Search
  • Follow NativePlanet
Share
» »ಪ್ರವಾಸದ ಜೊತೆಗೆ ಸಂಪಾದಿಸೋದು ಹೇಗೆ ಅನ್ನೋದು ನಿಮಗೆ ಗೊತ್ತಾ?

ಪ್ರವಾಸದ ಜೊತೆಗೆ ಸಂಪಾದಿಸೋದು ಹೇಗೆ ಅನ್ನೋದು ನಿಮಗೆ ಗೊತ್ತಾ?

ನಿಮ್ಮ ಅಕೌಂಟ್‌ನಲ್ಲಿ ಸಾಕಷ್ಟ ಹಣ ಇಲ್ಲದಿದ್ದರೆ ಪ್ರವಾಸ ಕೈಗೊಳ್ಳೊದಿ ಅಷ್ಟೊಂದು ಸುಲಭವೇನಲ್ಲ. ನೀವು ಆವಾಗಾವಾಗ ಪ್ರವಾಸ ಕೈಗೊಳ್ಳುತ್ತಿದ್ದರೆ ಇದು ತುಂಬಾನೇ ದುಬಾರಿಯಾಗಿ ಬಿಡುತ್ತದೆ. ಅದಕ್ಕಾಗಿ ಏನಾದರೂ ಒಂದು ಕೆಲಸ ಮಾಡಲೇ ಬೇಕಲ್ವಾ? ಹಾಗಾದ್ರೆ ಪ್ರವಾಸ ಕೈಗೊಳ್ಳುತ್ತಾ ಸಂಪಾದಿಸುವುದು ಹೇಗೆ ಅನ್ನೋದನ್ನು ಯೋಚಿಸ್ತಾ ಇದ್ದೀರಾ? ಇಲ್ಲಿದೆ ಕೆಲವು ಉಪಾಯಗಳು.

ಪ್ರವಾಸದ ಜೊತೆಗೆ ಸಂಪಾದನೆ

ಪ್ರವಾಸದ ಜೊತೆಗೆ ಸಂಪಾದನೆ

ನೀವು ಬಹಳಷ್ಟು ಜನರನ್ನು ನೋಡಿರಬಹುದು. ಅವರು ಹೆಚ್ಚಾಗಿ ಪ್ರವಾಸದಲ್ಲೇ ಇರುತ್ತಾರೆ. ವರ್ಷದಲ್ಲಿ ಆರು ತಿಂಗಳೂ ಪ್ರವಾಸದಲ್ಲೇ ಕಳೆಯುತ್ತಾರೆ. ಹೀಗಿರುವಾಗ ಅವರು ಸಂಪಾದಿಸುವುದು ಯಾವಾಗ? ಈ ಪ್ರವಾಸ ಕೈಗೊಳ್ಳಲು ಸಾಕಷ್ಟು ಹಣ ಎಲ್ಲಿಂದ ಬರುತ್ತದೆ ಎಂದು ನೀವು ಅಂದುಕೊಂಡಿರಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ. ನೀವು ಕೂಡಾ ಪ್ರವಾಸ ಮಾಡುತ್ತಾ ಹಣ ಸಂಪಾದಿಸಬಹುದು. ಅದಕ್ಕೆ ಹಲವು ಮಾರ್ಗಗಳಿವೆ.

ಪಿಶಾಚಿಯಿಂದ ತಪ್ಪಿಸಿಕೊಳ್ಳೋ ತಾಖತ್ತು ನಿಮಗಿದ್ಯಾ ? ಹಾಗಾದ್ರೆ ಖೂನೀ ನದಿಗೊಮ್ಮೆ ಹೋಗಿಪಿಶಾಚಿಯಿಂದ ತಪ್ಪಿಸಿಕೊಳ್ಳೋ ತಾಖತ್ತು ನಿಮಗಿದ್ಯಾ ? ಹಾಗಾದ್ರೆ ಖೂನೀ ನದಿಗೊಮ್ಮೆ ಹೋಗಿ

ಫ್ರೀಲಾನ್ಸ್‌

ಫ್ರೀಲಾನ್ಸ್‌

ಫ್ರೀಲಾನ್ಸಿಂಗ್ ಬಗ್ಗೆ ನಿಮಗೆ ಗೊತ್ತಿರಬಹುದು. ಆಫೀಸ್‌ಗೆ ಹೋಗದೇ ಮನೆಯಲ್ಲೇ ಕುಳಿತು ತಮ್ಮ ಕೆಲಸವನ್ನು ಮಾಡೋದು. ಇದು ಬರಹಗಾರರಿಗೆ ಬಹಳ ಉಪಯುಕ್ರವಾಗುತ್ತದೆ. ನೀವು ಪ್ರವಾಸದಲ್ಲಿದ್ದೀರೆಂದಾದರೆ. ನಿಮ್ಮ ಜೊತೆ ಲ್ಯಾಪ್‌ಟಾಪ್ ಹಾಗೂ ವೈಫೈ ಕನೆಕ್ಷನ್ ಇದ್ದರೆ ಸಾಕು. ನೀವು ಯಾವ ಸ್ಥಳದಲ್ಲಿ ಸುತ್ತಾಡುತ್ತಿದ್ದೀರೋ ಅಲ್ಲಿಂದಲೇ ಲೇಖನಗಳನ್ನು ಬರೆದು ಕಳಿಸಬಹುದು. ಈ ಮೂಲಕ ನೀವು ಸುತ್ತಾಡಿದಂತೆಯೂ ಆಗುತ್ತದೆ. ಹಾಗೆಯೇ ಹಣ ಸಂಪಾದಿಸಿದಂತೆ ಆಗುತ್ತದೆ.

 ನಿಮ್ಮ ಹವ್ಯಾಸವನ್ನೇ ಮಾರಾಟ ಮಾಡಿ

ನಿಮ್ಮ ಹವ್ಯಾಸವನ್ನೇ ಮಾರಾಟ ಮಾಡಿ

ನೀವು ಚಿತ್ರಕಲೆಯಲ್ಲಿ ನಿಪುಣರಾಗಿದ್ದರೆ ಅದನ್ನು ಉಚಿತವಾಗಿ ಯಾಕೆ ಮಾಡಬೇಕು. ನಿಮಗೆ ಗಿಟಾರ್, ಪಿಯಾನೋ ನುಡಿಸಲು ಬರುತ್ತಿದ್ದರೆ ನಿಮ್ಮ ಸಹಪಾಠಿಗಳಿಗೆ ಕಲಿಸಿ . ನಿಮಗೆ ಯೋಗ, ಏರೋಬಿಕ್ಸ್ ತಿಳಿದಿದೆ ಎಂದಾದಲ್ಲಿ ಅದನ್ನು ಇತರರಿಗೂ ಕಲಿಸಿ ಹಣ ಸಂಪಾದಿಸಿ.

ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ

ಟೂರ್‌ ಗೈಡ್

ಟೂರ್‌ ಗೈಡ್

ಬಹಳಷ್ಟು ಸ್ಥಳಕ್ಕೆ ಪ್ರಯಾಣಿಸುವುದರ ಒಂದು ಲಾಭವೆಂದರೆ ನಿಮಗೆ ಆ ಸ್ಥಳದ ಬಗ್ಗೆ ಸಾಕಷ್ಟು ತಿಳಿದಿರುತ್ತದೆ. ಹಾಗಾಗಿ ನೀವೇ ಇತರರಿಗೆ ಟೂರ್‌ ಗೈಡ್‌ ಯಾಕಾಗಬಾರದು? ಒಂದು ಟ್ರಾವೆಲ್ ಗೈಡ್ ಪುಸ್ತಕವನ್ನು ಕೊಂಡುಕೊಳ್ಳಿ, ಅದರಲ್ಲಿರುವುದರ ಜೊತೆಗೆ ನಿಮಗೆ ತಿಳಿದಿರುವುದನ್ನು ತುಂಬಿಸಿ ಟೂರಿಸ್ಟ್‌ಗಳಿಗೆ ಗೈಡ್ ಮಾಡಿ.

ಫುಡ್‌ ಹಾಗೂ ಡ್ರಿಂಕ್ಸ್ ಸರ್ವ್ ಮಾಡುವುದು

ಫುಡ್‌ ಹಾಗೂ ಡ್ರಿಂಕ್ಸ್ ಸರ್ವ್ ಮಾಡುವುದು

ನೀವು ಯಾವತ್ತಾದರೂ ಬಾರ್‌ ಟೆಂಡಿಂಗ್‌ನ್ನು ಟ್ರೈ ಮಾಡಿದ್ದೀರಾ? ನೀವು ದೂರದ ಊರುಗಳಿಗೆ ಪ್ರವಾಸ ಕೈಗೊಂಡಾಗ ಅಲ್ಲಿನ ಲೋಕಲ್ ಪಬ್‌ನಲ್ಲಿ ಫುಡ್‌, ಡ್ರಿಂಕ್ಸ್‌ ಸರ್ವ್ ಮಾಡುವುದರಲ್ಲಿ ತಪ್ಪೇನಿಲ್ಲ. ಈ ಕೆಲಸಕ್ಕೆ ನಿಮಗೆ ಹಣ ಸಿಗುವಾಗ ಪಬ್‌ನಲ್ಲಿ ಕೆಲಸ ಮಾಡಬಹುದು.. ನೀವು ಒಂದು ಸಿಟಿಯಲ್ಲಿ ತಿಂಗಳುಗಟ್ಟಲೇ ಇರಬೇಕಾದ ಸಂದರ್ಭ ಬಂದಾಗ ಅಲ್ಲಿನ ಲೋಕಲ್ ಪಬ್‌, ರೆಸ್ಟೋರೆಂಟ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಈ ಮೂಲಕ ಹಣ ಸಂಪಾದಿಸಬಹುದು.

ನಿಮ್ಮ ಬ್ಲಾಗ್‌ನ್ನು ತಯಾರಿಸಿ

ನಿಮ್ಮ ಬ್ಲಾಗ್‌ನ್ನು ತಯಾರಿಸಿ

ಬ್ಲಾಗ್‌ ಮಾಡುವುದು ಹಣ ಸಂಪಾದಿಸುವ ಒಂದು ವಿಧಾನವಾಗಿದೆ. ನೀವು ಟ್ರಾವೆಲ್ ಮಾಡುತ್ತಿದ್ದು ನಿಮ್ಮ ಪ್ರವಾಸದ ಅನುಭವವನ್ನು ಇಡೀ ಜಗತ್ತಿಗೆ ತಿಳಿಸಬೇಕೆಂದಿದ್ದರೆ ಬ್ಲಾಗ್‌ ಒಂದು ಉತ್ತಮ ಆಯ್ಕೆಯಾಗಿದೆ. ನೀವು ನಿಮ್ಮ ಅನುಭವಗಳನ್ನು ಲೇಖನಗಳ ಮೂಲಕ ಬರೆದು ಬ್ಲಾಗ್‌ನಲ್ಲಿ ಹಂಚಿಕೊಳ್ಳಬಹುದು. ಹೆಲ್ತ್‌ ಹಾಗೂ ಫಿಟ್‌ನೆಸ್ ಬ್ಲಾಗ್‌ನ್ನೂ ರಚಿಸಬಹುದು.

ಕರ್ನಾಟಕವು ದೇಶದಲ್ಲೇ ಪ್ರಮುಖ ರಾಜ್ಯವೆನಿಸಲು ಕಾರಣಗಳೇನು ಗೊತ್ತಾ? ಕರ್ನಾಟಕವು ದೇಶದಲ್ಲೇ ಪ್ರಮುಖ ರಾಜ್ಯವೆನಿಸಲು ಕಾರಣಗಳೇನು ಗೊತ್ತಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X