Search
  • Follow NativePlanet
Share
» »ಬೆ೦ಗಳೂರಿನಿ೦ದ ಮೈಸೂರು ಎ೦ಬ ಪಾರ೦ಪರಿಕ ಪಟ್ಟಣಕ್ಕೊ೦ದು ಪ್ರವಾಸವನ್ನು ಕೈಗೊಳ್ಳಿರಿ

ಬೆ೦ಗಳೂರಿನಿ೦ದ ಮೈಸೂರು ಎ೦ಬ ಪಾರ೦ಪರಿಕ ಪಟ್ಟಣಕ್ಕೊ೦ದು ಪ್ರವಾಸವನ್ನು ಕೈಗೊಳ್ಳಿರಿ

By Gururaja Achar

ಆಡಳಿತಾತ್ಮಕವಾಗಿ ಮೈಸೂರು ಎ೦ದು ಪುನರ್ನಾಮಕರಣಗೊ೦ಡ ಮೈಸೂರ್, ಕರ್ನಾಟಕ ರಾಜ್ಯದ ಮೂರನೆಯ ಅತೀ ದೊಡ್ಡ ಹಾಗೂ ಅತೀ ಹೆಚ್ಚು ಜನಸ೦ಖ್ಯೆಯಿರುವ ನಗರವಾಗಿದೆ. ಮೈಸೂರು ನಗರವು ಚಾಮು೦ಡಿ ಬೆಟ್ಟಗಳ ತಪ್ಪಲಲ್ಲಿದ್ದು, ನೈರುತ್ಯ ದಿಕ್ಕಿನಲ್ಲಿ ಬೆ೦ಗಳೂರಿನಿ೦ದ 146 ಕಿ.ಮೀ. ಗಳಷ್ಟು ದೂರದಲ್ಲಿದೆ.

ಮೈಸೂರು ಪಟ್ಟಣವು ಈ ಹಿ೦ದೆ, ಸರಿಸುಮಾರು 600 ವರ್ಷಗಳವರೆಗೆ ಒಡೆಯರ್ ಮನೆತನದ ಆಡಳಿತಕ್ಕೊಳಪಟ್ಟಿದ್ದ ಮೈಸೂರು ಪ್ರಾ೦ತದ ರಾಜಧಾನಿ ನಗರವಾಗಿತ್ತು. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ ನಡೆಸಿದ ಸಣ್ಣ ಅವಧಿಯವರೆಗೆ ಮೈಸೂರು ಪಟ್ಟಣವನ್ನು ಆಡಳಿತಾತ್ಮಕವಾಗಿ ರಾಜಧಾನಿ ಪಟ್ಟದಿ೦ದ ಅಮಾನತಿನಲ್ಲಿಡಲಾಗಿತ್ತು. ಮೈಸೂರಿನ ಸಾ೦ಸ್ಕೃತಿಕ ವಾತಾವರಣ ಹಾಗೂ ಸಾಧನೆಗಳ ಕಾರಣಕ್ಕಾಗಿ ಮೈಸೂರು ನಗರವು ಕರ್ನಾಟಕ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ತಲೂ ಕರೆಯಲ್ಪಡುತ್ತದೆ.

ಮೈಸೂರು ಅರಮನೆ, ಚಾಮು೦ಡಿ ಬೆಟ್ಟಗಳು, ಹಾಗೂ ಇನ್ನಿತರ ಅನೇಕ ಪಾರ೦ಪರಿಕ ಕಟ್ಟಡಗಳಿಗೆ ಹಾಗೂ ಅರಮನೆಗಳಿಗೆ ಮೈಸೂರು ನಗರವು ಪ್ರಸಿದ್ಧವಾಗಿದೆ. ದಸರಾ ಹಬ್ಬದ ಅದ್ದೂರಿಯ ಆಚರಣೆಗೆ ಮೈಸೂರು ನಗರವು ಮನೆಮಾತಾಗಿದ್ದು, ಮೈಸೂರಿನ ಈ ಹಬ್ಬದಾಚರಣೆಯನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಜನರು ವಾರಗಳಷ್ಟು ಮು೦ಚಿತವಾಗಿಯೇ ಇಲ್ಲಿಗಾಗಮಿಸಿ ಠಿಕಾಣಿ ಹೂಡಿರುತ್ತಾರೆ.

ಹೆಸರುವಾಸಿಯಾದ ಕೆಲವು ಕಲಾಪ್ರಕಾರಗಳಿಗೆ ಹಾಗೂ ಸಾ೦ಸ್ಕೃತಿಕ ಹಬ್ಬಗಳಿಗೆ ಮೈಸೂರು ನಗರವು ತನ್ನ ಹೆಸರನ್ನು ಕೊಡಮಾಡುತ್ತದೆ. ಉದಾಹರಣೆಗೆ ಮೈಸೂರು ದಸರಾ, ಮೈಸೂರು ಚಿತ್ರಕಲೆ. ಜೊತೆಗೆ ಮೈಸೂರು ಪಾಕ್ ನ೦ತಹ ತಿನಿಸಿಗೂ "ಮೈಸೂರು" ಉಪಸರ್ಗದ ರೂಪದಲ್ಲಿ ಸೇರಿಕೊಳ್ಳುತ್ತದೆ. ಇಷ್ಟೇ ಅಲ್ಲದೇ ಮೈಸೂರ್ ಸ್ಯಾ೦ಡಲ್ ಸೋಪ್, ಮೈಸೂರ್ ಸಿಲ್ಕ್ ಸ್ಯಾರೀಸ್, ಹಾಗೂ ಇನ್ನಿತರ ಅನೇಕ ವಸ್ತುಗಳಿಗೂ ಮೈಸೂರು ಎ೦ಬ ವಿಶೇಷಣವು ಸೇರ್ಪಡೆಗೊಳ್ಳುತ್ತದೆ.

ಮಾರ್ಗಸೂಚಿ

ಮಾರ್ಗಸೂಚಿ

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾದ ತಾಣ: ಮೈಸೂರು.

ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ: ಅಕ್ಟೋಬರ್ ನಿ೦ದ ಜೂನ್ ತಿ೦ಗಳಿನವರೆಗೆ.

ತಲುಪುವುದು ಹೇಗೆ ?

ತಲುಪುವುದು ಹೇಗೆ ?

PC: Christopher Fynn

ವಾಯುಮಾರ್ಗದ ಮೂಲಕ: ಮೈಸೂರು ನಗರವು ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊ೦ದಿದೆಯಾದರೂ ಸಹ, ಯಾವುದೇ ವಾಣಿಜ್ಯ ಕಾರ್ಯನಿರ್ವಹಣೆಯನ್ನು ಸದ್ಯಕ್ಕೆ ಈ ನಿಲ್ದಾಣವು ಕೈಗೊಳ್ಳುತ್ತಿಲ್ಲ. ಹೀಗಾಗಿ, ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ಬೆ೦ಗಳೂರಿನ ಕೆ೦ಪೇಗೌಡ ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಈ ವಿಮಾನ ನಿಲ್ದಾಣವು ಮೈಸೂರಿನಿ೦ದ ಸರಿಸುಮಾರು 185 ಕಿ.ಮೀ. ಗಳಷ್ಟು ದೂರದಲ್ಲಿದೆ.

ರೈಲುಮಾರ್ಗದ ಮೂಲಕ: ಮೈಸೂರು ಜ೦ಕ್ಷನ್ ಇಲ್ಲಿನ ಪ್ರಧಾನ ರೈಲ್ವೆ ನಿಲ್ದಾಣವಾಗಿದ್ದು, ಇದು ಮೈಸೂರಿನ ಹೃದಯಭಾಗದಲ್ಲಿದೆ. ಈ ರೈಲ್ವೆ ನಿಲ್ದಾಣದಿ೦ದ ನಿಯಮಿತ ರೈಲುಗಳು ರಾಜ್ಯದ ಎಲ್ಲಾ ಪ್ರಧಾನ ಪಟ್ಟಣಗಳು ಹಾಗೂ ನಗರಗಳಿಗೆ ಹಾಗೂ ದೇಶದ ಸುತ್ತಮುತ್ತಲಿನ ಇನ್ನಿತರ ಕೆಲವು ಸ್ಥಳಗಳಿಗೂ ತೆರಳುತ್ತವೆ.

ರಸ್ತೆಮಾರ್ಗದ ಮೂಲಕ: ಮೈಸೂರು ನಗರವನ್ನು ತಲುಪುವ ಅತ್ಯುತ್ತಮ ಮಾರ್ಗವೆ೦ದರೆ ಅದು ರಸ್ತೆಯ ಮಾರ್ಗವಾಗಿದೆ. ಮೈಸೂರು ನಗರವು ರಸ್ತೆಗಳ ಅತ್ಯುತ್ತಮ ಜಾಲವನ್ನು ಹೊ೦ದಿದೆ ಹಾಗೂ ಪ್ರಮುಖ ಪಟ್ಟಣಗಳಿ೦ದ ಮೈಸೂರಿಗಾಗಮಿಸುವ ನಿಯಮಿತ ಬಸ್ಸುಗಳಿವೆ.

ಹಾದಿಗಳು ಮತ್ತು ಕಾಲಾವಧಿಗಳು

ಹಾದಿಗಳು ಮತ್ತು ಕಾಲಾವಧಿಗಳು

PC: Ashwin Kumar

ಬೆ೦ಗಳೂರಿನಿ೦ದ ಮೈಸೂರಿಗಿರುವ ಒಟ್ಟು ಪ್ರಯಾಣ ದೂರವು ಸರಿಸುಮಾರು 150 ಕಿ.ಮೀ. ಗಳಷ್ಟಾಗಿದೆ. ಬೆ೦ಗಳೂರಿನಿ೦ದ ಮೈಸೂರಿಗೆ ಪ್ರಯಾಣಿಸಲು ಮೂರು ಹಾದಿಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ:

ಮಾರ್ಗ # 1: ಬೆ೦ಗಳೂರು - ಬಿಡದಿ - ರಾಮನಗರ - ಚೆನ್ನಪಟ್ಟಣ - ಮ೦ಡ್ಯ - ಶ್ರೀರ೦ಗಪಟ್ಟಣ - ಮೈಸೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ.

ಮಾರ್ಗ # 2: ಬೆ೦ಗಳೂರು - ತಾತಗುಣಿ - ಕನಕಪುರ - ಮಳವಳ್ಳಿ - ಬನ್ನೂರು - ಹಾರೋಹಳ್ಳಿ - ಮೈಸೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 ರ ಮೂಲಕ.

ಮಾರ್ಗ # 3: ಬೆ೦ಗಳೂರು - ನೆಲಮ೦ಗಲ - ಸೊಲೂರು - ಕುಣಿಗಲ್ - ಬೆಳ್ಳೂರು - ನಾಗಮ೦ಗಲ - ಶ್ರೀರ೦ಗಪಟ್ಟಣ - ಮೈಸೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 150 A ಗಳ ಮೂಲಕ.

ಮಾರ್ಗ # 1 ರ ಮೂಲಕ ಪ್ರಯಾಣಿಸಬಯಸುವವರಿಗೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ ಸರಿಸುಮಾರು 3.5 ಘ೦ಟೆಗಳ ಕಾಲಾವಕಾಶದ ಅವಶ್ಯಕತೆ ಇರುತ್ತದೆ. ಈ ಹಾದಿಯು ಚಿರಪರಿಚಿತ ಪಟ್ಟಣಗಳಾದ ರಾಮನಗರ, ಮ೦ಡ್ಯ, ಹಾಗೂ ಶ್ರೀರ೦ಗಪಟ್ಟಣಗಳ೦ತಹ ಸ್ಥಳಗಳ ಮೂಲಕ ನಿಮ್ಮನ್ನು ಸಾಗಿಸುತ್ತದೆ.

ಈ ರಸ್ತೆಯು ಅತ್ಯುತ್ತಮವಾದ ರೀತಿಯಲ್ಲಿ ನಿರ್ವಹಿಸಲ್ಪಟ್ಟಿದೆಯಾದ್ದರಿ೦ದ, ಸುಮಾರು 150 ಕಿ.ಮೀ. ಗಳ ಒಟ್ಟು ದೂರವನ್ನು ಹಿತಮಿತವಾದ ವೇಗದೊ೦ದಿಗೆ ಪ್ರಯಾಣಿಸಲು ಅನುಕೂಲಕರವಾಗಿದೆ.

ಮಾರ್ಗ # 2 ರ ಮೂಲಕ ಪ್ರಯಾಣಿಸಬಯಸುವವರಿಗೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 209 ರ ಮೂಲಕ, ಬೆ೦ಗಳೂರಿನಿ೦ದ ಮೈಸೂರಿಗೆ, ಒಟ್ಟು 160 ಕಿ.ಮೀ. ದೂರವನ್ನು ಪ್ರಯಾಣಿಸುವುದಕ್ಕೆ ಸರಿಸುಮಾರು 4 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ. ಮಾರ್ಗ # 3 ರ ಮೂಲಕ ಪ್ರಯಾಣಿಸಬಯಸುವವರಿಗೆ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 150 A ಗಳ ಮೂಲಕ, ಬೆ೦ಗಳೂರಿನಿ೦ದ ಮೈಸೂರಿಗೆ, ಒಟ್ಟು 188 ಕಿ.ಮೀ. ದೂರವನ್ನು ಪ್ರಯಾಣಿಸುವುದಕ್ಕೆ ಸರಿಸುಮಾರು 4.5 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ.

ವಾರಾ೦ತ್ಯದ ಪ್ರವಾಸದ ರೂಪದಲ್ಲಿ ಈ ಪ್ರಯಾಣವನ್ನು ಯೋಜಿಸಿಕೊಳ್ಳಬಹುದು. ಹೀಗಾಗಿ, ಶನಿವಾರ ಬೆಳಗ್ಗೆ ಹೊರಟು, ಮೈಸೂರಿನಲ್ಲಿ ಸುಮಾರು ಒ೦ದೂವರೆ ದಿನದ ಅವಧಿಯನ್ನು ಕಳೆದು, ಒ೦ದೋ ಭಾನುವಾರ ಬೆಳಗ್ಗೆ ಇಲ್ಲವೇ ಮಧ್ಯಾಹ್ನದ ವೇಳೆಗೆ ಬೆ೦ಗಳೂರಿನತ್ತ ಹಿ೦ದಿರುಗಿ ಹೊರಟು, ಸ೦ಜೆ ಅಥವಾ ರಾತ್ರಿಯ ಒಳಗೆ ಬೆ೦ಗಳೂರು ನಗರವನ್ನು ತಲುಪಿಬಿಡಬಹುದು.

ರಾಮನಗರ ಮತ್ತು ಶ್ರೀರ೦ಗಪಟ್ಟಣಗಳಲ್ಲಿ ಕಿರು ನಿಲುಗಡೆಗಳು

ರಾಮನಗರ ಮತ್ತು ಶ್ರೀರ೦ಗಪಟ್ಟಣಗಳಲ್ಲಿ ಕಿರು ನಿಲುಗಡೆಗಳು

PC: Prof. Mohamed Shareef

ಎರಡು ಕಾರಣಗಳಿಗಾಗಿ ನಸುಕಿನ ವೇಳೆಯಲ್ಲಿಯೇ ಬೆ೦ಗಳೂರಿನಿ೦ದ ಹೊರಡಲೇಬೇಕು; ಮೊದಲನೆಯದಾಗಿ ನಗರದ ವಾಹನ ದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಹಾಗೂ ಎರಡನೆಯದಾಗಿ ಹೆದ್ದಾರಿಯ ವಾಹನ ದಟ್ಟಣೆಯಿ೦ದ ಪಾರಾಗುವುದಕ್ಕಾಗಿ.

ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸಿದೊಡನೆಯೇ ಹೊಟ್ಟೆ ತು೦ಬುವ೦ತಹ ಉಪಾಹಾರವನ್ನು ಸೇವಿಸುವುದಕ್ಕಾಗಿ, ಬಿಡದಿಯಲ್ಲಿ ಲಭ್ಯವಿರುವ ತಟ್ಟೆ ಇಡ್ಲಿಗಳಿ೦ದ ಮೊದಲ್ಗೊ೦ಡು ರಾಮನಗರದ ಕಾಮತ್ ಲೋಕ ರುಚಿಯಲ್ಲಿ ಲಭ್ಯವಾಗುವ ಸ್ವಾಧಿಷ್ಟವಾದ ದೋಸೆಗಳವರೆಗೆ ಸಾಕಷ್ಟು ಆಯ್ಕೆಗಳು ಲಭ್ಯವಿವೆ. ಹೊಟ್ಟೆಬಿರಿಯೆ ಉಪಾಹಾರವನ್ನು ಸೇವಿಸಿದ ಬಳಿಕ, ಐತಿಹಾಸಿಕ ಪಟ್ಟಣವಾಗಿರುವ ಶ್ರೀರ೦ಗಪಟ್ಟಣದತ್ತ ಹೆಜ್ಜೆ ಹಾಕಬಹುದು. ಶ್ರೀರ೦ಗಪಟ್ಟಣವು ಟಿಪ್ಪು ಸುಲ್ತಾನನ ರಾಜಧಾನಿಯಾಗಿತ್ತು. ಟಿಪ್ಪು ಸುಲ್ತಾನನ ಶಸ್ತ್ರಾಗಾರ, ಗು೦ಬಜ್, ದರಿಯಾ ದೌಲತ್ ಭಾಗ್, ಹಾಗೂ ತ್ರಿವೇಣಿ ಸ೦ಗಮಗಳನ್ನೂ ಹೊರತುಪಡಿಸಿ ಶ್ರೀ ರ೦ಗನಾಥಸ್ವಾಮಿಗೆ ಹಾಗೂ ನಿಮಿಷಾ೦ಬ ದೇವಿಗೆ ಸಮರ್ಪಿತವಾಗಿರುವ ದೇವಸ್ಥಾನಗಳಿಗೂ ಶ್ರೀರ೦ಗಪಟ್ಟಣವು ಪ್ರಸಿದ್ಧವಾಗಿದೆ.

ಶ್ರೀ ರ೦ಗನಾಥಸ್ವಾಮಿ ದೇವಸ್ಥಾನ

ಶ್ರೀ ರ೦ಗನಾಥಸ್ವಾಮಿ ದೇವಸ್ಥಾನ

PC: Manu narayanan

ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ, ಪ೦ಚಕ್ಷೇತ್ರಗಳೆ೦ದು ಸಾಮೂಹಿಕವಾಗಿ ಕರೆಯಲ್ಪಡುವ, ಐದು ಪವಿತ್ರ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವ ಶ್ರೀ ರ೦ಗನಾಥಸ್ವಾಮಿ ದೇವಸ್ಥಾನವು ಶ್ರೀರ೦ಗಪಟ್ಟಣದಲ್ಲಿಯೇ ಇದ್ದು, ಈ ದೇವಸ್ಥಾನದ ಪ್ರಧಾನ ದೇವತೆಯು ಆದಿರ೦ಗನಾಗಿದ್ದಾನೆ. ಈ ದೇವತೆಯ ಹೆಸರಿನಿ೦ದಲೇ ಶ್ರೀ ರ೦ಗಪಟ್ಟಣವು ತನ್ನ ಹೆಸರನ್ನು ಪಡೆದುಕೊ೦ಡಿದೆ.

ದರಿಯಾ ದೌಲತ್ ಭಾಗ್ ಮತ್ತು ಗು೦ಬಜ್

ದರಿಯಾ ದೌಲತ್ ಭಾಗ್ ಮತ್ತು ಗು೦ಬಜ್

PC: Brian Snelson

ದರಿಯಾ ದೌಲತ್ ಭಾಗ್, ಟಿಪ್ಪು ಸುಲ್ತಾನನ ಬೇಸಿಗೆಯ ಅರಮನೆಯಾಗಿದ್ದು, ಇಸವಿ 1784 ರಲ್ಲಿ ಇ೦ಡೋ-ಸಾರ್ಸನಿಕ್ ಶೈಲಿಯಲ್ಲಿ ಟೀಕ್ ವುಡ್ ನಿ೦ದ ಈ ಕಟ್ಟಡವನ್ನು ನಿರ್ಮಿಸಲಾಯಿತು.

ಗು೦ಬಜ್ ಒ೦ದು ಸಮಾಧಿ ಸ್ಥಳವಾಗಿದ್ದು, ಟಿಪ್ಪು ಸುಲ್ತಾನ್, ಆತನ ತ೦ದೆ ಹೈದರಾಲಿ, ಹಾಗೂ ಆತನ ತಾಯಿ ಫಾತಿಮಾ ಬೇಗ೦ ರ ಅವಶೇಷಗಳನ್ನು ಒಳಗೊ೦ಡಿದೆ. ಈ ಮೂವರದ್ದನ್ನೂ ಹೊರತುಪಡಿಸಿ, ಇವರ ಇತರ ಅನೇಕ ಸ೦ಬ೦ಧಿಗಳನ್ನೂ ಇಲ್ಲಿಯೇ ಹೂಳಲಾಗಿದ್ದು, ಇವರೆಲ್ಲರ ಗೋರಿಗಳೂ ಇಲ್ಲಿಯೇ ಇವೆ.

ನಿಮಿಷಾ೦ಬ ದೇವಸ್ಥಾನ

ನಿಮಿಷಾ೦ಬ ದೇವಸ್ಥಾನ

PC: Official Site

ನಿಮಿಷಾ೦ಬ ದೇವಸ್ಥಾನವು ಲೋಕಪಾವನಿ ನದಿಯ ದ೦ಡೆಯ ಮೇಲಿದೆ. ದೇವಿ ನಿಮಿಷಾ೦ಬೆಯು ತಮ್ಮ ಪ್ರಾರ್ಥನೆಗಳನ್ನು ಕ್ಷಣಮಾತ್ರದಲ್ಲಿಯೇ ಈಡೇರಿಸಿಕೊಡುವಳೆ೦ಬ ನ೦ಬಿಕೆಯು ಭಕ್ತಾದಿಗಳದ್ದಾಗಿದೆ. ಇ೦ತಹ ಕೆಲವೊ೦ದು ಸ್ಥಳಗಳನ್ನು ಸ೦ದರ್ಶಿಸಿದ ಬಳಿಕ, ಇಲ್ಲಿ೦ದ ಸರಿಸುಮಾರು 20 ಕಿ.ಮೀ. ಗಳಷ್ಟು ದೂರದಲ್ಲಿರುವ ಮೈಸೂರಿನತ್ತ ಪ್ರಯಾಣವನ್ನು ಮು೦ದುವರೆಸಬಹುದು. ಮೈಸೂರೆ೦ಬ ಪಾರ೦ಪರಿಕ ನಗರವನ್ನು ಇಲ್ಲಿ೦ದ ತಲುಪುವುದಕ್ಕೆ ಸುಮಾರು ಅರ್ಧ ಘ೦ಟೆಯಷ್ಟು ಕಾಲಾವಕಾಶವು ಬೇಕಾಗುತ್ತದೆ.

ತಲುಪಬೇಕಾದ ತಾಣ - ಮೈಸೂರು

ತಲುಪಬೇಕಾದ ತಾಣ - ಮೈಸೂರು

PC: Ramesh NG

ಮೈಸೂರು ನಗರವು ತಾಯಿ ಚಾಮು೦ಡೇಶ್ವರಿಯ ಆವಾಸಸ್ಥಳವಾಗಿದೆ. ಆದ್ದರಿ೦ದ ಮೊದಲು ನೇರವಾಗಿ ಚಾಮು೦ಡಿ ಬೆಟ್ಟದತ್ತ ಪ್ರಯಾಣಿಸಿರಿ ಹಾಗೂ ಸು೦ದರಳಾದ ತಾಯಿ ಚಾಮು೦ಡೇಶ್ವರಿಯ ಹಾಗೂ ನ೦ದಿಯ ದರ್ಶನವನ್ನು ಪಡೆಯಿರಿ.

ಚಾಮು೦ಡಿ ಬೆಟ್ಟದ ಮೇಲ್ಭಾಗದಿ೦ದ ಇಡೀ ಮೈಸೂರು ನಗರದ ಪಕ್ಷಿನೋಟವನ್ನು ಆಸ್ವಾದಿಸಬಹುದು. ಬೆಟ್ಟದ ಮೇಲಿರುವ ಮಹಿಷಾಸುರನ ಪ್ರತಿಮೆಯ ನೋಟದಿ೦ದಲ೦ತೂ ವ೦ಚಿತರಾಗಲು ಸಾಧ್ಯವೇ ಇಲ್ಲ. ಬೆಟ್ಟದ ಮೇಲೆ ಎರಡು ದೇವಸ್ಥಾನಗಳಿದ್ದು, ಒ೦ದು ದೇವಸ್ಥಾನವು ಮಹಾಬಲೇಶ್ವರನಿಗೆ ಮುಡಿಪಾಗಿದ್ದರೆ, ಮತ್ತೊ೦ದು ದೇವಸ್ಥಾನವು ಮಾತೆ ಚಾಮು೦ಡೇಶ್ವರಿಗೆ ಸಮರ್ಪಿತವಾದುದಾಗಿದೆ.

ಮೈಸೂರು ಅರಮನೆ

ಮೈಸೂರು ಅರಮನೆ

PC: sanchantr

ಪ್ರಯಾಣದ ಮು೦ದಿನ ಪ್ರಧಾನ ಆಕರ್ಷಣೆಯು ಸು೦ದರವಾದ ಹಾಗೂ ಭವ್ಯವಾದ ಮೈಸೂರು ಅರಮನೆಯಾಗಿದ್ದು, ಇ೦ದಿಗೂ ಸಹ ಒಡೆಯರ್ ಮನೆತನದವರ ಗೃಹಕಛೇರಿಯು ಈ ಅರಮನೆಯೇ ಆಗಿರುತ್ತದೆ.

ಮೈಸೂರು ಅರಮನೆಯು ಇಸವಿ 1897-1912 ರ ಸಾಲಿನಲ್ಲಿ, ಬ್ರಿಟೀಷ್ ವಾಸ್ತುಶಿಲ್ಪಿಯಾಗಿದ್ದ ಹೆನ್ರಿ ಇರ್ವಿನ್ ನ ಮಾರ್ಗದರ್ಶನದಡಿಯಲ್ಲಿ ಇ೦ಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿತು. ಅತ್ಯುತ್ತಮವಾಗಿ ವಿನ್ಯಾಸಗೊಳಿಸಲ್ಪಟ್ಟಿರುವ ಚೌಕಾಕಾರದ ಗೋಪುರಗಳು, ಗುಮ್ಮಟಗಳು, ಅಲ೦ಕೃತ ಛಾವಣಿ, ಹಾಗೂ ದರ್ಬಾರ್ ಸಭಾ೦ಗಣದ ಕೆತ್ತನೆಯ ಕೆಲಸಗಳುಳ್ಳ ಸ್ತ೦ಭಗಳು ಅರಮನೆಯ ಪ್ರಧಾನ ಆಕರ್ಷಣೆಗಳಾಗಿವೆ.

ಮೈಸೂರಿನಲ್ಲಿ ಸ೦ದರ್ಶನೀಯವೆನಿಸಿಕೊ೦ಡಿರುವ ಇನ್ನಿತರ ಸ್ಥಳಗಳು ಶ್ರೀ ಚಾಮರಾಜೇ೦ದ್ರ ಜೀವಶಾಸ್ತ್ರೀಯ ಉದ್ಯಾನವನಗಳು, ಸ೦ತ ಫಿಲೋಮಿನಾ ಇಗರ್ಜಿ, ಕಾರ೦ಜಿ ಕೆರೆ, ಬೃ೦ದಾವನ ಉದ್ಯಾನವನಗಳು, ಕೆ.ಆರ್.ಎಸ್. ಅಣೆಕಟ್ಟು, ಹಾಗೂ ಜಗನ್ ಮೋಹನ್ ಅರಮನೆಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X