Search
  • Follow NativePlanet
Share
» »ಭಾರತದ ಕೆಲವು ಪ್ರಖ್ಯಾತ ಬಿರ್ಲಾ ಮಂದಿರಗಳು

ಭಾರತದ ಕೆಲವು ಪ್ರಖ್ಯಾತ ಬಿರ್ಲಾ ಮಂದಿರಗಳು

By Vijay

ನಿಮಗೆಲ್ಲ ತಿಳಿದಿರುವ ಹಾಗೆ ಟಾಟಾ-ಬಿರ್ಲಾ ಪದವನ್ನು ಬಹುತೇಕ ಕಡೆಗಳಲ್ಲಿ ಬಳಸಲಾಗಿದೆ ಹಾಗೂ ಬಳಸಲಾಗುತ್ತಿದೆ ಕೂಡ. ಹಾಗಾದರೆ ಏನಿದು ಟಾಟಾ-ಬಿರ್ಲಾ ಎಂಬ ಪ್ರಶ್ನೆ ಮೂಡುವುದು ಸಹಜವೆ ತಾನೆ. ಈ ಅವಳಿ ಪದವು ಎರಡು ಕುಟುಂಬಗಳ ಹೆಸರು, ಒಂದು ಟಾಟಾ ಕುಟುಂಬವಾದರೆ ಇನ್ನೊಂದು ಬಿರ್ಲಾ ಕುಟುಂಬ.

ಈ ಎರಡೂ ಕುಟುಂಬಗಳು ಭಾರತ ಸ್ವತಂತ್ರಗೊಂಡು ಆಡಳಿತ ಪ್ರಾರಂಭಿಸಿದಾಗಿನಿಂದ ಕೈಗಾರೀಕರಣದಿಂದ ಸಾಕಷ್ಟು ಪ್ರಗತಿ ಸಾಧಿಸಿದ ದೇಶದ ಪ್ರತಿಷ್ಠಿತ ಹಾಗೂ ಶ್ರೀಮಂತ ಕುಟುಂಬಗಳು. ಸಾಮಾಜಿಕ ಕಳಕಳಿ, ದಾನ-ಧರ್ಮಗಳಲ್ಲಿ ಈ ಎರಡೂ ಕುಟುಂಬಗಳ ಕೊಡುಗೆ ಅಪಾರ ಹಾಗೂ ಶ್ಲಾಘನೀಯವಾದದ್ದು.

ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಅತಿ ಮುಖ್ಯ ದೇವಾಲಯಗಳು

ಬಿರ್ಲಾ ಕುಟುಂಬ ಮೂಲತಃ ರಾಜಸ್ಥಾನದವರಾಗಿದ್ದು ಈ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ದೆಹಲಿ, ಕೊಲ್ಕತ್ತಾದಂತಹ ಮುಖ್ಯ ನಗರಗಳಲ್ಲಿ ಮುಘಲ್ ಆಳ್ವಿಕೆ ಕೊನೆಗೊಳ್ಳುವ ತನಕ ಗುರುತರವಾದ ಯಾವುದೆ ಹಿಂದು ದೇವಾಲಯಗಳಿರಲಿಲ್ಲ. ಈ ನಿಟ್ಟಿನಲ್ಲಿ ಬಿರ್ಲಾ ಕುಟುಂಬದವರು ವಿಶಾಲವಾದ ದೇವಾಲಯಗಳ ನಿರ್ಮಾಣ ಕಾರ್ಯಕ್ಕೆ ಮೊದಲು ಚಾಲನೆ ನೀಡಿದವರು.

ಅದರ ಪ್ರಕಾರವಾಗಿ ಬಿರ್ಲಾ ಕುಟುಂಬದ ವತಿಯಿಂದ ಭಾರತದ ಕೆಲವು ಮುಖ್ಯ ನಗರಗಳಲ್ಲಿ ಅದ್ಭುತ, ವಿಶಾಲ ಹಾಗೂ ಸುಂದರ ವಾಸ್ತುಶೈಲಿಯಿಂದ ಕೂಡಿದ ದೇವಾಲಯಗಳು ನಿರ್ಮಾಣವಾದವು. ಆ ದೇವಾಲಯಗಳೆ ಜನಪ್ರೀಯವಾಗಿ ಬಿರ್ಲಾ ಮಂದಿರಗಳು ಎಂದು ಕರೆಯಲ್ಪಡುತ್ತವೆ. ಬಹು ಜನರು ನೆರೆಯುವ ಸಾಮರ್ಥ್ಯ, ಪುರಾತನ ವಾಸ್ತುಶಾಸ್ತ್ರಗಳನ್ನು ಗಮನದಲ್ಲಿರಿಸಿಕೊಂಡು ಆಧುನಿಕವಾಗಿ ನಿರ್ಮಿಸಲಾಗಿದೆ ಈ ದೇವಾಲಯಗಳು.

ಪ್ರತಿ ದೇವಾಲಯಗಳಂತೆ ಈ ದೇವಾಲಯಗಳಲ್ಲೂ ಸಹ ಶಾಸ್ತ್ರೋಕ್ತವಾದ ಪೂಜಾ ವಿಧಿ ವಿಧಾನಗಳು ಜರುಗುತ್ತವೆ. ಅಲ್ಲದೆ ಇವು ಹಿಂದು ಸಂಸ್ಕೃತಿ, ದೇವರುಗಳ ಪಾವಿತ್ರ್ಯತೆ, ಘನತೆ ಸಾರುವ ಧಾರ್ಮಿಕ ಪ್ರವಾಸಿ ಕೇಂದ್ರಗಳಾಗಿಯೂ ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ದೇಶದ ಕೆಲವು ಆಯ್ದ ಪ್ರಖ್ಯಾತ ಬಿರ್ಲಾ ಮಂದಿರಗಳ ಕುರಿತು ತಿಳಿಯಿರಿ.

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಲಕ್ಷ್ಮಿ ನಾರಾಯಣ ದೇವಾಲಯ : ಹಿಂದೆ ಮೊದ ಮೊದಲು ಮುಘಲ್ ಸಾಮ್ರಾಜ್ಯದ ಕೊನೆಯಲ್ಲಿ ದೇಶದ ಇಂದಿನ ರಾಜಧಾನಿ ಹಾಗೂ ಅಂದಿನ ಮುಖ್ಯ ಪ್ರಾಂತವಾಗಿದ್ದ ದೆಹಲಿಯಲ್ಲಿ ಹೇಳಿಕೊಳ್ಳುವಂತಹ ಭವ್ಯವಾದ ಹಿಂದು ದೇವಾಲಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿ ಹೊಂದಿದ್ದ ಬಿರ್ಲಾ ಕುಟುಂಬದ ಬಲದೇವ್ ದಾಸ್ ಬಿರ್ಲಾ ಅವರಿಂದ ದೆಹಲಿಯಲ್ಲಿ ಈ ದೇವಾಲಯ ನಿರ್ಮಿಸಲ್ಪಟ್ಟಿತು ಹಾಗೂ ಇದು ಮಹಾತ್ಮಾ ಗಾಂಧಿಯವರಿಂದ ಉದ್ಘಾಟಿಸಲ್ಪಟ್ಟಿತು.

ಚಿತ್ರಕೃಪೆ: Vinayaraj

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಧಾನವಾಗಿ ಲಕ್ಷ್ಮಿ ಸಮೇತನಾಗಿ ನೆಲೆಸಿರುವ ಲಕ್ಷ್ಮಿ-ನಾರಾಯಣನಿಗೆ ಈ ದೇವಾಲಯ ಮುಡಿಪಾಗಿದ್ದು ಶಿವ, ಕೃಷ್ಣ ಹಾಗೂ ಬುದ್ಧನ ಸನ್ನಿಧಿಗಳೂ ಸಹ ಇಲ್ಲಿವೆ. ಏಳುವರೆ ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಈ ದೇವಾಲಯ ವ್ಯಾಪಿಸಿದ್ದು ಹಲವಾರು ದೇಗುಲಗಳು ಹಾಗೂ ಇತರೆ ರಚನೆಗಳು ಮತ್ತು ಕಾರಂಜಿ ಉದ್ಯಾನವನ್ನು ಇಲ್ಲಿ ಕಾಣಬಹುದು. ಹಾಗಾಗಿ ಇದೊಂದು ದೆಹಲಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಯೂ ಸಹ ಗಮನ ಸೆಳೆಯುತ್ತದೆ. ಇದು 1939 ರಲ್ಲಿ ನಿರ್ಮಾಣವಾದ ದೇವಾಲಯವಾಗಿದೆ.

ಚಿತ್ರಕೃಪೆ: A.Savin

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಹೈದರಾಬಾದ್ : ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಹೃದಯ ಭಾಗದಲ್ಲಿರುವ ನೌಬತ್ ಪಹಾಡ್ ಎಂಬ 280 ಅಡಿಗಳಷ್ಟು ಎತ್ತರದ ಚಿಕ್ಕ ಗುಡ್ಡವೊಂದರ ಮೇಲೆ ಈ ದೇವಾಲಯವನ್ನು ಬಿರ್ಲಾ ಫೌಂಡೇಷನ್ ವತಿಯಿಂದ ನಿರ್ಮಿಸಲಾಗಿದೆ ಹಾಗೂ ಇದು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದ್ದು ಪ್ರೀತಿಯಿಂದ ಬಿರ್ಲಾ ಮಂದಿರವೆಂದೆ ಕರೆಯಲ್ಪಡುತ್ತದೆ.

ಚಿತ್ರಕೃಪೆ: Karthik Easvur

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಸುಮಾರು ಹದಿಮೂರು ಎಕರೆಗಳಷ್ಟು ವಿಶಾಲವಾದ ಭೂಮಿಯಲ್ಲಿ ವ್ಯಾಪಿಸಿರುವ ಈ ದೇವಾಲಯವು ಪೂರ್ಣಗೊಳ್ಳಲು ಹತ್ತು ವರ್ಷಗಳೆ ಬೇಕಾದವು. 1976 ರಲ್ಲಿ ಲೋಕಾರ್ಪಣೆಯಾದ ಈ ದೇವಾಲಯ 2000 ಟನ್ ಗಳಷ್ಟು ಶ್ವೇತ ವರ್ಣದ ಅಮೃತಶಿಲೆಯಿಂದ ಅದ್ಭುತವಾಗಿ ನಿರ್ಮಿತವಾಗಿದ್ದು ಸಾಕಷ್ಟು ಆಕರ್ಷಕವಾಗಿ ಕಂಡುಬರುತ್ತದೆ.

ಚಿತ್ರಕೃಪೆ: ambrett

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಹನ್ನೊಂದು ಅಡಿಗಳಷ್ಟು ಎತ್ತರದ ಗ್ರಾನೈಟ್ ನಲ್ಲಿ ಕೆತ್ತಲಾದ ವೆಂಕಟೇಶ್ವರನ ವಿಗ್ರಹ ಹೊಂದಿರುವ ಈ ದೇವಾಲಯ ಪ್ರಮುಖವಾಗಿ ವೆಂಕಟೇಶ್ವರನಿಗೆ ಮುಡಿಪಾಗಿದೆಯಾದರೂ ಅವನ ಪತ್ನಿಯರಾದ ಪದ್ಮಾವತಿ ಹಾಗೂ ಅಂಡಾಲ ದೇವಿಯರಿಗೆ ಮುಡಿಪಾದ ಪ್ರತ್ಯೇಕ ಸನ್ನಿಧಿಗಳು ಇಲ್ಲಿವೆ.

ಚಿತ್ರಕೃಪೆ: Nikhilb239

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಕಾನಪುರ್ : ಉತ್ತರ ಪ್ರದೇಶದ ಒಂದು ವಾಣಿಜ್ಯ ಹಾಗೂ ಮಹತ್ವದ ಪಟ್ಟಣವಾದ ಕಾನಪುರ್ ನಲ್ಲಿರುವ ಬಿರ್ಲಾ ಮಂದಿರವಿದು. ವಿಶಾಲ ಪ್ರಾಥನಾ ಪ್ರಾಂಗಣ ಹಾಗೂ ಇತರೆ ದೇವರುಗಳ ಸನ್ನಿಧಿಗಳನ್ನು ಹೊಂದಿರುವ ಈ ವಿಶಾಲ ಹಾಗೂ ಭವ್ಯವಾದ ದೇವಾಲಯವು ಕಾನಪುರ್ ನಿವಾಸಿಗರ ಹೆಮ್ಮೆಯಾಗಿದ್ದು ದಿನವೂ ಸಾಕಷ್ಟು ಜನರಿಂದ/ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Abhishek Dwivedi Kanpur

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಕೊಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ನಗರವಾದ ಕೊಲ್ಕತ್ತಾ ನಗರದ ಅಶುತೋಷ್ ಚೌಧುರಿ ಅವೆನ್ಯೂನಲ್ಲಿರುವ ರಾಧಾ-ಕೃಷ್ಣರಿಗೆ ಮುಡಿಪಾದ ಬಿರ್ಲಾ ಮಂದಿರ ಇದಾಗಿದೆ. 1970 ರಲ್ಲೆ ಈ ದೇವಾಲಯ ನಿರ್ಮಾಣದ ಕಾಮಗಾರಿ ಆರಂಭವಾದರೂ ಸಂಪೂರ್ಣವಾಗಿ ಈ ದೇವಾಲಯದ ನಿರ್ಮಾಣ ಪೂರ್ಣಗೊಂಡಿದ್ದು 1996 ರಲ್ಲಿ.

ಚಿತ್ರಕೃಪೆ: Supriya.ratnaparkhi

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಆಕರ್ಷಕ ವಾಸ್ತುಶೈಲಿ ಹೊಂದಿರುವ ಈ ಬಿರ್ಲಾ ಮಂದಿರ ನೋಡಲು ವಿಶಾಲ ಹಾಗೂ ಭವ್ಯವಾಗಿದ್ದು ನಿತ್ಯವೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ಈ ದೇವಾಲಯಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಾರೆ ಹಾಗೂ ಉತ್ಸವವನ್ನು ಬಲು ಅದ್ದೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Kolkatan

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಬಿಟ್ಸ್ ಪಿಲನಿ : ರಾಜಸ್ಥಾನದ ಶೇಖಾವತಿ ಪ್ರದೇಶದ ಝುಂಝುನು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪಿಲನಿ ತನ್ನಲ್ಲಿರುವ ಅಪಾರ್ಅ ಜನಪ್ರೀಯತೆ ಹಾಗೂ ಪ್ರತಿಷ್ಠಿತವಾದ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯವಾದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್ ಶೈಕ್ಷಣಿಕ ಸಂಸ್ಥೆಯಿಂದ ಹೆಸರುವಾಸಿಯಾಗಿದೆ. ಖಾಸಗಿಯಾದ ಈ ಶೈಕ್ಷಣಿಕ ಸಂಸ್ಥೆಯ ಆವರಣದಲ್ಲಿರುವ ಬಿರ್ಲಾ ಮಂದಿರವು ಸಾಕಷ್ಟು ಸುಂದರವಾಗಿದೆ. ವಿಶೇಷವೆಂದರೆ ಜ್ಞಾನ ನೀಡುವ ಕೇಂದ್ರದಲ್ಲಿರುವ ಕಾರಣ ಈ ಬಿರ್ಲಾ ಮಂದಿರವು ಸರಸ್ವತಿ ದೇವಿಗೆ ಮುಡಿಪಾದ ದೇವಾಲಯವಾಗಿದೆ.

ಚಿತ್ರಕೃಪೆ: Vinwe

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಜೈಪುರ್ : ರಾಜಸ್ಥಾನದ ಜೈಪುರ್ ಪಟ್ಟಣದಲ್ಲಿರುವ ಸುಂದರವಾದ ಬಿರ್ಲಾ ಮಂದಿರ ಇದಾಗಿದೆ. ಇದನ್ನು ಲಕ್ಷ್ಮಿ-ನಾರಾಯಣ ದೇವಾಲಯ ಎಂದೆ ಕರೆಯುತ್ತಾರೆ. ಮೋತಿ ಡೊಂಗ್ರಿ ಬೆಟ್ಟ ಕೋತೆಯ ಕೆಳಗೆ ಎತ್ತರವಾದ ಭೂಪ್ರದೇಶದ ಮೇಲೆ ಈ ದೇವಲಯದ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Arjuncm3

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

1988 ರಲ್ಲಿ ನಿರ್ಮಿಸಲಾದ ಈ ದೇವಾಲಯ ಜೈಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ವಿಶಾಲ ಹಾಗೂ ಭವ್ಯವಾದ ದೇವಾಲಯ ಅದ್ಭುತವಾಗಿ ನಿರ್ಮಿತವಾಗಿದ್ದು ರಾತ್ರಿಯ ಸಮಯದಲ್ಲಿ ದಿಪಗಲಿಂದ ಇದನ್ನು ಬೆಳಗಿಸಿದಾಗ ಅದರ ಅಂದ-ಚೆಂದ ನೋಡಲು ಎರಡು ಕಣ್ಣುಗಳೂ ಸಾಕಾಗದು.

ಚಿತ್ರಕೃಪೆ: wikimedia

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಶಹಾದ್: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಶಹಾಡ್ ಒಂದು ಪಟ್ಟಣವಾಗಿದ್ದು ಇದು ತನ್ನಲ್ಲಿರುವ ಬಿರ್ಲಾ ಮಂದಿರದಿಂದಾಗಿ ಹೆಸರುವಾಸಿಯಾಗಿದೆ. ವಿಶೇಷವೆಂದರೆ ಈ ಬಿರ್ಲಾ ಮಂದಿರವು ವಿಠೋಬ (ವಿಠ್ಠಲ) ದೇವರಿಗೆ ಮುಡಿಪಾದ ದೇವಾಲಯವಾಗಿದ್ದು ಈ ತಾಣದಲ್ಲಿ ಸಾಕಷ್ಟು ಹೆಸರುವಾಸಿಯಾದ ಹಿಂದಿ ಚಿತ್ರಗಳ ಚಿತ್ರೀಕರಣಗಳು ನಡೆದಿವೆ.

ಚಿತ್ರಕೃಪೆ: wikipedia

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ಭೋಪಾಲ: ಮಧ್ಯ ಪ್ರದೇಶ ರಾಜ್ಯದ ರಾಜಧಾನಿ ನಗರವಾದ ಭೋಪಾಲಿನಲ್ಲಿರುವ ಬಿರ್ಲಾ ಮಂದಿರವು ಲಕ್ಷಿ-ನಾರಾಯಣರಿಗೆ ಮುಡಿಪಾದ ಭವ್ಯ ಹಾಗೂ ಆಕರ್ಷಕವಾದ ದೇವಾಲಯವಾಗಿದೆ. ನಗರದಲ್ಲಿರುವ ಚಿಕ್ಕ ಕೆರೆಯ ದಕ್ಷಿಣಕ್ಕೆ ಈ ದೇವಾಲಯವಿದ್ದು ದಿನವೂ ಅಪಾರ ಸಮ್ಖ್ಯೆಯಲ್ಲಿ ಜನರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Bernard Gagnon

ಪ್ರಖ್ಯಾತ ಬಿರ್ಲಾ ಮಂದಿರಗಳು:

ಪ್ರಖ್ಯಾತ ಬಿರ್ಲಾ ಮಂದಿರಗಳು:

ಬಿರ್ಲಾ ಮಂದಿರ, ವರಾಣಸಿ: ಕಾಶಿ ಎಂತಲೂ ಕರೆಯಲ್ಪಡುವ ಪ್ರಖ್ಯಾತ ಧಾರ್ಮಿಕ ಪ್ರವಾಸಿ ತಾಣವಾದ ಉತ್ತರ ಪ್ರದೇಶದ ವರಾಣಸಿಯಲ್ಲಿ ವಿಶ್ವನಾಥನ ಈ ಹೊಸ ದೇವಾಲಯವಿದೆ. ಹಿಂದು ಬನಾರಸ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶಿವನಿಗೆ ಮುಡಿಪಾದ ಈ ಭವ್ಯ ದೇವಾಲಯವಿದ್ದು ಉತ್ತರ ಪ್ರದೇಶದಲ್ಲೆ ಅತಿ ಎತ್ತರವಾದ ದೇವಾಲಯ ಗೋಪುರ ಹೊಂದಿದೆ.

ಚಿತ್ರಕೃಪೆ: Kuber Patel, Rosehub

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more