾಂಗ್ ಡ್ರೈವ್ ಮಾಡಿದರಂತೂ ಸುಂದರ ಅನುಭವಕ್ಕೆ ಬೇರೆ ಸಾಟಿ ಇರದು.

PC: wikipedia.org

ಖರ್ದುಂಗ್ ಲಾ

ಖರ್ದುಂಗ್ ಲಾ

ಸಮುದ್ರ ಮಟ್ಟದಿಂದ 18380 ಅಡಿ ಎತ್ತರದಲ್ಲಿರುವ ಖರ್ದುಂಗ್ ಲಾ ವಿಶ್ವದ ಅತಿ ಎತ್ತರದ ವಾಹನ ಸಂಚಾರದ ರಸ್ತೆ ಮಾರ್ಗ. ಇದು ನುಬ್ರಾ ಕಣಿವೆಯನ್ನು ತಲುಪುವುದಕ್ಕೆ ಇರುವ ಏಕೈಕ ಮಾರ್ಗ ಎಂದು ಹೇಳಬಹುದು. ಇಲ್ಲಿರುವ ವಿಶೇಷವಾದ ಭೌಗೋಳಿಕ ಪರಿಸರವು ಹೊಸತನವನ್ನು ನೀಡುತ್ತದೆ.

wikimedia.org

ಜೈಪುರ್-ರಣಥಂಬೋರ್

ಜೈಪುರ್-ರಣಥಂಬೋರ್

ಈ ಮಾರ್ಗದಲ್ಲಿ ಹೋಗುವಾಗ ಒಂದು ದಟ್ಟ ಅಡವಿಯಲ್ಲಿ ಚಲಿಸುತ್ತಿದ್ದೇನೆ ಎನ್ನುವ ಅನುಭವ ಆಗುತ್ತದೆ. ಶುದ್ಧವಾದ ಗಾಳಿ, ಸುಂದರವಾದ ಪ್ರಕೃತಿ, ವನ್ಯ ಜೀವಿಗಳ ಅದ್ಭುತ ನೋಟಗಳು ಇಲ್ಲಿ ಕಾಣ ಸಿಗುವುದರಿಂದ, ಫೋಟೋ ತೆಗೆಯಲು ಸ್ವರ್ಗ ತಾಣ.

PC: wikimedia.org

ರೋಹತಂಗ್ ಪಾಸ್

ರೋಹತಂಗ್ ಪಾಸ್

ಮನಾಲಿಯಿಂದ 51 ಕಿ.ಮೀ. ದೂರದಲ್ಲಿರುವ ಈ ರೊಹತಂಗ್ ಪಾಸ್ ಅಪಾರ ಸಂಖ್ಯೆಯಲ್ಲಿ ಅರಣ್ಯ ಸಂಪತ್ತನ್ನು ಒಳಗೊಂಡಿದೆ. ಸಮುದ್ರ ಮಟ್ಟದಿಂದ 4111 ಮೀ. ಎತ್ತರದಲ್ಲಿರುವ ಇದನ್ನು ವಿಶ್ವದಲ್ಲೇ ಅತಿ ಎತ್ತರದಲ್ಲಿ ಜೀಪ್ ಹಾಗೂ ಕಾರ್‍ಅನ್ನು ಓಡಿಸಬಹುದಾದ ರಸ್ತೆ ಮಾರ್ಗ ಎನ್ನುತ್ತಾರೆ. ಸುಂದರವಾದ ಬೆಟ್ಟಗಳ ಸಾಲು, ಕಣಿವೆಗಳ ರಾಶಿ ಹಾಗೂ ಚಂದ್ರಾ ನದಿಯ ಸೊಬಗನ್ನು ನೋಡಬಹುದು.

PC: wikipedia.org

ಶಿಲ್ಲಾಂಗ್ - ಚಿರಾಪುಂಜಿ

ಶಿಲ್ಲಾಂಗ್ - ಚಿರಾಪುಂಜಿ

ಈ ರಸ್ತೆ ಮಾರ್ಗದಲ್ಲಿ ಚಲಿಸಿದರೆ ರಮ್ಯವಾದ ಪ್ರಕೃತಿ ಸೌಂದರ್ಯ, ಜಲಪಾತಗಳ ಸಾಲು, ಗುಹೆಗಳ ದರ್ಶನ, ಹಳ್ಳಿ ಪ್ರದೇಶಗಳ ಸುಂದರ ನೋಟ ನಮ್ಮದಾಗುತ್ತದೆ. ಇಲ್ಲಿ ಬರುವಾಗ ಮೇಘಾಲಯ ರಾಜ್ಯವು ತಂಪಾದ ಗಾಳಿ ಹಾಗೂ ಮೋಡದಿಂದ ಸ್ವಾಗತಿಸುತ್ತದೆ.

PC: wikimedia.org

ಸಹ್ಯಾದ್ರಿಯ ಕಶೇದಿ ಘಟ್ಟ

ಸಹ್ಯಾದ್ರಿಯ ಕಶೇದಿ ಘಟ್ಟ

ಆಕರ್ಷಿತ ಘಟ್ಟಗಳ ಸಾಲಲ್ಲಿ ಮಹರಾಷ್ಟ್ರದ ಕಶೇದಿ ಘಟ್ಟವು ಒಂದು. ಅತಿಯಾದ ತಿರುವನ್ನು ಹೊಂದಿರುವ ಈ ಘಟ್ಟ ಬಹಳ ಅಪಾಯಕಾರಿಯೂ ಹೌದು. ಸಾವಿತ್ರಿ ನದಿಯ ದಡದಲ್ಲಿ ಬರುವ ಈ ರಸ್ತೆ ಮಾರ್ಗವು ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಸೇರಿಕೊಂಡಿದೆ.

PC: flickr.com

ಬೆಂಗಳೂರಿನಿಂದ ಊಟಿಗೆ ಬಂಡೀಪುರ ಮಾರ್ಗ

ಬೆಂಗಳೂರಿನಿಂದ ಊಟಿಗೆ ಬಂಡೀಪುರ ಮಾರ್ಗ

ಈ ರಸ್ತೆ ಮಾರ್ಗ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಮದುಮಲೈ ಬೆಟ್ಟಗಳ ಮೂಲಕ ಹಾದು ಹೋಗುವುದರಿಂದ ಅನೇಕ ವನ್ಯ ಜೀವಿಗಳನ್ನು ಕಾಣಬಹುದು. ಸುಂದರವಾದ ಪ್ರಕೃತಿಯ ನಡುವೆ ತಮ್ಮದೇ ಆದ ನೈಸರ್ಗಿಕ ಚಟವಟಿಕೆಯಲ್ಲಿ ತೊಡಗಿರುವ ಪ್ರಾಣಿಗಳನ್ನು ನೋಡುವ ಭಾಗ್ಯ ಸಿಗುತ್ತದೆ.

PC: wikimedia.org

ಜೆಲೆಪ್ ಲಾ ಪಾಸ್

ಜೆಲೆಪ್ ಲಾ ಪಾಸ್

ಟಿಬೆಟ್ ಭಾಷೆಯಾದ 'ಜಿಲೆಪ್ ಲಾ ಪಾಸ್' ಅರ್ಥ ಸುಂದರ ಮಟ್ಟದ ಕಣಿವೆ ಎಂದಾಗುತ್ತದೆ. ಸಿಕ್ಕಿಂ ಮತ್ತು ಟಿಬೆಟ್ ಮಧ್ಯದಲ್ಲಿ ಬರುವ ಈ ಮಾರ್ಗದಲ್ಲಿ ಸುಂದರ ಕಣಿವೆಗಳ ಸಾಲನ್ನು ನೋಡಬಹುದು.

PC: wikipedia.org

ಗುವಾಹಾಟಿ-ತವಾಂಗ್

ಗುವಾಹಾಟಿ-ತವಾಂಗ್

480 ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ಮೋಡದ ಸ್ವಾಗತ, ಬೆಟ್ಟಗುಡ್ಡಗಳ ಸಾಲು, ಭಾರತೀಯ ಸೈನಿಕರ ಶಿಬಿರಗಳು ಸಿಗುತ್ತವೆ.

PC: flickr.com

ಬೆಂಗಳೂರು-ಕುಣ್ಣೂರು

ಬೆಂಗಳೂರು-ಕುಣ್ಣೂರು

ಕುಣ್ಣೂರು ನೀಲಗಿರಿ ಬೆಟ್ಟಗಳ ಸಾಲಲ್ಲಿ ಎರಡನೇ ಅತಿ ದೊಡ್ಡ ಬೆಟ್ಟ. ತಂಪಾದ ವಾತಾವರಣ, ಸುತ್ತ ಟೀ ತೋಟಗಳ ಹಸಿರು ಸೌಂದರ್ಯ ಕಣ್ಮನ ಸೆಳೆಯುತ್ತದೆ. ಮಾಸಿನ ಗುಡಿ ಮೂಲಕ ಸಾಗಿದರೆ ಕಿರಿದಾದ ರಸ್ತೆ ಮಾರ್ಗ, ಹಳ್ಳಿಗಳ ಸಾಲು ಹಾಗೂ ಮದುಮಲೈ ಹುಲಿ ಸಂಕ್ಷಣಾ ಕಾಡನ್ನು ನೋಡಬಹುದು.

PC: flickr.com

ಕಾರವಾರ- ಮಂಗಳೂರು

ಕಾರವಾರ- ಮಂಗಳೂರು

ಇದು ಭಾರತದಲ್ಲಿರುವ ಒಂದು ಸುಂದರವಾದ ಕರಾವಳಿ ತೀರದ ರಸ್ತೆ ಮಾರ್ಗ. ಇಲ್ಲಿ ಸಾಗುವಾಗ ವಿಭಿನ್ನ ಬಗೆಯ ಆಹಾರ, ಸಂಸ್ಕೃತಿ , ಭಾಷೆಯ ಪರಿಚಯವಾಗುತ್ತವೆ. ಇದನ್ನು ಕೊಂಕಣ ತೀರ ಎಂದು ಸಹ ಕರೆಯುತ್ತಾರೆ. ಇಲ್ಲಿ ಸಿಗುವ ಸಮುದ್ರ ತೀರಗಳು ನಮ್ಮನ್ನು ಆಕರ್ಷಿಸದೆ ಬಿಡಲಾರದು.

PC: flickr.com

ಬೆಂಗಳೂರು- ಗೋವಾ

ಬೆಂಗಳೂರು- ಗೋವಾ

ಬೆಂಗಳೂರಿನಿಂದ ಗೋವಾಕ್ಕೆ ಹೋಗಲು ಮೂರು ಮಾರ್ಗಗಳಿವೆ.

1. ಬೆಂಗಳೂರಿನಿಂದ ಶಿವಮೊಗ್ಗಾ ಮಾರ್ಗ, ದೂರ 640 ಕಿ.ಮೀ.,

2. ಬೆಂಗಳೂರಿನಿಂದ ಧಾರವಾಡ ಮಾರ್ಗ, ದೂರ 592 ಕಿ.ಮೀ.,

3. ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗ, 706 ಕಿ.ಮೀ. ದೂರ ಚಲಿಸಬೇಕಾಗುತ್ತದೆ.

ಒಂದು ಮತ್ತು ಮೋರನೇ ಮಾರ್ಗದಲ್ಲಿ ಚಲಿಸಿದರೆ ಪ್ರಕೃತಿ ಸೌಂದರ್ಯ, ಘಟ್ಟಗಳ ಸಾಲು, ಜಲಪಾತಗಳು, ವನ್ಯ ಜೀವಿ ಸಂಪತ್ತುಗಳನ್ನು ನೋಡುವ ಅವಕಾಶ ಇರುತ್ತದೆ. ಸ್ವಲ್ಪ ದೂರ ಎನಿಸಿದರು ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಸುಂದರ ಅನುಭವವನ್ನು ಪಡೆಯಬಹುದು.

PC: flickr.com

ಡೆಹ್ರಾಡೂನ್-ನೈನಿತಾಲ್

ಡೆಹ್ರಾಡೂನ್-ನೈನಿತಾಲ್

ಈ ಮಾರ್ಗದಲ್ಲಿ ಹೋಗುವಾಗ ಹಲವಾರು ತಿರುವುಗಳು ಹಾಗೂ ಅದ್ಭುತ ಅನುಭವಗಳು ಆಗುತ್ತವೆ. ತಂಪಾದ ಗಾಳಿಯು ಹೊಡೆಯುವುದರಿಂದ ಪ್ರಕೃತಿಯನ್ನು ಪ್ರೀತಿಸುವವರಿಗೆ ಇದೊಂದು ಸುಂದರ ಅನುಭವ ನೀಡುತ್ತದೆ.

PC: flickr.com

ಡಾರ್ಜೀಲಿಂಗ್-ಗ್ಯಾಂಗ್ಟಾಕ್

ಡಾರ್ಜೀಲಿಂಗ್-ಗ್ಯಾಂಗ್ಟಾಕ್

ಈ ಮಾರ್ಗದಲ್ಲಿ ಸಿಗುವ ಕಿರಿದಾದ ರಸ್ತೆ ಮಾರ್ಗ, ದಟ್ಟವಾದ ಟೀ ತೋಟ, ಬೆಟ್ಟಗಳ ಸಾಲು, ತಂಪಾದ ಗಾಳಿಯ ಅನುಭವ ಆಗುತ್ತದೆ. ಆಗ ನಾವೆಲ್ಲೋ ಸ್ವರ್ಗದಲ್ಲಿ ಓಡಾಡುತ್ತಿದ್ದೇವೆಯೇ ಎನ್ನುವ ಭಾವನೆಗೆ ಒಳಗಾಗುವುದರಲ್ಲಿ ಸಂದೇಹವಿಲ್ಲ.

PC: flickr.com

ಶ್ರೀನಗರ-ಜನ್ಸಕರ್

ಶ್ರೀನಗರ-ಜನ್ಸಕರ್

ಅನೇಕ ಕಣಿವೆಗಳ ಸಾಲಿನ ಮಧ್ಯೆ, ವಿಶಾಲವಾಗಿ ಹರಡಿರುವ ಈ ರಸ್ತೆ ಮಾರ್ಗವು ನಮ್ಮನ್ನೊಮ್ಮೆ ಬಾಲ್ಯದಲ್ಲಿ ಓದಿದ್ದ ಕಥೆಗಳು ನೆನಪಿಗೆ ತರುತ್ತವೆ. ನಾಗರೀಕತೆಯ ಕಾಲದಲ್ಲಿ ಕಾಣಬಹುದಾದಂತಹ ವಾತಾವರಣಗಳು ಇಲ್ಲಿವೆ.

PC: flickr.com

ಶ್ರೀನಗರ ಬಗ್ಗೆ ಹೆಚ್ಚು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು-ಹಂಪಿ

ಬೆಂಗಳೂರು-ಹಂಪಿ

ಬೆಂಗಳೂರಿನಿಂದ ಚಿತ್ರದುರ್ಗ ಮೂಲಕ ಹಂಪಿಗೆ ಹೋಗುವ ಮಾರ್ಗವು ಸ್ವಲ್ಪ ಒಣಹವೆ. ಆದರೂ ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಳುಕುತ್ತಿದ್ದ ನಾಡು ಹೇಗಿತ್ತು? ಎನ್ನುವ ಕುರುಗಳನ್ನು ಕಲೆಹಾಕುತ್ತಾ ಸಾಗಬಹುದು.

PC: flickr.com

Read more about: manali bangalore leh jaipur

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more