• Follow NativePlanet
Share
Menu
» »2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರ ಸ್ವಾಮಿಯ ರಹಸ್ಯಗಳು....!

Written By:

ತಿರುಮಲ, ತಿರುಪತಿ ಒಂದು ತೀರ್ಥಕ್ಷೇತ್ರವಾಗಿದೆ. ಕಲಿಯುಗದಲ್ಲಿ ದರ್ಶನವನ್ನು ಭಕ್ತರಿಗೆ ನೀಡುತ್ತಿರುವ ಸಾಕ್ಷಾತ್ ಶ್ರೀ ಮಹಾವಿಷ್ಣುವು ವೆಂಕಟೇಶ್ವರನಾಗಿ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ. ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ದೇಶ-ವಿದೇಶಗಳಿಂದ ಭೇಟಿ ನೀಡುತ್ತಾರೆ. ಈ ದೇವಾಲಯವು ಅತ್ಯಂತ ಪ್ರಾಚೀನವಾದುದು.

ಈ ಆನಂದನಿಲಯವನ್ನು ತೊಂಡಮಾನ್ ಚಕ್ರವರ್ತಿ ನಿರ್ಮಾಣ ಮಾಡಿದರು ಎಂಬುದು ಪ್ರತೀತಿ. ತೊಂಡಮಾನ್ ಚಕ್ರವರ್ತಿಯು ಆಕಾಶ ರಾಜನ ಸಹೋದರ. ದಕ್ಷಿಣ ಭಾರತವನ್ನು ಆಳ್ವಿಕೆ ಮಾಡಿದ ಪ್ರಮುಖ ರಾಜರೆಲ್ಲಾ ವೆಂಕಟೇಶ್ವರ ಸ್ವಾಮಿಯ ದಾಸರೇ. 9 ನೇ ಶತಮಾನಕ್ಕೆ ಸೇರಿದ ಪಲ್ಲವರು, 10 ನೇ ಶತಮಾನಕ್ಕೆ ಸೇರಿದ ಚೋಳರು, ಪಾಂಡ್ಯರಾಜರು, 13 ಅಥವಾ 14 ನೇ ಶತಮಾನಕ್ಕೆ ಸೇರಿದ ವಿಜಯನಗರದ ರಾಜರು ವೆಂಕಟೇಶ್ವರ ಸ್ವಾಮಿಗೆ ಬೆಲೆಬಾಳುವ ಕಾಣಿಕೆಗಳನ್ನು ಸರ್ಮಪಿಸಿದ ಹಾಗೆ ಅಲ್ಲಿನ ಶಿಲಾಶಾಸನಗಳ ಮೂಲಕ ತಿಳಿದುಬರುತ್ತದೆ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ತಿರುಪತಿಗೆ ಸಮೀಪದಲ್ಲಿರುವ ತಿರುಮಲ ಬೆಟ್ಟದ ಒಂದು ಪ್ರದೇಶ. ಇಲ್ಲಿ ಪ್ರಸಿದ್ಧವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3200 ಅಡಿಗಿಂತ ಹೆಚ್ಚು ಎತ್ತರದಲ್ಲಿದ್ದು, 7 ಶಿಖರಗಳನ್ನು ಹೊಂದಿದೆ. ಅವುಗಳು ಯಾವುವೆಂದರೆ ನಾರಾಯಣಾದ್ರಿ, ನೀಲಾದ್ರಿ, ಶೇಷಾದ್ರಿ, ಅಂಜನಾದ್ರಿ, ಗರುಡಾದ್ರಿ, ವೃಷಭಾದ್ರಿ, ವೆಂಕಟಾದ್ರಿ ಎಂದು ಕರೆಯಲಾಗುತ್ತದೆ. ಇಲ್ಲಿ ಆದಿ ಶೇಷನ ಪ್ರಾತಿನಿಧ್ಯವನ್ನು ವಹಿಸುತ್ತದೆ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ವೆಂಕಟಾದ್ರಿ ಎಂದು ಕರೆಯುವ 7 ನೇ ಶಿಖರದ ಮೇಲೆ ಸ್ವಾಮಿಯು ನೆಲೆಸಿದ್ದಾನೆ. ತಿರುಮಲ ಎಂಬ ಹೆಸರು "ತಿರು" (ಪವಿತ್ರ), ಮಲ (ಪರ್ವತ) ಎಂಬ 2 ಪದಗಳನ್ನು ಹೊಂದಿದೆ. ಹಾಗಾಗಿಯೇ ತಿರುಮಲವು ದ್ರಾವಿಡ ಭಾಷೆಯಲ್ಲಿ "ಪವಿತ್ರ ಪರ್ವತ" ಎಂದು ಕರೆಯುತ್ತಾರೆ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ವಿಜಯನಗರದ ರಾಜರ ಕಾಲದಲ್ಲಿ ಈ ದೇವಾಲಯ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಯಿತು. ತದನಂತರ ದೇವಾಲಯದ ವಿಸ್ತೀರ್ಣ ಕೂಡ ವಿಸ್ತಾರವಾಯಿತು. ಸತಿ ಸಮೇತವಾಗಿರುವ ಶ್ರೀ ಕೃಷ್ಣದೇವರಾಯನ ವಿಗ್ರಹಗಳು ಈ ದೇವಾಲಯದ ಪ್ರಾಂಗಣದಲ್ಲಿ ಕಾಣಬಹುದು. ಇಲ್ಲಿನವರೆವಿಗೂ ಈ ಚರಿತ್ರೆ ನಮಗೆಲ್ಲಾ ತಿಳಿದಿರುವುದೇ. ಆದರೆ 2000 ವರ್ಷಗಳ ತಿರುಮಲ ಚರಿತ್ರೆ ಪರಿಶೀಲಿಸಿದರೆ ಮಾತ್ರ ಆಶ್ಚರ್ಯ ಚಕಿತಗೊಳಿಸುವ ವಿಷಯಗಳು ತಿಳಿದುಬರುತ್ತದೆ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ನಮ್ಮ ತಿರುಮಲದಲ್ಲಿ ಮೊದಲು ತುಲ್ಕವ್ಯಂ ಎಂದು ಕರೆಯುತ್ತಿದ್ದರು ಎಂದು ತಮಿಳು ಗ್ರಂಥಗಳು ಹೇಳುತ್ತಿವೆ. ಈ ಗ್ರಂಥಗಳು 2000 ವರ್ಷಗಳ ಹಿಂದೆ ಬರೆದಿದ್ದಾರೆ. ಈ ಗ್ರಂಥದಲ್ಲಿ ವೆಂಗಡಂ ಎಂದು ಸಂಭೋಧಿಸುತ್ತಿದ್ದರು. ವೆಂಗಡಂ ಎಂದರೇ ತಮಿಳುನಾಡಿಗೆ ಉತ್ತರ ಸರಿಹದ್ದು ಎಂಬ ಅರ್ಥ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಈ ತಿರುಮಲ ಬೆಟ್ಟದಲ್ಲಿ ಅಂದಿನ ತಮಿಳುನಾಡಿನ ಉತ್ತರ ಸರಿಹದ್ದಾಗಿತ್ತು. ನಂತರದ ದಿನದಲ್ಲಿ ವೆಂಗಡಂ ಎಂಬುದು ಸ್ವಲ್ಪ ತಮಾಷೆಯಾಗಿತ್ತು. ವೆಂಗಡಂ ಬೆಟ್ಟದಲ್ಲಿಯೇ ವೆಂಕಟೇಶ್ವರ ಸ್ವಾಮಿಯು ನೆಲೆಸಿದನು ಎಂದು ತಮಿಳುನಾಡು ಗ್ರಂಥಗಳು ಹೇಳುತ್ತವೆ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಈ ಗ್ರಂಥಗಳು ಹೇಳುವ ಪ್ರಕಾರ 2200 ವರ್ಷಗಳ ಚರಿತ್ರೆ ಇದೆ ಎಂದು ತಿಳಿದು ಬರುತ್ತದೆ. ಇನ್ನು 1940ರಲ್ಲಿ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಾ ಸಾಗಿತು. ಅದರಿಂದ ಬ್ರಿಟೀಷ್ ಸರ್ಕಾರ 1944 ರಲ್ಲಿ ತಿರುಮಲ ಬೆಟ್ಟಕ್ಕೆ ಘಾಟ್ ರಸ್ತೆಯನ್ನು ಮಾಡಿಸಿದರು.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ರಸ್ತೆಯನ್ನು ಹಾಕಿಸಿದ ಇಂಜಿನಿಯರ್ ಮಾತ್ರ ಭಾರತೀಯನಾಗಿದ್ದದ್ದು ವಿಶೇಷ. ಅವರು ಬೇರೆಯಾರೂ ಅಲ್ಲ, ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಅಲ್ಲಿಯವರೆವಿಗೂ ತಿರುಮಲ ಬೆಟ್ಟಕ್ಕೆ ಭಕ್ತರು ಕಾಲುನಡಿಗೆಯಲ್ಲಿಯೇ ತೆರಳುತ್ತಿದ್ದರು. ತಿರುಮಲ ಬೆಟ್ಟದಲ್ಲಿರುವ ಕ್ರೂರ ಮೃಗಗಳು, ಹಾವುಗಳು, ಕಳ್ಳರ ಹಿಂಸೆಗಳನ್ನು ದಾಟಿಕೊಂಡು ಗುಂಪು-ಗುಂಪುಗಳಾಗಿ ಹೋಗುತ್ತಾ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ತಿರುಮಲ ಬೆಟ್ಟವನ್ನು ಹತ್ತಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಭಕ್ತರು ಮಾಡುತ್ತಿದ್ದರು.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಆದರೆ ಆ ಘಾಟ್ ರೋಡ್ ಹಾಕಿದ್ದರಿಂದ ಅಂತಹ ಭಯವೇನೂ ಇಲ್ಲದೇ ಪ್ರಶಾಂತವಾಗಿ ಬಸ್ಸುಗಳಲ್ಲಿ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಿ ಬರುತ್ತಿದ್ದರು. ಒಂದು ಕಾಲದಲ್ಲಿ ಭಕ್ತರು ಕಾಲು ನಡಿಗೆಯ ಮೂಲಕ ತೆರಳಲು 4 ದಾರಿಗಳು ಇದ್ದವು, ಆದರೆ ಈಗ 3 ದಾರಿಗಳಿವೆ. ಅವುಗಳು ಯಾವುವೆಂದರೆ ತಿರುಪತಿಯಿಂದ ಅಲಿಪಿರಿ ಮಾರ್ಗವಾಗಿ, ಚಂದ್ರಗಿರಿಯಿಂದ ಶ್ರೀ ವಾರಿ ಮೆಟ್ಟಿಲು ಮಾರ್ಗವಾಗಿ, ಮಾಮಂಡೂರಿನಿಂದ ಅನ್ನಮಯ್ಯ ಕಾಲ್ನಡಿಗೆ ಮೂಲಕ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಅಲಿಪಿರಿ ಕಾಲ್ನಡಿಗೆಯಿಂದ 5 ವರ್ಷಗಳ ಹಿಂದೆ ರಾಮಾನುಚಾರ್ಯರು ಬೆಟ್ಟವನ್ನು ಏರಿ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿಕೊಂಡರಂತೆ. ಆತನೇ ಶೈವರು ಆಕ್ರಮಿಸಿಕೊಂಡಿದ್ದ ಈ ಬೆಟ್ಟವನ್ನು ಮತ್ತೇ ವೈಷ್ಣವ ಬೆಟ್ಟವಾಗಿ ಮಾರ್ಪಾಡು ಮಾಡಿದನು. ಅಲಿಪಿರಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ, ತಿರುಪತಿಯಿಂದ ತಿರುಮಲಕ್ಕೆ ಕಾಲ್ನಡಿಗೆಯಿಂದ ಮೊದಲ ಮೆಟ್ಟಿಲು ಇರುವ ಪ್ರದೇಶವೇ ಈ ಅಲಿಪಿರಿ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಅಲ್ಲಿಗೆ ತೆರಳಿದ ನಂತರ ಅಲ್ಲಿರುವ ಒಂದು ಶಿಲ್ಪ ನಮ್ಮನ್ನು ಆಕರ್ಷಿಸುತ್ತದೆ. ಅದು ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವ ಶಿಲ್ಪ. ಈ ಶಿಲ್ಪದ ಕುರಿತು ಒಂದು ಕಥೆಯು ಕೂಡ ಪ್ರಚಾರದಲ್ಲಿದೆ. ಆ ಕಥೆಯ ಪ್ರಕಾರ ಆ ಕಾಲದಲ್ಲಿ ದಾಸರು ಎಂದು ಕರೆಯುತ್ತಿದ್ದ ವೈಷ್ಣವರ ಹರಿನಾಮ ಸ್ಮರಣ ಮಾಡುತ್ತಾ, ವೆಂಕಟೇಶ್ವರನ ಹಾಡುಗಳನ್ನು ಹಾಡುತ್ತಾ ಭೀಕ್ಷಾಟನೆ ಮಾಡಿ ಜೀವಿಸುತ್ತಿದ್ದರು.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ನೂರಾರು ವರ್ಷಗಳ ಹಿಂದೆ ಹರಿದಾಸನಾದ ಒಬ್ಬ ಮಾಲ ದಾಸರಿ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೊರಟನು. ಅಲಿಪಿರಿ ತೆರಳಿದ ನಂತರ ಅಲ್ಲಿ ಮೊದಲ ಮೆಟ್ಟಿಲು ಏರುವ ಸಮಯದಲ್ಲಿ ವೆಂಕಟೇಶ್ವರ ಸ್ವಾಮಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು. ಆಗ ಆ ಮಾಲ ದಾಸರಿ ಶಿಲೆಯಾಗಿ ಮಾರ್ಪಾಟಾದನು ಎಂದು ಹೇಳುತ್ತಾರೆ. ಹಾಗೆಯೇ ತಿರುಮಲ ಬೆಟ್ಟದಲ್ಲಿ ಇಂದಿನವರೆವಿಗೂ ಇನ್ನು ಅನೇಕ ಅದ್ಭುತಗಳು ನಡೆದಿವೆ.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ಆ ಬೆಟ್ಟದ ಮೇಲೆ ನೆಲೆಸಿರುವ ಶ್ರೀನಿವಾಸನು ಅತ್ಯಂತ ಶಕ್ತಿಸ್ವರೂಪಿ. 7 ಬೆಟ್ಟಗಳ ಮೇಲೆ ನೆಲೆಸಿರುವ ದೇವತಾ ಮೂರ್ತಿಯು ಯಾವಾಗ? ಯಾವ? ಸ್ವರೂಪವನ್ನು ಧರಿಸಿ ಬರುತ್ತಾನೆಯೋ ಯಾರಿಗೂ ತಿಳಿದಿಲ್ಲ. ಅದಕ್ಕೆ ಕಾರಣ ಈ ತಿರುಮಲ ಬೆಟ್ಟದ ಮೇಲೆ ನೆಲೆಸಿರುವ ಸಕಲ ದೇವತೆಗಳ ಅಂಶಗಳು.

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

2200 ವರ್ಷಗಳ ಹಿಂದೆ ಇದ್ದ ತಿರುಪತಿ ವೆಂಕಟೇಶ್ವರನ ರಹಸ್ಯಗಳು....!

ದಾಸ ಭಾವನದಿಂದ ತನಗೆ ಸಾಷ್ಟಾಂಗ ಸಮಸ್ಕಾರ ಮಾಡಿದ ಭಕ್ತರಿಗೆ ಆ ವೆಂಕಟೇಶ್ವನು ರಕ್ಷಿಸುತ್ತಾನೆ ಎಂಬುದು ಅಲ್ಲಿನ ಭಕ್ತರು ದೃಢವಾದ ನಂಬಿಕೆಯಾಗಿದೆ. ಹಾಗಾಗಿಯೇ ತನ್ನ ಹಾಗೆ ಸಾಷ್ಟಾಂಗ ನಮಸ್ಕಾರ ಮಾಡಿ ಏಳು ಬೆಟ್ಟಗಳ ಒಡೆಯನ ದಯೆಯನ್ನು ಪಡೆಯಿರಿ ಎಂದು ಭಕ್ತರಿಗೆ ತಿಳಿಸಲು ದಾಸರಿ ಹೀಗೆ ಶಿಲೆಯಾಗಿ ಮಾರ್ಪಾಟಾದನು ಎಂದು ಈ ದಾಸರಿ ಶಿಲ್ಪದ ಹಿಂದೆ ಇರುವ ರೋಚಕ ಕಥೆಯಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ತಿರುಮಲಕ್ಕೆ ಸುಮಾರು 267 ಕಿ.ಮೀ ದೂರದಲ್ಲಿದ್ದು, ಹಲವಾರು ಖಾಸಗಿ, ಸರ್ಕಾರಿ ಬಸ್ಸುಗಳ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಸಾಕಷ್ಟು ರೈಲುಗಳು ತಿರುಪತಿಗೆ ಇವೆ. ಹಾಗಾಗಿ ಸುಲಭವಾಗಿ ತಿರುಮಲಕ್ಕೆ ತಲುಪಬಹುದಾಗಿದೆ.

ತಿರುಪತಿಯಲ್ಲಿರುವ ಏಕೈಕ ಶಿವಾಲಯವಿದು..

ತಿರುಮಲದಲ್ಲಿದೆ ಬಂಗಾರದ ಬಾವಿ !

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ